ಡಿಜಿಟಲ್ ಪೇಮೆಂಟ್‌ಗಳಿಗೆ ಭಾರತದ ಯುಪಿಐ ಅಳವಡಿಸಲು ಬಯಸುವ 13 ದೇಶಗಳ ಜೊತೆ ಎಂಒಯುಗಳಿಗೆ ಸಹಿ : ಅಶ್ವಿನಿ ವೈಷ್ಣವ್

ನವದೆಹಲಿ: ಡಿಜಿಟಲ್ ಪಾವತಿಗಾಗಿ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಅಳವಡಿಸಿಕೊಳ್ಳಲು ಬಯಸುವ 13 ದೇಶಗಳೊಂದಿಗೆ ಭಾರತವು ತಿಳುವಳಿಕೆ ಪತ್ರ (ಎಂಒಯು) ಗೆ ಸಹಿ ಹಾಕಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ರಂದು ತಿಳಿಸಿದ್ದಾರೆ. ಲಕ್ನೋದಲ್ಲಿ ಜಿ20 ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್ ಸಭೆಯ ನೇಪಥ್ಯದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ವೈಷ್ಣವ್, ಸಿಂಗಾಪುರವು ಈಗಾಗಲೇ ತನ್ನ … Continued

ಶಂಕಿತ ತೆರಿಗೆ ವಂಚನೆಗೆ ಸಂಬಂಧಿಸಿ ದೆಹಲಿ, ಮುಂಬೈ ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು

ನವದೆಹಲಿ: ಆದಾಯ ತೆರಿಗೆ (ಐ-ಟಿ) ಇಲಾಖೆಯು ತೆರಿಗೆ ತನಿಖೆಯ ಭಾಗವಾಗಿ ಬ್ರಿಟಿಷ್ ಬ್ರಾಡ್‌ಕಾಸ್ಟರ್ ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಸಮೀಕ್ಷೆಗಳನ್ನು ನಡೆಸುತ್ತಿದೆ. ಮೂಲಗಳ ಪ್ರಕಾರ ಕನಿಷ್ಠ 60 ರಿಂದ 70 ಅಧಿಕಾರಿಗಳ ತಂಡ ಪರಿಶೀಲನೆಯಲ್ಲಿ ತೊಡಗಿವೆ. ಐ-ಟಿ ಇಲಾಖೆಯು ಬ್ರಾಡ್‌ಕಾಸ್ಟರ್‌ನ ವ್ಯವಹಾರ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮತ್ತು ಅದರ ಭಾರತೀಯ ವಿಭಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು … Continued

ಪ್ರೇಮಿಗಳ ದಿನವಾದ ಇಂದು ಮತ್ತೊಮ್ಮೆ ಮದುವೆಯಾಗುತ್ತಿರುವ ಭಾರತದ ಟಿ 20 ಕ್ರಿಕೆಟ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ-ನತಾಷಾ …!

ಭಾರತ ಟಿ 20 ಕ್ರಿಕೆಟ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಅವರು ಪ್ರೇಮಿಗಳ ದಿನವಾದ ಇಂದು (ಫೆಬ್ರವರಿ 14) ಮತ್ತೊಮ್ಮೆ ಮದುವೆಯಾಗುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಸೋಮವಾರದಿಂದ ಉದಯಪುರದಲ್ಲಿ ವಿವಾಹ ಕಾರ್ಯಕ್ರಮಗಳು ಆರಂಭವಾಗಿದ್ದು, ಇನ್ನೆರಡು ದಿನಗಳ ಕಾಲ ನಡೆಯಲಿದೆ. ಇಂದು, ಮಂಗಳವಾರ ಪ್ರೇಮಿಗಳ ದಿನದಂದು ಮದುವೆ ನಡೆಯಲಿದೆ. ಈ ಹಿಂದೆ, … Continued

ಪುಲ್ವಾಮಾ ಭಯೋತ್ಪಾದಕ ದಾಳಿಗೆ ನಾಲ್ಕು ವರ್ಷ, ನಮ್ಮ ವೀರ ಹುತಾತ್ಮರ ಸ್ಮರಣೆ : ಫೆಬ್ರವರಿ 14ರ ದುರದೃಷ್ಟದ ದಿನ ಪುಲ್ವಾಮಾದಲ್ಲಿ ಏನಾಯ್ತು..?

