ಬಾಂಗ್ಲಾದೇಶದ ಕಂಟೈನರ್ ಡಿಪೋದಲ್ಲಿ ಭಾರೀ ಅಗ್ನಿ ದರಂತ: ಸಾವಿನ ಸಂಖ್ಯೆ 43ಕ್ಕೆ ಏರಿಕೆ, 450 ಕ್ಕೂ ಹೆಚ್ಚು ಜನರಿಗೆ ಗಾಯ

ಢಾಕಾ: ಬಾಂಗ್ಲಾದೇಶದ ದೇಶದ ಪ್ರಮುಖ ಸಮುದ್ರ ಬಂದರು ಬಾಂಗ್ಲಾದೇಶದ ಚಟ್ಟಗ್ರಾಮದ  ಸೀತಾಕುಂಡದಲ್ಲಿರುವ ಖಾಸಗಿ ಇನ್‌ಲ್ಯಾಂಡ್ ಕಂಟೈನರ್ ಡಿಪೋ (ಐಸಿಡಿ)ದಲ್ಲಿ ಸ್ಫೋಟದ ಘಟನೆಯಲ್ಲಿ ಸಾವಿನ ಸಂಖ್ಯೆ ಈಗ 43ಕ್ಕೆ ಏರಿದೆ. ಅಲ್ಲದೆ 450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶನಿವಾರ ರಾತ್ರಿ ಸೀತಾಕುಂದ ಉಪಜಿಲ್‌ನ ಕಡಮ್ರಸುಲ್ ಪ್ರದೇಶದ ಬಿಎಂ ಕಂಟೈನರ್ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಔಟ್‌ಪೋಸ್ಟ್ ಸಬ್ … Continued

ತನ್ನ ಬಾಹ್ಯಾಕಾಶ ನಿಲ್ದಾಣದ ಜೋಡಣೆ ಪೂರ್ಣಗೊಳಿಸಲು ಮೂರು ಗಗನಯಾತ್ರಿಗಳ ಉಡಾವಣೆ ಮಾಡಿದ ಚೀನಾ

ತನ್ನ ಶಾಶ್ವತ ಕಕ್ಷೆಯಲ್ಲಿರುವ ಬಾಹ್ಯಾಕಾಶ ನಿಲ್ದಾಣದಲ್ಲಿ ಅಸೆಂಬ್ಲಿ ಕೆಲಸವನ್ನು ಪೂರ್ಣಗೊಳಿಸಲು ಚೀನಾ ಭಾನುವಾರ ಹೊಸ ಮೂರು ವ್ಯಕ್ತಿಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಶೆಂಝೌ 14 ಸಿಬ್ಬಂದಿ ಟಿಯಾಂಗಾಂಗ್ ನಿಲ್ದಾಣದಲ್ಲಿ ಆರು ತಿಂಗಳುಗಳನ್ನು ಕಳೆಯುತ್ತಾರೆ, ಈ ಸಮಯದಲ್ಲಿ ಅವರು ಏಪ್ರಿಲ್ 2021 ರಲ್ಲಿ ಪ್ರಾರಂಭಿಸಲಾದ ಮುಖ್ಯ ಟಿಯಾನ್ಹೆ ವಾಸಸ್ಥಳವನ್ನು ಸೇರಲು ಎರಡು ಪ್ರಯೋಗಾಲಯ ಮಾಡ್ಯೂಲ್‌ಗಳನ್ನು ಸೇರಿಸುವುದನ್ನು ಮೇಲ್ವಿಚಾರಣೆ ಮಾಡುತ್ತಾರೆ. … Continued

