ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ನಿಧನ

ಕೋಲ್ಕತ್ತಾ :  ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕ ಬುದ್ಧದೇವ ಭಟ್ಟಾಚಾರ್ಯ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಗುರುವಾರ ಬೆಳಿಗ್ಗೆ ತಮ್ಮ ಕೋಲ್ಕತ್ತಾದ ಮನೆಯಲ್ಲಿ ನಿಧನರಾದರು. ಭಟ್ಟಾಚಾರ್ಯ ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮೀರಾ ಮತ್ತು ಮಗಳು ಸುಚೇತನಾ ಅವರನ್ನು ಅಗಲಿದ್ದಾರೆ. ಭಟ್ಟಾಚಾರ್ಯ ಅವರು … Continued

12 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ

ನವದೆಹಲಿ: ಖಾಲಿ ಇರುವ 12 ರಾಜ್ಯಸಭಾ ಸ್ಥಾನಗಳಿಗೆ ಸೆಪ್ಟೆಂಬರ್ 3 ರಂದು ಚುನಾವಣೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದೆ. ನಾಮಪತ್ರ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನಾಂಕವಾಗಿದ್ದು, ಆಗಸ್ಟ್ 22 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಸ್ಸಾಂ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ತ್ರಿಪುರಾ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆಯಲು ಆಗಸ್ಟ್ 26 … Continued

ಅಮ್ಮಾ, ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋತಿದ್ದೇನೆ, ನನ್ನನ್ನು ಕ್ಷಮಿಸಿ.. : ಒಲಿಂಪಿಕ್ಸ್‌ ಅನರ್ಹತೆ ನಂತರ ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಫೋಗಟ್

ನವದೆಹಲಿ : ಪ್ಯಾರಿಸ್‌ನಲ್ಲಿ 2024 ರ ಒಲಿಂಪಿಕ್ಸ್‌ನಲ್ಲಿ ಕುಸ್ತಿ ಫೈನಲ್‌ನಿಂದ ಅನರ್ಹಗೊಂಡ ಒಂದು ದಿನದ ನಂತರ ಕುಸ್ತಿಪಟು ವಿನೇಶ್ ಫೋಗಟ್ ಗುರುವಾರ ಕುಸ್ತಿಗೆ ನಿವೃತ್ತಿ ಘೋಷಿಸಿದ್ದಾರೆ. 50 ಕೆಜಿ ಮಹಿಳಾ ಕುಸ್ತಿ ವಿಭಾಗದಲ್ಲಿ 100 ಗ್ರಾಂ ಅಧಿಕ ತೂಕದ ಕಾರಣದಿಂದ ಚಿನ್ನದ ಪದಕದ ಫೈನಲ್‌ ಪಂದ್ಯಕ್ಕೆ ವಿನೇಶ್ ಫೋಗಟ್‌ ಅನರ್ಹಗೊಂಡರು. ನಿವೃತ್ತಿ ಘೋಷಿಸಿದ ಅವರು, ಹಿಂದಿಯಲ್ಲಿ … Continued

ಒಲಿಂಪಿಕ್ಸ್‌ ಮಹಿಳಾ ಕುಸ್ತಿ ಫೈನಲ್‌ : ತೂಕದ ಕಾರಣಕ್ಕೆ ಅನರ್ಹಗೊಂಡ ಬಳಿಕ ವಿನೇಶ್‌ ಫೋಗಟ್‌ ಮೊದಲ ಪ್ರತಿಕ್ರಿಯೆ…

ಪ್ಯಾರಿಸ್: ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯಿಂದ ಅನರ್ಹಗೊಂಡಿರುವ ವಿನೇಶಾ ಫೋಗಟ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ‘ಪದಕ ಗೆಲ್ಲಲು ಸಾಧ್ಯವಾಗದಿರುವುದು ದುರದೃಷ್ಟಕರ. ಆದರೆ ಇವೆಲ್ಲವೂ ಕ್ರೀಡೆಯ ಭಾಗ’ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. 100 ಗ್ರಾಂ ತೂಕ ಹೆಚ್ಚಿದ್ದ ಕಾರಣ ಮಹಿಳೆಯರ 50 ಕೆ.ಜಿ ಕುಸ್ತಿಯ ಫೈನಲ್‌ನಲ್ಲಿ ಆಡುವ ಅವಕಾಶದಿಂದ ವಿನೇಶ್‌ ಫೋಗಟ್‌ ವಂಚಿತರಾಗಿದ್ದರು. ಈ ಸುದ್ದಿ ಕೇಳಿದ … Continued

ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಹಂಗಾಮಿ ಸರ್ಕಾರ ಇಂದು ಪ್ರಮಾಣವಚನ : ಸೇನಾ ಮುಖ್ಯಸ್ಥ

ಢಾಕಾ : ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ, ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಗುರುವಾರ (ಆಗಸ್ಟ್ 8) ಪ್ರಮಾಣವಚನ ಸ್ವೀಕರಿಸಲಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಝಮಾನ್ ಘೋಷಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜನರಲ್ ವಾಕರ್‌, ಪ್ರಮಾಣ ವಚನ ಸಮಾರಂಭವು ರಾತ್ರಿ 8 ಗಂಟೆಗೆ (ಸ್ಥಳೀಯ ಕಾಲಮಾನ) ನಡೆಯುವ … Continued

27 ವರ್ಷಗಳಲ್ಲಿ ಇದೇ ಮೊದಲ ಬಾರಿ ಶ್ರೀಲಂಕಾ ವಿರುದ್ಧ ಸರಣಿ ಸೋತ ಭಾರತ

ಕೊಲಂಬೊ: ಅತಿಥೇಯ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ 110 ರನ್ ಅಂತರದ ಹೀನಾಯ ಸೋಲು ಕಾಣುವ ಮೂಲಕ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಶ್ರೀಲಂಕಾ 2-0ರ ಅಂತರದಲ್ಲಿ ಸೋತಿದೆ. 27 ವರ್ಷಗಳಲ್ಲಿ ಮೊದಲ ಬಾರಿ ಶ್ರೀಲಂಕಾ ವಿರುದ್ಧ ಭಾರತ ಸರಣಿ ಸೋಲಿನಿಂದ ತೀವ್ರ ಮುಜುಗರಕ್ಕೆ ಒಳಗಾಗಿದೆ. ಮೊದಲು ಬ್ಯಾಟ್‌ ಮಾಡಿದ … Continued

ಒಲಿಂಪಿಕ್ಸ್ ನಿಂದ ಅನರ್ಹತೆ : ತೂಕ ಕಡಿಮೆ ಮಾಡಲು ರಾತ್ರಿಯಿಡೀ ಏನೆಲ್ಲ ಪ್ರಯತ್ನ ಮಾಡಿದ ವಿನೇಶ್ ಫೋಗಟ್ : ಆದರೆ…

ಅದೃಷ್ಟದ ಆಘಾತಕಾರಿ ವಿದ್ಯಮಾನದಲ್ಲಿ, ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿಯಲ್ಲಿ ಫೈನಲ್‌ಗೆ ತಲುಪಿದ್ದ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಫೈನಲ್‌ಗೆ ಮೊದಲು ಹೆಚ್ಚಿನ ತೂಕ ಹೊಂದಿದ್ದ ಕಾರಣ ಒಲಿಂಪಿಕ್ಸ್‌ನಿಂದ ಬುಧವಾರ ಅನರ್ಹಗೊಳಿಸಲಾಯಿತು. ಚಿನ್ನದ ಸಮೀಪಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಈ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ತೂಕ ಕಡಿಮೆ ಮಾಡಲು ಊಟ ಬಿಡುವುದು ಮತ್ತು … Continued

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕಾಘಾತ | ವಿನೇಶ್ ಫೋಗಟ್ ಅನರ್ಹ ; ತೂಕದ ಸಮಸ್ಯೆಯಿಂದ ಪದಕ ಕಳೆದುಕೊಂಡ ಕುಸ್ತಿಪಟು..!

