ಕಾರು ಸ್ಟಂಟ್ ಮಾಡಲು ಹೋಗಿ ಒಬ್ಬನ ಪ್ರಾಣ ತೆಗೆದರು, ಇಬ್ಬರಿಗೆ ಗಾಯ: ಏಳು ಜನರ ಬಂಧನ | ಈ ಹುಚ್ಚಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಗುರುಗ್ರಾಮ: ಉದ್ಯೋಗ್ ವಿಹಾರ್ ಹಂತ-4ರಲ್ಲಿ ಮದ್ಯದ ಅಮಲಿನಲ್ಲಿ ತನ್ನ ಕಾರಿನೊಂದಿಗೆ ಸ್ಟಂಟ್ ಮಾಡುತ್ತಿದ್ದ ವ್ಯಕ್ತಿಯೊಬ್ಬ 50 ವರ್ಷದ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದು ಸಾಯಿಸಿದ ಘಟನೆಗೆ ಸಂಬಂಧಿಸಿದಂತೆ ಎಂಟು ಜನರನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳಿಂದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಸೌರಭ್ ಶರ್ಮಾ ಅಲಿಯಾಸ್ ಸಾಯಿಬಿ, ರಾಹುಲ್, ರವಿ … Continued

ತನ್ನ ವಿದ್ಯಾರ್ಥಿನಿಯನ್ನು ಮದುವೆಯಾಗಲು ಲಿಂಗ ಬದಲಿಸಿಕೊಂಡು ಪುರಷನಾದ ಶಿಕ್ಷಕಿ…!

ರಾಜಸ್ಥಾನದ ಶಾಲಾ ಶಿಕ್ಷಕಿಯೊಬ್ಬಳು ತನ್ನ ಲಿಂಗವನ್ನು ಬದಲಾಯಿಸಿಕೊಂಡು ಪುರುಷನಾದ ನಂತರ ತನ್ನ ವಿದ್ಯಾರ್ಥಿಯೊಬ್ಬಳನ್ನೇ ಭಾನುವಾರ ವಿವಾಹವಾಗಿದ್ದಾರೆ…! ಭರತ್‌ಪುರದ ದೈಹಿಕ ಶಿಕ್ಷಣ ಶಿಕ್ಷಕಿಯಾಗಿರುವ ಮೀರಾ, ಕಲ್ಪನಾ ಫೌಜ್‌ದಾರ್‌ ಎಂಬವರನ್ನು ಪ್ರೀತಿಸುತ್ತಿದ್ದರು ಮತ್ತು ಆಕೆಯನ್ನು ಮದುವೆಯಾಗಲು ಲಿಂಗ ಬದಲಾವಣೆ ಮಾಡಿಕೊಂಡರು. ಪ್ರೀತಿಯಲ್ಲಿ ಎಲ್ಲವೂ ನ್ಯಾಯೋಚಿತವಾಗಿದೆ ಮತ್ತು ಅದಕ್ಕಾಗಿಯೇ ನಾನು ನನ್ನ ಲಿಂಗವನ್ನು ಬದಲಾಯಿಸಿಕೊಂಡಿದ್ದೇನೆ” ಎಂದು ಈಗ ಆರವ್ ಕುಂತಲ್ … Continued

ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಮುಂಚೆ ಅಭ್ಯಾಸದ ವೇಳೆ ಮುಂದೋಳಿಗೆ ಪೆಟ್ಟು ಮಾಡಿಕೊಂಡ ರೋಹಿತ್‌ ಶರ್ಮಾ : ವರದಿ