ಬಾಂಗ್ಲಾದಲ್ಲಿ ಹೊತ್ತಿ ಉರಿದ ಕಂಟೈನರ್ ಡಿಪೋ, 16 ಮಂದಿ ಸಾವು, 450 ಮಂದಿಗೆ ಗಂಭೀರ ಗಾಯ

ಢಾಕಾ: ಆಗ್ನೇಯ ಬಾಂಗ್ಲಾದೇಶದ ಕಂಟೈನರ್ ಡಿಪೋದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 16 ಮಂದಿ ಸಾವಿಗೀಡಾಗಿದ್ದು, 450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳಲ್ಲಿ 20 ಮಂದಿ ಸ್ಥಿತಿ ಗಂಭೀರವಾಗಿದ್ದು, ಶೇ.60-90ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ದೇಶದ … Continued

25 ಲಕ್ಷ ಹೃದಯಗಳನ್ನು ಗೆದ್ದ ಮನುಷ್ಯರಂತೆ ಕಾಡಿನಲ್ಲಿ ಕುಣಿದು ಕುಪ್ಪಳಿಸುವ ಕರಡಿ ಮರಿ ವೀಡಿಯೊ | ವೀಕ್ಷಿಸಿ

ವಾರಾಂತ್ಯದಲ್ಲಿ ವೈರಲ್‌ ಆದ ವೀಡಿಯೊದಲ್ಲಿ ಇದು ಕರಡಿ ಮರಿ ಹುಚ್ಚನಂತೆ ನೃತ್ಯ ಮಾಡುವುದನ್ನು ನೋಡಬಹುದು. ರೋಮಾಂಚನಗೊಂಡ ಕರಡಿ ಮರಿಯೊಂದು ತನ್ನ ಹಿಂಗಾಲುಗಳ ಮೇಲೆ ನಿಂತು ಮನುಷ್ಯರಂತೆ ಕುಣಿಯುವುದನ್ನು ವೀಡಿಯೊದಲ್ಲಿ ನೋಡಬಹುದು. ನಂತರ ಸುತ್ತಲೂ ಹಾರುತ್ತದೆ. 13 ಸೆಕೆಂಡ್‌ಗಳ ಕ್ಲಿಪ್‌ನಲ್ಲಿ ಅವರು ಯಾರೂ ನೋಡದ ಹಾಗೆ ಕರಡಿ ಮರಿ ಡ್ಯಾನ್ಸ್ ಮಾಡುತ್ತದೆ. ತನ್ನ ಎರಡು ಕಾಲುಗಳಿಂದ ಮೇಲಿನಿಂದ … Continued

ಮಾನನಷ್ಟ ಮೊಕದ್ದಮೆ ಗೆದ್ದ ಹಾಲಿವುಡ್‌ ನಟ ಜಾನಿ ಡೆಪ್ , 116 ಕೋಟಿ ರೂ. ಪರಿಹಾರ ನೀಡಲು ಮಾಜಿ ಪತ್ನಿ, ನಟಿ ಅಂಬರ್ ಹರ್ಡ್‌ಗೆ ಆದೇಶಿಸಿದ ಕೋರ್ಟ್‌

ಫೇರ್‌ಫ್ಯಾಕ್ಸ್ (ಅಮೆರಿಕ): ಕಳೆದ ಆರು ವಾರಗಳಲ್ಲಿ ನೂರು ಗಂಟೆಗೂ ಹೆಚ್ಚು ಕಾಲ ನಡೆದ ಸಾಕ್ಷ್ಯದ ವಿಚಾರಣೆ ನಂತರ ಹಾಲಿವುಡ್ ಖ್ಯಾತ ನಟ ಜ್ಯೂರಿ ಜಾನಿ ಡೆಪ್ ತಮ್ಮ ಪತ್ನಿ ಅಂಬರ್ ಹರ್ಡ್ ವಿರುದ್ಧದ ಮಾನಹಾನಿ ಮೊಕದ್ದಮೆ ಕೇಸ್ ಗೆದ್ದಿದ್ದಾರೆ. ಇದೆವೇಳೆ ಜಾನಿ ಡೆಪ್ ಮತ್ತು ಅವರ ಮಾಜಿ ಪತ್ನಿ ಅಂಬರ್ ಹರ್ಡ್ ಇಬ್ಬರೂ ಮಾನನಷ್ಟಕ್ಕೆ ಹೊಣೆಗಾರರಾಗಿದ್ದಾರೆ … Continued

