ಬಿಹಾರದ ನಿತೀಶಕುಮಾರ ಸರ್ಕಾರಕ್ಕೆ ಬೆಂಬಲ ಹಿಂಪಡೆದ ಮಾಜಿ ಸಿಎಂ ಜಿತನ್ ಮಾಂಝಿ ಪಕ್ಷ

ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ಪಕ್ಷವು ಸೋಮವಾರ ರಾಜ್ಯದಲ್ಲಿ ನಿತೀಶಕುಮಾರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದೆ. ಮಾಂಝಿ ಅವರ ಪುತ್ರ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸಂತೋಷ ಸುಮನ್ ಅವರು, ಬೆಂಬಲ ಹಿಂತೆಗೆದುಕೊಳ್ಳುವ ಪತ್ರವನ್ನು ಹಸ್ತಾಂತರಿಸಲು ಬಿಹಾರ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರೊಂದಿಗೆ ಅಪಾಯಿಂಟ್ಮೆಂಟ್ ಕೇಳಿದ್ದಾರೆ … Continued

ನಟಿ ರಶ್ಮಿಕಾಗೆ ಆಪ್ತ ಸಹಾಯಕನಿಂದಲೇ ₹80 ಲಕ್ಷ ವಂಚನೆ…?

ಖ್ಯಾತ ನಟಿ ರಶ್ಮಿಕಾ ಮಂದಣ್ಣ ತಮ್ಮ ಆಪ್ತ ಸಹಾಯಕನಿಂದಲೇ ವಂಚನೆಗೊಳಗಾಗಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಕಳೆದ ಕೆಲ ವರ್ಷಗಳಿಂದ ನಟಿಗೆ ಆಪ್ತ ಸಹಯಾಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಬರೋಬ್ಬರಿ 80 ಲಕ್ಷ ರೂಪಾಯಿ ಹಣವನ್ನು ವಂಚಿಸಿದ್ದಾನೆ ಎಂದು ಕೆಲ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. 2016ರಲ್ಲಿ ತೆರೆಕಂಡಿದ್ದ ಕನ್ನಡದ ʼಕಿರಿಕ್‌ ಪಾರ್ಟಿʼ ಸಿನಿಮಾ ಮೂಲಕ … Continued

ಗಾಂಧಿ ಶಾಂತಿ ಪ್ರಶಸ್ತಿ ವಿವಾದದ ನಡುವೆ 1 ಕೋಟಿ ನಗದು ಬಹುಮಾನ ಸ್ವೀಕರಿಸುವುದಿಲ್ಲ ಎಂದ ಗೀತಾ ಪ್ರೆಸ್

ನವದೆಹಲಿ : ವಿಶ್ವದ ಅತಿದೊಡ್ಡ ಪ್ರಕಾಶಕನ ಸಂಸ್ಥೆಗಳಲ್ಲಿ ಒಂದಾದ ಗೋರಖ್‌ಪುರದ ಗೀತಾ ಪ್ರೆಸ್, ತಮ್ಮ ಪ್ರಕಾಶನ ಸಂಸ್ಥೆಯನ್ನು 2021ರ ಗಾಂಧಿ ಶಾಂತಿ ಪ್ರಶಸ್ತಿಗೆ ನೀಡುವುದು ಅತ್ಯಂತ ಗೌರವದ ಸಂಗತಿಯಾಗಿದೆ ಎಂದು ಹೇಳಿದೆ. ಆದರೆ, ಗೌರವಕ್ಕೆ ಆಯ್ಕೆಯಾದ ಬಗ್ಗೆ ಎದ್ದ ವಿವಾದದ ನಡುವೆ ಪ್ರಕಾಶಕನ ಸಂಸ್ಥೆ 1 ಕೋಟಿ ರೂಪಾಯಿ ನಗದು ಬಹುಮಾನ ಸ್ವೀಕರಿಸುವುದಿಲ್ಲ ಎಂದು ಹೇಳಿದೆ. … Continued

‘ಇದು ಸಾವರ್ಕರ್‌ಗೆ ಪ್ರಶಸ್ತಿ ನೀಡಿದಂತೆ’: 2021ರ ಗಾಂಧಿ ಶಾಂತಿ ಪ್ರಶಸ್ತಿಗೆ ಗೀತಾ ಪ್ರೆಸ್‌ ಆಯ್ಕೆಗೆ ಕಾಂಗ್ರೆಸ್ ಟೀಕೆ

