ಭಾರತ -ಶ್ರೀಲಂಕಾ ಸರಣಿ : ಏಕದಿನದ ಸರಣಿಗೆ ಭಾರತ ತಂಡಕ್ಕೆ ಮರಳಿದ ರೋಹಿತ್ ಶರ್ಮಾ, ರಿಷಬ್ ಪಂತಗೆ ವಿಶ್ರಾಂತಿ

ನವದೆಹಲಿ: ಮುಂಬರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತದ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ವಿಕೆಟ್ ಕೀಪರ್‌ ರಿಷಬ್ ಪಂತ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ವೇಗಿ ಉಮ್ರಾನ್ ಮಲಿಕ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಶ್ರೀಲಂಕಾ ಸರಣಿಗಾಗಿನ ಏಕ ದಿನ ಪಂದ್ಯಾವಳಿ(ODI)ಗೆ ತಂಡದಿಂದ ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ಕೈಬಿಡಲಾಗಿದ್ದು, ಅವರ ಸ್ಥಾನಕ್ಕೆ ಶುಭಮನ್ ಗಿಲ್ … Continued

‘ಖಿನ್ನತೆಗೆ ಒಳಗಾದ’ ಪುತಿನ್ ಟೀಕಾಕಾರ ಒಡಿಶಾದ ಹೊಟೇಲಿನ 3ನೇ ಮಹಡಿಯಿಂದ ಬಿದ್ದು ಸಾವು ; ವಾರದಲ್ಲಿ 2ನೇ ರಷ್ಯಾ ಪ್ರವಾಸಿಗನ ಸಾವು

ನವದೆಹಲಿ: ಒಂದೇ ವಾರದಲ್ಲಿ ಒಡಿಶಾ ಹೋಟೆಲ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರ ಟೀಕಾಕಾರ ಸೇರಿದಂತೆ ರಷ್ಯಾದ ಪ್ರವಾಸಿಗರಿಬ್ಬರು ಸಾವಿಗೀಡಾಗಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಉಕ್ರೇನ್ ಯುದ್ಧದ ಬಗ್ಗೆ ರಷ್ಯಾದ ಅಧ್ಯಕ್ಷ ಪುತಿನ್ ಅವರನ್ನು ಟೀಕಿಸಿದ ರಷ್ಯಾದ ಶಾಸಕ ಪಾವೆಲ್ ಆಂಟೊವ್ ಅವರು ಒಡಿಶಾದ ರಾಯಗಡ ಪ್ರದೇಶದ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ರಷ್ಯಾದ ಸುದ್ದಿ … Continued

ಉತ್ತರ ಪ್ರದೇಶ: ಒಬಿಸಿ ಮೀಸಲಾತಿ ಇಲ್ಲದೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶ

ಲಕ್ನೊ: ಉತ್ತರ ಪ್ರದೇಶ ಸರ್ಕಾರವು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯನ್ನು ಅಲಹಾಬಾದ್ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ ಮತ್ತು ಒಬಿಸಿ ಮೀಸಲಾತಿ ಇಲ್ಲದೆ ಚುನಾವಣೆಯನ್ನು ನಡೆಸುವಂತೆ ಆದೇಶಿಸಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿ ಮೀಸಲಾತಿಗಾಗಿ ಡಿಸೆಂಬರ್ 5 ರಂದು ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಹೊರಡಿಸಿದ … Continued

ಭಾರತ ಬಯೋಟೆಕ್‌ನ ಮೂಗಿನ ಲಸಿಕೆ ದರ ಅಂದಾಜು 800 ರೂ.

ನವದೆಹಲಿ: ಭಾರತ ಬಯೋಟೆಕ್‌ನ ಇಂಟ್ರಾನಾಸಲ್ ಲಸಿಕೆ iNCOVACCನ ಒಂದು ಡೋಸ್ ಅನ್ನು ಕಳೆದ ವಾರ ಭಾರತದ ಕೋವಿಡ್ -19 ಇಮ್ಯುನೈಸೇಶನ್ ಪ್ರೋಗ್ರಾಂಗೆ ಸೇರಿಸಲು ಅನುಮೋದಿಸಲಾಗಿದೆ, ಖಾಸಗಿ ಆಸ್ಪತ್ರೆಗಳಲ್ಲಿ ಇದರ ದರ 5%ರಷ್ಟು ಜಿಎಸ್‌ಟಿ ಹೊರತುಪಡಿಸಿ ತಲಾ 800 ರೂಪಾಯಿ ಆಗಬಹುದು ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರವು ಮೂಗಿನ ಲಸಿಕೆಯನ್ನು ಅನುಮೋದಿಸಿದೆ. ಇದನ್ನು ಹೆಟೆರೊಲಾಜಸ್ ಬೂಸ್ಟರ್ … Continued

