ತಾಲಿಬಾನಿಗೆ ಮೊದಲ ಶಾಕ್‌..:9/11 ದಿನದ ಅಧಿಕಾರ ಪದಗ್ರಹಣ ಸಮಾರಂಭಕ್ಕೆ ಬರಲು ಆಹ್ವಾನಿತರ ನಕಾರ; ಕಾರ್ಯಕ್ರಮ ದಿಢೀರ್‌ ಮುಂದಕ್ಕೆ..!

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚಿಸಲು ಪ್ರಯತ್ನಿಸುತ್ತಿರುವ ತಾಲಿಬಾನ್ ಸೆ.11ರ ಶನಿವಾರ ನಡೆಯಬೇಕಿದ್ದ ಅಧಿಕಾರ ಸ್ವೀಕಾರ ಸಮಾರಂಭವನ್ನು ದಿಢೀರ್‌ ಮುಂದೂಡಿದೆ. ಇದೇ ವೇಳೆ ಹಮೀದ್ ಕರ್ಜಾಯ್ ವಿಮಾನ ನಿಲ್ದಾಣದ ಹೆಸರು ಬದಲಿಸಿದ ತಾಲಿಬಾನ್ ಆಡಳಿತ ಅದನ್ನು ಕಾಬೂಲ್ ಇಂಟರ್‌ನ್ಯಾಷನಲ್ ಏರ್ಪೋರ್ಟ್ ಎಂದು ಘೋಷಿಸಿದೆ. ಸೆ.೧೧ರಂದು ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಈ ಹಿಂದೆ ತಾಲಿಬಾನ್‌ … Continued

ಅಫ್ಘಾನಿಸ್ತಾನದಲ್ಲಿ ಹೊಸ ತಾಲಿಬಾನ್ ಸರ್ಕಾರದ ಪದಗ್ರಹಣ ಸಮಾರಂಭದಲ್ಲಿ ರಷ್ಯಾ ಪಾಲ್ಗೊಳ್ಳಲ್ಲ :ಕ್ರೆಮ್ಲಿನ್

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಹೊಸ ತಾಲಿಬಾನ್ ಸರ್ಕಾರದ ಪದಗ್ರಹಣ ಸಮಾರಂಭದಲ್ಲಿ ರಷ್ಯಾ ಯಾವುದೇ ರೀತಿಯಲ್ಲಿ ಭಾಗವಹಿಸುವುದಿಲ್ಲ ಎಂದು ಕ್ರೆಮ್ಲಿನ್ ಶುಕ್ರವಾರ ಹೇಳಿದೆ. ಆರ್‌ಐಎ ಸುದ್ದಿಸಂಸ್ಥೆಯ ಪ್ರಕಾರ, ರಷ್ಯಾದ ಮೇಲ್ಮನೆಯ ಸ್ಪೀಕರ್ ಈ ವಾರದ ಆರಂಭದಲ್ಲಿ ರಾಯಭಾರಿ ಮಟ್ಟದ ಅಧಿಕಾರಿಗಳಿಂದ ರಷ್ಯಾವನ್ನು ಪ್ರತಿನಿಧಿಸಲಿದ್ದಾರೆ ಎಂದು ಹೇಳಿದರು.ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆಯ ಸಮಾರಂಭದಲ್ಲಿ ಭಾಗವಹಿಸಲು ಪಾಕಿಸ್ತಾನ, ಚೀನಾ ಮತ್ತು ರಷ್ಯಾ … Continued

ವಿಶ್ವದ ಮೊದಲ ಸ್ಮಾರ್ಟ್​ ಗ್ಲಾಸ್ ಬಿಡುಗಡೆ ಮಾಡಿದ ಫೇಸ್​ಬುಕ್: ಇನ್ಮುಂದೆ ಎಲ್ಲವೂ ಕನ್ನಡಕದಲ್ಲೇ: ಏನಿದರ ವಿಶೇಷ..?.

