ಅಸ್ಸಾಂನಲ್ಲಿ ಅಳಿವಿನಂಚಿನಲ್ಲಿರುವ ಸುಮಾರು 100 ರಣಹದ್ದುಗಳ ಸಾವು, ಹಲವಾರು ಗಂಭೀರ ಸ್ಥಿತಿಯಲ್ಲಿ

ಗುವಾಹಟಿ: ಆಘಾತಕಾರಿ ಘಟನೆಯೊಂದರಲ್ಲಿ, ಕಾಮ್ರೂಪ್ ಜಿಲ್ಲೆಯ ಅರಣ್ಯ ಅಧಿಕಾರಿಗಳು ಹಲವಾರು ಅಳಿವಿನಂಚಿನಲ್ಲಿರುವ ರಣಹದ್ದುಗಳ ಮೃತದೇಹಗಳನ್ನು ಹೊರತೆಗೆದಿದ್ದಾರೆ ಮತ್ತು ಅನೇಕ ರಣಹದ್ದುಗಳು ಗಾಯಗೊಂಡಿವೆ. ಗುರುವಾರ ಮಾರ್ಚ್ 17 ರಂದು, ಗುವಾಹಟಿ ಮಹಾನಗರದ ಬಳಿಯ ಅಸ್ಸಾಂನ ಕಾಮ್ರೂಪ್ ಜಿಲ್ಲೆಯಲ್ಲಿ ಅಳಿವಿನಂಚಿನಲ್ಲಿರುವ ರಣಹದ್ದುಗಳ ಸುಮಾರು 100 ಮೃತದೇಹಗಳು ಕಂಡುಬಂದಿವೆ. ಅಸ್ಸಾಂನ ಕಾಮ್ರೂಪ್ ಜಿಲ್ಲೆಯ ಚೈಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಮಿಲನ್‌ಪುರ … Continued

2.5 ಲಕ್ಷ ರೂ.ಗಳಿಗಿಂತ ಹೆಚ್ಚಿನ ಪ್ರಾವಿಡೆಂಟ್ ಫಂಡ್‌ ಕೊಡುಗೆಗಳಿಗೆ ತೆರಿಗೆ..: ಸ್ಪಷ್ಟತೆಗೆ ಕಾಯುತ್ತಿರುವ ಇಪಿಎಫ್‌ಒ ಸದಸ್ಯರು

ನವದೆಹಲಿ: ಉದ್ಯೋಗಿ ಮತ್ತು ಉದ್ಯೋಗದಾತರ ಕೊಡುಗೆಗಳು ಮತ್ತು ಗಳಿಸಿದ ಬಡ್ಡಿ ಸೇರಿದಂತೆ – ವಾರ್ಷಿಕ ₹ 2.50 ಲಕ್ಷಕ್ಕಿಂತ ಹೆಚ್ಚಿನ ಪ್ರಾವಿಡೆಂಟ್ ಫಂಡ್ (PF) ಕೊಡುಗೆಗಳಿಗೆ ಸರ್ಕಾರವು ತೆರಿಗೆ ವಿಧಿಸುತ್ತದೆ. ಸರ್ಕಾರಿ ನೌಕರರಿಗೆ ಗರಿಷ್ಠ 5 ಲಕ್ಷ ರೂ.ಗಳ ಮಿತಿ ನಿಗದಿಪಡಿಸಲಾಗಿದೆ. ಆದರೆ ಉದ್ಯೋಗದಾತರು, ಚಂದಾದಾರರು ಮತ್ತು ತೆರಿಗೆ ತಜ್ಞರು ಈ ವರ್ಷ ರೂ 2.5 … Continued

ದಿ ಕಾಶ್ಮೀರ್​ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ ಅಗ್ನಿಹೋತ್ರಿಗೆ ವೈ ಕೆಟಗರಿ ಭದ್ರತೆ

ನವದೆಹಲಿ: ಎಲ್ಲೆಡೆ ಹಿಟ್‌ ಆಗಿರುವ ಹಾಗೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ನಿರ್ದೇಶಕ ವಿವೇಕ ಅಗ್ನಿಹೋತ್ರಿ (Vivek Agnihotri) ಅವರಿಗೆ ವೈ ಕೆಟಗರಿ ಭದ್ರತೆ ನೀಡಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್ ಐ ವರದಿ ಮಾಡಿದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ಈ ಸಿನಿಮಾ ತಯಾರಾಗಿದೆ. ಈ ಚಿತ್ರದಲ್ಲಿ … Continued

