ಐತಿಹಾಸಿಕ…: ಎಲ್ಲ ವಿಷಯಗಳಲ್ಲಿ ನೂರಕ್ಕೆ 100ರಷ್ಟು ಒಮ್ಮತ : ದೆಹಲಿ ಘೋಷಣೆ ಅಂಗೀಕರಿಸಿದ G20 ನಾಯಕರು

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಸವಾಲುಗಳ ಹೊರತಾಗಿಯೂ, ಜಿ 20 ನಾಯಕರು ಶನಿವಾರ ನವದೆಹಲಿ ಜಿ 20 ಶೃಂಗಸಭೆಯಲ್ಲಿ ಜಂಟಿ ಘೋಷಣೆಯನ್ನು ನೂರಕ್ಕೆ ನೂರು ಅಂಗೀಕರಿಸಿದ್ದಾರೆ. ಯಾವುದೇ ಅಪಸ್ವರಗಳಿಲ್ಲದೆ ದೆಹಲಿ ಘೋಷಣೆ (Delhi Declaration) ಅಂಗೀಕರಿಸಿರುವ ಜಿ20 ನಾಯಕರ ನಿರ್ಧಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಜಂಟಿ ಘೋಷಣೆಯನ್ನು ಸಿದ್ಧಪಡಿಸಿ, ಅಂಗೀಕಾರವಾಗುವಂತೆ ಶ್ರಮಿಸಿದ … Continued

ಡಿಜಿಟಲ್ ಶುಲ್ಕ ಪಾವತಿಗಾಗಿ ನೇಷನ್ ಫಸ್ಟ್ ಟ್ರಾನ್ಸಿಟ್ ಕಾರ್ಡ್ ಬಿಡುಗಡೆ ಮಾಡಿದ ಎಸ್‌ಬಿಐ

ನವದೆಹಲಿ: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೇಷನ್ ಫಸ್ಟ್ ಟ್ರಾನ್ಸಿಟ್ ಕಾರ್ಡ್ (Nation First Transit Card) ಹೆಸರಿನ ಹೊಸ ಪ್ರಿಪೇಯ್ಡ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2023 ರ ಸಂದರ್ಭದಲ್ಲಿ ‘ನೇಷನ್ ಫಸ್ಟ್ ಟ್ರಾನ್ಸಿಟ್ ಕಾರ್ಡ್’ ಅನ್ನು ಸ್ಟೇಟ್ ಬ್ಯಾಂಕ್ ಆಫ್ … Continued

ಜಿ 20 ಶೃಂಗಸಭೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ನಾಮಫಲಕದಲ್ಲಿ ʼಇಂಡಿಯಾʼ ಬದಲು ‘ಭಾರತ’ ಎಂಬ ಹೆಸರಿನ ಸಂದೇಶ

ನವದೆಹಲಿ: ನವದೆಹಲಿಯಲ್ಲಿ ಶನಿವಾರದಿಂದ ನಡೆಯುತ್ತಿರುವ ಎರಡು ದಿನಗಳ ಜಿ20 ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ದೇಶದ  ಹೆಸರಿನ ಫಲಕದಲ್ಲಿ ಇಂಡಿಯಾ ಬದಲು  ‘ಭಾರತ’ ಎಂದು ಪ್ರದರ್ಶಿಸಲಾಗಿದೆ. ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ‘ಭಾರತ’ ಪ್ರತಿನಿಧಿಸುವ ನಾಯಕ ಎಂದು ಗುರುತಿಸಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶೃಂಗಸಭೆಯಲ್ಲಿ ಉದ್ಘಾಟನಾ ಭಾಷಣ ಮಾಡುತ್ತಿದ್ದಂತೆ ಸಾಮಾಜಿಕ … Continued

ಭ್ರಷ್ಟಾಚಾರ ಪ್ರಕರಣ : ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬಂಧಿಸಿದ ಆಂಧ್ರ ಪೊಲೀಸರು

ಹೈದರಾಬಾದ್‌ : ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಶನಿವಾರ ಬಂಧಿಸಿದೆ. ಈ ಪ್ರಕರಣದಲ್ಲಿ ಟಿಡಿಪಿ ಶಾಸಕ ಮತ್ತು ಮಾಜಿ ಸಚಿವ ಗಂಟಾ ಶ್ರೀನಿವಾಸ ರಾವ್ ಮತ್ತು ಅವರ ಪುತ್ರ ಗಂಟಾ … Continued

