ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ :ರಾಜ್ಯಗಳಿಗೆ ಶಾಲೆ ಆರಂಭಿಸುವ ಹೊಣೆ..! ಪೋಷಕರ ಒಪ್ಪಿಗೆ ಪಡೆದು ನಿರ್ಧರಿಸಿ ಎಂದ ಕೇಂದ್ರ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶಾಲೆಗಳ ಆರಂಭದ ಕುರಿತು ಗುರುವಾರ ಹೊಸದಾಗಿ ಮಾರ್ಗಸೂಚಿ ಪ್ರಕಟಿಸಿದೆ. ಶಾಲೆ ಆರಂಭಿಸುವ ನಿರ್ಧಾರವನ್ನು ಅದು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ. ಶಾಲೆಗಳಲ್ಲಿ ಭೌತಿಕ ತರಗತಿ ಆರಂಭಿಸುವ ಕುರಿತು ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ತೀರ್ಮಾನ ತೆಗೆದುಕೊಳ್ಳಬಹುದು. ಆಫ್‌ಲೈನ್‌ ತರಗತಿ ಕುರಿತು ಮಕ್ಕಳ … Continued

ಮದುವೆಯಾಗಿ ಚಿನ್ನಾಭರಣದೊಂದಿಗೆ ಪರಾರಿಯಾಗುವುದೇ ಈ ಯುವತಿಯ ಕಾಯಕ : 8 ಪುರುಷರಿಗೆ ಈವರೆಗೆ ಮೋಸ..!

ಭೋಪಾಲ್ : ಮದುವೆಯಾಗುವುದನ್ನೇ ಕಾಯಕವಾಗಿಸಿಕೊಂಡು ಎಂಟಕ್ಕೂ ಹೆಚ್ಚು ಪುರುಷರಿಗೆ ವಂಚಿಸಿ ಮದುವೆಯಾಗಿ ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಓಡಿಹೋಗಿದ್ದ 28ರ ಹರೆಯದ ಯುವತಿಯೊಬ್ಬಳು ಈಗ ಜೈಲು ಪಾಲಾಗಿದ್ದಾಳೆ…! ಊರ್ಮಿಳಾ ಅಹಿರ್ವಾರ್ ಅಲಿಯಾಸ್ ರೇಣು ರಜಪೂತ ಎಂಬವಳೇ ಮದುವೆಯಾಗಿ ಈ ರೀತಿ ಕನಿಷ್ಠ ಎಂಟು ಮಂದಿಯನ್ನು ವಂಚಿಸಿದ್ದಾಳೆ ಎಂದು ಶಂಕಿಸಲಾಗಿದೆ. ಬಂಧಿತ ಇತರ ಮೂವರು ಆರೋಪಿಗಳನ್ನು ಅರ್ಚನಾ … Continued

ಉತ್ತರ ಪ್ರದೇಶ ಚುನಾವಣೆ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ..!

ಹಾಪುರ(ಉತ್ತರ ಪ್ರದೇಶ): ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇದಲ್ಲಿ ಛಜರ್ಸಿ ಟೋಲ್ ಪ್ಲಾಜಾ ಬಳಿ ತನ್ನ ವಾಹನದ ಮೇಲೆ ಕನಿಷ್ಠ 3-4 ಸುತ್ತು ಗುಂಡುಗಳನ್ನು ಹಾರಿಸಲಾಗಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಗುರುವಾರ ಆರೋಪಿಸಿದ್ದಾರೆ. ಎಐಎಂಐಎಂ ಮುಖ್ಯಸ್ಥರು ಉತ್ತರಪ್ರದೇಶದ ಮೀರತ್‌ನ ಕಿಥೌರ್‌ನಲ್ಲಿ ಚುನಾವಣಾ ಸಂಬಂಧಿತ ಕಾರ್ಯಕ್ರಮದ ನಂತರ ದೆಹಲಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಮೀರತ್‌ನ … Continued

ಪ್ರಧಾನಿ ಮೋದಿ ಸೇನಾ ಸಮವಸ್ತ್ರ ಧರಿಸಿದ ಪ್ರಕರಣ: ಪ್ರಧಾನಿ ಕಚೇರಿಗೆ ನೋಟಿಸ್‌ ಜಾರಿ ಮಾಡಿದ ಉತ್ತರ ಪ್ರದೇಶ ಕೋರ್ಟ್‌