ಮಂಗಳವಾರದ ತರಬೇತಿ ಅವಧಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಮುಂದೋಳಿನ ಮೇಲೆ ಪ್ರಬಲವಾದ ಏಟು ತಿಂದಿದ್ದಾರೆ. ಇದು ಇಂಗ್ಲೆಂಡ್ ವಿರುದ್ಧದ T20 ವಿಶ್ವಕಪ್ ಸೆಮಿಫೈನಲ್‌ಗೆ ಮುಂಚಿತವಾಗಿ ತಂಡಕ್ಕೆ ಗಾಯದ ಸಮಸ್ಯೆ ಭೀತಿಗೆ ಕಾರಣವಾಯಿತು. ಅಡಿಲೇಡ್ ಓವಲ್‌ನಲ್ಲಿ ತಂಡದ ಥ್ರೋಡೌನ್ ಪರಿಣಿತ ಎಸ್ ರಘು ಅವರನ್ನು ಎದುರಿಸುತ್ತಿರುವಾಗ ಒಂದು ಶಾರ್ಟ್ ಬಾಲ್ ಲೆಂಗ್ತ್ ಏರಿಯಾದಿಂದ … Continued

‘ಗುಟ್ಕಾ ತಿನ್ನಿ, ಮದ್ಯ ಸೇವಿಸಿ… ಆದರೆ ನೀರನ್ನು ಉಳಿಸಿ: ವಿವಾದಕ್ಕೆ ಕಾರಣವಾದ ಬಿಜೆಪಿ ಸಂಸದರ ಹೇಳಿಕೆ

ರೇವಾ: ಮಧ್ಯಪ್ರದೇಶದ ರೇವಾದಲ್ಲಿ ಭಾನುವಾರ ನಡೆದ ಜಲಸಂರಕ್ಷಣೆಯ ಕಾರ್ಯಕ್ರಮವೊಂದರಲ್ಲಿ ಮದ್ಯ ಮತ್ತು ತಂಬಾಕು ಸೇವನೆಯನ್ನು ಪ್ರತಿಪಾದಿಸುವ ವಿಲಕ್ಷಣ ಹೇಳಿಕೆಯನ್ನು ನೀಡಿದ ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಸಂಸದ ಜನಾರ್ದನ ಮಿಶ್ರಾ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಮಧ್ಯಪ್ರದೇಶದ ರೇವಾದಲ್ಲಿ ಭಾನುವಾರ ಕೃಷ್ಣರಾಜ ಕಪೂರ ಸಭಾಂಗಣದಲ್ಲಿ ಜಲಸಂರಕ್ಷಣೆ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿಮಾತನಾಡಿದ ಸಂಸದ ಜನಾರ್ದನ ಮಿಶ್ರಾ, ‘ಭೂಮಿ … Continued

ಕೋವಿಡ್ ಸಾಂಕ್ರಾಮಿಕದ ನಂತರ ಕುಡಿತದ ಪ್ರಮಾಣ ಹೆಚ್ಚಿಸಿಕೊಂಡ ದೆಹಲಿಯ 37%ರಷ್ಟು ಮಹಿಳೆಯರು : ಸಮೀಕ್ಷೆ

ನವದೆಹಲಿ: ದೆಹಲಿಯ ಶೇಕಡಾ 37 ರಷ್ಟು ಮಹಿಳೆಯರು ಕಳೆದ ಮೂರು ವರ್ಷಗಳಲ್ಲಿ ತಮ್ಮ ಆಲ್ಕೋಹಾಲ್ ಸೇವನೆಯು ಹೆಚ್ಚಾಗಿದೆ ಎಂದು ಭಾವಿಸಿದ್ದಾರೆ. ಇದು ಮದ್ಯದ ಅಭ್ಯಾಸದ ಮೇಲೆ ಸಾಂಕ್ರಾಮಿಕ ರೋಗದ ಪರಿಣಾಮವನ್ನು ಸೂಚಿಸುತ್ತದೆ ಎಂದು ಸಮೀಕ್ಷೆಯೊಂದು ಹೇಳಿದೆ. 45%ಕ್ಕೂ ಹೆಚ್ಚು ಮಹಿಳೆಯರು ತಮ್ಮ ಹೆಚ್ಚಿದ ಕುಡಿಯುವ ಅಭ್ಯಾಸಕ್ಕೆ ಕಾರಣ ಒತ್ತಡ ಎಂದು ಹೇಳಿದ್ದಾರೆ ಎಂದು ಸಮೀಕ್ಷೆ ಹೇಳಿದೆ. … Continued