ಬಾಂಗ್ಲಾದೇಶ, ಮಾರಿಷಸ್ ಪ್ರಧಾನಿಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಿ ಮೋದಿ: ಆರ್ಥಿಕ ಬಾಂಧವ್ಯ ವೃದ್ಧಿಗೆ ಪಣ

ನವದೆಹಲಿ : ಜಿ20 ಶೃಂಗಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ತಮ್ಮ ನಿವಾಸದಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಮಾತುಕತೆ ನಡೆಸಿದರು. ಇಬ್ಬರು ನಾಯಕರು ದ್ವಿಪಕ್ಷೀಯ ಸಹಕಾರವನ್ನು ‘ಗಾಢಗೊಳಿಸಲು ಮತ್ತು ವೈವಿಧ್ಯಗೊಳಿಸಲು’ ವಾಗ್ದಾನ ಮಾಡಿದರು ಮತ್ತು ಸಂಪರ್ಕ (connectivity) ಮತ್ತು ವಾಣಿಜ್ಯ ಸಂಪರ್ಕಗಳಂತಹ ವಿಷಯಗಳ ಕುರಿತು ಚರ್ಚಿಸಿದರು. ಪ್ರಧಾನಿ ಮೋದಿ ಮತ್ತು … Continued

ಪ್ರಧಾನಿ ಮೋದಿ-ಬೈಡನ್‌ ಸಭೆಯಲ್ಲಿ ಕ್ವಾಡ್‌, ಜೆಟ್ ಇಂಜಿನ್‌ಗಳು, ಡ್ರೋನ್‌ಗಳು, ಸೆಮಿಕಂಡಕ್ಟರ್, 6G, ಎಐ ಬಗ್ಗೆ ಚರ್ಚೆ : ಭಾರತ-ಅಮೆರಿಕ ಜಂಟಿ ಹೇಳಿಕೆ

ನವದೆಹಲಿ : ಭಾರತಕ್ಕೆ 31 ಪ್ರೆಡೆಟರ್‌ ಡ್ರೋನ್‌ಗಳ ಖರೀದಿ ಮತ್ತು ಜೆಟ್ ಎಂಜಿನ್‌ಗಳ ಜಂಟಿ ಅಭಿವೃದ್ಧಿಯಲ್ಲಿ ಪ್ರಗತಿಯನ್ನು ಸ್ವಾಗತಿಸುವ ಸಂದರ್ಭದಲ್ಲಿ ದ್ವಿಪಕ್ಷೀಯ ಪ್ರಮುಖ ರಕ್ಷಣಾ ಪಾಲುದಾರಿಕೆಯನ್ನು “ಗಾಢಗೊಳಿಸಲು ಮತ್ತು ವೈವಿಧ್ಯಗೊಳಿಸಲು” ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್ ಅಧ್ಯಕ್ಷ ಜೋ ಬಿಡನ್ ಶುಕ್ರವಾರ ಪಣತೊಟ್ಟಿದ್ದಾರೆ ಜಿ 20 ಶೃಂಗಸಭೆಗಾಗಿ ಬೈಡನ್‌ ನವದೆಹಲಿಗೆ ಬಂದಿಳಿದ ನಂತರ ಉಭಯ … Continued

3 ಬಾರಿ ತಲಾಖ್ ಹೇಳಿ ಪತ್ನಿ, ಮಗುವನ್ನು ಕತಾರ್‌ ಹೊಟೇಲ್‌ನಲ್ಲಿಯೇ ಬಿಟ್ಟು ಭಾರತಕ್ಕೆ ಬಂದ ಗಂಡ…!

