ಗಾಯದಿಂದ ದಕ್ಷಿಣ ಆಫ್ರಿಕ ವಿರುದ್ಧದ T20 ಸರಣಿಯಿಂದ ಕೆ.ಎಲ್‌. ರಾಹುಲ್ ಔಟ್, ರಿಷಬ್ ಪಂತ್ ಈಗ ಭಾರತ ತಂಡದ ನಾಯಕ

ನವದೆಹಲಿ: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಭಾರತವನ್ನು ಮುನ್ನಡೆಸಬೇಕಿದ್ದ ಕೆಎಲ್ ರಾಹುಲ್ ಗಾಯದ ಕಾರಣದಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಬುಧವಾರ ಟ್ವೀಟ್ ಮೂಲಕ ತಿಳಿಸಿದೆ. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ಗಾಯದ ಸಮಸ್ಯೆಯಿಂದ ಸರಣಿಯಿಂದ ಹೊರಗುಳಿದಿದ್ದಾರೆ. ವಿಕೆಟ್ ಕೀಪರ್ ರಿಷಬ್ ಪಂತ್ ಈಗ ಭಾರತದ ತಂಡವನ್ನು … Continued

ರೈತರಿಗೆ ಒಳ್ಳೆಯ ಸುದ್ದಿ… ಬಿತ್ತನೆ ಅವಧಿ ಆರಂಭವಾಗುತ್ತಿದ್ದಂತೆ ಭತ್ತ, ಇತರ 13 ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ

ನವದೆಹಲಿ: 2022-23ನೇ ವರ್ಷಕ್ಕೆ ರೈತರು ಹೆಚ್ಚಿನ ಪ್ರದೇಶದಲ್ಲಿ ಬೆಳೆ ಬೆಳೆಯಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರವು ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಕ್ವಿಂಟಲ್‌ಗೆ 2,040 ರೂ.ಗೆ ಹೆಚ್ಚಿಸಿದೆ. ಪ್ರತಿ ಕ್ವಿಂಟಲ್‌ಗೆ 100 ರೂ.ಗಳನ್ನು ಹೆಚ್ಚಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ … Continued

ಸಹಕಾರಿ ಬ್ಯಾಂಕ್‌ಗಳ ವೈಯಕ್ತಿಕ ಗೃಹ ಸಾಲಗಳ ಮೊತ್ತ ಎರಡು ಪಟ್ಟು ಹೆಚ್ಚಿಸಿದ ಆರ್‌ಬಿಐ

ನವದೆಹಲಿ: ಸಹಕಾರಿ ಬ್ಯಾಂಕ್‌ಗಳ ವೈಯಕ್ತಿಕ ಗೃಹ ಸಾಲಗಳ ಮೇಲಿನ ಮಿತಿಗಳನ್ನು ಆರ್‌ಬಿಐ ಹೆಚ್ಚಿಸಿದೆ. ಹೆಚ್ಚಿದ ಮಿತಿಗಳು ಪ್ರಾಥಮಿಕ (ನಗರ) ಸಹಕಾರಿ ಬ್ಯಾಂಕ್‌ಗಳು (ಯುಸಿಬಿಗಳು), ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳು (ಆರ್‌ಸಿಬಿಗಳು) ಎರಡಕ್ಕೂ ಅನ್ವಯಿಸುತ್ತವೆ. ಆರ್‌ಬಿಐ ಸಹಕಾರಿ ಬ್ಯಾಂಕುಗಳನ್ನು ಬೆಳವಣಿಗೆಯಲ್ಲಿ ಸಮಾನ ಪಾಲುದಾರರೆಂದು ಪರಿಗಣಿಸಿದೆ, ಹೀಗಾಗಿ ಅವರ ಸಾಲದ ಮಿತಿಯನ್ನು 100% ರಷ್ಟು ಹೆಚ್ಚಿಸಿದೆ, ಅಂದರೆ ಈ … Continued

ತನ್ನ ಶ್ರಾದ್ಧದ ದಿನವೇ ಪ್ರತ್ಯಕ್ಷನಾದ ಸತ್ತು ಹೋಗಿದ್ದ ಮಗ…!

ಅಗರ್ತಲಾ (ತ್ರಿಪುರ): ಸತ್ತು ಹೋಗಿದ್ದ ಮಗ, ತನ್ನ ತಿಥಿ ದಿನವೇ ಮನೆಗೆ ಬಂದ ವಿಲಕ್ಷಣ ಘಟನೆಯೊಂದು ತ್ರಿಪುರದ ಅಗರ್ತಲಾದಲ್ಲಿ ನಡೆದಿದೆ. ಮೋಹನಪುರ್‌ ಕಾಳಿಬಜಾರ್‌ನ ನಿವಾಸಿ ಆಗಿದ್ದ 22 ವರ್ಷದ ಆಕಾಶ ಸರ್ಕಾರ್‌ ಕಳೆದ ತಿಂಗಳು ನಾಪತ್ತೆಯಾಗಿದ್ದ. ಈ ಸಂಬಂಧ ಕುಟುಂಬಸ್ಥರು ಪೊಲೀಸರಿಗೂ ದೂರು ನೀಡಿದ್ದರು. ಜೂನ್ 3ರಂದು ಅಗರ್ತಲಾ ಪೊಲೀಸ್‌ ಠಾಣೆ ವ್ಯಾಪ್ತಿಯ ಮೇಲರ್ಮತ್‌ ಬಳಿಯ … Continued

ಚಲಿಸುತ್ತಿದ್ದ ಬಸ್ಸಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ, ನಾಲ್ವರ ಬಂಧನ

ನವದೆಹಲಿ: ಬಿಹಾರದ ಬೆಟ್ಟಿಯಾ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ವರದಿಯ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಬಾಲಕಿಯು ಪಶ್ಚಿಮ ಚಂಪಾರಣ್‌ನ ಬೆಟ್ಟಿಯಾಗೆ ಹೋಗಲು ಬಸ್‌ಗಾಗಿ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಳು. ಬಸ್ ಚಾಲಕನು ಬೆಟ್ಟಿಯಾಗೆ ಹೋಗುವುದಾಗಿ ಹೇಳಿ … Continued

ಎಲ್ಲ ಪ್ರಕಾರದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್

ನವದೆಹಲಿ: ಭಾರತದ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಪ್ರಸ್ತುತ ಮಹಿಳಾ ಏಕದಿನ ಪಂದ್ಯಗಳಲ್ಲಿ ಮಿಥಾಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಭಾರತದ ಅನುಭವಿ ಕ್ರಿಕೆಟಿಗರಾದ ಮಿಥಾಲಿ, 232 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ, 50.68 ಸರಾಸರಿಯಲ್ಲಿ 7,805 ರನ್ ಗಳಿಸಿದ್ದಾರೆ. ಮಿಥಾಲಿ ಟ್ವೀಟ್ ಮಾಡಿದ್ದು, … Continued

ಜ್ಞಾನವಾಪಿ ಸಮೀಕ್ಷೆಗೆ ಆದೇಶ ನೀಡಿದ ನ್ಯಾಯಾಧೀಶರಿಗೆ ಜೀವ ಬೆದರಿಕೆ

ವಾರಾಣಸಿ: ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀಕ್ಷೆಗಾಗಿ ಆಯೋಗವನ್ನು ರಚಿಸಲು ಆದೇಶಿಸಿದ್ದ ವಾರಣಾಸಿಯ ನ್ಯಾಯಾಧೀಶರಿಗೆ ಜೀವ ಬೆದರಿಕೆ ಪತ್ರಗಳು ಬಂದಿದೆ. ವಿವಾದಿತ ಕಟ್ಟಡದೊಳಗೆ ಶಿವಲಿಂಗ ಪತ್ತೆಯಾದ ಸ್ಥಳವನ್ನು ಸೀಲಿಂಗ್ ಮಾಡಲು ಆದೇಶಿಸಿದ ವಾರಾಣಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರಿಗೆ ನೋಂದಾಯಿತ ಅಂಚೆ ಮೂಲಕ ಬೆದರಿಕೆಗಳು ಬಂದಿವೆ. ಇಸ್ಲಾಮಿಕ್ ಆಘಾಜ್ ಮೂವ್‌ಮೆಂಟ್ ಈ ಪತ್ರವನ್ನು … Continued

ಪ್ರವಾದಿ ಮುಹಮ್ಮದ್ ಕುರಿತ ಹೇಳಿಕೆ: ನೂಪುರ್ ಶರ್ಮಾ ಬೆಂಬಲಕ್ಕೆ ನಿಂತ ಡಚ್ ಸಂಸದ

ನವದೆಹಲಿ: ಪ್ರವಾದಿ ಮುಹಮ್ಮದ್ ಅವರ ಹೇಳಿಕೆಗಳಿಗೆ ಇಸ್ಲಾಮಿಕ್ ರಾಷ್ಟ್ರಗಳಿಂದ ಭಾರೀ ಆಕ್ಷೇಪದ ನಡುವೆ, ಬಿಜೆಪಿಯ ಮಾಜಿ ವಕ್ತಾರಾದ ನೂಪುರ್ ಶರ್ಮಾ ಅವರಿಗೆ ಈಗ ನೆದರ್ಲ್ಯಾಂಡ್ಸ್‌ನ ಬಲಪಂಥೀಯ ನಾಯಕ ಗೀರ್ಟ್ ವೈಲ್ಡರ್ಸ್‌ನಲ್ಲಿ ಬೆಂಬಲ ನೀಡಿದ್ದಾರೆ. ಡಚ್ ನಾಯಕ ನೂಪುರ್ ಶರ್ಮಾ ಅವರು ಸತ್ಯವನ್ನು ಹೇಳುತ್ತಿದ್ದಾರೆ ಎಂದು ಹೇಳಿದರು ಮತ್ತು ಹಾಗೂ ಇಸ್ಲಾಮಿಕ್ ದೇಶಗಳ ಕೋಪವನ್ನು “ಹಾಸ್ಯಾಸ್ಪದ” ಎಂದು … Continued

ಭಾರತದಿಂದ 75 ಕಿಮೀ ಉದ್ದದ ಬಿಟುಮಿನಸ್ ಕಾಂಕ್ರೀಟ್ ರಸ್ತೆ ನಿರ್ಮಾಣ ಈಗ ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆ

ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ, ಭಾರತವು ನಿರಂತರವಾಗಿ ಹಾಕಲಾದ ಬಿಟುಮಿನಸ್ ಕಾಂಕ್ರೀಟ್ ರಸ್ತೆ ನಿರ್ಮಾಣದಲ್ಲಿ ಗಿನ್ನೆಸ್ ವಿಶ್ವ ದಾಖಲೆ ಮಾಡಿದೆ ಎಂದು ಪ್ರಕಟಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಸಲಹೆಗಾರರಾದ ರಾಜ್‌ಪಥ್ ಇನ್‌ಫ್ರಾಕಾನ್ ಪ್ರೈವೇಟ್ ಲಿಮಿಟೆಡ್ ಮತ್ತು ಜಗದೀಶ್ ಕದಮ್ ಅವರು ರಾಷ್ಟ್ರೀಯ ಹೆದ್ದಾರಿ 53 ರಲ್ಲಿ ಒಂದೇ … Continued

ರೆಪೊ ದರ ಮತ್ತೆ ಏರಿಕೆ ಮಾಡಿದ ಆರ್‌ಬಿಐ : ಇಎಂಐಗಳು, ಸಾಲದ ಮೇಲಿನ ಬಡ್ಡಿ ದರಗಳು ಹೆಚ್ಚಾಗಬಹುದು

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ರೆಪೋ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ ಶೇಕಡಾ 4.90 ಕ್ಕೆ ಹೆಚ್ಚಿಸುವುದಾಗಿ ಪ್ರಕಟಿಸಿದೆ. 2022-23 ರ ಹಣಕಾಸು ವರ್ಷದಲ್ಲಿ ಹಣದುಬ್ಬರ ದರವು ಶೇಕಡಾ 6.7 ರಷ್ಟಿದೆ ಎಂದು ಅಂದಾಜಿಸಲಾಗಿದ್ದರೂ, ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಶೇಕಡಾ 7.2 ರಷ್ಟು ಬೆಳವಣಿಗೆಯಾಗಲಿದೆ ಎಂದು ಆರ್‌ಬಿಐ ಭರವಸೆ ನೀಡಿದೆ. ವಿತ್ತೀಯ ನೀತಿ … Continued