ಜೆಡಿಎಸ್‌ ಸೇರಿದ ಮಾಜಿ ಎಂಎಲ್‌ಸಿ ಎಸ್‌.ಎಲ್‌. ಘೋಟ್ನೇಕರ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಮಾತ್ರ ಇರುವಾಗ ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ಪ್ರಮುಖ ನಾಯಕರು ಭಾನುವಾರ ಸೇರ್ಪಡೆಯಾಗಿದ್ದಾರೆ. ಹುಬ್ಬಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಉತ್ತರ ಕನ್ನಡ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ್ ಹಾಗೂ ಕೋಲಾರದ ಜಿಲ್ಲಾ ಪಂಚಾಯತ ಮಾಜಿ … Continued

ಶಿವಸೇನೆಯ ಹೆಸರು, ಚಿಹ್ನೆ ಪಡೆಯಲು 2,000-ಕೋಟಿ ಡೀಲ್ ನಡೆದಿದೆ : ಸಂಜಯ ರಾವತ್‌ ಗಂಭೀರ ಆರೋಪ

ಮುಂಬೈ: ಶಿವಸೇನೆ ಪಕ್ಷದ ಹೆಸರು ಮತ್ತು ಅದರ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಖರೀದಿಸಲು “₹ 2000 ಕೋಟಿಗಳ ಅವ್ಯವಹಾರ ನಡೆದಿದೆ ಎಂದು ಶಿವಸೇನೆ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ ರಾವತ್ ಅವರು ಭಾನುವಾರ ಆರೋಪಿಸಿದ್ದಾರೆ. ಸಂಜಯ ರಾವತ್‌ ಅವರು ತಮ್ಮ ಟ್ವೀಟ್‌ನಲ್ಲಿ ₹ 2,000 ಕೋಟಿ ಎಂಬುದು ಪ್ರಾಥಮಿಕ ಅಂಕಿ ಅಂಶವಾಗಿದೆ ಮತ್ತು … Continued

ದೆಹಲಿ ಮದ್ಯ ನೀತಿ ಪ್ರಕರಣ: ಸಿಬಿಐ ಮುಂದೆ ಹಾಜರಾಗಲು ಸಮಯ ಕೋರಿದ ಡಿಸಿಎಂ ಮನೀಶ್ ಸಿಸೋಡಿಯಾ

ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮನೀಶ್ ಸಿಸೋಡಿಯಾ ಅವರು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೀಡಿರುವ ಸಮನ್ಸ್ ಮುಂದೂಡುವಂತೆ ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಹಣಕಾಸು ಖಾತೆ ಹೊಂದಿರುವ ಸಿಸೋಡಿಯಾ ಅವರು ದೆಹಲಿ ಬಜೆಟ್ ಸಿದ್ಧಪಡಿಸುತ್ತಿರುವುದರಿಂದ ವಿಚಾರಣೆ ದಿನಾಂಕವನ್ನು ಮುಂದೂಡುವಂತೆ ಕೋರಿದ್ದಾರೆ. ಅಬಕಾರಿ … Continued

ಬೆಂಗಳೂರು: ತೆಲುಗಿನ ಖ್ಯಾತ ನಟ, ರಾಜಕಾರಣಿ ನಂದಮೂರಿ ತಾರಕರತ್ನ ಇನ್ನಿಲ್ಲ

ಬೆಂಗಳೂರು: ತೆಲುಗಿನ ಖ್ಯಾತ ನಟ ಹಾಗೂ ರಾಜಕಾರಣಿ ನಂದಮೂರಿ ತಾರಕ ರತ್ನ (39) ನಿಧನರಾಗಿದ್ದಾರೆ. ಹೃದಯಘಾತದಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕಿತ್ಸೆ ಪಡೆಯುತ್ತಿದ್ದ ನಂದಮೂರಿ ತಾರಕರತ್ನ (Nandamuri Taraka Ratna) ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಂಜೆ ಕೊನೆಯುಸಿರೆಳೆದಿದ್ದಾರೆ. ಇವರು ಹೆರಾಂತ ತೆಲುಗು ನಟ ಹಾಗೂ ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌ಟಿಆರ್‌ … Continued

ಸ್ಪೂರ್ತಿದಾಯಕ.: ಮಗುವಿಗೆ ಜನ್ಮ ನೀಡಿ ಕೆಲವೇ ಗಂಟೆಯಲ್ಲಿ ಆಂಬುಲೆನ್ಸ್‌ನೊಳಗೆ ಪರೀಕ್ಷೆ ಬರೆದ ತಾಯಿ…!

