ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್‌ಗೆ 12,100 ಕೋಟಿ ರೂ.ಗಳಿಗೆ ಎನ್‌ಐಎನ್‌ಎಲ್ ಮಾರಾಟಕ್ಕೆ ಸರ್ಕಾರದ ಅನುಮೋದನೆ

ನವದೆಹಲಿ: ನಷ್ಟದಲ್ಲಿರುವ ನೀಲಾಚಲ ಇಸ್ಪಾತ್ ನಿಗಮ್ ಲಿಮಿಟೆಡ್ (ಎನ್‌ಐಎನ್‌ಎಲ್) ಅನ್ನು ಟಾಟಾ ಸ್ಟೀಲ್ ಲಾಂಗ್ ಪ್ರಾಡಕ್ಟ್ಸ್ ಲಿಮಿಟೆಡ್‌ಗೆ 12,100 ಕೋಟಿ ರೂ.ಗಳಿಗೆ ಮಾರಾಟ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಸರ್ಕಾರ ಸೋಮವಾರ ತಿಳಿಸಿದೆ. ಎನ್‌ಐಎನ್‌ಎಲ್ (NINL) ನಾಲ್ಕು ಸಿಪಿಎಸ್‌ಇ (CPSE) ಗಳ ಜಂಟಿ ಉದ್ಯಮವಾಗಿದೆ, ಅವುಗಳೆಂದರೆ MMTC, NMDC, BHEL, MECON ಮತ್ತು ಎರಡು ಒಡಿಶಾ … Continued

ಆಂಧ್ರಪ್ರದೇಶದಲ್ಲಿ ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 62 ವರ್ಷಕ್ಕೆ ಏರಿಕೆಗೆ ಸುಗ್ರೀವಾಜ್ಞೆ

ಅಮರಾವತಿ: ಆಂಧ್ರಪ್ರದೇಶ ಸರ್ಕಾರವು ಸೋಮವಾರ, ಜನವರಿ 1, 2022 ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 62 ವರ್ಷಕ್ಕೆ ಏರಿಸುವ ಸುಗ್ರೀವಾಜ್ಞೆ ಹೊರಡಿಸಿದೆ. ಜೂನ್ 2014ರಲ್ಲಿ, ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಸರ್ಕಾರವು ಬದಲಾವಣೆ ಮಾಡಿತ್ತು ಹಾಗೂ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 58 ರಿಂದ 60ಕ್ಕೆ ಏರಿಸಿತ್ತು. ನಿವೃತ್ತಿ … Continued

ಪಂಚರಾಜ್ಯಗಳಲ್ಲಿ ಚುನಾವಣಾ ರೋಡ್​ ಶೋ, ಮೆರವಣಿಗೆಗೆ ಫೆ.11ರ ವರೆಗೂ ಅವಕಾಶ ಇಲ್ಲ; ಆದ್ರೆ ಕೊಂಚ ಸಡಿಲಿಕೆ ಮಾಡಿದ ಚುನಾವಣಾ ಆಯೋಗ

ನವದೆಹಲಿ: ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ರೋಡ್​ಶೋ, ರ್ಯಾಲಿಗಳು ಮತ್ತು ಪ್ರಚಾರ ಮೆರವಣಿಗೆಗಳನ್ನು ನಡೆಸಲು ಹೇರಿದ್ದ ನಿರ್ಬಂಧವನ್ನು ಚುನಾವಣಾ ಆಯೋಗ ಫೆ.11ರ ವರೆಗೆ ವಿಸ್ತರಿಸಿದೆ. ಇಂದು, ಸೋಮವಾರ ಬೆಳಗ್ಗೆ ಸಭೆ ನಡೆಸಿದ ಬಳಿಕ, ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಚುನಾವಣಾ ಆಯೋಗ, 2022ರ ಫೆ.11ರವರೆಗೂ ಯಾವುದೇ ರೀತಿಯ ರೋಡ್​ ಶೋ, ಪಾದಯಾತ್ರೆಗಳು, ಸೈಕಲ್​/ಬೈಕ್​/ ಇನ್ನಿತರ ವಾಹನಗಳ … Continued

ಚುನಾವಣೆ ರ್ಯಾಲಿಗಳ ಮೇಲಿನ ನಿರ್ಬಂಧ ತೆರವು ಸಾಧ್ಯತೆ

ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಭೌತಿಕ ರ್ಯಾಲಿಗಳ ಮೇಲಿನ ನಿರ್ಬಂಧ ತೆರವುಗೊಳಿಸುವ ಸಾಧ್ಯತೆಗಳಿವೆ. ಈ ಕುರಿತು ಪರಿಶೀಲನೆಗೆ ಚುನಾವಣಾ ಆಯೋಗ ಜ. 31ರಂದು ವರ್ಚುವಲ್ ಸಭೆ ನಡೆಸಲಿದೆ. ಚುನಾವಣೆ ನಡೆಯುವ ಉತ್ತರ ಪ್ರದೇಶ, ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ ರಾಜ್ಯಗಳಲ್ಲಿ ಜ.31ರ ವರೆಗೆ ಭೌತಿಕ ರ್ಯಾಲಿ, ರೋಡ್ ಶೋ ನಡೆಸಲು ಚುನಾವಣಾ ಆಯೋಗ ನಿರ್ಬಂಧ ವಿಧಿಸಿತ್ತು. … Continued