ನವದೆಹಲಿ: ಕಳೆದ ವರ್ಷ ಕಾಶ್ಮೀರಕ್ಕೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇನಾ ಸಮವಸ್ತ್ರವನ್ನು ಧರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಸಂಬಂಧಿಸಿದಂತೆ ಪ್ರಧಾನಿ ಕಚೇರಿಗೆ ಪ್ರಯಾಗ್‌ರಾಜ್‌ನ ಜಿಲ್ಲಾ ನ್ಯಾಯಾಲಯವು ನೋಟಿಸ್‌ ಜಾರಿಗೊಳಿಸಿದೆ. ಈ ಕುರಿತು ದೈನಿಕ್‌ ಭಾಸ್ಕರ್‌ ಪತ್ರಿಕೆ ವರದಿ ಮಾಡಿದ್ದು ವಕೀಲ ರಾಕೇಶ್‌ನಾಥ್‌ ಪಾಂಡೆ ಎನ್ನುವವರು ಸಿಆರ್‌ಪಿಸಿ ಸೆಕ್ಷನ್‌ 156(3)ರ ಅಡಿ ದಾಖಲಿಸಿರುವ … Continued

ಗೇಟ್‌ 2022 ಪರೀಕ್ಷೆ ಮುಂದೂಡುವ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸ್ನಾತಕೋತ್ತರ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸಲು ನಡೆಸಲಾಗುವ ಗೇಟ್‌ -2022 ಪರೀಕ್ಷೆ ಮುಂದೂಡಿಕೆಗೆ ಕೋರಿ ಸಲ್ಲಿಸಲಾಗಿದ್ದ ಮನವಿಗಳನ್ನು ಸುಪ್ರೀಂ ಕೋರ್ಟ್‌ ಗುರುವಾರ ವಜಾಗೊಳಿಸಿದೆ. ಇದು ಸರ್ಕಾರದ ನೀತಿನಿರೂಪಣೆಯ ಭಾಗವಾಗಿದ್ದು ಸರ್ಕಾರದ ಪ್ರಾಧಿಕಾರಿಗಳು ಈ ಬಗ್ಗೆ ನಿರ್ಧಾರ ಮಾಡಬೇಕು. ಇದರಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಮಾಡಿದರೆ ಗೊಂದಲಕ್ಕೆ ಕಾರಣವಾಗಲಿದೆ ಎಂದು ನ್ಯಾ. ಡಿ ವೈ ಚಂದ್ರಚೂಡ್‌, ನ್ಯಾ. … Continued

ಏನಿದು ಅ(ವ್ಯ)ವಸ್ಥೆ…ಕಾರಿನ ಹೆಡ್‌ಲೈಟ್‌ಗಳ ಬೆಳಕಿನಲ್ಲಿ 12ನೇ ತರಗತಿಯ ಪರೀಕ್ಷೆ ಬರೆದ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು..!

ಪಾಟ್ನಾ: ಕಾರಿನ ಹೆಡ್‌ಲೈಟ್‌ಗಳ ಬೆಳಕಿನಲ್ಲಿ ಪರೀಕ್ಷೆ ಬರೆದಿರುವ ವಿಚಿತ್ರ ಘಟನೆ ನಡೆದಿದೆ. ಮಂಗಳವಾರ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ 12 ನೇ ತರಗತಿ (ಮಧ್ಯಂತರ) ಪರೀಕ್ಷೆಯನ್ನು ಕಾರ್ ಹೆಡ್‌ಲೈಟ್‌ನಲ್ಲಿ ಬರೆದಿದ್ದಾರೆ. ಈ ಸಂಬಂಧ ಪೂರ್ವ ಚಂಪಾರಣ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿರ್ಷತ್ ಕಪಿಲ್ ಅಶೋಕ್ ಅವರು ಮಹಾರಾಜ್ … Continued

ಗಾಲ್ವಾನ್‌ನಲ್ಲಿ ಭಾರತ-ಚೀನಾ ಘರ್ಷಣೆ: ಚೀನಾದ ಹೆಚ್ಚಿನ ಸೈನಿಕರು ಸಾವು ಎಂದ ಆಸ್ಟ್ರೇಲಿಯಾ ಪತ್ರಿಕೆ ತನಿಖಾ ವರದಿ

