ಇದು ಸಲಿಂಗಿಗಳ ಮದುವೆ..: ಮನೆಯಿಂದ ಓಡಿ ಹೋಗಿ ಮದುವೆಯಾದ ಇಬ್ಬರು ಹುಡುಗಿಯರು..!

ರತನ್‌ಗಢ್ (ಚುರು). ಈ ಸಣ್ಣ ಪಟ್ಟಣದ ಕುಟುಂಬದ ಹುಡುಗಿ, ಪ್ರಪಂಚದ ಸಂಪ್ರದಾಯಗಳನ್ನು ಮೀರಿ ಕುಟುಂಬ ಸದಸ್ಯರ ಒಪ್ಪಿಗೆಗೆ ವಿರುದ್ಧವಾಗಿ ಹರಿಯಾಣದ ಗೆಳತಿಯೊಂದಿಗೆ ಓಡಿಹೋಗಿ ಮದುವೆಯಾಗಿದ್ದಾಳೆ..! ಇಬ್ಬರೂ ಮೊದಲು ಸ್ನೇಹಿತರಾಗಿದ್ದರು ಮತ್ತು ನಂತರ ಅದು ಪ್ರೀತಿಗೆ ತಿರುಗಿ ಅದು ಮದುವೆಯಲ್ಲಿ ಮುಕ್ತಾಯವಾಗಿದೆ. ಇಬ್ಬರೂ ಸಂಬಂಧಿಕರು, ಒಂದು ವರ್ಷದ ಹಿಂದೆಯಷ್ಟೇ ಇಬ್ಬರೂ ಭೇಟಿಯಾಗಿದ್ದರು. ಚುರು ಹುಡುಗಿಯ ಕಣ್ಣು ಹರಿಯಾಣದ … Continued

ಅತಿದೀರ್ಘ ಕೊರೊನಾ ಚಿಕಿತ್ಸೆ… 8 ಕೋಟಿ ರೂ. ಖರ್ಚು…50 ಎಕರೆ ಜಮೀನು ಮಾರಾಟ.. ವಿದೇಶಿ ವೈದ್ಯರಿಂದ 254 ದಿನಗಳ ಕಾಲ ಚಿಕಿತ್ಸೆ.. ಆದ್ರೂ ಬದುಕ್ಲಿಲ್ಲ..

ಎಂಟು ತಿಂಗಳ ವರೆಗೆ ಕೊರೊನಾ ಹಾಗೂ ನಂತರದ ತೊಂದರೆಗೆ ಚಿಕಿತ್ಸೆಗೆ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆಗೆ ಸುಮಾರು 8 ಕೋಟಿ ರೂ.ವೆಚ್ಚ ಮಾಡಿದರೂ ಮಧ್ಯಪ್ರದೇಶದ ರೈತ ಮಂಗಳವಾರ ರಾತ್ರಿ ಕೊರೊನಾ ಸಂಬಂಧಿ ತೊಂದರೆಯಿಂದ ಕೊನೆಗೂ ಬದುಕುಳಿಯಲಿಲ್ಲ..! ಮೃತಪಟ್ಟಿದ್ದಾರೆ. ಏಪ್ರಿಲ್ 2021 ರಲ್ಲಿ ಮಧ್ಯಪ್ರದೇಶದ ರೇವಾ ರೈತ ಧರಂಜಯ್ ಸಿಂಗ್ (50) ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅವರ … Continued

ಬತ್ತದ ಉತ್ಸಾಹ.. 56ನೇ ಪ್ರಯತ್ನದಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾದ 77ರ ವೃದ್ಧ..! ಈಗ 12ನೇ ತರಗತಿ ಪರೀಕ್ಷೆಗೆ ದಾಖಲು..!!

ಜಲೋರ್: ನಿಮ್ಮಲ್ಲಿ ಉತ್ಸಾಹವಿದ್ದರೆ, ಏನು ಬೇಕಾದರೂ ಸಾಧ್ಯ ಮತ್ತು ಅದಕ್ಕೆ ಉಜ್ವಲ ಉದಾಹರಣೆಯೆಂದರೆ ರಾಜಸ್ಥಾನದ ವ್ಯಕ್ತಿ. ಕನಸುಗಳನ್ನು ನನಸಾಗಿಸಲು ತಡ ಎಂಬುದಿಲ್ಲ ಎಂದು ಸಾಬೀತುಪಡಿಸುವ ಮೂಲಕ, 77 ವರ್ಷದ ಜಲೋರ್‌ನ ನಿವೃತ್ತ ಸರ್ಕಾರಿ ನೌಕರ ಹುಕುಮ್‌ದಾಸ್ ವೈಷ್ಣವ್, ಹತ್ತನೇ ತರಗತಿ ಪರೀಕ್ಷೆಯನ್ನು ತಮ್ಮ 56ನೇ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. 55 ಸಲದ ಪ್ರಯತ್ನದಲ್ಲಿ ಅವರಿಗೆ ಉತ್ತೀರ್ಣವಾಗಲು ಸಾಧ್ಯವಾಗಿರಲಿಲ್ಲ. … Continued