ಭಾಂಕಾ: ಮಗುವಿಗೆ ಆಸ್ಪತ್ರೆಯಲ್ಲಿ ಜನ್ಮ ನೀಡಿದ ಕೆಲವೇ ಗಂಟೆಯಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆದು ಮಹಿಳೆಯೊಬ್ಬಳು ಸುದ್ದಿಯಲ್ಲಿದ್ದಾಳೆ. ಬಿಹಾರದ ಭಾಂಕಾ ಜಿಲ್ಲೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ರುಕ್ಮಿಣಿ ಕುಮಾರಿ (22) ಆಂಬುಲೆನ್ಸ್‌ನೊಳಗೆ ಪರೀಕ್ಷೆ ಬರೆದಿದ್ದಾಳೆ. ರುಕ್ಮಿಣಿ ಕುಮಾರಿಗೆ ಹತ್ತು ಗಂಟೆಗೆ ಪರೀಕ್ಷೆ ಇತ್ತು. ಆದರೆ ಅದೇ ದಿನ ಬೆಳಗ್ಗೆ ಹೆರಿಗೆಯಾಗಿತ್ತು. ಹೆರಿಗೆಯಾಗಿ ಕೆಲವೇ ಗಂಟೆಯಲ್ಲಿ ನಾನು … Continued

ಫೆಬ್ರವರಿ 22ರಂದು ದೆಹಲಿ ಮೇಯರ್ ಚುನಾವಣೆ

ನವದೆಹಲಿ: ಲೆಫ್ಟಿನೆಂಟ್‌ ಗವರ್ನರ್‌ ನೇಮಿಸಿದ ದೆಹಲಿಯ ಮುನ್ಸಿಪಲ್‌ ಕೌನ್ಸಿಲ್‌ ಸದಸ್ಯರು ಮೇಯರ್‌ ಆಯ್ಕೆ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ನಂತರ ಫೆಬ್ರುವರಿ 22 ರಂದು ಮೇಯರ್ ಚುನಾವಣೆಯನ್ನು ನಡೆಸುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಸ್ತಾವನೆಗೆ ಲೆಫ್ಟಿನೆಂಟ್ ಗವರ್ನರ್ ಅನುಮೋದನೆ ನೀಡಿದ್ದಾರೆ. . ಈಗ ಮೇಯರ್‌ ಆಯ್ಕೆ ಚುನಾವಣೆ … Continued

24 ವರ್ಷಗಳಿಂದ ಕೇವಲ ಎಳನೀರು ಸೇವಿಸಿ ಜೀವಿಸುತ್ತಿರುವ ಈ ವ್ಯಕ್ತಿ, ದೂರವಾಯಿತು ಅವರ ಈ ಕಾಯಿಲೆ…!

ಇಂದಿನ ಚಾಲನೆಯಲ್ಲಿರುವ ಜೀವನಶೈಲಿಯಲ್ಲಿ, ಜನರು ತಮ್ಮನ್ನು ತಾವು ಫಿಟ್ ಆಗಿಟ್ಟುಕೊಳ್ಳಲು ಏನು ಮಾಡುವುದಿಲ್ಲ. ಆದರೆ ವ್ಯಕ್ತಿಯೊಬ್ಬರು ಕಳೆದ 24 ವರ್ಷಗಳಿಂದ ಎಳೆ ನೀರನ್ನೇ ಕುಡಿದು ಬದಕಿದ್ದಾರೆ…! ವಾಸ್ತವವಾಗಿ, ಬಾಲಕೃಷ್ಣನ್ ಎಂಬ ವ್ಯಕ್ತಿ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆಯಿಂದ ಇಂತಹ ನಿರ್ಧಾರವನ್ನು ತೆಗೆದುಕೊಂಡರು. ಅದನ್ನು ಕೇಳಿದರೆ ಯಾರಿಗಾದರೂ ಆಶ್ಚರ್ಯವಾಗುತ್ತದೆ. ಬಾಲಕೃಷ್ಣನ್ ಜಿಇಆರ್‌ಡಿ ಕಾಯಿಲೆಯಿಂದ ಗುಣಮುಖರಾಗಲು 24 ವರ್ಷಗಳ ಕಾಲ … Continued