ಇಂದಿಗೆ ನಾಲ್ಕು ವರ್ಷಗಳ ಹಿಂದೆ 2019ರ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಯ 40 ಯೋಧರು ಹುತಾತ್ಮರಾದರು. ಸ್ಫೋಟಕ ತುಂಬಿದ ವಾಹನದಲ್ಲಿ ಬಂದ ಆತ್ಮಾಹುತಿ ಬಾಂಬರ್‌ ಸಿಆರ್‌ಪಿಎಫ್‌ (CRPF) ಬೆಂಗಾವಲು ಪಡೆಗೆ ಡಿಕ್ಕಿ ಹೊಡೆಸಿದ ನಂತರ ಈ ದುರದೃಷ್ಟಕರ ಘಟನೆ ಸಂಭವಿಸಿತು. ಅಂದಿನಿಂದ … Continued

WPL ಹರಾಜು 2023 : 87 ಆಟಗಾರರು ₹ 59.50 ಕೋಟಿಗೆ ಮಾರಾಟ; ಸ್ಮೃತಿ ಮಂಧಾನ ಅತ್ಯಂತ ದುಬಾರಿ ಆಟಗಾರ್ತಿ, ಮಾರಾಟವಾದ ಆಟಗಾರರು, ಎಷ್ಟು ಮೊತ್ತಕ್ಕೆ ಮಾರಾಟವಾದರು-ಲಿಸ್ಟ್‌ ಇಲ್ಲಿದೆ

ಮುಂಬೈ: ಸೋಮವಾರ ಮುಂಬೈನಲ್ಲಿ ನಡೆದ ಡಬ್ಲ್ಯುಪಿಎಲ್‌ (WPL) ಹರಾಜಿನಲ್ಲಿ ಭಾರತ ಉಪನಾಯಕಿ ಸ್ಮೃತಿ ಮಂಧಾನ 3.40 ಕೋಟಿ ರೂಪಾಯಿಗೆ ಬೆಂಗಳೂರಿನ ರಾಯಲ್‌ ಚಾಲೆಂಜರ್ಸ್‌ ಪಾಲಾಗಿದ್ದಾರೆ. ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್‌ 1.80 ಕೋಟಿ ರೂ.ಗಳಿಗೆ ಖರೀದಿಸಿತು. ದೇಶದ ಎರಡನೇ ದುಬಾರಿ ಆಟಗಾರ್ತಿ ಆಲ್ ರೌಂಡರ್ ದೀಪ್ತಿ ಶರ್ಮಾ ಅವರನ್ನು ಯುಪಿ ವಾರಿಯರ್ಜ್ 2.6 … Continued

ಸ್ಮಾರ್ಟ್ ಸಿಟಿ ಮಿಷನ್ : ಮಾರ್ಚ್ ವೇಳೆಗೆ ಭಾರತದ ಈ 22 ನಗರಗಳು ಪೂರ್ಣ ರೆಡಿ

ನವದೆಹಲಿ: ಮಾರ್ಚ್ 2023ರೊಳಗೆ ಕೇಂದ್ರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟೀಸ್ ಮಿಷನ್ ಅಡಿಯಲ್ಲಿ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲು ಸಿದ್ಧವಾಗಿರುವ 22 ನಗರಗಳಲ್ಲಿ ಚೆನ್ನೈ, ವಾರಾಣಸಿ, ಪುಣೆ ಮತ್ತು ಆಗ್ರಾ ಸೇರಿವೆ. ಈ ಯೋಜನೆ ಈ ನಗರಗಳ ನಿವಾಸಿಗಳಿಗೆ ಗುಣಮಟ್ಟದ ಜೀವನ ಹಾಗೂ ಸ್ವಚ್ಛ ಮತ್ತು ಸುಸ್ಥಿರ ವಾತಾವರಣ ಒದಗಿಸುವುದನ್ನು ಖಚಿತಪಡಿಸುತ್ತವೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ … Continued

ಎಂಸಿಡಿ ಮೇಯರ್ ಚುನಾವಣೆ : ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸುವಂತಿಲ್ಲ-ಮೌಖಿಕವಾಗಿ ಹೇಳಿದ ಸುಪ್ರೀಂ ಕೋರ್ಟ್‌, ಚುನಾವಣೆ ಮುಂದಕ್ಕೆ