ಉತ್ತರ ಪ್ರದೇಶ: ಮತ್ತೊಬ್ಬ ಸಚಿವ ಧರಂ ಸಿಂಗ್ ಸೈನಿ ರಾಜೀನಾಮೆ, ಮೂರು ದಿನದಲ್ಲಿ ಮೂವರು ಸಚಿವರ ಕಳೆದುಕೊಂಡ ಬಿಜೆಪಿ..!

ಲಕ್ನೋ: ಉತ್ತರ ಪ್ರದೇಶದ ಸಚಿವ ಧರಂ ಸಿಂಗ್ ಸೈನಿ ಗುರುವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದು, ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಮೂರ್ನಾಲ್ಕು ದಿನಗಳಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ಒಂಬತ್ತನೇ ಶಾಸಕ ಹಾಗೂ ಮೂರನೇ ಸಚಿವರಾಗಿದ್ದಾರೆ. ಹಿಂದಿನ ದಿನ, ಧರಂ ಸಿಂಗ್ ಸೈನಿ ಅವರಿಗೆ ರಾಜ್ಯ ಸರ್ಕಾರ ಮಂಜೂರು ಮಾಡಿದ ಭದ್ರತೆ ಮತ್ತು ತಮಗೆ ನೀಡಿದ್ದ … Continued

ಸೈನಾ ನೆಹ್ವಾಲ್ ಟ್ವೀಟ್‌ಗೆ ಅಸಭ್ಯತೆಯ ಕಾಮೆಂಟ್ : ನಟ ಸಿದ್ಧಾರ್ಥ ಮೇಲೆ ಪ್ರಕರಣ ದಾಖಲು

ಹೈದರಾಬಾದ್‌: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರಿಗೆ ಮಾಡಿದ ಅಸಭ್ಯತೆಯ ಕಾಮೆಂಟ್ ನಟ ಸಿದ್ಧಾರ್ಥ್ ಅವರನ್ನು ಕಾಡುತ್ತಲೇ ಇದೆ. ಇದೀಗ, ಬಿಜೆಪಿ ನಾಯಕರಾದ ನೀಲಂ ಭಾರ್ಗವ ರಾಮ್ ಮತ್ತು ಪ್ರೇರಣಾ ಟಿ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಹೈದರಾಬಾದ್ ಪೊಲೀಸರು ನಟ ಸಿದ್ಧಾರ್ಥ್ ವಿರುದ್ಧ ಹೊಸ ಎಫ್‌ಐಆರ್ ದಾಖಲಿಸಿದ್ದಾರೆ. ನಟನ ವಿರುದ್ಧ ಐಟಿ ಕಾಯ್ದೆಯ … Continued

ಭಾರತದಲ್ಲಿ ಎರಡೂವರೆ ಲಕ್ಷದ ಸಮೀಪ ಹೊಸ ಕೋವಿಡ್ ಪ್ರಕರಣಗಳು ದಾಖಲು, ನಿನ್ನೆಗಿಂತ 27.1% ಹೆಚ್ಚು..!

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ (ಗುರುವಾರ) 2,47,417 ಹೊಸ ಕೋವಿಡ್ -19 ಸೋಂಕುಗಳನ್ನು ವರದಿ ಮಾಡಿದೆ, ಇದು ನಿನ್ನೆಗಿಂತ 27.1%ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹಂಚಿಕೊಂಡ ಅಂಕಿಅಂಶಗಳು ತಿಳಿಸಿವೆ. ಇದು ದೇಶದ ಒಟ್ಟು ಸೋಂಕಿನ ಪ್ರಕರಣವನ್ನು 3,63,17,927ಕ್ಕೆ ಒಯ್ದಿದೆ. ಇದರಲ್ಲಿ 5,488 ಪ್ರಕರಣಗಳು ಓಮಿಕ್ರಾನ್ ರೂಪಾಂತರವಾಗಿದೆ. ಕಳೆದ 24 ಗಂಟೆಗಳಲ್ಲಿ 481 … Continued