ಆಸ್ಟ್ರೇಲಿಯಾದಲ್ಲಿ ವಿಶ್ವದ ಅತಿದೊಡ್ಡ ಸಸ್ಯ ಪತ್ತೆ ಮಾಡಿದ ಸಂಶೋಧಕರು: ಇದು 4,500 ವರ್ಷಗಳಷ್ಟು ಹಳೆಯ ಸಸ್ಯ-ಉದ್ದ 180 ಕಿಮೀ | ವೀಕ್ಷಿಸಿ

ವಿಜ್ಞಾನಿಗಳು ಇತ್ತೀಚೆಗೆ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ನೀರಿನ ಅಡಿಯಲ್ಲಿ ಬೆಳೆಯುತ್ತಿರುವ ವಿಶ್ವದ ಅತಿದೊಡ್ಡ ಸಸ್ಯವನ್ನು ಕಂಡುಹಿಡಿದಿದ್ದಾರೆ. ಪ್ರೊಸೀಡಿಂಗ್ಸ್ ಆಫ್ ದಿ ರಾಯಲ್ ಸೊಸೈಟಿ ಬಿ ಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಶಾರ್ಕ್ ಕೊಲ್ಲಿಯಲ್ಲಿ ಪತ್ತೆಯಾದ ಸಸ್ಯವು 200 ಚದರ ಕಿಲೋಮೀಟರ್ (77 ಚದರ ಮೈಲಿಗಳು) ವರೆಗೆ ವ್ಯಾಪಿಸಿದೆ ಎಂದು ನಂಬಲಾಗಿದೆ. ಈ ಮೇಲ್ಮೈ ವಿಸ್ತೀರ್ಣವು ಗ್ಲ್ಯಾಸ್ಗೋ ನಗರಕ್ಕಿಂತ … Continued

ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು, ಆಸ್ಪತ್ರೆ ಆವರಣದಲ್ಲಿ ಐವರು ಸಾವು

ಓಕ್ಲೊಹೋಮಾ: ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ, ಬಂದೂಕುಧಾರಿಯೊಬ್ಬ ಆಸ್ಪತ್ರೆ ಆವರಣದಲ್ಲಿಯೇ ಗುಂಡಿನ ಸುರಿಮಳೆಗೈದಿದ್ದು, ನಾಲ್ವರು ನಾಗರಿಕರು ಸಾವಿಗೀಡಾಗಿದ್ದಾರೆ. ದಾಳಿಕೋರನೂ ಸಾವಿಗೀಡಾಗಿದ್ದಾನೆ. ಓಕ್ಲೊಹೋಮಾದ ಟಲ್ಸಾದಲ್ಲಿರುವ ಸೇಂಟ್ ಫ್ರಾನ್ಸಿಸ್ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬಂದೂಕು ಹಿಡಿದುನಿಂತಿರುವುದಾಗಿ ಕರೆ ಬಂದಿತು. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿಯೇ ಬಂದೂಕುದಾರಿ ಜನರ ಮೇಲೆ ಗುಂಡಿನ ದಾಳಿ ಮಾಡಿದ್ದಾನೆ. … Continued

