ತನ್ನದೇ ಕುಟುಂಬದ ಐವರನ್ನು ಕೊಡಲಿಯಿಂದ ಕೊಚ್ಚಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ…!

ಲಕ್ನೋ : ವ್ಯಕ್ತಿಯೊಬ್ಬ ತನ್ನದೇ ಕುಟುಂಬದ ಐವರನ್ನು ಕೊಡಲಿಯಿಂದ ಕೊಚ್ಚಿ ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಭಯಾನಕ ಘಟನೆ ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯಲ್ಲಿ ನಡೆದಿದೆ. ಮೈನ್ಪುರಿ ಜಿಲ್ಲೆಯ ಗೋಕುಲ್ಪುರ ಅರ್ಸಾರಾ ಗ್ರಾಮದಲ್ಲಿ ಹತ್ಯೆ ನಡೆದಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ. ತನ್ನದೇ ಮನೆಯವರನ್ನು ಕೊಡಲಿಯಿಂದ ಕೊಚ್ಚಿ ಕೊಂದ ನಂತರ 30 ವರ್ಷದ ಶಿವವೀರ ಯಾದವ್ … Continued

ವೀಡಿಯೊ…: ‘ಜನ ಗಣ ಮನ’ ಹಾಡಿದ ನಂತರ ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಅಮೆರಿಕನ್‌ ಗಾಯಕಿ ಮೇರಿ ಮಿಲ್ಬೆನ್ | ವೀಕ್ಷಿಸಿ

ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಅಮೆರಿಕ ಮತ್ತು ಭಾರತ ಸಂಬಂಧವನ್ನು ಗಟ್ಟಿಗೊಳಿಸುವ ಅನೇಕ ಒಪ್ಪಂದುಗಳು ನಡೆದಿವೆ. ಅಲ್ಲಿನ ಅನೇಕ ತಜ್ಙರ ಜತೆಗೆ, ಆರ್ಥಿಕ, ಭದ್ರತೆ ವಿಚಾರವಾಗಿ ಸಭೆ ಜತೆಗೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಅಮೇರಿಕನ್ ಗಾಯಕಿ ಮೇರಿ ಮಿಲ್ಬೆನ್ (Mary Milben) ಮೋದಿ ಜತೆಗೆ ನಡೆದುಕೊಂಡ ರೀತಿ ಭಾರತ ಕಲಿಸಿದ … Continued

ಪ್ರಧಾನಿ ಮೋದಿ ಜೊತೆ ‘ಹೈಟೆಕ್ ಹ್ಯಾಂಡ್‌ಶೇಕ್’ ನಂತರ ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್ ಘೋಷಿಸಿದ್ದೇನು…?

ನವದೆಹಲಿ : ಅಮೆರಿಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿಯ ನಂತರ ಮೂರು ಅಮೆರಿಕ ಟೆಕ್ ದೈತ್ಯರು ಭಾರತದಲ್ಲಿ ಪ್ರಮುಖ ಹೂಡಿಕೆಗೆ ಬದ್ಧರಾಗಿದ್ದಾರೆ. ಅಮೆಜಾನ್, ಗೂಗಲ್ ಮತ್ತು ಮೈಕ್ರೋಸಾಫ್ಟ್ ಭಾರತೀಯ ತಂತ್ರಜ್ಞಾನದ ಬೆಳವಣಿಗೆಗೆ ಬಂಡವಾಳ ಹೂಡಿಕೆ ಮತ್ತು ತಾಂತ್ರಿಕ ಸಹಕಾರವನ್ನು ಪ್ರಕಟಿಸಿವೆ. ಅಮೆಜಾನ್ ಮುಂದಿನ ಏಳು ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚುವರಿ $15 ಶತಕೋಟಿ ಹೂಡಿಕೆ ಮಾಡಲು ಬದ್ಧವಾಗಿದೆ, … Continued

ಗುಜರಾತಿನಲ್ಲಿ ಗ್ಲೋಬಲ್ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರ ತೆರೆಯಲಿದೆ ಗೂಗಲ್: ಸುಂದರ್ ಪಿಚೈ

ನವದೆಹಲಿ: ಗೂಗಲ್ ತನ್ನ ಜಾಗತಿಕ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರವನ್ನು ಗುಜರಾತ್‌ನಲ್ಲಿ ತೆರೆಯಲಿದೆ ಎಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ ಕಂಪನಿಯ ಮುಖ್ಯಸ್ಥ ಸುಂದರ್ ಪಿಚೈ ಪ್ರಕಟಿಸಿದ್ದಾರೆ. ಮೋದಿ ಸರ್ಕಾರದ ಪ್ರಮುಖ ಅಭಿಯಾನವಾದ ಡಿಜಿಟಲ್ ಇಂಡಿಯಾಕ್ಕಾಗಿ ಪ್ರಧಾನಿಯವರ ದೂರದೃಷ್ಟಿಯನ್ನು ಅವರು ಶ್ಲಾಘಿಸಿದರು. ಅಮೆರಿಕಕ್ಕೆ ಐತಿಹಾಸಿಕ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗಲು … Continued

‘ಪಿಂಕ್ ವಾಟ್ಸಾಪ್’ ಲಿಂಕ್ ಬಗ್ಗೆ ಎಚ್ಚರ..: ಹೊಸ ಫೀಚರ್‌ ಎಂದು ಕ್ಲಿಕ್‌ ಮಾಡಿದ್ರೆ ನಿಮ್ಮ ಹಣ, ದಾಖಲೆಗಳೇ ಮಾಯವಾಗಬಹುದು…!