ಭಾರತದಲ್ಲಿ 2,09,918 ಹೊಸ ಕೊರೊನಾ ಪ್ರಕರಣಗಳು ದಾಖಲು, ನಿನ್ನೆಗಿಂತ 10% ಕಡಿಮೆ

ನವದೆಹಲಿ: ಭಾರತದಲ್ಲಿ ಇಂದು 2.09 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ, ನಿನ್ನೆಗಿಂತ 10% ಕಡಿಮೆಯಾಗಿದೆ. ಸಕಾರಾತ್ಮಕತೆಯ ದರವು 14.5% ರಿಂದ 15.7% ಕ್ಕೆ ಏರಿದೆ. ದೇಶದ ಸಕ್ರಿಯ ಪ್ರಕರಣ ಪ್ರಸ್ತುತ 18,31,268 ರಷ್ಟಿದೆ. ಇದು ಒಟ್ಟು ಸೋಂಕುಗಳ 4.43%ರಷ್ಟಾಗಿದೆ. 959 ಕೋವಿಡ್ ಸಂಬಂಧಿತ ಸಾವುಗಳೊಂದಿಗೆ ಸಾವಿನ ಸಂಖ್ಯೆ 4,95,050 ಕ್ಕೆ ಏರಿದೆ. ಕೇರಳವು ಇಂದಿನ … Continued

ಪಂಜಾಬ್ ಚುನಾವಣೆ 2022: ಪಂಜಾಬ್‌ ಸಿಎಂ ಚರಣಜಿತ್ ಸಿಂಗ್ ಚನ್ನಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ

ನವದೆಹಲಿ: ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ ಮತ್ತು ಬದೌರ್ ಕ್ಷೇತ್ರದಿಂದ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಕಣಕ್ಕಿಳಿಸಿದೆ. ಚನ್ನಿ ಅವರನ್ನು ಅವರ ಸಾಂಪ್ರದಾಯಿಕ ಚಮಕೌರ್ ಸಾಹಿಬ್ ಸ್ಥಾನದಿಂದ ಪಕ್ಷದ ಅಭ್ಯರ್ಥಿಯಾಗಿ ಈಗಾಗಲೇ ಹೆಸರಿಸಲಾಗಿದೆ ಎಂಬುದು ಗಮನಾರ್ಹ. ಎಂಟು ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ, ಕಾಂಗ್ರೆಸ್‌ … Continued

ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುನ್ನ ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭ

ನವದೆಹಲಿ: ಕೇಂದ್ರ ಬಜೆಟ್ ಅಧಿವೇಶನಸೋಮವಾರದಿಂದ ಪ್ರಾರಂಭವಾಗಲಿದೆ ಮತ್ತು ಸಂಪ್ರದಾಯದ ಪ್ರಕಾರ ಇದು ವರ್ಷದ ಮೊದಲ ಅಧಿವೇಶನವಾಗಿದ್ದು, ರಾಷ್ಟ್ರಪತಿಗಳ ಭಾಷಣದೊಂದಿಗೆ ಪ್ರಾರಂಭವಾಗುತ್ತದೆ. ಕೋವಿಡ್ -19 ಸಾಂಕ್ರಾಮಿಕ ಗಮನದಲ್ಲಿಟ್ಟುಕೊಂಡು, ಅಧಿವೇಶನದಲ್ಲಿ ಅನೇಕ ನಿರ್ಬಂಧಗಳು ಇರಲಿವೆ ಮತ್ತು ಮೊದಲ ಎರಡು ದಿನಗಳನ್ನು ಹೊರತುಪಡಿಸಿ, ಲೋಕಸಭೆ ಮತ್ತು ರಾಜ್ಯಸಭೆಯ ಎರಡೂ ಸದನಗಳನ್ನು ಎರಡು ಪಾಳಿಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ. ಉಭಯ ಸದನಗಳಲ್ಲಿ ಎರಡು … Continued

ಬಿಜೆಪಿಯಲ್ಲೇ ಇರುತ್ತೇನೆ, ಆದ್ರೆ ತಂದೆ ವಿರುದ್ಧ ಪ್ರಚಾರ ಮಾಡಲ್ಲ: ಸ್ವಾಮಿ ಪ್ರಸಾದ್ ಮೌರ್ಯ ಪುತ್ರಿ

ಲಕ್ನೋ : ಉತ್ತರ ಪ್ರದೇಶದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರ ಪುತ್ರಿ ಹಾಗೂ ಬಿಜೆಪಿ ಸಂಸದೆ ಸಂಘಮಿತ್ರ ಮೌರ್ಯ, ನಾನು ಬಿಜೆಪಿಯನ್ನು ತ್ಯಜಿಸುವುದಿಲ್ಲ ಆದರೆ ತನ್ನ ತಂದೆಯ ವಿರುದ್ಧ ಪ್ರಚಾರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಡೌನ್‌ನಿಂದ ಮೊದಲ ಬಾರಿಗೆ ಬಿಜೆಪಿಯಿಂದ ಸಂಸದರಾಗಿರುವ ಸಂಘಮಿತ್ರ ಮೌರ್ಯ ಅವರು ರಾಷ್ಟ್ರೀಯ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ನನ್ನ … Continued

ಪಕ್ಷದ ವಿರುದ್ಧ ತಿರುಗಿಬಿದ್ದ ಬಿಜೆಪಿ ಕಾರ್ಯಕರ್ತರು: ಮೋದಿ ಪ್ರತಿಕೃತಿ ದಹನ, ಹಲವೆಡೆ ಪ್ರತಿಭಟನೆ

ಇಂಫಾಲ: ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎನ್ ಬೀರೆನ್ ಸಿಂಗ್ ಅವರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಣಿಪುರದಲ್ಲಿ ಭಾನುವಾರ ನಡೆದಿದೆ. ಮುಂದಿನ ತಿಂಗಳು ನಡೆಯಲಿರುವ ಮಣಿಪುರ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆಯೇ ಅನೇಕ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಅವರ ಬೆಂಬಲಿಗರು ಬಿಜೆಪಿ ವಿರುದ್ಧ … Continued