ಆಸ್ಪತ್ರೆಯ ಐಸಿಯುವಿನಲ್ಲಿ ಮದುವೆಯಾಗಿ ಅಸ್ವಸ್ಥ ತಾಯಿಯ ಕೊನೆಯ ಆಸೆ ಈಡೇರಿಸಿದ ಮಗಳು : ಹೃದಯಸ್ಪರ್ಶಿ ವೀಡಿಯೊ ವೈರಲ್‌

ಗಯಾ: ಅತ್ಯಂತ ಭಾವನಾತ್ಮಕ ಮತ್ತು ಹೃದಯಸ್ಪರ್ಶಿ ಘಟನೆಯೊಂದರಲ್ಲಿ, ಬಿಹಾರದ ಗಯಾದ ಯುವತಿಯೊಬ್ಬರು ತಮ್ಮ ತೀವ್ರ ಅಸ್ವಸ್ಥರಾಗಿರುವ ತಾಯಿಯ ಕೊನೆಯ ಆಸೆಯನ್ನು ಪೂರೈಸಿದ್ದಕ್ಕಾಗಿ ಎಲ್ಲೆಡೆಯಿಂದ ಪ್ರಶಂಸೆ ಗಳಿಸುತ್ತಿದ್ದಾರೆ. ಯುವತಿಯ ತಾಯಿಯ ಕೊನೆಯ ಆಸೆ ತನ್ನ ಮುಂದೆ ತನ್ನ ಮಗಳನ್ನು ಮದುವೆಯಾಗುವುದನ್ನು ನೋಡಬೇಕು ಎಂಬುದು. ಅದು ಅಕ್ಷರಶಃ ಈಡೇರಿತು. ತನ್ನ ತಾಯಿ ದಾಖಲಾಗಿದ್ದ ಖಾಸಗಿ ಆಸ್ಪತ್ರೆಯೊಂದರ ಐಸಿಯು ಹೊರಗೆ … Continued

ತಂತಿ ಬೇಲಿ ಮೇಲೆ ಜಿಗಿದು ಕಾರಿನ ಮೇಲೆ ದಾಳಿ ಮಾಡಿದ ಚಿರತೆ : ದಾಳಿಗೆ 3 ಅರಣ್ಯ ಸಿಬ್ಬಂದಿ ಸೇರಿ 13 ಮಂದಿಗೆ ಗಾಯ | ವೀಕ್ಷಿಸಿ

ಅಸ್ಸಾಂನ ಜೋರ್ಹತ್ ಜಿಲ್ಲೆಯಲ್ಲಿ ಸೋಮವಾರ ಚಿರತೆ ದಾಳಿಗೆ ಮೂವರು ಅರಣ್ಯ ಸಿಬ್ಬಂದಿ ಸೇರಿದಂತೆ 13 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅರಣ್ಯ ಅಧಿಕಾರಿಗಳ ಪ್ರಕಾರ, ಚೆನಿಜಾನ್‌ನಲ್ಲಿರುವ ರೈನ್ ಫಾರೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಐಸಿಎಫ್‌ಆರ್‌ಇ) ಸುತ್ತಮುತ್ತ ಈ ಘಟನೆ ನಡೆದಿದೆ. ಚಿರತೆ ಇನ್ಸ್ಟಿಟ್ಯೂಟಿನ ಅರಣ್ಯದಿಂದ ಹೊರಬಂದು ಯಾವುದೇ ಪ್ರಚೋದನೆಯಿಲ್ಲದೆ ಜನರ ಮೇಲೆ ದಾಳಿ ಮಾಡಲು … Continued

ಫಾರ್ಮಾ ಕಂಪನಿ ಲ್ಯಾಬ್‌ನಲ್ಲಿ ಬೆಂಕಿ ಅನಾಹುತ : 4 ಮಂದಿ ಸಾವು, ಒಬ್ಬರಿಗೆ ಗಾಯ

ವಿಶಾಖಪಟ್ಟಣಂ: ಆಂಧ್ರಪ್ರದೇಶದ ಅನಕಾಪಲ್ಲಿಯಲ್ಲಿರುವ ಪರವಾಡ ಲಾರಸ್ ಫಾರ್ಮಾ ಲ್ಯಾಬ್ಸ್ ಲಿಮಿಟೆಡ್ ಕಂಪನಿಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸೋಮವಾರ ತಡರಾತ್ರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾರ, ಗಾಯಗೊಂಡ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ನಿರ್ವಹಣಾ ಕಾಮಗಾರಿ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. … Continued

