ಬ್ಯಾಂಕ್ ಸಾಲ ಪ್ರಕರಣದಲ್ಲಿ ಅಸ್ಸಾಂ ಮಾಜಿ ಸಿಎಂ ಹಿತೇಶ್ವರ್ ಸೈಕಿಯಾ ಪುತ್ರನ ಬಂಧಿಸಿದ ಸಿಬಿಐ

ಬ್ಯಾಂಕ್ ಸಾಲ ಸುಸ್ತಿ ಪ್ರಕರಣದಲ್ಲಿ ಅಸ್ಸಾಂನ ಮಾಜಿ ಮುಖ್ಯಮಂತ್ರಿ ಹಿತೇಶ್ವರ್ ಸೈಕಿಯಾ ಅವರ ಹಿರಿಯ ಪುತ್ರ ಅಶೋಕ್ ಸೈಕಿಯಾ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಭಾನುವಾರ ಬಂಧಿಸಿದೆ. 1996ರಲ್ಲಿ ಅಸ್ಸಾಂ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನಿಂದ (ASCARDB) 9.37 ಲಕ್ಷ ಸಾಲ ಪಡೆದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ದೇಬಬ್ರತ … Continued

ಕೋವಿಡ್‌ ಸಾಂಕ್ರಾಮಿಕದ ಮಧ್ಯೆ ಭದ್ರತಾ ಸಿಬ್ಬಂದಿಗೆ ತನ್ನ ತಾಪಮಾನ ಪರೀಕ್ಷಿಸಲು ನೆನಪಿಸುವ ಪುಟಾಣಿ ಕರ್ತವ್ಯ ಪ್ರಜ್ಞೆಗೆ ಎಲ್ಲರಿಂದ ಶಹಬ್ಬಾಸ್‌.. ವೀಕ್ಷಿಸಿ

ಕೋವಿಡ್‌-19 ಸಾಂಕ್ರಾಮಿಕವು ಜನರ ಜೀವನ ವಿಧಾನವನ್ನು ಬದಲಾಯಿಸಿದೆ. ಸಾಂಕ್ರಾಮಿಕ ರೋಗ ಉಲ್ಬಣಗೊಂಡಾಗ ಜನರು ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡರು. ನಿಯಮಿತ ತಾಪಮಾನ ತಪಾಸಣೆ, ಪ್ರತಿ ಗಂಟೆಗೆ ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು ಮತ್ತು ಹೊರಗೆ ಕಾಲಿಟ್ಟಾಗಲೆಲ್ಲಾ ಫೇಸ್ ಮಾಸ್ಕ್ ಧರಿಸುವುದು ಈಗ ಸಾಮಾನ್ಯ ಅಭ್ಯಾಸವಾಗಿದೆ. ಇದು ಹೇಗೆ ನಮ್ಮ ಜೀವನ ಕ್ರಮದಲ್ಲಿ ಅಭ್ಯಾಸವಾಗಿದೆ ಎಂಬುದಕ್ಕೆ ಅಂತರ್ಜಾಲದಲ್ಲಿ ವೈರಲ್ ಆಗಿರುವ … Continued

2015ರ ನಂತರ ಅತಿ ಹೆಚ್ಚು ಮಳೆ ದಾಖಲಿಸಿದ ಚೆನ್ನೈ ನಗರ, ಅನೇಕ ಪ್ರದೇಶಗಳು ಮುಳುಗಡೆ

ಚೆನ್ನೈ: ನಗರದಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿವೆ. ತಮಿಳುನಾಡಿನ ರಾಜಧಾನಿ ಚೆನ್ನೈ ನಗರವು 2015ರ ನಂತರದಲ್ಲಿ ಅತಿ ಹೆಚ್ಚು ಮಳೆಯನ್ನು ದಾಖಲಿಸಿದೆ. ಲೋಕೋಪಯೋಗಿ ಇಲಾಖೆ ಚೆನ್ನೈನ ಚೆಂಬರಂಬಾಕ್ಕಂ ಜಲಾಶಯದ ಶೆಟರ್‌ಗಳನ್ನು ತೆರೆದಿದ್ದು, 500 ಕ್ಯೂಸೆಕ್‌ನಂತೆ ನೀರು ಬಿಡಲಾಗುತ್ತಿದೆ. ಚೆಂಬರಂಬಾಕ್ಕಂನ ಜಲಾನಯನ ಪ್ರದೇಶದಲ್ಲಿ 52 ಮಿಮೀ ಮಳೆಯಾಗಿದ್ದು, ಜಲಾಶಯಕ್ಕೆ 600 ಕ್ಯೂಸೆಕ್‌ನಷ್ಟು ನೀರು ಬರುತ್ತಿದೆ … Continued

