ಒಂದು ಇಲಿ ಹಿಡಿಯಲು ರೈಲ್ವೆಯ ಲಕ್ನೋ ವಿಭಾಗ ಮಾಡಿದ ಖರ್ಚು ಸರಾಸರಿ 41 ಸಾವಿರ ರೂ….!

ನವದೆಹಲಿ : ಭಾರತದಲ್ಲಿ ಇಲಿಯನ್ನು ಹಿಡಿಯುವುದು ದೊಡ್ಡ ವಿಷಯವೇನಲ್ಲ ಏಕೆಂದರೆ ಅದಕ್ಕೆ ಸ್ವಲ್ಪ ಪ್ರಯತ್ನ ಪಡಬೇಕಾಗಬಹುದು. ಆದರೆ ಉತ್ತರ ರೈಲ್ವೆಯ ಲಕ್ನೋ ವಿಭಾಗವು ಒಂದು ಇಲಿಯನ್ನು ಹಿಡಿಯಲು ಸರಾಸರಿ 41,000 ರೂ.ಗಳನ್ನು ವೆಚ್ಚ ಮಾಡಿದೆ ಎಂದು ವರದಿಯೊಂದು ಹೇಳಿದೆ. ನೀಮಚ್ ಮೂಲದ ಕಾರ್ಯಕರ್ತ ಚಂದ್ರಶೇಖರ ಗೌರ್ ಎಂಬವರು ಸಲ್ಲಿಸಿದ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಗೆ ಪ್ರತಿಕ್ರಿಯೆಯಾಗಿ … Continued

ತಮಿಳುನಾಡಿನಲ್ಲಿ ದೇವಸ್ಥಾನದ ಅರ್ಚಕರಾದ ಮೂವರು ಯುವತಿಯರು…

ಚೆನ್ನೈ: ವೃತ್ತಿಯಲ್ಲಿನ ಲಿಂಗದ ಅಂತರ ನಿವಾರಿಸುವ ಅವಕಾಶ ಬಳಸಿಕೊಂಡು, ಮೂವರು ಯುವತಿಯರು ದೇವಸ್ಥಾನದಲ್ಲಿ ಅರ್ಚಕ ವೃತ್ತಿಯನ್ನು ಸ್ವೀಕರಿಸಲು ನಿರ್ಧರಿಸಿದ್ದಾರೆ. ದೇವಸ್ಥಾನಗಳಲ್ಲಿ ಅರ್ಚಕ ವೃತ್ತಿ ಸ್ವೀಕರಿಸಿದ ಮೂವರು ಯುವತಿಯರಲ್ಲಿ ಒಬ್ಬರು ಕುಟುಂಬದಲ್ಲಿ ಮೊದಲ ಪದವೀಧರರು, ಇನ್ನೊಬ್ಬರು ಪದವೀಧರರು ಮತ್ತು ಮೂರನೆಯವರು ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಸಂಬಳವು ಅತ್ಯಲ್ಪವಾಗಿದೆ ಆದರೆ ದೇವರು ತಮ್ಮ ಅಗತ್ಯಗಳನ್ನು ಪೂರೈಸುತ್ತಾನೆ ಎಂದು ಹೇಳುವ ಯುವತಿಯರಿಗೆ … Continued

ವೀಡಿಯೊ…| ಮಿಲಿಟರಿ ಸಮವಸ್ತ್ರ ಧರಿಸಿ ಕೊನೆ ಬಾರಿಗೆ ತಂದೆಯ ಪಾರ್ಥಿವ ಶರೀರಕ್ಕೆ ಸೆಲ್ಯೂಟ್ ಮಾಡಿದ ಹುತಾತ್ಮ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ 6 ವರ್ಷದ ಮಗ

