ಭಾರತದಲ್ಲಿ ಒಂದೇ ದಿನ 1.15 ಲಕ್ಷಕ್ಕೂ ಹೆಚ್ಚು ಪ್ರಕರಣ ದಾಖಲು..! ವೇಗದಲ್ಲಿ ಹರಡುತ್ತಿರುವ ಕೊರೊನಾ ಎರಡನೇ ಅಲೆ..!!

ನವ ದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಶರವೇಗದಲ್ಲಿ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 1,15,736 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಕೊರೊನಾ ಪ್ರಕರಣ ದೇಶದಲ್ಲಿ ಕಂಡುಬಂದ ದಿನದಿಂದ ಈವರೆಗಿನ ಅತಿ ಹೆಚ್ಚು ಏಕದಿನದ ಸೋಂಕು ಇದಾಗಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,28,01,785ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 630 ಜನರು ಕೊರೊನಾ ಸೋಂಕಿಗೆ … Continued

ಭಾರತದಲ್ಲಿ ಮೊದಲ ಬಾರಿಗೆ ಒಂದೇ ದಿನದಲ್ಲಿ 1.07 ಲಕ್ಷ ಹೊಸ ಕೊರೊನಾ ಪ್ರಕರಣ…!!!

ನವ ದೆಹಲಿ: ಮಂಗಳವಾರ ಭಾರತವು ಅತಿಹೆಚ್ಚು ದೈನಂದಿನ ಕೊರೊನಾ ಸೋಂಕು ದಾಖಲಿಸಿದೆ. ಎಲ್ಲ ರಾಜ್ಯಗಳ ಅಂಕಿ-ಅಂಶಗಳನ್ನು ಗಮನಿಸಿ ಭಾರತವು ಮಂಗಳವಾರ 1.07 ಲಕ್ಷ ದೈನಂದಿನ ಕೊರೊನಾ ಪ್ರಕರಣಗಳನ್ನು ದಾಖಲಿಸಿದೆ. ಮಂಗಳವಾರ ಮುಂದಿನ ನಾಲ್ಕು ವಾರಗಳು “ಬಹಳ ನಿರ್ಣಾಯಕ” ಎಂದು ಕೇಂದ್ರವು ಎಚ್ಚರಿಸಿದೆ ಹಾಗೂ ಕೊವಿಡ್‌ ಸಾಂಕ್ರಾಮಿಕ ರೋಗದ ಎರಡನೇ ತರಂಗ ನಿಯಂತ್ರಿಸಲು ಜನರ ಪಾಲ್ಗೊಳ್ಳುವಿಕೆ ಕೋರಿದೆ. … Continued

ಮಹಾರಾಷ್ಟ್ರದಲ್ಲಿ ಮಂಗಳವಾರ 55 ಸಾವಿರಕ್ಕೂ ಹೆಚ್ಚು ದೈನಂದಿನ ಪ್ರಕರಣ..!

ಮುಂಬೈ; ಮಹಾರಾಷ್ಟ್ರದಲ್ಲಿ ಮಂಗಳವಾರ (ಏಪ್ರಿಲ್ 6) ಕಳೆದ ವರ್ಷ ಸಾಂಕ್ರಾಮಿಕ ರೋಗ ಹರಡಿದ ನಂತರ ಎರಡನೇ ಅತಿ ಹೆಚ್ಚು ಏಕದಿನ ಏರಿಕೆ ದಾಖಲಿಸಿದೆ. ಮಂಗಳವಾರ 55,469 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ರಾಜ್ಯದ ಅತಿ ಹೆಚ್ಚು ಏಕದಿನ ಸ್ಪೈಕ್ 57,074 ಆಗಿದ್ದು, ಇದು ಭಾನುವಾರ (ಏಪ್ರಿಲ್ 4) ವರದಿಯಾಗಿದೆ.ದಿನದಲ್ಲಿ 297 ಸಾವುಗಳು ದಾಖಲಾಗಿದ್ದು, ಸಾವಿನ ಸಂಖ್ಯೆ … Continued