ನವದೆಹಲಿ: ಗೋರಖಪುರದ ಗೀತಾ ಪ್ರೆಸ್ ಅನ್ನು 2021 ರ ಪ್ರತಿಷ್ಠಿತ ಗಾಂಧಿ ಶಾಂತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ಭಾನುವಾರ ತಿಳಿಸಿದೆ. ಪ್ರಧಾನಿ ಮೋದಿ ನೇತೃತ್ವದ ತೀರ್ಪುಗಾರರು ಗೀತಾ ಪ್ರೆಸ್ ಅನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಸರ್ವಾನುಮತದಿಂದ ನಿರ್ಧರಿಸಿದರು. ಆದರೆ, ಈ ನಿರ್ಧಾರಕ್ಕೆ ಈಗ ಕಾಂಗ್ರೆಸ್‌ ಅಸಮಾಧಾನ ವ್ಯಕ್ತಪಡಿಸಿದೆ. ಪಕ್ಷದ ನಾಯಕ ಜೈರಾಮ … Continued

ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆಗೆ ವಾರದಲ್ಲಿ 2ನೇ ಆಘಾತ : ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರಿದ ಉದ್ಧವ್ ಬಣದ ನಾಯಕಿ

ಮುಂಬೈ: ಪಕ್ಷದ ವ್ಯವಹಾರಗಳ ಬಗ್ಗೆ ಪ್ರತಿಕ್ರಿಯೆ ಪಡೆಯಲು ಉದ್ಧವ್ ಠಾಕ್ರೆ ಅವರು ಸಿಗುವುದಿಲ್ಲ ಎಂದು ಆರೋಪಿಸಿ ಶಿವಸೇನಾ (ಯುಬಿಟಿ) ವಿಧಾನ ಪರಿಷತ್‌ ಸದಸ್ಯೆ ಮನೀಶಾ ಕಯಾಂಡೆ ಉದ್ಧವ್‌ ಠಾಕ್ರೆ ಶಿವಸೇನೆ ತೊರೆದು ಭಾನುವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಶಿವಸೇನೆಯ ಸಂಸ್ಥಾಪನಾ ದಿನದ ಮುನ್ನಾದಿನ ಮನೀಶಾ ಕಯಾಂಡೆ ಅವರು ಏಕನಾಥ ಶಿಂಧೆ … Continued

ಪ್ರೇಮಿಗಳನ್ನು ಕೊಂದು ನದಿಯಲ್ಲಿನ ಮೊಸಳೆಗಳಿಗೆ ಮೃತದೇಹ ಎಸೆದ ಪೋಷಕರು

ಭೋಪಾಲ್: ಪ್ರೇಮಿಗಳನ್ನು ಕೊಂದ ಪೋಷಕರು ಮೊಸಳೆಗಳ ಬಾಯಿಗೆ ಶವ ಎಸೆದಿದ್ದಾರೆ ಎಂದು ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಹುಡುಗಿ ಮತ್ತು ಆಕೆಯ ಪ್ರಿಯಕರನನ್ನು ಆಕೆಯ ಪೋಷಕರು ಹತ್ಯೆ ಮಾಡಿದ್ದಾರೆ. ನಂತರ ಅವರ ದೇಹಗಳನ್ನು ಭಾರವಾದ ಕಲ್ಲುಗಳಿಂದ ಕಟ್ಟಿ ಭಾರಿ ಗಾತ್ರದ ಮೊಸಳೆಗಳಿರುವ ಚಂಬಲ್ ನದಿಯಲ್ಲಿ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಕುಟುಂಬ ಗುರುತಿಸಿರುವ … Continued

ರಾಜ್ಯಪಾಲ ರವಿ, ನಟಿ-ಬಿಜೆಪಿ ನಾಯಕಿ ಖುಷ್ಬು ಸುಂದರ್ ಕುರಿತು ಅಸಭ್ಯ ಹೇಳಿಕೆ : ಪಕ್ಷದ ಸದಸ್ಯನ ಉಚ್ಚಾಟಿಸಿದ ಡಿಎಂಕೆ, ನಂತರ ಬಂಧನ

ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆ, ಖ್ಯಾತ ನಟಿ ಮತ್ತು ಬಿಜೆಪಿ ನಾಯಕಿ ಖುಷ್ಬೂ ಸುಂದರ ಮತ್ತು ರಾಜ್ಯಪಾಲ ಆರ್‌.ಎನ್. ರವಿ ಅವರ ವಿರುದ್ಧ ದೃಢೀಕರಿಸದ ವೀಡಿಯೊದಲ್ಲಿ ಆಕ್ಷೇಪಾರ್ಹ ಕಾಮೆಂಟ್ ಮಾಡಿದ ನಂತರ ಪಕ್ಷದ ಸದಸ್ಯರೊಬ್ಬರನ್ನು ಡಿಎಂಕೆ ಇಂದು ಉಚ್ಚಾಟಿಸಿದೆ. ಇದೇ ಉಚ್ಚಾಟಿತ ವ್ಯಕ್ತಿ ಶಿವಾಜಿ ಕೃಷ್ಣಮೂರ್ತಿ ಜನವರಿಯಲ್ಲಿ ರಾಜ್ಯಪಾಲರಿಗೆ ಬೆದರಿಕೆ ಹಾಕಿದ್ದರು. ಆ ವೇಳೆ ಪಕ್ಷ … Continued