ಕರ್ನಾಟಕ ಸೇರಿ 8 ರಾಜ್ಯಗಳ‌ ಕೋವಿಡ್ ಸೋಂಕು ಹೆಚ್ಚಳ: ಕೇಂದ್ರ ಕಳವಳ

ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ 8 ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದಕ್ಕೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಕರ್ನಾಟಕ, ಮಹಾರಾಷ್ಟ್ರ, ಪಶ್ವಿಮ ಬಂಗಾಳ, ದೆಹಲಿ, ತಮಿಳುನಾಡು, ಉತ್ತರ ಪ್ರದೇಶ, ಕೇರಳ ಮತ್ತು ಗುಜರಾತಿನಲ್ಲಿ ಸೋಂಕು ಹೆಚ್ಚಳ ಆತಂಕಕಾರಿ ಬೆಳವಣಿಗೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ‌ … Continued

7 ವರ್ಷಗಳ ಹಿಂದಿನ ಪ್ರಕರಣದಲ್ಲಿ ಉತ್ತರ ಪ್ರದೇಶ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಬಂಧನ ವಾರಂಟ್ ಜಾರಿ

ನವದೆಹಲಿ: ಉತ್ತರ ಪ್ರದೇಶದಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ತೊರೆದ ನಂತರ, ಏಳು ವರ್ಷಗಳ ಹಿಂದಿನ ಪ್ರಕರಣದಲ್ಲಿ ಅವರ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ. ಸುಲ್ತಾನ್‌ಪುರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಂಧನದ ವಾರಂಟ್‌ ಹೊರಡಿಸಿದ್ದು, ಈ ಬಂಧನ ವಾರಂಟ್ 2014 ರ ಪ್ರಕರಣಕ್ಕೆ ಸಂಬಂಧಿಸಿದೆ, ಆಗ ಅವರು ಬಹುಜನ … Continued

ಕೋವಿಡ್ -19:ಓಮಿಕ್ರಾನ್- ಡೆಲ್ಟಾ ವಿರುದ್ಧ ಕೋವ್ಯಾಕ್ಸಿನ್ ಬೂಸ್ಟರ್ ಡೋಸ್‌ ಪರಿಣಾಮಕಾರಿಯಾಗಿ ಕೆಲಸ-ಭಾರತ್ ಬಯೋಟೆಕ್

ನವದೆಹಲಿ: ಕೋವ್ಯಾಕ್ಸಿನ್‌ನ ಬೂಸ್ಟರ್ ಡೋಸ್ ಲೈವ್ ವೈರಸ್ಸಿನ ತಟಸ್ಥ ಅಸ್ಸೇಯನ್ನು ಬಳಸಿಕೊಂಡು ಓಮಿಕ್ರಾನ್ (ಬಿ.1.529) ಮತ್ತು ಡೆಲ್ಟಾ (ಬಿ.1.617.2) ಎರಡರ ವಿರುದ್ಧವೂ ದೃಢವಾದ ತಟಸ್ಥಗೊಳಿಸುವ ಪ್ರತಿಕಾಯ ಪ್ರತಿಕ್ರಿಯೆಗಳನ್ನು ಸೃಷ್ಟಿಸಿದೆ ಎಂದು ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್ ಹೇಳಿದೆ. ಪರೀಕ್ಷಾ ಫಲಿತಾಂಶಗಳು 100%ರಷ್ಟು ಸೀರಮ್ ಮಾದರಿಗಳು ಡೆಲ್ಟಾ ರೂಪಾಂತರದ ತಟಸ್ಥೀಕರಣವನ್ನು ತೋರಿಸಿದೆ ಮತ್ತು 90% ಕ್ಕಿಂತ … Continued

ತೆಲಂಗಾಣ ನೇಕಾರನ ಕೈಚಳಕ.. ಬೆಂಕಿಕಡ್ಡಿ ಪೆಟ್ಟಿಗೆಯೊಳಗೆ ತುಂಬುವ ಸೀರೆ ತಯಾರಾಯ್ತು..!

ಹೈದರಾಬಾದ್: ತೆಲಂಗಾಣದ ಕೈಮಗ್ಗ ನೇಕಾರರೊಬ್ಬರು ಮೂಲಕಬೆಂಕಿಕಡ್ಡಿ ಪೆಟ್ಟಿಗೆಯೊಳಗೆ ತುಂಬಬಹುದಾದ ಹೊಂದುವ ಸೀರೆ ನೇಯ್ದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮತ್ತು ಪತ್ನಿ ಮಿಚೆಲ್ ಒಬಾಮ ಅವರಿಗೆ 2015ರಲ್ಲಿ ಬೆಂಕಿಕಡ್ಡಿ ಪೆಟ್ಟಿಗೆಯಲ್ಲಿ ಹಾಕಬಹುದಾದ ಶಾಲು ಮತ್ತು ಸೀರೆಯನ್ನು ಉಡುಗೊರೆಯಾಗಿ ನೀಡಿ ಖ್ಯಾತಿ ಗಳಿಸಿದ್ದ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಸಿರಿಸಿಲ್ಲಾದ ಪ್ರಮುಖ ನೇಕಾರ … Continued