ನವದೆಹಲಿ: ಭಾರತದ ಚಿನ್ನದ ಪದಕ ಗೆಲ್ಲುವ ಅವಕಾಶಕ್ಕೆ ದೊಡ್ಡ ಆಘಾತವಾಗಿದ್ದು, ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ಕುಸ್ತಿ ಫೈನಲ್‌ನಿಂದ ವಿನೇಶ್ ಫೋಗಟ್ ಅನರ್ಹಗೊಂಡಿದ್ದಾರೆ. 29ರ ಹರೆಯದ ಭಾರತದ ಮಹಿಳಾ ಕುಸ್ತಿಪಟು ಫೈನಲ್‌ ಪಂದ್ಯ ನಡೆಯುವ ದಿನದ ತೂಕದಲ್ಲಿ 100 ಗ್ರಾಂ ಅಧಿಕ ತೂಕ ಹೊಂದಿದ ಕಾರಣಕ್ಕೆ ಸ್ಪರ್ಧೆಯಿಂದ ಅನರ್ಹಗೊಂಡಿದ್ದಾರೆ. ದುರದೃಷ್ಟವಶಾತ್, ಅನರ್ಹತೆ ಮುಂದುವರಿದರೆ ವಿನೇಶ್ … Continued

ಪ್ಯಾರಿಸ್ ಒಲಿಂಪಿಕ್ಸ್‌: ಮಹಿಳೆಯರ ಕುಸ್ತಿಯಲ್ಲಿ ಫೈನಲ್ ಪ್ರವೇಶಿಸಿದ ಭಾರತದ ವಿನೇಶ್ ಫೋಗಟ್

ಪ್ಯಾರಿಸ್: ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್‌ ಅವರು ಮಹಿಳೆಯರ 50 ಕೆ.ಜಿ ಫ್ರೀ ಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕ್ಯೂಬಾದ ಯುಸ್‌ನೈಲೆಸ್‌ ಗುಜ್ಮನ್‌ ಎದುರು ದಿಟ್ಟ ಪ್ರದರ್ಶನ ನೀಡಿದ ತೋರಿದ ವಿನೇಶ್ ಫೈನಲ್ ಪ್ರವೇಶಿಸಿದ್ದಾರೆ. ಕಳೆದೆರಡು ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲೇ ನಿರ್ಮಿಸಿದ್ದ ವಿನೇಶ್ ಫೋಗಟ್ ಸೆಮಿ ಫೈನಲ್‌ನಲ್ಲಿ … Continued

ವೀಡಿಯೊ..| ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ; ಶಾಕ್‌ ಆದ ಕ್ರಿಕೆಟ್‌ ಪ್ರೇಮಿಗಳು

ಭಾರತದ ಮಾಜಿ ಕ್ರಿಕೆಟಿಗ ಮತ್ತು ಸಚಿನ್ ತೆಂಡೂಲ್ಕರ್ ಅವರ ಆಪ್ತ ಸ್ನೇಹಿತ ವಿನೋದ್ ಕಾಂಬ್ಳಿ ಅವರು ನಡೆದುಕೊಂಡು ಹೋಗಲಾರದ ಸ್ಥಿತಿಯಲ್ಲಿದ್ದಾರೆಯೇ…? ಅವರು ನಡೆದುಕೊಂಡು ಹೋಗಲು ಸಾಧ್ಯವಾಗದೆ ಪಕ್ಕದಲ್ಲಿದ್ದವರ ಸಹಾಯ ಕೇಳಿದ ವೀಡಿಯೊವೊಂದು ವೈರಲ್‌ ಆಗಿದೆ. ಭಾರತದ ಕ್ರಿಕೆಟ್‌ನಲ್ಲಿ ಅತ್ಯಂತ ಪ್ರತಿಭಾನ್ವಿತ ಎಡಗೈ ಆಟಗಾರರಲ್ಲಿ ಒಬ್ಬರಾಗಿದ್ದ ವಿನೋದ ಕಾಂಬ್ಳಿ ಅವರಿಗೆ ರಸ್ತೆಯಲ್ಲಿ ನಿಲ್ಲಲು ಸಾಧ್ಯವಾಗದೆ ಬೈಕ್‌ನ ಆಸರೆ … Continued