ಡ್ರಗ್ಸ್ ಪ್ರಕರಣ: ಎನ್‌ಸಿಬಿ ಎಸ್‌ಐಟಿ ತಂಡದಿಂದ ಆರ್ಯನ್ ಖಾನ್‌ಗೆ ಸಮನ್ಸ್, ಆರೋಗ್ಯ ಕಾರಣ ನೀಡಿ ಗೈರು

ಮುಂಬೈ: ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಪಡೆದಿರುವ ಆರ್ಯನ್ ಖಾನ್ ಅವರನ್ನು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋದ (ಎನ್‌ಸಿಬಿ) ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆಸಿದೆ ಎಂದು ಕೇಂದ್ರ ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆ ಹೇಳಿದೆ. ವರದಿಗಳ ಪ್ರಕಾರ, ಆರ್ಯನ್ ಖಾನ್ ಅವರನ್ನು ಸಂಜೆ 6 ರಿಂದ ರಾತ್ರಿ 8 … Continued

ನ.12ರ ವರೆಗೆ ಅನಿಲ್ ದೇಶ್ಮುಖ್ ಇಡಿ ವಶಕ್ಕೆ ನೀಡಿದ ಬಾಂಬೆ ಹೈಕೋರ್ಟ್‌

ಮುಂಬೈ: ಅಕ್ರಮ ಹಣ ವರ್ಗಾವಣೆಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶ್ ಮುಖ್ ಅವರನ್ನು ನವೆಂಬರ್ ‌12ರ ತನಕ ‌ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಬಾಂಬೆ ಹೈಕೋರ್ಟ್ ನೀಡಿದೆ. ಭಾನುವಾರದ ದಿನವೂ ವಿಚಾರಣೆ ನಡೆಸಿದ ರಜಾಕಾಲದ ಪೀಠ ಅನಿಲ್ ದೇಶ್ ಮುಖ್ ಅವರನ್ನು ಇಡಿ ವಶಕ್ಕೆ ನೀಡಿದೆ. ಗೃಹ‌ಸಚಿವರಾಗಿದ್ದ ಅವಧಿಯಲ್ಲಿ ಅನಿಲ್ ದೇಶ್ … Continued

ಈ ಅಕ್ಟೋಬರ್‌ನಲ್ಲಿ 120 ವರ್ಷಗಳಲ್ಲೇ ಕೇರಳದಲ್ಲಿ ಅತಿ ಹೆಚ್ಚು ಮಳೆ: ಐಎಂಡಿ ವರದಿ..!

ತಿರುವನಂತಪುರಂ: 120 ವರ್ಷಗಳ ಇತಿಹಾಸದಲ್ಲೇ ಈ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಕೇರಳದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ..! ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಕೇರಳವು ಈ ವರ್ಷ ಅಕ್ಟೋಬರ್‌ನಲ್ಲಿ 589.9 ಮಿಮೀ ಮಳೆಯನ್ನು ಪಡೆದಿದೆ, ಇದು 1901 ರ ವರ್ಷದಿಂದ ಅತಿ ಹೆಚ್ಚು ಮತ್ತು ಕಳೆದ ವರ್ಷ ಇದೇ ತಿಂಗಳಿಗೆ … Continued

ಒಂದು ಕೋಟಿ ಝೈಕೊವ್​-ಡಿ ಲಸಿಕೆ ಖರೀದಿಗೆ ಆದೇಶ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ಕೊರೊನಾ ವೈರಸ್​ ವಿರುದ್ಧ ಭಾರತವು ದೇಶೀಯವಾಗಿ ರೂಪಿಸಿರುವ 2ನೇ ಲಸಿಕೆ ಝೈಕೊವ್​-2ಡಿ ಲಸಿಕೆ ಖರೀದಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಒಂದು ಕೋಟಿ ಲಸಿಕೆಗಳನ್ನು ಪೂರೈಸುವಂತೆ ಕಂಪನಿಗೆ ಬೇಡಿಕೆಯಿಟ್ಟಿದೆ. ಅಲ್ಲದೆ, ದೇಶಾದ್ಯಂತ ನಡೆಯುತ್ತಿರುವ ಲಸಿಕೆ ಅಭಿಯಾನದಲ್ಲಿಯೂ ಇದನ್ನು ಸೇರಿಸಿಕೊಳ್ಳಲು ನಿರ್ಧರಿಸಿದೆ. ಸೂಜಿಯಿಲ್ಲದೆ ಔಷಧವನ್ನು ದೇಹಕ್ಕೆ ಸೇರುವ ಈ ಲಸಿಕೆಗೆ ಕಳೆದ ಆಗಸ್ಟ್​ 20ರಂದು ಭಾರತದ ಔಷಧ … Continued

