ಮರಿಯಾನೆ ತಂಟೆಗೆ ಬಂದ ಮೊಸಳೆಯನ್ನು ಕೊಂದೇ ಹಾಕಿದ ತಾಯಿ ಆನೆ.. ಕೋಪ ನೋಡಿದ್ರೆ ಬೆರಗಾಗ್ತೀರಾ..! ದೃಶ್ಯ ವಿಡಿಯೊದಲ್ಲಿ ಸೆರೆ

ಕೆಲವೊಂದು ಪ್ರಾಣಿಗಳು ಶಕ್ತಿಶಾಲಿಯಾಗಿದ್ದರೂ ಬೇರೆ ಪ್ರಾಣಿಗಳ ಮೇಲೆ ದಾಳಿ ಮಾಡುವುದಿಲ್ಲ. ತಮ್ಮಷ್ಟಕ್ಕೆ ತಾವು ಇರುತ್ತವೆ. ಅದರೆ ಕೆಣಕಿದರೆ ಅಥವಾ ಅದರ ಮರಿಗಳ ಸುದ್ದಿಗೆ ಬಂದರೆ ದಾಳಿ ಮಾಡುತ್ತವೆ.. ಇಂಥ ಪ್ರಾಣಿಗಳಲ್ಲಿ ಆನೆ ಪ್ರಮುಖವಾದದ್ದು. ಹಿಂಡುಗಳಲ್ಲೇ ವಾಸಿಸುವ ಆನೆಗಳು ಸಾಮಾನ್ಯವಾಗಿ ಯಾವ ಪ್ರಾಣಿಗಳ ತಂಡೆಗೂ ಹೋಗುವುದಿಲ್ಲ,. ಅವುಗಳಿಗೆ ಸಿಟ್ಟು ಬಂದರೆ ಉಳಿದ ಪ್ರಾಣಿಗಳಿಗೆ ದೂರ ಹೋಗುವಂತೆ ಕೂಗಿ … Continued

ಫೇಸ್ಬುಕ್‌, ಟ್ವಿಟ್ಟರ್‌ಗೆ ಡೊನಾಲ್ಡ್ ಟ್ರಂಪ್ ಸಡ್ಡು..? : ಸ್ವಂತ ಸಾಮಾಜಿಕ ಜಾಲತಾಣ ಟ್ರುತ್ ಸೋಶಿಯಲ್ ಆರಂಭಿಸಲಿರುವ ಅಮೆರಿಕ ಮಾಜಿ ಅಧ್ಯಕ್ಷ ..!

ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್‌ ಸೋಶಿಯಲ್ (TRUTH Social) ಎನ್ನುವ ನೂತನ ಸಾಮಾಜಿಕ ಜಾಲತಾಣ ಆರಂಭಿಸಲಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಹೊಸ ಸಾಮಾಜಿಕ ಜಾಲತಾಣ ನವೆಂಬರ್‌ನಲ್ಲಿ ಇದು ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ಪ್ರಬಲ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟ್ಟರ್ ತನ್ನನ್ನು ಬ್ಯಾನ್ ಮಾಡಿದ ಬಳಿಕ ಡೊನಾಲ್ಡ್ ಟ್ರಂಪ್ ಈ … Continued

ಫೇಸ್​ಬುಕ್ ಹೆಸರಿನಲ್ಲಿ ಬದಲಾವಣೆ..ಹೊಸ ಹೆಸರಿನೊಂದಿಗೆ ಮರುಬ್ರ್ಯಾಂಡ್ ಆಗಲಿದೆಯಂತೆ

ನವದೆಹಲಿ : ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್‌ ಈಗ ತನ್ನ ಹೆಸರು ಬದಲಾಯಿಸಲು ಮುಂದಾಗಿದೆ. ಫೇಸ್‌ಬುಕ್ ಇಂಕ್ ