ದೆಹಲಿ ಚಂಡಮಾರುತಕ್ಕೆ ಎರಡು ಸಾವು, ಭಾರಿ ಟ್ರಾಫಿಕ್ ಅವ್ಯವಸ್ಥೆ, ‘ಮರ ಬಿದ್ದ’ ಬಗ್ಗೆ 300 ಕರೆಗಳ ಸ್ವೀಕಾರ…ವೀಕ್ಷಿಸಿ

ನವದೆಹಲಿ: ಗುಡುಗು ಸಹಿತ ಮಳೆ ಮತ್ತು 100 ಕಿಮೀ ವೇಗದಲ್ಲಿ ಗಾಳಿ ಬೀಸಿದ ಪರಿಣಾಮ ಸೋಮವಾರ ಸಂಜೆ ದೆಹಲಿಯಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ನೂರಾರು ಮರಗಳು ನೆಲಕ್ಕುರುಳಿವೆ ಮತ್ತು ಸಂಚಾರ ಸ್ಥಗಿತಗೊಂಡಿದೆ. ಮಳೆಯಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ. ಮಧ್ಯ ದೆಹಲಿಯ ಜಾಮಾ ಮಸೀದಿ ಪ್ರದೇಶದಲ್ಲಿ 50 ವರ್ಷದ ವ್ಯಕ್ತಿಯೊಬ್ಬರು ತಮ್ಮ ನಿವಾಸದ ಹೊರಗೆ ನಿಂತಿದ್ದಾಗ ಬಲವಾದ ಗಾಳಿ … Continued

ಆರ್ಯನ್ ಖಾನ್ ಪ್ರಕರಣ: ಲೋಪದೋಷಗಳ ತನಿಖೆಗಾಗಿ ಸಮೀರ್‌ ವಾಂಖೆಡೆ ಚೆನ್ನೈಗೆ ವರ್ಗಾವಣೆ

ನವದೆಹಲಿ: ಮುಂಬೈ ಡ್ರಗ್ಸ್ ಆನ್ ಕ್ರೂಸ್ ಪ್ರಕರಣವನ್ನು ಲೋಪದೋಷಗಳಿಂದ ತೀವ್ರವಾಗಿ ಟೀಕೆಗೊಳಗಾಗಿರುವ ಮಾಜಿ ಮಾದಕ ದ್ರವ್ಯ ವಿರೋಧಿ ಅಧಿಕಾರಿ ಸಮೀರ್ ವಾಂಖೆಡೆ ಅವರನ್ನು ಚೆನ್ನೈನಲ್ಲಿರುವ ತೆರಿಗೆದಾರರ ಸೇವೆಗಳ ಮಹಾನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿದೆ. ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಿದ ನಂತರ, ವಾಂಖೆಡೆ ಅವರನ್ನು ಮುಂಬೈನಲ್ಲಿರುವ ಡೈರೆಕ್ಟರೇಟ್ ಜನರಲ್ … Continued

4.8 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣ: ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಬಂಧಿಸಿದ ಇಡಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ವಿದ್ಯುತ್ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಬಂಧಿಸಿದೆ. ಎಎಪಿ ನಾಯಕನ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ 2017 ರಲ್ಲಿ ದಾಖಲಿಸಲಾದ ಸಿಬಿಐ ಪ್ರಥಮ ಮಾಹಿತಿ ವರದಿಯನ್ನು ಆಧರಿಸಿ ಈ ಪ್ರಕರಣವು ಅವರೊಂದಿಗೆ ಸಂಪರ್ಕ ಹೊಂದಿದ ನಾಲ್ಕು ಕಂಪನಿಗಳ ಮೂಲಕ ಹಣವನ್ನು ಲಾಂಡರಿಂಗ್ … Continued

ಮದುವೆಗೆ ಫೋಟೋಗ್ರಾಫರ್-ವಿಡಿಯೋಗ್ರಾಫರ್ ಕರೆಸಲಿಲ್ಲವೆಂದು ಮಂಟಪದಲ್ಲೇ ಮದುವೆ ಮುರಿದುಬಿತ್ತು….!