ಚಂಡೀಗಢ : ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಮೂವರ ಪೈಕಿ ಒಬ್ಬರಾದ ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ಆರು ವರ್ಷದ ಮಗ ಮೊಹಾಲಿ ಜಿಲ್ಲೆಯ ಮುಲ್ಲನ್‌ಪುರದ ಮನೆಗೆ ತಂದೆಯ ಪಾರ್ಥಿವ ಶರೀರ ತಲುಪುತ್ತಿದ್ದಂತೆ ಮಿಲಿಟರಿ ಬಟ್ಟೆ ಧರಿಸಿ ಸೆಲ್ಯೂಟ್‌ ಮಾಡುವ ಮೂಲಕ ತಂದೆಗೆ ಗೌರವ ನಮನ ಸಲ್ಲಿಸಿದ್ದಾನೆ. ಶುಕ್ರವಾರ ಕೊನೆಯ ಬಾರಿಗೆ ಕರ್ನಲ್ … Continued

ನಿಪಾ ವೈರಸ್ ಸಾವಿನ ಪ್ರಮಾಣ 40%-70%, ಕೋವಿಡ್‌ಗಿಂತ ಬಹಳ ಹೆಚ್ಚು: ಐಸಿಎಂಆರ್ ಎಚ್ಚರಿಕೆ

ನವದೆಹಲಿ: ಕೋವಿಡ್-19 ಸೋಂಕಿಗೆ ಹೋಲಿಸಿದರೆ ನಿಪಾ ವೈರಸ್ ಸೋಂಕಿನ ಪ್ರಕರಣಗಳಲ್ಲಿ ಮರಣ ಪ್ರಮಾಣವು ತುಂಬಾ ಹೆಚ್ಚಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ರಾಜೀಬ ಬಹ್ಲ್ ಶುಕ್ರವಾರ ಎಚ್ಚರಿಸಿದ್ದಾರೆ. ನಿಪಾ ವೈರಸ್ ಪ್ರಕರಣಗಳಲ್ಲಿ ಮರಣ ಪ್ರಮಾಣವು ಶೇಕಡಾ 40 ರಿಂದ 70 ರಷ್ಟಿದೆ, ಕೋವಿಡ್‌ನಲ್ಲಿನ ಮರಣ ಪ್ರಮಾಣವು ಶೇಕಡಾ 2ರಿಂದ 3 ರಷ್ಟಿದೆ … Continued

2023 : ಟೈಮ್ ಮ್ಯಾಗಜೀನ್‌ ವಿಶ್ವದ ಟಾಪ್‌-100 ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ಭಾರತದ ಇನ್ಫೋಸಿಸ್ ಗೆ ಮಾತ್ರ ಸ್ಥಾನ ; ವಿಶ್ವದ ಟಾಪ್‌- 10 ಕಂಪನಿಗಳ ಪಟ್ಟಿ…

ನವದೆಹಲಿ: 2023ರ ಟೈಮ್ ಮ್ಯಾಗಜೀನ್‌ನ ವಿಶ್ವದ ಅತ್ಯುತ್ತಮ ಅಗ್ರ 100 ಕಂಪನಿಗಳ ಪಟ್ಟಿಯಲ್ಲಿ ಇನ್ಫೋಸಿಸ್‌ (Infosys) ಮಾತ್ರ ಸ್ಥಾನ ಪಡೆದ ಭಾರತದ ಏಕೈಕ ಕಂಪನಿಯಾಗಿದೆ. ಬೆಂಗಳೂರು ಮೂಲದ ಜಾಗತಿಕ ಸಲಹಾ ಮತ್ತು ಐಟಿ (IT) ಸೇವೆಗಳ ಕಂಪನಿಯು ಒಟ್ಟಾರೆ 88.38 ಅಂಕಗಳೊಂದಿಗೆ 64ನೇ ಸ್ಥಾನದಲ್ಲಿದೆ. ನಾವು ಟಾಪ್ 3 ಜಾಗತಿಕ ವೃತ್ತಿಪರ ಸೇವಾ ಸಂಸ್ಥೆಗಳಲ್ಲಿದ್ದೇವೆ ಮತ್ತು … Continued

ಅಕ್ಟೋಬರ್‌ 1ರಿಂದ ಡ್ರೈವಿಂಗ್ ಲೈಸೆನ್ಸ್, ಆಧಾರ ಕಾರ್ಡ್‌, ಸರ್ಕಾರಿ ಉದ್ಯೋಗ ಪಡೆಯಲು ಜನನ ಪ್ರಮಾಣಪತ್ರ ಒಂದೇ ದಾಖಲೆ : ಹಾಗೆಂದರೆ…

ನವದೆಹಲಿ: ಅಕ್ಟೋಬರ್ 1 ರಿಂದ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ, ವಿವಾಹ ನೋಂದಣಿ, ಚಾಲಕರ ಪರವಾನಗಿ, ಸರ್ಕಾರಿ ಉದ್ಯೋಗಕ್ಕೆ ನೇಮಕಾತಿ ಸೇರಿದಂತೆ ಹಲವಾರು ಸೇವೆಗಳನ್ನು ಪಡೆಯಲು ನಾಗರಿಕರಿಗೆ ಜನನ ಪ್ರಮಾಣಪತ್ರಗಳು ಒಂದೇ ದಾಖಲೆಯಾಗಲಿವೆ. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ-2023 ಅನ್ನು ಅನುಷ್ಠಾನಗೊಳಿಸುವ ದಿನಾಂಕವನ್ನು ಪ್ರಕಟಿಸಿದ ಕೇಂದ್ರ ಗೃಹ ಸಚಿವಾಲಯವು ಹೊಸ ಉಪಕ್ರಮವನ್ನು ‘ಸಾರ್ವಜನಿಕ ಸೇವೆಗಳು … Continued

ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯ 4ನೇ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿ: ಮುಂದಿನ ಹಂತ ‘ಭೂ ಕ್ಷಕೆಯಿಂದ ಬೀಳ್ಕೊಡುಗೆ’

ನವದೆಹಲಿ: ಸೂರ್ಯನ ಬಾಹ್ಯ ವಾತಾವರಣ ಅಧ್ಯಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಕಳುಹಿಸಿರುವ ಆದಿತ್ಯ ಎಲ್1 (Aditya L1) ಬಾಹ್ಯಾಕಾಶ ನೌಕೆಯ 4ನೇ ಕಕ್ಷೆ ಬದಲಾವಣೆ ಪ್ರಕ್ರಿಯೆಯು ಯಶಸ್ವಿಯಾಗಿದೆ ಎಂದು ಇಸ್ರೋ ತಿಳಿಸಿದೆ. ಗುರುವಾರ ಮಧ್ಯರಾತ್ರಿ 2 ಗಂಟೆಗೆ ಆದಿತ್ಯ ಎಲ್1 ಬಾಹ್ಯಾಕಾಶ ನೌಕೆಯನ್ನು ಮತ್ತೊಂದು ಕಕ್ಷೆಗೆ ಯಶಸ್ವಿಯಾಗಿ ಏರಿಸಲಾಗಿದೆ. ಆದಿತ್ಯ ನೌಕೆ ಈಗ … Continued