ಬಿಬಿಸಿ ಇಂಡಿಯಾ ದಾಖಲೆ ಪರಿಶೀಲನೆ ವೇಳೆ ತೆರಿಗೆ ಅಕ್ರಮದ ಸಾಕ್ಷ್ಯ ಲಭ್ಯ : ಸಿಬಿಡಿಟಿ

ನವದೆಹಲಿ : ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದರ ದಾಖಲೆ ಪರಿಶೀಲನೆ ವೇಳೆ ಸಂಸ್ಥೆಯು ತೆರಿಗೆ ಪಾವತಿಸದಿರುವುದು ಹಾಗೂ ಬಹಿರಂಗಪಡಿಸದ ಆದಾಯ ಹೊಂದಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಶುಕ್ರವಾರ ಹೇಳಿದೆ. ಬಿಬಿಸಿ (BBC) ಹೆಸರನ್ನು ಉಲ್ಲೇಖಿಸದೆ ಹೇಳಿಕೆ ಬಿಡುಗಡೆ ಮಾಡಿರುವ ಸಿಬಿಡಿಟಿ, ಇಲಾಖೆ ಹಲವಾರು ಸಾಕ್ಷ್ಯಗಳನ್ನು ಕಲೆಹಾಕಿದೆ. ಡಿಜಿಟಲ್ ದಾಖಲೆಗಳು … Continued

ಏಕನಾಥ ಶಿಂಧೆ ಬಣದ ವಿರುದ್ಧದ ಹೋರಾಟದಲ್ಲಿ ಶಿವಸೇನೆಯ ಹೆಸರು, ಚಿಹ್ನೆ ಕಳೆದುಕೊಂಡ ಉದ್ಧವ್ ಠಾಕ್ರೆ: “ಪ್ರಜಾಪ್ರಭುತ್ವದ ಕೊಲೆ ಎಂದ ಉದ್ಧವ್‌, ಸತ್ಯ-ಜನರ ವಿಜಯ ಎಂದ ಏಕನಾಥ ಶಿಂಧೆ

ಮುಂಬೈ: ಶಿವಸೇನೆ ಹೆಸರು ಹಾಗೂ ಪಕ್ಷದ ಬಿಲ್ಲು ಬಾಣ ಚಿಹ್ನೆ ಇಟ್ಟುಕೊಳ್ಳಲು ಶಿಂಧೆ ತಂಡಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿದ ನಂತರ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಪ್ರತಿಸ್ಪರ್ಧಿ ಏಕನಾಥ್ ಶಿಂಧೆ ಅವರನ್ನು “ಬದಲಾಗದ ದೇಶದ್ರೋಹಿ” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಸ್ತುತ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿರುವ ಏಕನಾಥ ಶಿಂಧೆ ಸುಮಾರು 8 … Continued

ಎಂಸಿಡಿಗೆ ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸುವಂತಿಲ್ಲ ಎಂದ ಸುಪ್ರೀಂ ಕೋರ್ಟ್‌: 24 ಗಂಟೆಗಳಲ್ಲಿ ಚುನಾವಣೆ ನಡೆಸಲು ಆದೇಶ

ನವದೆಹಲಿ: ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್‌ ಆಯ್ಕೆ ಚುನಾವಣೆಯಲ್ಲಿ ನಾಮನಿರ್ದೇಶನ ಮಾಡಿದ ಸದಸ್ಯರು ಮತದಾನ ಮಾಡುವಂತಿಲ್ಲ ಹೇಳಿರುವ ಸುಪ್ರೀಂ ಕೋರ್ಟ್‌ ಎಂಸಿಡಿಗೆ ಮೇಯರ್‌ ಆಯ್ಕೆ ಮಾಡಲು 24 ಗಂಟೆಗಳ ಒಳಗೆ ಚುನಾವಣಾ ದಿನಾಂಕ ಘೋಷಿಸುವಂತೆ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ವಿನಯ್‌ ಕುಮಾರ್‌ ಸಕ್ಸೇನಾ ಅವರಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಆದೇಶಿಸಿದೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ … Continued