ಟಿ20 ವಿಶ್ವಕಪ್ ಫೈನಲ್‌ಗೆ ಯಾರು..?: ಭವಿಷ್ಯವಾಣಿಯ ವಿನೋದಮಯ ಆಟಕ್ಕೆ ‘ಕುಶಲ’ ನಾಯಿಯ ವಿಶಿಷ್ಟ ವೀಡಿಯೊ ಹಂಚಿಕೊಂಡ ಉದ್ಯಮಿ ಆನಂದ ಮಹೀಂದ್ರಾ | ವೀಕ್ಷಿಸಿ

ಟಿ 20 ವಿಶ್ವಕಪ್ 2022 ಫೈನಲ್‌ಗೆ ಹತ್ತಿರವಾಗುತ್ತಿದ್ದಂತೆ, ಯಾವ ತಂಡವು ಟ್ರೋಫಿಯನ್ನು ಮನೆಗೆ ತೆಗೆದುಕೊಂಡು ಹೋಗುತ್ತದೆ ಎಂದು ಅನೇಕರು ಊಹಿಸುತ್ತಿದ್ದಾರೆ. ಇದರ ನಡುವೆ, ಉದ್ಯಮಿ ಆನಂದ್ ಮಹೀಂದ್ರಾ ಕೂಡ ಭವಿಷ್ಯವನ್ನು ನೋಡುವ ಮೋಜಿನ ಆಟಕ್ಕೆ ಸೇರಲು ನಿರ್ಧರಿಸಿದ್ದಾರೆ. ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ ಮಹಿಂದ್ರಾ ಅವರು ಟ್ವಿಟರ್‌ನಲ್ಲಿ ಸಕ್ರಿಯವಾಗಿರುವ ಮತ್ತು ವಿಶಿಷ್ಟ ಟ್ವೀಟ್‌ಗಳನ್ನು ಹಂಚಿಕೊಳ್ಳುವ ಮೂಲಕ … Continued

ಕೊಚ್ಚಿಯಲ್ಲಿ ತಮ್ಮ ಪತ್ರಿಕಾಗೋಷ್ಠಿಗೆ ಎರಡು ಮಲಯಾಳಂ ಚಾನೆಲ್‌ಗಳನ್ನು ನಿರ್ಬಂಧಿಸಿದ ಕೇರಳ ರಾಜ್ಯಪಾಲರು

ಕೊಚ್ಚಿ : ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಸೋಮವಾರ ಕೊಚ್ಚಿಯಲ್ಲಿ ತಮ್ಮ ಪತ್ರಿಕಾಗೋಷ್ಠಿಗೆ ಎರಡು ಮಲಯಾಳಂ ಚಾನೆಲ್‌ಗಳನ್ನು ನಿಷೇಧಿಸಿದ್ದಾರೆ. ಕೈರಾಳಿ ನ್ಯೂಸ್ ಮತ್ತು ಮೀಡಿಯಾ ಒನ್ ಚಾನೆಲ್‌ಗಳ ವರದಿಗಾರರನ್ನು ಪತ್ರಿಕಾಗೋಷ್ಠಿಯಿಂದ ಹೊರಹೋಗುವಂತೆ ರಾಜ್ಯಪಾಲರು ಸೂಚಿಸಿದರು ಮತ್ತು ಈ ಎರಡು ಚಾನೆಲ್‌ನವರನ್ನು ಭೇಟಿಯಾಗುವುದಿಲ್ಲ ಎಂದು ಹೇಳಿದರು. ಅಲ್ಲದೆ ಈ ಚಾನೆಲ್‌ನವರು ಪತ್ರಕರ್ತರ ವೇಷದಲ್ಲಿರುವ ರಾಜಕೀಯ … Continued

ಆರ್ಮ್ಸ್ ಡೀಲರ್ ಸಂಜಯ್ ಭಂಡಾರಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿದ ಬ್ರಿಟನ್‌ ಕೋರ್ಟ್‌