ಬಹುನಿರೀಕ್ಷಿತ ಫೇಸ್​ಬುಕ್​ (Facebook) ಸ್ಮಾರ್ಟ್​ ಗ್ಲಾಸ್ ಬಿಡುಗಡೆಯಾಗಿದೆ. ರೇಬನ್ ಗ್ಲಾಸ್ ಕಂಪೆನಿಯ ಸಹಯೋಗದೊಂದಿಗೆ ಫೇಸ್​ಬುಕ್ ಹೊರತಂದಿರುವ ಈ ಸ್ಮಾರ್ಟ್​ ಗ್ಲಾಸ್​ಗೆ ರೇಬನ್ ಸ್ಟೊರೀಸ್ (rayban stories) ಎಂದು ಹೆಸರಿಡಲಾಗಿದೆ. ಈ ಸ್ಮಾರ್ಟ್‌ ಗ್ಲಾಸ್​ ವೈಶಿಷ್ಟ್ಯಪೂರ್ಣವಾಗಿದ್ದು, ​ ಇದರಲ್ಲಿ ಹಲವಾರು ಆಯ್ಕೆಗಳನ್ನು ನೀಡಲಾಗಿದೆ. ಈ ಸ್ಮಾರ್ಟ್​ ಗ್ಲಾಸ್ ಧರಿಸಿ ಬಳಕೆದಾರರು ಫೋಟೋಗಳು ಮತ್ತು ವಿಡಿಯೊಗಳನ್ನು ಸೆರೆಹಿಡಿಯಬಹುದು. ಸಂಗೀತ … Continued

ಪಂಜ್‌ಶೀರ್‌ನಲ್ಲಿ ಅಫ್ಘಾನಿಸ್ತಾನ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಸಹೋದರನಿಗೆ ಹಿಂಸೆನೀಡಿ ಸಾಯಿಸಿದ ತಾಲಿಬಾನ್‌:ವರದಿ

ಕಾಬೂಲ್ : ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಅವರ ಸಹೋದರ ರೋಹುಲ್ಲಾ ಸಲೇಹ್ ಅವರನ್ನು ತಾಲಿಬಾನ್ ಉಗ್ರರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಆಫ್ಘಾನಿಸ್ತಾನದ ಪಂಜ್‌ಶೀರ್‌ ಕಣಿವೆಯಲ್ಲಿ ತೀವ್ರ ಘರ್ಷಣೆಗಳು ನಡೆಯುತ್ತಿರುವ ನಡುವೆಯೇ ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಅವರ ಹಿರಿಯ ಸಹೋದರ ರೋಹುಲ್ಲಾ ಸಲೇಹ್ ಅವರನ್ನು ತಾಲಿಬಾನ್ ಉಗ್ರ ಸಂಘಟನೆ … Continued

ಮಹಿಳೆಯರು ಸಚಿವರಾಗಲು ಸಾಧ್ಯವಿಲ್ಲ, ಅವರು ಜನ್ಮ ನೀಡಬೇಕು :ತಾಲಿಬಾನ್ ವಕ್ತಾರ

ತಾಲಿಬಾನ್ ಅಫ್ಘಾನಿಸ್ತಾನದ ನಿಯಂತ್ರಣವನ್ನು ವಹಿಸಿಕೊಂಡ ನಂತರ, ಅನೇಕ ಮಹಿಳೆಯರು ಮಹಿಳೆಯರ ಸುರಕ್ಷತೆ ಬಗ್ಗೆ ಕಾಳಜಿ ವಹಿಸಲು ಮುಂದಾಗಿದ್ದಾರೆ. ಆದರೆ ತಾಲಿಬಾನ್‌ ತಮ್ಮ ಸರ್ಕಾರ ಪುರುಷ ಸಂಪುಟ ರಚನೆಯನ್ನು ಘೋಷಿಸಿದೆ. ತಾಲಿಬಾನ್ ಮಹಿಳೆಯರನ್ನುಒಳಗೊಳ್ಳದ ಸರ್ಕಾರಕ್ಕೆ ಸಂಬಂಧಿಸಿದಂತೆ ಟೀಕೆಗಳನ್ನು ತಕ್ಷಣವೇ ಎದುರಿಸಿತು, ಮತ್ತು ಇತ್ತೀಚೆಗೆ ವಕ್ತಾರರು ಈ ಟೀಕೆಗಳಿಗೆ ಉತ್ತರಿಸಲು ಪ್ರಯತ್ನಿಸಿದರು. ಟಿವಿ ಸಂದರ್ಶನವೊಂದರಲ್ಲಿ, ತಾಲಿಬಾನ್ ವಕ್ತಾರ ಸಯ್ಯದ್ … Continued