ನುಹ್‌ ಹಿಂಸಾಚಾರ : ಕಾಂಗ್ರೆಸ್ ಶಾಸಕನ ಬಂಧನ

ನವದೆಹಲಿ: ಆಗಸ್ಟ್‌ನಲ್ಲಿ ಹರಿಯಾಣದ ನುಹ್‌ನಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದ ಆರೋಪಿ ಎಂದು ಹೆಸರಿಸಲಾದ ಹರಿಯಾಣ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವರನ್ನು ಗುರುವಾರ ಬಂಧಿಸಲಾಗಿದೆ. ಹರಿಯಾಣ ಪೊಲೀಸರ ಪ್ರಕಾರ, ವಿಶ್ವ ಹಿಂದೂ ಪರಿಷತ್ ಯಾತ್ರೆಯ ನಂತರ ನಡೆದ ಹಿಂಸಾಚಾರದಲ್ಲಿ ಅವನು ಭಾಗಿಯಾಗಿದ್ದಕ್ಕೆ “ಸಾಕಷ್ಟು ಪುರಾವೆಗಳು” ಇವೆ. ಬಂಧನದಿಂದ ರಕ್ಷಣೆ ಕೋರಿ ಫಿರೋಜ್‌ಪುರ ಜೀರ್ಕಾ ಶಾಸಕ ಮಮ್ಮನ್ … Continued

₹1,000 ಕೋಟಿ ಆನ್‌ಲೈನ್ ಪೋಂಜಿ ಹಗರಣಕ್ಕೆ ಸಂಬಂಧಿಸಿದಂತೆ ಗೋವಿಂದ ವಿಚಾರಣೆ ಸಾಧ್ಯತೆ

1,000 ಕೋಟಿ ರೂಪಾಯಿ ಪ್ಯಾನ್-ಇಂಡಿಯಾ ಆನ್‌ಲೈನ್ ಪೋಂಜಿ ಹಗರಣಕ್ಕೆ ಸಂಬಂಧಿಸಿದಂತೆ ಒಡಿಶಾ ಪೊಲೀಸ್‌ನ ಅಪರಾಧ ವಿಭಾಗದ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಬಾಲಿವುಡ್ ನಟ ಗೋವಿಂದನನ್ನು ವಿಚಾರಣೆ ನಡೆಸಬಹುದು ಎಂದು ವರದಿಯೊಂದು ಹೇಳಿದೆ. ಸೋಲಾರ್ ಟೆಕ್ನೋ ಅಲೈಯನ್ಸ್ (ಎಸ್‌ಟಿಎ-ಟೋಕನ್) ಒಳಗೊಂಡ ಬಹುಕೋಟಿ ಪೋಂಜಿ ಹಗರಣದ ತನಿಖೆ ನಡೆಸುತ್ತಿರುವ ತಂಡದ ಭಾಗವಾಗಿರುವ ಇಒಡಬ್ಲ್ಯು ಡಿಎಸ್‌ಪಿ ಸಸ್ಮಿತಾ ಸಾಹು … Continued

14 ಸುದ್ದಿ ನಿರೂಪಕರ ಟಿವಿ ಕಾರ್ಯಕ್ರಮ ಬಹಿಷ್ಕರಿಸಲು ನಿರ್ಧರಿಸಿದ ವಿಪಕ್ಷಗಳ ʼಇಂಡಿಯಾʼ ಮೈತ್ರಿಕೂಟ; ಪಟ್ಟಿ ಬಿಡುಗಡೆ

ನವದೆಹಲಿ: ನಿರ್ದಿಷ್ಟ ಸುದ್ದಿ ನಿರೂಪಕರು ನಿರ್ವಹಿಸುವ ಟಿವಿ ಕಾರ್ಯಕ್ರಮಗಳನ್ನ ಬಹಿಷ್ಕರಿಸಲು ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಬಣ ತನ್ನ ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧರಿಸಿದ್ದು, ಈಗ ಉಪಸಮಿತಿಯು ತಾವು ಬಹಿಷ್ಕರಿಸಲಿರುವ 14 ಸುದ್ದಿ ನಿರೂಪಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಗುರುವಾರ 14 ಆ್ಯಂಕರ್‌ಗಳ ಪಟ್ಟಿಯನ್ನು ಪ್ರಕಟಿಸಿದ್ದು, ಅವರ ಕಾರ್ಯಕ್ರಮಗಳನ್ನು ವಿರೋಧ ಪಕ್ಷಗಳ ಮೈತ್ರಿಕೂಟವಾದ-ಇಂಡಿಯಾ ಬ್ಲಾಕ್‌ … Continued