ಸ್ಕ್ಯಾಮರ್‌ಗಳು ಆನ್ಲೈನ್ ವಂಚನೆ, ಮೋಸ ಇತ್ಯಾದಿಗಳಿಗೆ ವಾಟ್ಸಾಪ್‌ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ ಅಗತ್ಯ. ಈಗ ‘ಪಿಂಕ್ ವಾಟ್ಸಾಪ್’ ಎಂಬುದು ವಂಚನೆ ಪಟ್ಟಿಗೆ ಸೇರ್ಪಡೆಯಾಗಿದೆ. ಇತ್ತೀಚಿಗೆ ವಾಟ್ಸಾಪ್‌ ಮೂಲಕ ವಂಚಕರು ‘ಪಿಂಕ್ ವಾಟ್ಸಾಪ್’ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಲಿಂಕ್‌ಅನ್ನು ಸ್ವೀಕರಿಸಿ ಎಂಬ ಸಂದೇಶವನ್ನು ಹರಡುತ್ತಿದ್ದಾರೆ. ಜನರನ್ನು ಮೋಸಗೊಳಿಸಲೆಂದೆ ಆನ್ಲೈನ್ ವಂಚಕರು ಪಿಂಕ್ ವಾಟ್ಸಾಪ್ … Continued

ಪ್ರಧಾನಿ ಮೋದಿ ಅಮೆರಿಕ ಭೇಟಿ ಸಮಯದಲ್ಲಿ ಸಹಿ ಹಾಕಿದ ಪ್ರಮುಖ ಒಪ್ಪಂದಗಳಿಂದ ಭಾರತ ಸೆಮಿಕಂಡಕ್ಟರ್ ಸೂಪರ್ ಪವರ್ ಆಗಬಹುದು: ಯಾವೆಲ್ಲ ಒಪ್ಪಂದಗಳು ಆಗಿವೆ..?

ಸಹಯೋಗದ ಆವಿಷ್ಕಾರದ ಹೊಸ ಯುಗಕ್ಕೆ ನಾಂದಿ ಹಾಡುವ ಮೂಲಕ, ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕದ ಭೇಟಿಯ ಸಮಯದಲ್ಲಿ ಭಾರತದ ಸೆಮಿಕಂಡಕ್ಟರ್ ಮಿಷನ್ (ISM) ಅನ್ನು ವೇಗಗೊಳಿಸಲು ಅಮೆರಿಕದ ಅಗ್ರ ಸೆಮಿಕಂಡಕ್ಟರ್ ಕಂಪನಿಗಳು ಕೆಲವು ಪ್ರಮುಖ ಹೂಡಿಕೆಗಳನ್ನು ಘೋಷಿಸಿವೆ. ಗುರುವಾರ ವಾಷಿಂಗ್ಟನ್‌ನಲ್ಲಿ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಡುವಿನ ಮಾತುಕತೆಯ ನಂತರ ಉಭಯ … Continued

36 ವರ್ಷಗಳ ಕಾಲ ‘ಗರ್ಭಿಣಿ’ಯಾಗಿ ಅವಳಿಗಳನ್ನು ಹೊತ್ತುಕೊಂಡಿದ್ದ ನಾಗ್ಪುರದ ಈ ವ್ಯಕ್ತಿ…!

ಮಹಾರಾಷ್ಟ್ರದ ನಾಗ್ಪುರದ ವ್ಯಕ್ತಿಯೊಬ್ಬ ತನ್ನ ಹೊಟ್ಟೆಯ ಉಬ್ಬುವಿಕೆಯಿಂದಾಗಿ “ಗರ್ಭಿಣಿ ಮನುಷ್ಯ” ಎಂದು ಅಡ್ಡಹೆಸರು ಹೊಂದಿದ್ದ, ಇದು 36 ವರ್ಷಗಳಿಗೂ ಹೆಚ್ಚು ಕಾಲ ತನಗೆ ಗೊತ್ತಿಲ್ಲದೆ ಅವಳಿ ಮಕ್ಕಳ ಭ್ರೂಣವನ್ನು ಹೊಟ್ಟೆಯೊಳಗೆ ಇಟ್ಟುಕೊಂಡಿದ್ದ…! ಮೂರು ದಶಕಗಳಿಗೂ ಹೆಚ್ಚು ಕಾಲ ಉಬ್ಬುವ ಹೊಟ್ಟೆಯೊಂದಿಗೆ ಬದುಕುತ್ತಿರುವ 60 ವರ್ಷದ ನಾಗ್ಪುರದ ವ್ಯಕ್ತಿಯೊಬ್ಬರಲ್ಲಿ ಅಪರೂಪದ ವೈದ್ಯಕೀಯ ಸ್ಥಿತಿ ಪತ್ತೆಹಚ್ಚಿದ್ದಾರೆ. ಈ ಅಪರೂಪದ … Continued