ನವದೆಹಲಿ: ಸಾಂವಿಧಾನಿಕ ನಿಬಂಧನೆಯ ಪ್ರಕಾರ ನಾಮನಿರ್ದೇಶಿತ ಸದಸ್ಯರು ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮೌಖಿಕವಾಗಿ ಹೇಳಿದೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಮೌಖಿಕ ಅವಲೋಕನವು ಸೋಮವಾರ ಬಂದಿದೆ. ಶೆಲ್ಲಿ ಒಬೆರಾಯ್ ಅವರ ಮನವಿಯು ನಾಮನಿರ್ದೇಶಿತ ಸದಸ್ಯರನ್ನು … Continued

ರಿಟೇಲ್ ಹಣದುಬ್ಬರ ಜನವರಿಯಲ್ಲಿ 6.52%ಕ್ಕೆ ಏರಿಕೆ

ನವದೆಹಲಿ: ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ ತೀವ್ರವಾಗಿ ಏರಿಕೆ ಕಂಡಿದ್ದು, ಎರಡು ತಿಂಗಳ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂದಾಜು ಮಾಡಿದ್ದ 6%ರಷ್ಟನ್ನು ಮೀರಿದೆ. ಗ್ರಾಹಕರ ಬೆಲೆ ಆಧಾರಿತ ಹಣದುಬ್ಬರವು ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದ್ದು, ಜನವರಿಯಲ್ಲಿ ಅದು 6.52%ಕ್ಕೆ ಏರಿದೆ. ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಸೋಮವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ಸತತ … Continued

ಎಲ್‌ಟಿಟಿಇ ಪ್ರಭಾಕರನ್ ಬದುಕಿದ್ದಾನೆ, ಕೆಲವೇ ದಿನಗಳಲ್ಲಿ ಜನರೆದುರು ಬರ್ತಾನೆ: ನೆಡುಮಾರನ್ ಸೆನ್ಸೇಶನಲ್‌ ಹೇಳಿಕೆ

ತಂಜಾವೂರು: ಎಲ್‌ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಜೀವಂತವಾಗಿದ್ದಾರೆ ಮತ್ತು ಚೆನ್ನಾಗಿದ್ದಾರೆ ಎಂದು ವಿಶ್ವ ತಮಿಳರ ಒಕ್ಕೂಟದ ಅಧ್ಯಕ್ಷ ಪಿ ನೆಡುಮಾರನ್ ಸೋಮವಾರ ಹೇಳಿದ್ದಾರೆ. ಪ್ರಭಾಕರನ್‌ ಶೀಘ್ರದಲ್ಲೇ ಶೀಘ್ರದಲ್ಲೇ ಜನರೆದುರು ಬರುತ್ತಾರೆ ಮತ್ತು ಈಳಂ ತಮಿಳರ ಉತ್ತಮ ಜೀವನಕ್ಕಾಗಿ ಮುಂದಿನ ಯೋಜನೆ ಘೋಷಿಸುತ್ತಾರೆ ಎಂದು ಅವರು ಹೇಳಿದ್ದಾರೆ. ತಂಜಾವೂರು ನೆಡುಮಾರನ್‌ನ ಮುಳ್ಳಿವೈಕ್ಕಲ್ ಸ್ಮಾರಕದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ … Continued

ಸುಪ್ರೀಂ ಕೋರ್ಟ್ ನೂತನ ನ್ಯಾಯಮೂರ್ತಿಗಳಾಗಿ ಅರವಿಂದಕುಮಾರ, ರಾಜೇಶ ಬಿಂದಾಲ್ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಕನ್ನಡಿಗ ಅರವಿಂದಕುಮಾರ ಹಾಗೂ ರಾಜೇಶ ಬಿಂದಾಲ್‌ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಸಂಖ್ಯಾಬಲ 34ಕ್ಕೆ ಏರಿದ್ದು ಪೂರ್ಣ ಸಾಮರ್ಥ್ಯದೊಂದಿಗೆ ಅದು ಕಾರ್ಯ ನಿರ್ವಹಿಸಲಿದೆ.ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ ಅವರು ಇಬ್ಬರು ನೂತನ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ ಬೋಧಿಸಿದರು. ಜನವರಿ … Continued