ದೆಹಲಿಯಲ್ಲಿ ಇಂದಿನಿಂದ ರಾತ್ರಿ ಕರ್ಫ್ಯೂ

ನವ ದೆಹಲಿ:ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರವು ಏ.30ರ ವರಗೆ ರಾತ್ರಿ ಕರ್ಫ್ಯೂ ವಿಧಿಸಿದೆ. ಮಂಗಳವಾರದಿಂದ ರಾತ್ರಿ 10 ರಿಂದ ಬೆಳಗ್ಗೆ 5ರ ವರೆಗೆ ರಾಷ್ಟ್ರ ರಾಜಧಾನಿಯಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿಯಲ್ಲಿ ಸೋಮವಾರ 3548 ಕೊರೊನಾ ಪ್ರಕರಣಗಳು ದಾಖಲಾಗಿತ್ತು ಎಂದು ದೆಹಲಿ ಆರೋಗ್ಯ ಇಲಾಖೆ ತಿಳಿಸಿದೆ. ಸೋಂಕು … Continued

ದೇಶ್​ಮುಖ್ ವಿರುದ್ಧ ಸಿಬಿಐ ತನಿಖೆಗೆ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಮಹಾರಾಷ್ಟ್ರ ಸರ್ಕಾರ

ಮುಂಬೈ: ಮಾಜಿ ಪೊಲೀಸ್ ಆಯುಕ್ತ ಪರಮ್​ವೀರ್ ಸಿಂಗ್ ಅವರ ಆರೋಪಗಳನ್ನು ಆಧರಿಸಿ ಮಾಜಿ ಗೃಹ ಸಚಿವ ಅನಿಲ್ ದೇಶ್​ಮುಖ್ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿದ ಬಾಂಬೆ ಹೈಕೋರ್ಟ್​ ನೀಡಿದ್ದ ಆದೇಶ ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರವು ಮಂಗಳವಾರ (ಏಪ್ರಿಲ್ 6) ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. 1988ರ ಬ್ಯಾಚ್​ನ ಐಪಿಎಸ್ ಅಧಿಕಾರಿ ಪರಮ್​ವೀರ್ ಸಿಂಗ್ ಅವರನ್ನು ಈಚೆಗಷ್ಟೇ ಮಹಾರಾಷ್ಟ್ರ … Continued

ಫೋಟೋ ತೆಗೆಯಲು ಬಂದ ಮಾಸ್ಕ್‌ ಧರಿಸದ ಫ್ಯಾನ್‌ ಮೊಬೈಲ್‌ ಕಸಿದುಕೊಂಡ ನಟ ಅಜಿತ, ವಿಡಿಯೋ ವೈರಲ್‌

ಚೆನ್ನೈ: ಥಾಲಾ ಎಂದು ಜನಪ್ರಿಯವಾಗಿರುವ ಖ್ಯಾತ ತಮಿಳು ನಟ ಅಜಿತ್ ಮತಗಟ್ಟೆಯಲ್ಲಿ ಅಜಿತ್ ತನ್ನೊಂದಿಗೆ ಪೋಟೋ ಕ್ಲಿಕ್ ಮಾಡುವ ಮಾಸ್ಕ್‌ ಧರಿಸದ ಫ್ಯಾನ್‌ನಿಂದ ಫೋನ್ ತೆಗೆದುಕೊಂಡಿದ್ದಾರೆ. ತಿರುವನಮಿಯೂರ್‌ನ ಮತದಾನ ಕೇಂದ್ರವೊಂದರಲ್ಲಿ ಈ ಘಟನೆ ನಡೆದಿದ್ದು, ಅಜಿತ್ ತಮ್ಮ ಪತ್ನಿ ನಟ ಶಾಲಿನಿಯೊಂದಿಗೆ ಮತ ಚಲಾಯಿಸಲು ಆಗಮಿಸಿದ್ದರು.ಈ ಸಂದರ್ಭದಲ್ಲಿ ಇದು ನಡೆದಿದೆ. ನಟ ಅಜಿತ್ ಪ್ರಚಾರದಿಂದ ದೂರವಿರುತ್ತಾರೆ … Continued