ಮಸಾಜ್ ನೆಪದಲ್ಲಿ ನೆದರ್ಲ್ಯಾಂಡ್ಸ್ ಮಹಿಳೆಯ ಮೇಲೆ ಅತ್ಯಾಚಾರ

ಜೈಪುರ: ರಾಜಸ್ಥಾನದ ಜೈಪುರದಲ್ಲಿ ನೆದರ್‌ಲ್ಯಾಂಡ್‌ನ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿದ್ದು, ನಗರದ ಹೋಟೆಲ್ ಒಂದರಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆಯುರ್ವೇದ ಮಸಾಜ್ ಮಾಡುವ ನೆಪದಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆ ನೆದರ್ಲ್ಯಾಂಡ್ಸ್ ನಿವಾಸಿಯಾಗಿದ್ದು, ಅವರು ರಾಜಸ್ಥಾನಕ್ಕೆ ಭೇಟಿ ನೀಡಿದ್ದರು. ಸಿಂಧಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ಷಿಪ್ರ … Continued

25 ಕೋಟಿ ರೂ.ಗಳಿಗೆ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಖರೀದಿ ಪ್ರಸ್ತಾಪವನ್ನು ನಮ್ಮ ಸರ್ಕಾರ ತಿರಸ್ಕರಿಸಿತ್ತು : ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಕೆಲವು ವರ್ಷಗಳ ಹಿಂದೆ ಇಸ್ರೇಲಿ ಸ್ಪೈವೇರ್ ಪೆಗಾಸಸ್ (Israeli spyware Pegasus) ಖರೀದಿಸುವ ಪ್ರಸ್ತಾಪವನ್ನು ತಮ್ಮ ಸರ್ಕಾರ ತಿರಸ್ಕರಿಸಿತ್ತು ಎಂದು ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜಕೀಯ ಪ್ರತಿಸ್ಪರ್ಧಿಗಳ ಮೇಲೆ ಕಣ್ಣಿಡಲು ಸ್ಪೈವೇರ್ ಬಳಕೆ “ಸ್ವೀಕಾರಾರ್ಹವಲ್ಲ” ಎಂದು ಬಂಗಾಳ ಮುಖ್ಯಮಂತ್ರಿ ತಿಳಿಸಿದರು. “ಅವರು ಸ್ಪೈವೇರ್ ಮಾರಾಟ ಮಾಡಲು ನಮ್ಮ … Continued

ಅವಿಶ್ವಾಸ ಮತಕ್ಕೆ ಮುನ್ನ ಆಡಳಿತರೂಢ ಮೈತ್ರಿಕೂಟದ ಹಲವಾರು ಸಂಸದರ ಪಕ್ಷಾಂತರ, ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ಇನ್ನಷ್ಟು ಸಂಕಷ್ಟ

ಇಸ್ಲಾಮಾಬಾದ್‌:ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಆಡಳಿತ ಪಕ್ಷದ ಹಲವಾರು ಶಾಸಕರು ಅವಿಶ್ವಾಸ ಮತಕ್ಕೆ ಮುಂಚಿತವಾಗಿ ಗುರುವಾರ ಅವರಿಗೆ ತಮ್ಮ ಬೆಂಬಲ ಹಿಂತೆಗೆದುಕೊಂಡರು. ಈಗ ಅವರು ಅಧಿಕಾರದಲ್ಲಿ ಉಳಿಯಬಹುದೇ ಎಂಬುದರ ಕುರಿತು ಹೆಚ್ಚಿನ ಅನಿಶ್ಚಿತತೆ ಉಂಟಾಗಿದೆ. ಖಾನ್ ತನ್ನ ಸಮ್ಮಿಶ್ರ ಪಾಲುದಾರರನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ ಎಂದು ಮೈತ್ರಿಯ ಪ್ರಮುಖರೊಬ್ಬರು ಹೇಳಿದ ಒಂದು ದಿನದ ನಂತರ ಈ … Continued