ಕ್ರಿಕೆಟ್:‌ ಆರು ಎಸೆತಕ್ಕೆ 6 ಸಿಕ್ಸರ್‌ ಹೊಡೆದು ದಾಖಲೆ ಬರೆದ ಭಾರತೀಯ ಮೂಲದ ಅಮೆರಿಕನ್‌ ಜಸ್ಕರನ್ ಮಲ್ಹೋತ್ರಾ..!

ಭಾರತ ಮೂಲದ ಜಸ್​​ಕರಣ್ ಮಲ್ಹೋತ್ರಾ (Jaskaran Malhotra) ಹೊಸ ಇತಿಹಾಸ ನಿರ್ಮಿಸಿದ್ಧಾರೆ. ನಿನ್ನೆ ನಡೆದ ಪಪುವಾ ನ್ಯೂ ಗಿನಿಯಾ ಮತ್ತು ಅಮೆರಿಕ (USA) ನಡುವಿನ ಏಕದಿನ ಪಂದ್ಯದಲ್ಲಿ ಅಮೆರಿಕದ ಜಸ್​ಕರಣ್ ಮಲ್ಹೋತ್ರಾ ಒಂದೇ ಓವರ್​ನಲ್ಲಿ 6 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ಸರಿಗಟ್ಟಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದು ಓವರ್​ನಲ್ಲಿ ಆರು ಸಿಕ್ಸ್ ಭಾರಿಸಿದ ವಿಶ್ವದ ಎರಡನೇ … Continued

ಚರ್ಚ್‌ಗೆ ಭೇಟಿ ನೀಡಿದ ಗಣಪತಿ..:ಸ್ಪೇನ್ ನಲ್ಲಿ ನಡೆದ ಅಪರೂಪದ ವಿದ್ಯಮಾನ..! ವಿಡಿಯೋ ವೀಕ್ಷಿಸಿ

ಮ್ಯಾಡ್ರಿಡ್‌: ಭಾರತದಾದ್ಯಂತ ಗಣೇಶ ಹಬ್ಬದ ಸಂಭ್ರಮ. ವಿಘ್ನ ವಿನಾಶಕನ ಪೂಜಾ ಕೈಂಕರ್ಯಗಳು ಭಕ್ತಿ-ಭಾವದಿಂದ ನಡೆಯುತ್ತಿದೆ. ಗಣೇಶ ಹಬ್ಬದಂದೇ ಇಲ್ಲೊಂದು ಭ್ರಾತೃತ್ವದ ಸಂದೇಶ ಸಾರುವ ಗಣೇಶನಿಗೆ ಸಂಬಂಧಿಸಿದ ವಿಡಿಯೋ ಹೊರಬಿದ್ದಿದೆ. ಇಲ್ಲಿ ಗಣೇಶ ಚರ್ಚಿಗೆ ಹೋಗಿದ್ದಾನೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಣಪತಿ ಚರ್ಚಿಗೆ ಹೋಗುವುದೆಂದರೇನು ಎಂದು ಹುಬ್ಬೇರಿಸಬೇಡಿ. ಇದು ನಡೆದದ್ದು ಸ್ಪೇನ್‌ ದೇಶದಲ್ಲಿ. ಧಾರ್ಮಿಕ … Continued