ಮಗಳ ಅಶ್ಲೀಲ ವೀಡಿಯೊ ಪ್ರಸಾರ ಮಾಡಿದ್ದನ್ನು ವಿರೋಧಿಸಿದ ಬಿಎಸ್‌ಎಫ್ ಯೋಧನ ಹತ್ಯೆ

ತನ್ನ ಮಗಳ ಅಶ್ಲೀಲ ವೀಡಿಯೊವನ್ನು ಪ್ರಸಾರ ಮಾಡುವುದನ್ನು ವಿರೋಧಿಸಿದ ನಂತರ ಗುಜರಾತ್‌ನ ನಾಡಿಯಾಡ್‌ನಲ್ಲಿ ಬಿಎಸ್‌ಎಫ್ ಯೋಧನೊಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಎನ್‌ಡಿಟಿವಿ ಸೋಮವಾರ ವರದಿ ಮಾಡಿದೆ. ಶನಿವಾರ ಚಕ್ಲಾಸಿ ಗ್ರಾಮದಲ್ಲಿ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ 15 ವರ್ಷದ ಹುಡುಗನ ಮನೆಗೆ ಬಿಎಸ್‌ಎಫ್ ಯೋಧ ಹೋಗಿದ್ದರು ಎಂದು ವರದಿ ತಿಳಿಸಿದೆ. ಅಲ್ಲಿ ಮನೆಯವರು ಯೋಧನ ಮೇಲೆ … Continued

ಸುಶಾಂತ್ ಸಿಂಗ್ ರಜಪೂತ್ ಸಾವು ಆತ್ಮಹತ್ಯೆ ಎಂಬಂತೆ ಕಾಣುತ್ತಿರಲಿಲ್ಲ : ಕೂಪರ್ ಆಸ್ಪತ್ರೆಯ ಶವಾಗಾರದ ಸಿಬ್ಬಂದಿ ಪ್ರತಿಪಾದನೆ

ಮುಂಬೈ: ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮರಣದ ಎರಡು ವರ್ಷಗಳ ನಂತರ ಇದು ಆತ್ಮಹತ್ಯೆ ಎಂದು ತೋರುತ್ತಿಲ್ಲ’ ಎಂದು ಕೂಪರ್ ಆಸ್ಪತ್ರೆಯ ಶವಾಗಾರದ ಸಿಬ್ಬಂದಿ ಸುದ್ದಿ ಸಂಸ್ಥೆ ಎಎನ್‌ಐ (ANI)ಗೆ ತಿಳಿಸಿದ್ದಾರೆ. ಸುಶಾಂತ ಸಿಂಗ್‌ ರಜಪೂತ್ ಅವರ ಮರಣೋತ್ತರ ಪರೀಕ್ಷೆ ನಡೆಸಿದ ಕೂಪರ್ ಆಸ್ಪತ್ರೆಯ ಶವಾಗಾರದ ಸೇವಕ ರೂಪ್‌ಕುಮಾರ್ ಶಾ ಅವರು ಪ್ರತಿಪಾದಿಸಿದ್ದಾರೆ … Continued

ಬಿಆರ್‌ಎಸ್‌ ಶಾಸಕರಿಗೆ ಆಮಿಷ ಪ್ರಕರಣ: ಸಿಬಿಐಗೆ ಪ್ರಕರಣ ಹಸ್ತಾಂತರಿಸಿದ ಹೈಕೋರ್ಟ್, ಕೆಸಿಆರ್ ಸರ್ಕಾರಕ್ಕೆ ದೊಡ್ಡ ಹಿನ್ನಡೆ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಮತ್ತು ಅವರ ಬಿಆರ್‌ಎಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿಯ ನಾಲ್ವರು ಶಾಸಕರು ಮತ್ತು ಬಿಜೆಪಿ ನಡುವಿನ ‘ಪೋಚ್‌ಗೇಟ್’ ಪ್ರಕರಣವನ್ನು ತೆಲಂಗಾಣ ಹೈಕೋರ್ಟ್ ಇಂದು ಕೇಂದ್ರೀಯ ತನಿಖಾ ದಳ(ಸಿಬಿಐ)ಕ್ಕೆ ವರ್ಗಾಯಿಸಿದೆ. ರಾಜಕೀಯವಾಗಿ ಸೂಕ್ಷ್ಮವಾಗಿರುವ ಪ್ರಕರಣದ ತನಿಖೆ ನಡೆಸುತ್ತಿದ್ದ ತೆಲಂಗಾಣ ಸರ್ಕಾರ ನೇಮಿಸಿದ್ದ ವಿಶೇಷ ತನಿಖಾ … Continued