ಗಡಿಯಾಚೆಗಿನ ಭಯೋತ್ಪಾದನೆ ಖಂಡಿಸಿದ ಭಾರತ-ಅಮೆರಿಕ : ತನ್ನ ನೆಲದಲ್ಲಿ ಭಯೋತ್ಪಾದನೆಗೆ ಆಶ್ರಯ ನಿರಾಕರಿಸಲು ಪಾಕಿಸ್ತಾನಕ್ಕೆ ಕರೆ

ಅಮೆರಿಕ ಮತ್ತು ಭಾರತ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಭಯೋತ್ಪಾದಕರ ಪ್ರಾಕ್ಸಿಗಳ ಬಳಕೆಯನ್ನು ಬಲವಾಗಿ ಖಂಡಿಸಿವೆ ಮತ್ತು ತನ್ನ ನಿಯಂತ್ರಣದಲ್ಲಿರುವ ಯಾವುದೇ ಪ್ರದೇಶವನ್ನು ಭಯೋತ್ಪಾದಕ ದಾಳಿಗೆ ಬಳಸದಂತೆ ಖಚಿತಪಡಿಸಿಕೊಳ್ಳಲು ತಕ್ಷಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಕರೆ ನೀಡಿದೆ ಎಂದು ಅಮೆರಿಕ-ಭಾರತ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಲ್-ಖೈದಾ, ಐಸಿಸ್/ದಾಯೆಶ್, ಲಷ್ಕರ್ ಇ ತಯ್ಯಿಬಾ (ಎಲ್‌ಇಟಿ), ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು … Continued

ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ‘ಬಹಳ ಕಷ್ಟ’: ಪಾಟ್ನಾ ಪ್ರತಿಪಕ್ಷಗಳ ಸಭೆಯ ನಂತರ ರಾಜಕೀಯ ಬಾಂಬ್‌ ಸಿಡಿಸಿದ ಎಎಪಿ…!

ನವದೆಹಲಿ : ಪಾಟ್ನಾದಲ್ಲಿ ನಡೆದ 16 ಪಕ್ಷಗಳ ಸಭೆಯ ನಂತರ ಪಕ್ಷಗಳ ಒಗ್ಗಟ್ಟಿನ ಕುರಿತು ಪ್ರತಿಪಕ್ಷಗಳ ಪತ್ರಿಕಾಗೋಷ್ಠಿ ನಡೆಯುತ್ತಿರುವಾಗಲೇ ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, ಆಡಳಿತಾತ್ಮಕ ಸೇವೆಗಳ ನಿಯಂತ್ರಣದ ಮೇಲೆ ಕೇಂದ್ರದ ವಿವಾದಾತ್ಮಕ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್‌ ವಿರೋಧಿಸುವವರೆಗೆ ಕಾಂಗ್ರೆಸ್ ಅನ್ನು ಒಳಗೊಂಡಿರುವ ಯಾವುದೇ ಪ್ರತಿಪಕ್ಷಗಳ ಸಭೆಗಳಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಬಾಂಬ್ … Continued

ಒಟ್ಟಿಗೆ ಚುನಾವಣೆ ಎದುರಿಸಲು ಎಲ್ಲ ಪಕ್ಷಗಳು ಒಪ್ಪಿವೆ “: ಮಹತ್ವದ ಸಭೆಯಲ್ಲಿ ಕಾಂಗ್ರೆಸ್ -ಎಎಪಿ ಜಗಳದ ನಂತರ ಹೇಳಿದ ವಿಪಕ್ಷಗಳ ಮುಖಂಡರು

ಪಾಟ್ನಾ: ಎಲ್ಲಾ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಲು ಒಪ್ಪಿಕೊಂಡಿವೆ, ಆದರೆ ವಿವರಗಳನ್ನು ಅಂತಿಮಗೊಳಿಸಲು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮುಂದಿನ ತಿಂಗಳು ಮತ್ತೊಂದು ಸಭೆ ನಡೆಯಲಿದೆ ಎಂದು 16 ಪಕ್ಷಗಳ ಬೃಹತ್ ಪ್ರತಿಪಕ್ಷ ಸಭೆಯ ನಂತರ ನೇತೃತ್ವ ವಹಿಸಿದ್ದ ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಹೇಳಿದ್ದಾರೆ. ನಾಲ್ಕು ಗಂಟೆಗಳ ಕಾಲ ನಡೆದ ಸಭೆ ನಡೆದ ನಂತರ ಆಮ್ ಆದ್ಮಿ … Continued