ಬಿಡೆನ್‌ ಅಮೆರಿಕ ಅಧ್ಯಕ್ಷರಾದ 7 ತಿಂಗಳ ನಂತರ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಜಿನ್‌ಪಿಂಗ್‌-ಬಿಡೆನ್‌ ಮಾತುಕತೆ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಶುಕ್ರವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜೊತೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಶ್ವೇತಭವನ ಜೋ ಬಿಡೆನ್‌ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಏಳು ತಿಂಗಳ ಬಳಿಕ ನಡೆದ ಮೊಲದ ದೂರವಾಣಿ ಮಾತುಕತೆ ಇದಾಗಿದೆ. ಇನ್ನು ಈ ನಡುವೆ ಚೀನಾದ ಮಾಧ್ಯಮಗಳು ಈ … Continued

ಕಾಬೂಲ್ ಪ್ರತಿಭಟನೆ ವರದಿ ಮಾಡಿದ್ದಕ್ಕೆ ಅಫ್ಘಾನ್ ಪತ್ರಕರ್ತರ ಮೇಲೆ ಕ್ರೌರ್ಯ ಮೆರೆದ ತಾಲಿಬಾನ್

ನವದೆಹಲಿ: ಕಾಬೂಲ್‌ನ ಬೀದಿಗಳಲ್ಲಿ ಮಂಗಳವಾರ ಪ್ರತಿಭಟನೆಗಳು ನಡೆದವು, ಮಹಿಳೆಯರ ದೊಡ್ಡ ಸಮೂಹ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿತು. ತಾಲಿಬಾನ್ ಗಾಳಿಯಲ್ಲಿ ಗುಂಡು ಹಾರಿಸಿತು ಮತ್ತು ಈ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಹಲವಾರು ಪತ್ರಕರ್ತರನ್ನು ಬಂಧಿಸಿತು. ದಿನಗಳ ನಂತರ, ಕಾಬೂಲ್ ಪ್ರತಿಭಟನೆಯ ಬಗ್ಗೆ ವರದಿ ಮಾಡುತ್ತಿದ್ದ ಇಬ್ಬರು ಅಫ್ಘಾನ್ ಪತ್ರಕರ್ತರು, ತಾಲಿಬಾನ್ ಥಳಿಸಿದ ಪರಿಣಾಮ ತೀವ್ರವಾಗಿ ಗಾಯಗೊಂಡರು … Continued

ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕ್ರೀಡೆ ನಿಷೇಧ: ಆಟವಾಡುವಾಗ ದೇಹ ಪ್ರದರ್ಶನವಾಗುತ್ತದೆ ಎಂದ ತಾಲಿಬಾನ್‌..!

ಕಾಬೂಲ್: ಅಫ್ಘಾನಿಸ್ತಾನದ ಹೆಸರನ್ನು ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನ ಎಂದು ಬದಲಾಯಿಸಿ ಮಧ್ಯಂತರ ಸರ್ಕಾರ ರಚಿಸಿದ ತಾಲಿಬಾನ್ ಉಗ್ರರು ಈಗ ಪೂರ್ಣ ಪ್ರಮಾಣದಲ್ಲಿ ಶರಿಯಾ ಕಾನೂನು ಜಾರಿಗೊಳಿಸುವ ಘೋಷಣೆ ಮಾಡಿದ್ದು, ಮಹಿಳೆಯರಿಗೆ ಕ್ರೀಡೆಯನ್ನು ನಿಷೇಧಿಸಿದೆ. ಈ ಸಂಬಂಧ ತಾಲಿಬಾನ್ ಸುಪ್ರೀಂ ಲೀಡರ್ ಮೌಲ್ವಿ ಹೈಬತುಲ್ಲಾ ಅಖುಂಡ್‍ಜಾದಾ ಹೆಸರಿನಲ್ಲಿ ಈಗ ತಾಲಿಬಾನ್‌ ಆಡಳಿತ ವಿಧಾನವನ್ನು ಪ್ರಕಟಿಸಿದೆ. ಯಾರೂ … Continued