ನವದೆಹಲಿ: ಆಸ್ಟ್ರೇಲಿಯಾದ ಪ್ರಮುಖ ಪ್ರತ್ರಿಕೆ ದಿ ಕ್ಲಾಕ್ಸನ್ 2020ರಲ್ಲಿ ಭಾರತ ಹಾಗೂ ಚೀನಾ ನಡುವೆ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯ ಕುರಿತಾಗಿ “ಗಲ್ವಾನ್ ಡಿಕೋಡೆಡ್:” ತನಿಖಾ ವರದಿ ಪ್ರಕಟಿಸಿದೆ. ತನಿಖಾ ವರದಿ ಪ್ರಕಾರ, ಈ ಘರ್ಷಣೆಯಲ್ಲಿ ಭಾರತಕ್ಕಿಂತ ಹೆಚ್ಚಾಗಿ ಚೀನಾ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಮುಖವಾಗಿ ಹೊಡೆದಾಟಕ್ಕಿಂತ ಹೆಚ್ಚಾಗಿ ನದಿಯನ್ನು ದಾಟುವಾಗ ಕನಿಷ್ಠ 38 ಸೈನಿಕರು … Continued

ಭಾರತದಲ್ಲಿ 1.72 ಲಕ್ಷ ಹೊಸ ಕೋವಿಡ್-19 ಪ್ರಕರಣಗಳು, 1,008 ಸಾವುಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,72,433 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಗುರುವಾರ ತಿಳಿಸಿವೆ. ಗುರುವಾರ ದಾಖಲಾದ ದೈನಂದಿನ ಸೋಂಕು ಬುಧವಾರ ದಾಖಲಾಗಿದ್ದಕ್ಕಿಂತ 6.8 ಶೇಕಡಾ ಹೆಚ್ಚಾಗಿದೆ. ಭಾರತದಲ್ಲಿ ಒಟ್ಟಾರೆ ಪ್ರಕರಣ ಈಗ 4,18,03,318ಕ್ಕೆ ಹೆಚ್ಚಿದೆ.ಏತನ್ಮಧ್ಯೆ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೋವಿಡ್ -19 ನಿಂದ … Continued

ಭಾರತದಲ್ಲಿ 42 ಭಯೋತ್ಪಾದಕ ಸಂಘಟನೆಗಳಿಗೆ ನಿಷೇಧ

ನವದೆಹಲಿ: ಕೇಂದ್ರ ಸರ್ಕಾರದ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ 1967ರ ಅನುಸಾರ ದೇಶದಲ್ಲಿ 42 ಭಯೋತ್ಪಾದಕ ಸಂಘಟನೆಗಳನ್ನು ಗುರುತಿಸಲಾಗಿದ್ದು, 31 ಮಂದಿಯನ್ನು ವೈಯಕ್ತಿಕವಾಗಿ ಭಯೋತ್ಪಾದಕರು ಎಂದು ಘೋಷಿಸಿರುವುದಾಗಿ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ರಾಜ್ಯ ಸಭೆಗೆ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಸದಸ್ಯರಾದ ಎ.ವಿಜಯಕುಮಾರ್ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರ ನೀಡಿರುವ ಅವರು, … Continued

ಪಂಜಾಬ್‌ ಚುನಾವಣೆ ವೇಳೆ ಸಿಧುಗೆ ತೊಂದರೆ: 1988ರ ರೋಡ್ ರೇಜ್ ಪ್ರಕರಣ, ಸುಪ್ರೀಂಕೋರ್ಟಿನಲ್ಲಿ ಇಂದು ಮರುಪರಿಶೀಲನಾ ಅರ್ಜಿ ವಿಚಾರಣೆ

ನವದೆಹಲಿ: 1988ರಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ರೋಡ್ ರೇಜ್  (ರಸ್ತೆಯಲ್ಲಿ ಕೋಪ) ಪ್ರಕರಣದಲ್ಲಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರಿಗೆ 1,000 ರೂಪಾಯಿ ದಂಡ ವಿಧಿಸಿ 2018ರ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ನಡೆಸಲಿದೆ. ಕ್ರಿಕೆಟಿಗ-ರಾಜಕಾರಣಿಯನ್ನು ನರಹತ್ಯೆ ಆರೋಪಗಳಿಂದ ಖುಲಾಸೆಗೊಳಿಸಲಾಯಿತು ಆದರೆ ಮೃತರಿಗೆ ಸ್ವಯಂಪ್ರೇರಣೆಯಿಂದ ನೋವನ್ನುಂಟು ಮಾಡಿದರು … Continued