ಕಾನ್ಪುರ: ಉತ್ತರ ಪ್ರದೇಶದ ವಧುಗಳು ಧೈರ್ಯಶಾಲಿಯಾಗುತ್ತಿದ್ದಾರೆ ಮತ್ತು ಕಳೆದ ಕೆಲವು ವಾರಗಳಲ್ಲಿ ವಧುಗಳು ಬೇರೆಬೇರೆ ಕಾರಣಕ್ಕೆ ತಾವು ಮದುವೆಯಾಗುವ ಗಂಡುಗಳನ್ನು ದೂರ ಮಾಡಿದ್ದಾರೆ. ಬೋಳು ತಲೆಯಿರಬಹುದು ಅಥವಾ ಮತ್ತಿನ್ನೇನೋ ಕಾರಣಕ್ಕೆ ಇರಬಹುದು. ಈಗ ಇಂಥದ್ದೇ ಒಂದು ಕ್ಷುಲ್ಲಕ ಕಾರಣ ಉತ್ತರ ಪ್ರದೇಶದಲ್ಲಿ ಮದು ಮಗಳು ಮದುವೆ ಮಂಟಪದಲ್ಲೇ ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಇದಕ್ಕೆ ಕಾರಣ ವರನು … Continued

3 ಲಕ್ಷ ಕಾರು ನಿರ್ಮಾಣ ಸಾಮರ್ಥ್ಯದ ಫೋರ್ಡ್‌ ಕಾರು ಉತ್ಪಾದನಾ ಘಟಕ ಟಾಟಾ ಕಂಪನಿ ತೆಕ್ಕೆಗೆ…!

ನವದೆಹಲಿ: ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಮತ್ತು ಫೋರ್ಡ್ ಇಂಡಿಯಾ ಸೋಮವಾರ ಗುಜರಾತ್ ಸರಕಾರದೊಂದಿಗೆ ಫೋರ್ಡ್ ಇಂಡಿಯಾದ ಸನಂದ್ ವಾಹನ ಉತ್ಪಾದನಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ. ಫೋರ್ಡ್ ಇಂಡಿಯಾದ ಸನಂದ್ ವಾಹನ ತಯಾರಿಕಾ ಘಟಕದ ಸಂಭಾವ್ಯ ಸ್ವಾಧೀನದಲ್ಲಿ ಅದರ ಭೂ ಆಸ್ತಿಗಳು, ಕಟ್ಟಡಗಳು, ವಾಹನ ತಯಾರಿಕಾ ಘಟಕ, ಯಂತ್ರೋಪಕರಣಗಳು … Continued

ಕೊರೊನಾದಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ ನೆರವು ನೀಡುವ ಮಹತ್ವದ ಚಿಲ್ಡ್ರನ್ಸ್ ಕೇರ್‌ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ಕೋವಿಡ್-19ನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ನೆರವು ನೀಡುವ ಪಿಎಂ ಕೇರ್ಸ್ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು, ಮಂಗಳವಾರ ಚಾಲನೆ ನೀಡಿದರು. ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 10 ಲಕ್ಷ ರೂಪಾಯಿಗಳ ಆರ್ಥಿಕ ನೆರವು, ಮಾಸಿಕ ವಿದ್ಯಾರ್ಥಿವೇತನ ಸೇರಿದಂತೆ ಹಲವು ಸೌಲಭ್ಯಗಳನ್ನು ಪಿಎಂ-ಕೇರ್ಸ್ ಅಡಿ ನೀಡಲಾಗುತ್ತಿದೆ. ದೇಶಾದ್ಯಂತ ಫಲಾನುಭವಿ ಮಕ್ಕಳು ಜಿಲ್ಲೆ ಮತ್ತು ತಾಲೂಕು … Continued

ಯುಪಿಎಸ್‍ಸಿ ಅಂತಿಮ ಫಲಿತಾಂಶ ಪ್ರಕಟ: ಉತ್ತರ ಪ್ರದೇಶದ ಶ್ರುತಿ ಶರ್ಮಾ ಟಾಪರ್, ಕರ್ನಾಟಕದ 27 ಅಭ್ಯರ್ಥಿಗಳು ಆಯ್ಕೆ

ನವದೆಹಲಿ: ಕೇಂದ್ರ ಲೋಕ ಸೇವಾ ಆಯೋಗ(UPSC) ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದ್ದು, ಉತ್ತರ ಪ್ರದೇಶದ ಶ್ರುತಿ ಶರ್ಮಾ ಅವರು ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಇಂದು ಪ್ರಕಟವಾದ ಅಂತಿಮ ಫಲಿತಾಂಶದಲ್ಲಿ ಈ ವರ್ಷ ಮೊದಲ ನಾಲ್ಕು ಸ್ಥಾನಗಳನ್ನು ವಿದ್ಯಾರ್ಥಿನಿಯರೇ ಪಡೆದುಕೊಂಡಿರುವುದು ವಿಶೇಷ. ಒಟ್ಟು 685 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರುತಿ ಶರ್ಮಾ ಮೊದಲ … Continued

ಕೋಲ್ಕತ್ತಾದಲ್ಲಿ ಮತ್ತೊಬ್ಬ ಮಾಡೆಲ್ ಶವ ಪತ್ತೆ; ಕಳೆದ 13 ದಿನಗಳಲ್ಲಿ ಇದು ನಾಲ್ಕನೇ ಪ್ರಕರಣ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ತಮ್ಮ ಮನೆಯಲ್ಲಿಯೇ ಮಾಡೆಲ್-ಮೇಕಪ್ ಕಲಾವಿದೆಯ ಶವ ಪತ್ತೆಯಾಗಿದೆ. ಶವವನ್ನು ಮಾಡೆಲ್ ಆಗಲು ಪ್ರಯತ್ನಿಸುತ್ತಿದ್ದ ಮೇಕಪ್ ಕಲಾವಿದೆ ಸರಸ್ವತಿ ದಾಸ ಎಂದು ಗುರುತಿಸಲಾಗಿದೆ. ಭಾನುವಾರ ಕೋಲ್ಕತ್ತಾದ ಕಸ್ಬಾ ಪ್ರದೇಶದಲ್ಲಿನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸರಸ್ವತಿ ದಾಸ ಅವರ ಶವ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಇದು ಆತ್ಮಹತ್ಯೆ ಎಂದು ಪೊಲೀಸರು … Continued

ರಾಜ್ಯಸಭಾ ಟಿಕೆಟ್‌ ನಿರಾಕರಿಸಿದ ನಂತರ ನಮ್ಮ ವರ್ಷಗಳ ತಪಸ್ಸು ಕಡಿಮೆಯಾಯ್ತು ಎಂದು ಮಾರ್ಮಿಕವಾಗಿ ಹೇಳಿದ ಕಾಂಗ್ರೆಸ್‌ನ ನಗ್ಮಾ, ಪವನ್ ಖೇರಾ

ನವದೆಹಲಿ: ಮಹಾರಾಷ್ಟ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉತ್ತರ ಪ್ರದೇಶದ ಇಮ್ರಾನ್ ಪ್ರಾಪ್ತಗಿರಿ ಎದುರು ತಮ್ಮ 18 ವರ್ಷಗಳ ತಪಸ್ಸು ಕಡಿಮೆಯಾಗಿದೆ ಎಂದು ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಕಾಂಗ್ರೆಸ್ ನಾಯಕಿ ನಗ್ಮಾ ಹೇಳಿದ್ದಾರೆ. ಜೂನ್ 10 ರಂದು ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ 10 ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಕಾಂಗ್ರೆಸ್ ಪ್ರಕಟಿಸಿದ ನಂತರ ನಗ್ಮಾ ಅವರ ಈ ಹೇಳಿಕೆ … Continued

ಮಧ್ಯಪ್ರದೇಶದಲ್ಲಿ 700 ಕೋಟಿ ರೂ. ಜಿಎಸ್‌ಟಿ ವಂಚನೆ ಪತ್ತೆ: 5 ಮಂದಿ ಬಂಧನ

ಭೋಪಾಲ್: 700 ಕೋಟಿ ರೂ.ಗಳ ಮೊತ್ತದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಾಲ ವಂಚನೆಗೆ ಸಂಬಂಧಿಸಿದಂತೆ ಗುಜರಾತ್‌ನ ಐವರನ್ನು ಬಂಧಿಸಲಾಗಿದೆ ಎಂದು ಮಧ್ಯಪ್ರದೇಶ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಆರೋಪಿಗಳು ನಕಲಿ ದಾಖಲೆಗಳು, ವಿಳಾಸಗಳು ಮತ್ತು ನಕಲಿ ಗುರುತುಗಳನ್ನು ಬಳಸಿಕೊಂಡು ಸುಮಾರು 500 ನಕಲಿ ಸಂಸ್ಥೆಗಳ ಜಾಲವನ್ನು ಸೃಷ್ಟಿಸುವ ಮೂಲಕ ನಕಲಿ ಜಿಎಸ್‌ಟಿ ಇನ್‌ಪುಟ್ ತೆರಿಗೆ … Continued