ಭಗವಾನ್‌ ಅಯ್ಯಪ್ಪ ಎಡರಂಗದ ಸರ್ಕಾರದ ಪರವಾಗಿದ್ದಾನೆ : ಪಿಣರಾಯಿ ವಿಜಯನ್‌

ಭಗವಾನ್ ಅಯ್ಯಪ್ಪ ಮತ್ತು ಇತರ ಎಲ್ಲ ದೇವರುಗಳು ಎಡ ಪ್ರಜಾಪ್ರಭುತ್ವ ರಂಗದ ಕಡೆಗಿದ್ದಾರೆ . ಏಕೆಂದರೆ ಎಡರಂಗದ ಸರ್ಕಾರ ಜನರಿಗೆ ಪ್ರಾಮುಖ್ಯತೆ ನೀಡಿದೆ ಮತ್ತು ಅವರನ್ನು ರಕ್ಷಿಸಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಧರ್ಮದಂ ಕ್ಷೇತ್ರದ ಆರ್‌ಸಿ ಅಮಲಾ ಶಾಲೆಯಲ್ಲಿ ಮತ ಚಲಾಯಿಸಿದ ಅವರು, ಭಗವಾನ್‌ ಅಯ್ಯಪ್ಪ ಅವರ … Continued

ಯುದ್ಧ ವಿಮಾನ ರಫೇಲ್ ಡೀಲ್ ನಲ್ಲೂ ಮಧ್ಯವರ್ತಿಗೆ ಕಿಕ್ ಬ್ಯಾಕ್ ಆರೋಪ

ನವ ದೆಹಲಿ: ಭಾರತ-ಫ್ರಾನ್ಸ್ ನಡುವಿನ ರಫೇಲ್ ಯುದ್ಧ ವಿಮಾನ ಒಪ್ಪಂದದ ಕುರಿತು ಮತ್ತೆ ವಿವಾದ ಭುಗಿಲೆದ್ದಿದೆ. ರಫೇಲ್ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಡಸಾಲ್ಟ್ ಏವಿಯೇಷನ್ ಭಾರತೀಯ ಮಧ್ಯವರ್ತಿಗೆ ಒಂದು ಮಿಲಿಯನ್ ಯುರೋ ಲಂಚ ನೀಡಿದೆ ಎಂಬ ಆರೋಪ ಕೇಳಿ ಬಂದಿದ್ದು ಇದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಫ್ರಾನ್ಸ್ ಮೂಲದ ‘ಮಿಡಿಯಾ ಪಾರ್ಟ್’ ಎಂಬ … Continued

೩ನೇ ಹಂತದ ಚುನಾವಣೆ ದಿನವೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖಂಡನ ಪತ್ನಿಯ ಹತ್ಯೆ

ಗೋಘಾಟ್: ಮೂರನೇ ಹಂತದ ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ರಾಜಕೀಯ ಹತ್ಯೆಯಾಗಿದೆ. ಚುನಾವಣಾ ಹಿಂಸಾಚಾರಕ್ಕೆ ಹೆಸರಾದ ಪಶ್ಚಿಮ ಬಂಗಾಳದಲ್ಲಿ ಈ ಚುನಾವಣೆಯಲ್ಲಿಯೂ ಸಾಕಷ್ಟು ಹಿಂಸಾಚಾರವಾಗಿದೆ. ಹೂಗ್ಲಿ ಜಿಲ್ಲೆಯ ಬಿಜೆಪಿ ಮುಖಂಡರೊಬ್ಬರ ಪತ್ನಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಗೋಘಾಟ್ ಪ್ರದೇಶದಲ್ಲಿ ಪ್ರಕ್ಷ್ಯುಬ್ದ ಪರಿಸ್ಥಿತಿ ಇದೆ. ಇಲ್ಲಿನ ಬಿಜೆಪಿ ಮುಖಂಡರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅವರ ಮೇಲೆ … Continued

ಭಾರತದ 48 ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಎನ್.ವಿ.ರಮಣ ನೇಮಕ

ನವ ದೆಹಲಿ: ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಮಂಗಳವಾರ ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನು ಭಾರತದ 48 ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ್ದಾರೆ. ನಿವೃತ್ತಿಯಾಗಲಿರುವ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅವರು ನ್ಯಾಯಮೂರ್ತಿ ರಮಣ ಅವರ ಹೆಸರನ್ನು ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದರು. ನ್ಯಾಯಮೂರ್ತಿ ಬೊಬ್ಡೆ ಏಪ್ರಿಲ್ 23ರಂದು ನಿವೃತ್ತರಾಗಲಿದ್ದು, ನ್ಯಾಯಮೂರ್ತಿ ಎನ್.ವಿ.ರಮಣ ಅವರು … Continued