ಸರ್ಕಾರಿ ಸೇವೆಯಲ್ಲಿರುವಾಗಲೇ ಎರಡು ಬಾರಿ ತೆಲಂಗಾಣ ಸಿಎಂ ಕೆಸಿಆರ್‌ ಪಾದ ಮುಟ್ಟಿ ನಮಸ್ಕರಿಸಿದ ಆರೋಗ್ಯ ಇಲಾಖೆ ನಿರ್ದೇಶಕ : ವ್ಯಾಪಕ ಟೀಕೆ | ವೀಕ್ಷಿಸಿ

ಹೈದರಾಬಾದ್: ತೆಲಂಗಾಣದಲ್ಲಿ ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಎರಡು ಬಾರಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸುವ ವೀಡಿಯೊ ವೈರಲ್ ಆಗಿದ್ದು, ರಾಜ್ಯದಲ್ಲಿ ಈ ತರಹ ಮಾಡುವ ಮಾಡುವ ಕೆಲವು ಅಧಿಕಾರಿಗಳ “ಪ್ರವೃತ್ತಿ” ಯನ್ನು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಟೀಕಿಸಿವೆ. ಮಂಗಳವಾರ ಎಂಟು ಹೊಸ ವೈದ್ಯಕೀಯ ಕಾಲೇಜುಗಳಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ … Continued

ರಾಹುಲ್ ಗಾಂಧಿಯವರೇ ಇದೇನು? ಭಾರತ ಜೋಡೊ ಯಾತ್ರೆಯಲ್ಲಿ ರಾಷ್ಟ್ರಗೀತೆ ಬದಲಿಗೆ ಬೇರೆ ಹಾಡು ಪ್ಲೇ ಮಾಡಿದ್ದಕ್ಕೆ ಬಿಜೆಪಿ ವಾಗ್ದಾಳಿ

ನವದೆಹಲಿ: ಮಹಾರಾಷ್ಟ್ರದ ವಾಶಿಮ್‌ನಲ್ಲಿ ಭಾರತ್ ಜೋಡೋ ಯಾತ್ರಾ ಕಾರ್ಯಕ್ರಮದ ವೇಳೆ ರಾಷ್ಟ್ರಗೀತೆಯ ಬದಲಿಗೆ ಬೇರೆ ಹಾಡನ್ನು ತಪ್ಪಾಗಿ ಪ್ಲೇ ಮಾಡಿದ ನಂತರ ಭಾರತೀಯ ಜನತಾ ಪಕ್ಷವು ಬುಧವಾರ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಈ ತಪ್ಪಿಗೆ ಬಿಜೆಪಿ ನಾಯಕರು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಂತೆಯೇ ಕೆಲ ನಿಮಿಷಗಳ … Continued

ಗೆಹ್ಲೋಟ್ ವಿರುದ್ಧ ಕ್ರಮದ ಬಗ್ಗೆ ಖರ್ಗೆ ಮೌನ: ಬೇಸತ್ತು ರಾಜಸ್ಥಾನದ ಉಸ್ತುವಾರಿ ಸ್ಥಾನಕ್ಕೆ ಅಜಯ ಮಾಕನ್‌ ರಾಜೀನಾಮೆ

ನವದೆಹಲಿ: ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಈಗ ಮತ್ತೆ ಗೊಂದಲ ಶುರುವಾಗಿದೆ. ಕಾಂಗ್ರೆಸ್‌ ಹೈಕಮಾಂಡ್‌ ವಿರುದ್ಧ ಪರೋಕ್ಷ ಬಂಡಾಯದ ಸಂದೇಶ ರವಾನಿಸಿ ಮುಖ್ಯಮಂತ್ರಿಯಾಗಿ ಮುಂದುವರಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹಾಗೂ ಬಣದ ವಿರುದ್ಧ ಈವರೆಗೂ ಯಾವುದೇ ಶಿಸ್ತು ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಬೇಸತ್ತು ರಾಜಸ್ಥಾನದ ಉಸ್ತುವಾರಿ ಸ್ಥಾನಕ್ಕೆ ಹಿರಿಯ … Continued

ವರನ ಕಡೆಯವರು ‘ಅಗ್ಗದ’ ಲೆಹೆಂಗಾ ಕಳುಹಿಸಿದ್ದಾರೆಂದು ಮದುವೆಯನ್ನೇ ರದ್ದುಗೊಳಿಸಿದ ವಧು…!