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ ಮೂಲದ ವ್ಯಕ್ತಿಯೊಬ್ಬ ಪತ್ನಿಗೆ 3 ಬಾರಿ ತಲಾಖ್ ಹೇಳಿ, ಆಕೆ ಹಾಗೂ ಆಕೆಯ ಮಗುವನ್ನೂ ಕತಾರಿನ ಹೊಟೇಲೊಂದರಲ್ಲಿ ಬಿಟ್ಟು ಬಂದಿದ್ದಾನೆ. ಇದನ್ನು ಪ್ರಶ್ನಿಸಿ ಪತ್ನಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಮಧ್ಯಪ್ರದೇಶದ ಭೋಪಾಲ್ ಮೂಲದ ವ್ಯಕ್ತಿಯೊಬ್ಬ ತ್ರಿವಳಿ ತಲಾಖ್ ಘೋಷಿಸಿದ ನಂತರ ಕತಾರ್‌ನ ಹೋಟೆಲ್‌ನಲ್ಲಿ ಪತ್ನಿ ಮತ್ತು ಮಗುವನ್ನು ಬಿಟ್ಟಿಬಂದಿದ್ದಾನೆ, ಆತನ ವಿರುದ್ಧ … Continued

ಏಳು ಕ್ಷೇತ್ರಗಳ ಉಪಚುನಾವಣೆ ; ಬಿಜೆಪಿ 3, ಇಂಡಿಯಾ ಮೈತ್ರಿಕೂಟಕ್ಕೆ 4 ಕಡೆ ಗೆಲುವು

ನವದೆಹಲಿ: ವಿವಿಧ ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, 7ರಲ್ಲಿ ಬಿಜೆಪಿ 3 ಹಾಗೂ ಇಂಡಿಯಾ ಮೈತ್ರಿಕೂಟವು 4 ಕ್ಷೇತ್ರಗಳಲ್ಲಿ ಜಯ ದಾಖಲಿಸಿದೆ. ಹಾಗೂ ಬಿಜೆಪಿ ಮೂರರಲ್ಲಿ ಗೆಲುವು ಸಾಧಿಸಿದೆ. ತ್ರಿಪುರದ ಧನ್‌ಪುರ್ ಮತ್ತು ಬೊಕ್ಸಾನಗರ ವಿಧಾನಸಭಾ ಕ್ಷೇತ್ರ ಹಾಗೂ ಉತ್ತರಾಖಂಡದ ಬಾಗೇಸ್‌ವರ್‌ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಳೆದ ಬಾರಿಗೆ … Continued

ಮೀಸಲಾತಿ ವಿವಾದದ ನಡುವೆ ಮಹಾರಾಷ್ಟ್ರದ ಕಂದಾಯ ಸಚಿವರ ತಲೆ ಮೇಲೆ ಅರಿಶಿಣದ ಪುಡಿ ಸುರಿದ ವ್ಯಕ್ತಿ | ವೀಡಿಯೊ

ಮುಂಬೈ: ಮೀಸಲಾತಿಗಾಗಿ ಒತ್ತಾಯಿಸಿ ಧಂಗರ್ ಸಮುದಾಯದ ಸದಸ್ಯರು ನೀಡಿದ ಮನವಿ ಪತ್ರ ಓದುತ್ತಿದ್ದಾಗ ಮಹಾರಾಷ್ಟ್ರದ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರಿಗೆ ಹಲ್ದಿ ಅಥವಾ ಅರಿಶಿನ ಪುಡಿಯನ್ನು ಎರಚಲಾಗಿದೆ. ಘಟನೆಯ ವೀಡಿಯೋದಲ್ಲಿ ಧನಗರ್ (ಕುರುಬ) ಸಮುದಾಯದ ಇಬ್ಬರು ವ್ಯಕ್ತಿಗಳು ಸಚಿವರ ಎರಡೂ ಬದಿಯಲ್ಲಿ ನಿಂತಿರುವುದು ಕಂಡುಬರುತ್ತದೆ. ಸಚಿವರು ಅವರು ನೀಡಿದ ಪತ್ರವನ್ನು ಓದುತ್ತಿದ್ದಾಗ, ಅವರಲ್ಲಿ … Continued

ಲೋಕಸಭೆ ಚುನಾವಣೆಗೆ ಬಿಜೆಪಿ – ಜೆಡಿಎಸ್‌ ಮೈತ್ರಿಗೆ ವರಿಷ್ಠರ ಒಪ್ಪಿಗೆ : ಬಿಎಸ್‌ ಯಡಿಯೂರಪ್ಪ

ಬೆಂಗಳೂರು : 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು. ನಗರದ ಫ್ರೀಡಂ ಪಾರ್ಕ್ ನಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ. ಮೈತ್ರಿ ಬಗ್ಗೆ ಉಭಯ ಪಕ್ಷಗಳ … Continued