ನೇಪಾಳ ತಾರಾ ಏರ್ ವಿಮಾನ ಪತನ: ಎಲ್ಲಾ ಪ್ರಯಾಣಿಕರ ಸಾವು

ಕಠ್ಮಂಡು (ನೇಪಾಳ): ನೇಪಾಳ ತಾರಾ ಏರ್ ವಿಮಾನ ಪತನದಿಂದಾಗಿ ನಾಲ್ವರು ಭಾರತೀಯರು ಸೇರಿದಂತೆ ಎಲ್ಲಾ ಪ್ರಯಾಣಿಕರು ಸಾವಿಗೀಡಾಗಿದ್ದಾರೆ ಎಂದು ದೃಢಪಡಿಸಲಾಗಿದೆ. ಭಾನುವಾರ ಪತನಗೊಂಡ ತಾರಾ ವಿಮಾನದಲ್ಲಿದ್ದ ನಾಲ್ವರು ಭಾರತೀಯರು ಸೇರಿದಂತೆ ಎಲ್ಲ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಸೋಮವಾರ ಬಿಡುಗಡೆ ಮಾಡಿದ ಪ್ರಯಾಣಿಕರ ಪಟ್ಟಿಯಲ್ಲಿ ಏರ್‌ಲೈನ್ಸ್ ತಿಳಿಸಿದೆ. ವಿಮಾನದಲ್ಲಿ 13 ನೇಪಾಳಿಗಳು, ನಾಲ್ವರು ಭಾರತೀಯರು ಮತ್ತು ಇಬ್ಬರು … Continued

ನಾಲ್ವರು ಭಾರತೀಯರು ಸೇರಿ 22 ಜನರಿದ್ದ ನೇಪಾಳ ವಿಮಾನ ಅಪಘಾತ ಸ್ಥಳದಲ್ಲಿ 14 ಮೃತದೇಹಗಳು ಪತ್ತೆ

ಕಠ್ಮಂಡು (ನೇಪಾಳ): ನಾಲ್ವರು ಭಾರತೀಯರು ಸೇರಿದಂತೆ 22 ಮಂದಿ ಪ್ರಯಾಣಿಸುತ್ತಿದ್ದ ವಿಮಾನವು ನೇಪಾಳದ ಪರ್ವತ ಪ್ರದೇಶದಲ್ಲಿ ಪತನಗೊಂಡ ವಿಮಾನದ ಅವಶೇಷಗಳಿಂದ 14 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ದೇಶದ ನಾಗರಿಕ ವಿಮಾನಯಾನ ಪ್ರಾಧಿಕಾರವನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ. “ಇಲ್ಲಿಯವರೆಗೆ ಹದಿನಾಲ್ಕು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ, ಉಳಿದವರಿಗಾಗಿ ಶೋಧ ಮುಂದುವರೆದಿದೆ. ಹವಾಮಾನವು ತುಂಬಾ ಕೆಟ್ಟದಾಗಿದೆ. ಆದರೆ ನಾವು ಅಪಘಾತದ … Continued

22 ಮಂದಿಯೊಂದಿಗೆ ನಾಪತ್ತೆಯಾಗಿದ್ದ ವಿಮಾನ ನೇಪಾಳದ ಮುಸ್ತಾಂಗ್ ಜಿಲ್ಲೆಯ ನದಿಯ ಸಮೀಪ ಪತನ

ಕಠ್ಮಂಡು (ನೇಪಾಳ) : ಇಂದು, ಭಾನುವಾರ ಬೆಳಿಗ್ಗೆ ಮಾಪತ್ತೆಯಾಗಿದ್ದ ನೇಪಾಳದ ತಾರಾ ಏರ್‌ 9-ಎನ್​ಎಇಟಿ ವಿಮಾನವು ಮುಸ್ತಾಂಗ್​ ಜಿಲ್ಲೆಯ ಕೋವಾಂಗ್ ಗ್ರಾಮದ ಲಾಮ್ಚೆ ನದಿಯ ಸಮೀಪಪತನಗೊಂಡಿದೆ ಎಂಬ ವರದಿಗಳು ತಿಳಿಸಿವೆ. ಸ್ಥಳೀಯರ ಮಾಹಿತಿಯ ಆಧಾರದ ಮೇರೆಗೆ ನೇಪಾಳದ ಸೇನೆ ವಿಮಾನ ಪತನವಾದ ಸ್ಥಳದತ್ತ ದೌಡಾಯಿಸಿದೆ ಎಂದು ಸೇನೆಯ ವಕ್ತಾರ ನಾರಾಯಣ ಸಿಲ್ವಾಲ್​ ತಿಳಿಸಿದ್ದಾರೆ. ಪೋಖರಾದಿಂದ ಟೇಕ್​ … Continued