ವಿಲಕ್ಷಣ ಘಟನೆಯೊಂದರಲ್ಲಿ, ವರನ ಮನೆಯವರು ಕಳುಹಿಸಿದ ಲೆಹೆಂಗಾ ಇಷ್ಟವಾಗಲಿಲ್ಲವೆಂದು ಮದುಮಗಳೊಬ್ಬಳು ತನ್ನ ಮದುವೆಯನ್ನೇ ರದ್ದುಗೊಳಿಸಿದ್ದಾಳೆ…! ಲೆಹೆಂಗಾ ತುಂಬಾ ಕಳಪೆಯಾಗಿದೆ ಎಂದು ಮದುಮಗಳು ಹೇಳಿದ್ದಾಳೆ. ಉತ್ತರಾಖಂಡದ ಹಲ್ದ್ವಾನಿ ಜಿಲ್ಲೆಯಲ್ಲಿ ಈ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಆದರೆ, ವರನ ಕುಟುಂಬದವರು ಲೆಹೆಂಗಾದ ಬೆಲೆ 10,000 ರೂ. ಇದನ್ನು ವಿಶೇಷವಾಗಿ ವಧುವಿಗಾಗಿ ಲಕ್ನೋದಿಂದ ಖರೀದಿಸಲಾಗಿದೆ ಎಂದು ಹೇಳಿದ್ದಾರೆ. ಮೂಲಗಳ … Continued

ಶ್ರದ್ಧಾ ಭೀಕರ ಕೊಲೆ ಪ್ರಕರಣ : ಬಂಬಲ್ ಅಲ್ಲದೆ ಇತರ ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲೂ ಅಫ್ತಾಬ್ ಸಕ್ರಿಯ-ಮೂಲಗಳು

ನವದೆಹಲಿ: ತನ್ನ ಲೈವ್-ಇನ್ ಪಾಲುದಾರ ಅಫ್ತಾಬ್ ಅಮೀನ್ ಪೂನಾವಾಲಾ ಕೈಯಿಂದ ಹತ್ಯೆಯಾದ ಶ್ರದ್ಧಾ ವಾಕರ್ ಪ್ರಕರಣದ ಬೆಚ್ಚಿಬೀಳಿಸುವ ಸಂಗತಿಗಳು ಒಂದೊಂದಾಗಿ ಹೊರಬರುತ್ತಿದೆ. ಡೇಟಿಂಗ್ ಅಪ್ಲಿಕೇಶನ್ ಬಂಬಲ್ ಹೊರತುಪಡಿಸಿ, ಆರೋಪಿಯು ಇತರ ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಸಕ್ರಿಯನಾಗಿದ್ದ ಎಂದು ಮೂಲಗಳು ಹೇಳುತ್ತವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಇದಲ್ಲದೆ, ಅಪರಾಧದ ಸಮಯದಲ್ಲಿ ಅಫ್ತಾಬ್ ಒಂದಕ್ಕಿಂತ ಹೆಚ್ಚು ಮಹಿಳೆಯರೊಂದಿಗೆ … Continued

ಇನ್ನು ವಿಮಾನಗಳಲ್ಲಿ ಫೇಸ್ ಮಾಸ್ಕ್ ಕಡ್ಡಾಯವಲ್ಲ: ವಿಮಾನಯಾನ ಸಚಿವಾಲಯ

ನವದೆಹಲಿ: ವಿಮಾನ ಪ್ರಯಾಣದ ವೇಳೆ ಇನ್ನು ಫೇಸ್ ಮಾಸ್ಕ್ ಕಡ್ಡಾಯವಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಬುಧವಾರ ಹೇಳಿದೆ. ಆದಾಗ್ಯೂ, ಕೊರೊನಾ ವೈರಸ್ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರು ಅವುಗಳನ್ನು ಬಳಸಬೇಕು ಎಂದು ಸಚಿವಾಲಯ ತಿಳಿಸಿದೆ. ವಿಮಾನ ಪ್ರಯಾಣದ ಸಮಯದಲ್ಲಿ ಮಾಸ್ಕ್ ಅಥವಾ ಫೇಸ್ ಕವರ್‌ಗಳನ್ನು ಕಡ್ಡಾಯವಾಗಿ ಬಳಸುವ ಅವಶ್ಯಕತೆಯ ಕುರಿತು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ … Continued

ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ ‘ಅಪಹರಣಕ್ಕೊಳಗಾದ’ ಗುಜರಾತ್ ಎಎಪಿ ಅಭ್ಯರ್ಥಿ: ಸ್ವಯಂಪ್ರೇರಿತವಾಗಿ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ ಎಂದ ಜರಿವಾಲಾ

ಎಎಪಿ ತನ್ನ ಗುಜರಾತ್ ಚುನಾವಣಾ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರನ್ನು ಬಿಜೆಪಿ ಅಪಹರಿಸಿದೆ ಎಂಬ ಹೇಳಿಕೆ ನೀಡಿದ ನಂತರ ಈ ಪ್ರಕರಣ ನಾಟಕೀಯ ತಿರುವು ಪಡೆದಿದ್ದು, ಅಪಹರಣಕ್ಕೊಳಗಾದ ನಾಯಕ ತನ್ನದೇ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಮತ್ತು ಎಎಪಿ ಕಾರ್ಯಕರ್ತರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಜರಿವಾಲಾ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) … Continued

ಜಿ20 ಶೃಂಗಸಭೆ: ‘ಸೋರಿಕೆ’ಯಾದ ಮಾತುಕತೆ ಕುರಿತು ಕೆನಡಾದ ಟ್ರುಡೊ-ಚೀನಾದ ಜಿನ್‌ಪಿಂಗ್ ನಡುವೆ ಬಿಸಿ ಮಾತಿನ ವಿನಿಮಯ..!