ಸರ್ಕಾರಿ ಬಂಗಲೆ ಖಾಲಿ ಮಾಡಲು ಶರದ್‌ ಯಾದವ್‌ಗೆ ದೆಹಲಿ ಹೈಕೋರ್ಟ್ ನಿರ್ದೇಶನ

ನವದೆಹಲಿ: ಸಂಯುಕ್ತ ಜನತಾದಳದ (ಜೆಡಿಯು) ಮಾಜಿ ಅಧ್ಯಕ್ಷ ಶರದ್ ಯಾದವ್ ಅವರು ಸಂಸತ್‌ ಸದಸ್ಯರಾಗಿದ್ದಾಗ ಮಂಜೂರು ಮಾಡಲಾಗಿದ್ದ ಸರ್ಕಾರಿ ಬಂಗಲೆಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವಂತೆ ದೆಹಲಿ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ. ರಾಜ್ಯಸಭಾ ಸ್ಥಾನದಿಂದ ತಾವು 2017ರಲ್ಲಿ ಅನರ್ಹಗೊಂಡಿದ್ದ ಪ್ರಕರಣ ಇತ್ಯರ್ಥವಾಗುವ ವರೆಗೆ ಮನೆ ತೆರವುಗೊಳಿಸುವುದಿಲ್ಲ ಎಂದು ಶರದ್‌ ಯಾದವ್‌ ವಾದಿಸಿದ್ದರು. ಆದರೆ ʼಸದನದಿಂದ ಅನರ್ಹಗೊಂಡ ಬಳಿಕ … Continued

ಗುಜರಾತ್‌ನಲ್ಲಿ 6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ; ಸರ್ಕಾರ

ಗಾಂಧಿನಗರ: 2022-23ರ ಶೈಕ್ಷಣಿಕ ವರ್ಷದಿಂದ ರಾಜ್ಯದಾದ್ಯಂತ 6 ರಿಂದ 12 ನೇ ತರಗತಿಗಳಿಗೆ ಭಗವದ್ಗೀತೆ ಶಾಲಾ ಪಠ್ಯಕ್ರಮದ ಭಾಗವಾಗಲಿದೆ ಎಂದು ಗುಜರಾತ್ ಸರ್ಕಾರ ಗುರುವಾರ ವಿಧಾನಸಭೆಯಲ್ಲಿ ಪ್ರಕಟಿಸಿದೆ. ಶಿಕ್ಷಣ ಸಚಿವ ಜಿತು ವಘಾನಿ ಬಜೆಟ್‌ ಮೇಲಿನ ಚರ್ಚೆಯ ಸಂದರ್ಭದಲ್ಲಿ ಶಾಸನ ಸಭೆಯಲ್ಲಿ ಈ ಘೋಷಣೆ ಮಾಡಿದರು. ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯಲ್ಲಿ ಪ್ರತಿಪಾದಿಸಲಾದ ಮೌಲ್ಯಗಳು ಮತ್ತು ತತ್ವಗಳನ್ನು … Continued

ಕಾಂಗ್ರೆಸ್‌ ಭಿನ್ನರ ಔತಣಕೂಟದ ನಂತರ ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿಯಾದ ಜಿ-23 ನಾಯಕ ಭೂಪಿಂದರ್ ಸಿಂಗ್ ಹೂಡಾ

ನವದೆಹಲಿ: ದೆಹಲಿಯಲ್ಲಿ ಪಕ್ಷದ ಜಿ-23 ಬಣದ ಔತಣಕೂಟ ನಡೆದ ಒಂದು ದಿನದ ನಂತರ ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರು ಇಂದು, ಗುರುವಾರ ಸುಮಾರು ಒಂದು ಗಂಟೆಗಳ ಕಾಲ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಪಕ್ಷದ ಇತ್ತೀಚಿನ ಚುನಾವಣಾ ಸೋಲು ಮತ್ತು ಮುಖಂಡರು ಮತ್ತು … Continued

ಲಂಚ ಕೇಳಿದರೆ ನನ್ನ ಮೊಬೈಲ್‌ ನಂಬರಿಗೆ ಆಡಿಯೋ-ವೀಡಿಯೊ ಮಾಡಿ ಕಳುಹಿಸಿ, ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಆರಂಭ-ಪಂಜಾಬ್ ಸಿಎಂ ಘೋಷಣೆ

ಅಮೃತಸರ್:‌ ಪಂಜಾಬ್‌ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಇಂದು, ಗುರುವಾರ (ಮಾ. 17) ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ‘ಭ್ರಷ್ಟಾಚಾರ ನಿಗ್ರಹ ಸಹಾಯವಾಣಿ ಸಂಖ್ಯೆ ನನ್ನ ವೈಯಕ್ತಿಕ ನಂಬರ್ ಆಗಿರುತ್ತದೆ… ಯಾರಾದರೂ ಲಂಚ ಕೇಳಿದರೆ ಆ ನಂಬರ್‌ಗೆ ಆಡಿಯೋ ಮತ್ತು ವೀಡಿಯೊ ಕಳುಹಿಸಿ’ ಎಂದು ಭಗವಂತ್‌ ಮಾನ್ ಟ್ವೀಟ್ ಮಾಡಿದ್ದಾರೆ. “ನಾನು ಯಾವುದೇ … Continued