ಗೋರಖ್‌ಪುರ ಗೀತಾ ಪ್ರೆಸ್‌ ಗೆ 2021ರ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿ ಘೋಷಣೆ : 41.7 ಕೋಟಿ ಪುಸ್ತಕ ಪ್ರಕಟಿಸಿದ ಗೀತಾ ಪ್ರೆಸ್‌

ನವದೆಹಲಿ: 2021ನೇ ಸಾಲಿನ ಪ್ರತಿಷ್ಠಿತ ‘ಗಾಂಧಿ ಶಾಂತಿ ಪ್ರಶಸ್ತಿ’ (Gandhi Peace Prize)ಯನ್ನು ಇಂದು (ಜೂನ್​ 18) ಘೋಷಿಸಲಾಗಿದ್ದು, ಉತ್ತರ ಪ್ರದೇಶದ ಗೋರಖಪುರದ ಗೀತಾ ಪ್ರೆಸ್‌ (Gita Press) ಪ್ರಕಾಶನ ಸಂಸ್ಥೆಗೆ ಈ ಬಾರಿಯ ಪ್ರಶಸ್ತಿ ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತೀರ್ಪುಗಾರರ ಸಮಿತಿಯು ಶಾಂತಿ ಮತ್ತು ಸಾಮಾಜಿಕ ಸಾಮರಸ್ಯದ ಗಾಂಧಿಯವರ ಆದರ್ಶಗಳನ್ನು ಉತ್ತೇಜಿಸುವಲ್ಲಿ … Continued

12 ಕೆಜಿ ತೂಕದ ‘ಬಾಹುಬಲಿ’ ಸಮೋಸಾವನ್ನು 30 ನಿಮಿಷಗಳಲ್ಲಿ ತಿನ್ನಿರಿ, 71,000 ರೂ. ಬಹುಮಾನ ಗೆಲ್ಲಿರಿ…!

ಮೀರತ್: 12-ಕಿಲೋಗ್ರಾಂಗಳಷ್ಟು ದೈತ್ಯ ಸಮೋಸಾವನ್ನು ಕತ್ತರಿಸುವ ಮೂಲಕ ನಿಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತೀರೋ ? ಅಥವಾ 30 ನಿಮಿಷಗಳಲ್ಲಿ ಡೀಪ್ ಫ್ರೈ ಮಾಡಿದ ತಿಂಡಿ ತಿಂದು 71,000 ರೂ.ಗಳನ್ನು ಗಲ್ಲುತ್ತೀರೋ..?! ಬರೋಬ್ಬರಿ 12 ಕಿಲೋಗ್ರಾಂಗಳಷ್ಟು ತೂಕವಿರುವ ಈ ದೈತ್ಯ ಸಮೋಸಾವನ್ನು 30 ನಿಮಿಷಗಳಲ್ಲಿ ತಿಂದು 71,000 ರೂ. ಗೆಲ್ಲುವ ಅವಕಾಶವಿದೆ. ಇಲ್ಲಿನ ಲಾಲ್ಕುರ್ತಿ ಮೂಲದ ಕೌಶಲ್ ಸ್ವೀಟ್ಸ್‌ನ … Continued

ಮುಂಬೈ: ಯುವ ಕಾಂಗ್ರೆಸ್ ಸಮಾವೇಶದಲ್ಲಿ ಗಲಾಟೆ; ಕುರ್ಚಿಗಳನ್ನು ಎಸೆದರು | ವೀಕ್ಷಿಸಿ

ಮುಂಬೈ: ಮಹಾರಾಷ್ಟ್ರ ಕಾಂಗ್ರೆಸ್‌ನ ಪಕ್ಷದ ಕೇಂದ್ರ ಕಚೇರಿಯಾದ ಮುಂಬೈ ತಿಲಕ ಭವನದಲ್ಲಿ ಸಭೆ ನಡೆಯುತ್ತಿದ್ದ ವೇಳೆ ರಾಷ್ಟ್ರೀಯ ಯುವ ಅಧ್ಯಕ್ಷ ಬಿ.ವಿ.ಶ್ರೀನಿವಾಸ, ಕಾಂಗ್ರೆಸ್‌ ರಾಜ್ಯಾಧ್ಯಕ್ಷ ನಾನಾ ಪಾಟೋಳೆ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರಟ್ ಅವರ ಸಮ್ಮುಖಲ್ಲೇ ಕೋಲಾಹಲದ ದೃಶ್ಯಗಳು ಕಂಡುಬಂದವು ಎಂದು ವರದಿಯಾಗಿದೆ. ಮುಂಬೈನಲ್ಲಿ ನಡೆದ ಯುವ ಕಾಂಗ್ರೆಸ್ ಸಭೆಯು ಜಗಳ … Continued