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ನಡುವೆ ಬಿಸಿ ಮಾತಿನ ನಡೆದಿದ್ದು, ಇಬ್ಬರು ವಿಶ್ವ ನಾಯಕರ ನಡುವಿನ ಸಂಭಾಷಣೆಯ ವಿವರಗಳು ಸೋರಿಕೆಯಾದ ಬಗ್ಗೆ ಚೀನಾ ಅಧ್ಯಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಲಿಯಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ನಾಯಕರ ನಡುವೆ ಈ ಕಠಿಣ ಮಾತುಕತೆ ನಡೆದಿದೆ. ಕೆನಡಾದ ಪ್ರೆಸ್ ಸೆರೆಹಿಡಿದ ವೀಡಿಯೊದಲ್ಲಿ, … Continued

G20ಯಲ್ಲಿ ಪ್ರಧಾನಿ ಮೋದಿಗೆ ಸೆಲ್ಯೂಟ್‌ ಮಾಡಿದ ಅಮೆರಿಕ ಅಧ್ಯಕ್ಷ ಬೈಡನ್‌

ಜಿ 20 ಶೃಂಗಸಭೆಯ ಹಿನ್ನಲೆಯಲ್ಲಿ ಬಾಲಿಯ ಮ್ಯಾಂಗ್ರೋವ್ ಅರಣ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಾಯಕರು ಭೇಟಿಯಾದಾಗ ಶುಭಾಶಯ ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಸೆಲ್ಯೂಟ್‌ ಮಾಡಿದ್ದಾರೆ. ಬೈಡನ್‌ ಸೆಲ್ಯೂಟ್‌ ಮಾಡುತ್ತಿರುವ ಚಿತ್ರದಲ್ಲಿ ಮೋದಿಯನ್ನೂ ಕಾಣಬಹುದು. G20 ಶೃಂಗಸಭೆಯ ಮೊದಲ ದಿನ ಹಸ್ತಲಾಘವ ವಿನಿಮಯ ಮಾಡುವಾಗ ಇಬ್ಬರೂ … Continued

ಶ್ರದ್ಧಾ ಕೊಲೆ ಪ್ರಕರಣ: ಅಫ್ತಾಬ್‌ನ ಸುಳ್ಳನ್ನು ಭೇದಿಸಿ ಐದಾರು ತಿಂಗಳ ಹಿಂದೆ ನಡೆದ ಭೀಕರ ಕೊಲೆ ಪ್ರಕರಣವನ್ನು ದೆಹಲಿ ಪೊಲೀಸರು ಪತ್ತೆಹಚ್ಚಿದ್ದು ಹೀಗೆ..

ನವದೆಹಲಿ: ಶ್ರದ್ಧಾ ವಾಕರ್ ಭೀಕರ ಹತ್ಯೆ ಪ್ರಕರಣದ ಆರೋಪಿ, ಬಂಧಿತ ಆಫ್ತಾಬ್ ಅಮೀನ್ ಪೂನಾವಾಲಾ ತನಿಖೆಯ ಆರಂಭದಲ್ಲಿ ದೆಹಲಿ ಮತ್ತು ಮುಂಬೈ ಪೊಲೀಸರನ್ನು ದಿಕ್ಕುತಪ್ಪಿಸಲು ಯತ್ನಿಸಿದ್ದ. ಅಫ್ತಾಬ್ ಭೌತಿಕ ಪುರಾವೆಗಳನ್ನು ನಾಶ ಮಾಡುವ ಮೂಲಕ ಶ್ರದ್ಧಾ ಹತ್ಯೆಯನ್ನು ಮರೆಮಾಚಲು ಪ್ರಯತ್ನಿಸಿದ್ದ, ಆದಾಗ್ಯೂ, ಪೊಲೀಸರು ಡಿಜಿಟಲ್ ಪುರಾವೆಗಳ ಮೂಲಕ ಭೀಕರ ಕೊಲೆ ಪ್ರಕರಣವನ್ನು ಭೇದಿಸಿದರು. ದೆಹಲಿ ಪೊಲೀಸರು … Continued