ದಶಕಗಳಿಂದ ಭಾರತದ ಅತಿದೊಡ್ಡ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಗ್ರೂಪ್ಸ್‌ ಮುನ್ನಡೆಸಿದ ರತನ್ ಟಾಟಾ ಶ್ರೀಮಂತರ ಪಟ್ಟಿಯಲ್ಲಿ ಏಕೆ ಅಷ್ಟೊಂದು ಕೆಳಗಿದ್ದಾರೆ..?!

ನವದೆಹಲಿ: ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಅತ್ಯಂತ ಗೌರವಾನ್ವಿತ ಹಾಗೂ ಪ್ರಮುಖ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರು. ರತನ್‌ ಟಾಟಾ 1990 ರಿಂದ 2012ರ ವರೆಗೆ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದರು. ಅವರು ಅಕ್ಟೋಬರ್ 2016 ರಿಂದ ಫೆಬ್ರವರಿ 2017 ರ ವರೆಗೆ ಮಧ್ಯಂತರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಟಾಟಾ ಗ್ರೂಪ್‌ನ ಟಾಟಾ ಟ್ರಸ್ಟ್ಸ್ … Continued

ಪಾಕಿಸ್ತಾನ ನೌಕಾಪಡೆಯಿಂದ ಗುಂಡಿನ ದಾಳಿ: ಗುಜರಾತ್ ಕರಾವಳಿಯಲ್ಲಿ ಓರ್ವ ಭಾರತೀಯ ಮೀನುಗಾರ ಸಾವು

ಅಹಮದಾಬಾದ್: ಪಾಕಿಸ್ತಾನಿ ನೌಕಾಪಡೆ ನೀಚ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಭಾರತಕ್ಕೆ ಸೇರಿದ್ದ ದೋಣಿಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಓರ್ವ ಭಾರತೀಯ ಮೀನುಗಾರ ಸಾವಿಗೀಡಾಗಿದ್ದಾನೆ ಹಾಗೂ ಮತ್ತೋರ್ವ ಗಾಯಗೊಂಡಿದ್ದಾರೆ. ಗುಜರಾತಿನ ದ್ವಾರಕಾ ಸಮುದ್ರ ಪ್ರದೇಶದಲ್ಲಿ ಪಾಕ್ ನೌಕಾಪಡೆ ಈ ದುಸ್ಸಾಹಸಕ್ಕೆ ಕೈ ಹಾಕಿದೆ. ಪಾಕ್ ಪಡೆಗಳು ಗುಂಡಿನ ದಾಳಿ ನಡೆಸಿದ ಭಾರತೀಯ ದೋಣಿಯ … Continued

ಡ್ರಗ್ಸ್‌ ಪ್ರಕರಣದಲ್ಲಿ ಆರ್ಯನ್​ ಖಾನ್​ ಅಪಹರಿಸಿ, ನಂತರ ಹಣಕ್ಕಾಗಿ ಬೇಡಿಕೆ ಇಡಲಾಯ್ತು’: ನವಾಬ್​ ಮಲಿಕ್ ಆರೋಪ

ಮುಂಬೈ: ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಅವರ ಡ್ರಗ್ಸ್​ ಪ್ರಕರಣದಲ್ಲಿ ಎನ್‌ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್‌ ವಾಂಖೇಡೆ ಅವರ ಮೇಲೆ ಆರೋಪಗಳು ಮೇಲೆ ಆರೋಪಗಳ ಮಳೆಯನ್ನೇ ಸುರಿಸುತ್ತಿದ್ದಾರೆ ಮಹಾರಾಷ್ಟ್ರ ಸಚಿವ ನವಾಬ್‌ ಮಲ್ಲಿಕ್‌. ಆರೋಪಗಳ ನಂತರ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೇಡೆಗೆ ಈ ಪ್ರಕರಣದಿಂದ ಹೊರಗುಳಿಯುವಂತೆ ಆದೇಶಿಸಲಾಗಿದೆ. ಈಗ ಸಚಿವ ನವಾಬ್​ ಮಲಿಕ್​ … Continued