ನವದೆಹಲಿ: ವಿವಾದಿತ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಯುನೈಟೆಡ್ ಕಿಂಗ್‌ಡಂನ ವೆಸ್ಟ್‌ಮಿನಿಸ್ಟರ್ ನ್ಯಾಯಾಲಯ ಸೋಮವಾರ ಅನುಮತಿ ನೀಡಿದೆ. ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ಭಂಡಾರಿ ಹಸ್ತಾಂತರಕ್ಕೆ ಆದೇಶಿಸಲಾಗಿದೆ. ಏಜೆನ್ಸಿಯು ಭಾರತ ಸರ್ಕಾರದ ಪರವಾಗಿ ಬ್ರಿಟನ್‌ನ ನ್ಯಾಯಾಲಯದಲ್ಲಿ ಪ್ರಕರಣದ ವಿರುದ್ಧ ಹೋರಾಡುತ್ತಿತ್ತು. ವಿಚಾರಣೆಯ ಸಂದರ್ಭದಲ್ಲಿಭಂಡಾರಿ … Continued

ಇರಾನ್ ಚಳವಳಿಗೆ ಬೆಂಬಲಿಸಿ ಹಿಜಾಬ್ ಸುಟ್ಟ ಕೇರಳದ ಮುಸ್ಲಿಂ ಮಹಿಳೆಯರು | ವೀಕ್ಷಿಸಿ

ಕೋಝಿಕ್ಕೋಡ್: ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಆಂದೋಲನಕ್ಕೆ ಬೆಂಬಲವಾಗಿ ನವೆಂಬರ್ 6 ಭಾನುವಾರದಂದು ಕೇರಳದ ಮುಸ್ಲಿಂ ಮಹಿಳೆಯರು ಹಿಜಾಬ್ ಅನ್ನು ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಆಂದೋಲನಕ್ಕೆ ಬೆಂಬಲವಾಗಿ ನವೆಂಬರ್ 6 ಭಾನುವಾರದಂದು ಕೇರಳದ ಮುಸ್ಲಿಂ ಮಹಿಳೆಯರು ಕೋಝಿಕೋಡ್‌ನಲ್ಲಿ ಹಿಜಾಬ್ ಅನ್ನು ಸುಟ್ಟಿದ್ದಾರೆ. ಕೇರಳ ಯುಕ್ತಿವಾದಿ ಸಂಗಮ ಆಯೋಜಿಸಿದ್ದ ವಿಚಾರ ಸಂಕಿರಣದ ವೇಳೆ ಈ ಘಟನೆ … Continued

ಇನ್‌ಸ್ಟಂಟ್‌ ಕರ್ಮ ಹಿಟ್‌ ಬ್ಯಾಕ್‌: ಬೈಕ್ ಸವಾರನನ್ನು ಒದೆಯಲು ಹೋಗಿ ತಾನೇ ಬೈಕ್‌ನಿಂದ ಕೆಳಗೆ ಬಿದ್ದ ಮಹಿಳೆ …ವೀಕ್ಷಿಸಿ

ಕರ್ಮವು ನಮ್ಮನ್ನು ಹಿಂಬಾಲಿಸುತ್ತದೆ ಹಿರಿಯರು ಎಚ್ಚರಿಕೆ ನೀಡುತ್ತಲೇ ಇರುತ್ತಾರೆ. ನಾವು ಯಾರಿಗಾದರೂ ಏನಾದರೂ ತೊಂದರೆ ಮಾಡಲು ಪ್ರಯತ್ನಿಸಿದರೆ ನಮ್ಮ ಕರ್ಮವು ಶೀಘ್ರದಲ್ಲೇ ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಆಗಾ ಎಚ್ಚರಿಸುತ್ತಾರೆ. ಅಂತಹ ಒಂದು ವೀಡಿಯೊ ಇಂಟರ್ನೆಟ್‌ನಲ್ಲಿ ರೌಂಡ್ ಮಾಡುತ್ತಿದ್ದು, ಮಹಿಳೆಯೊಬ್ಬಳು ತನ್ನ ಪಕ್ಕದಲ್ಲಿ ಬೈಕ್ ಓಡಿಸುತ್ತಿದ್ದ ವ್ಯಕ್ತಿಯನ್ನು ಒದೆಯಲು ಪ್ರಯತ್ನಿಸುತ್ತಿರುವಾಗ ಮೋಟಾರ್ ಸೈಕಲ್‌ನಿಂದ … Continued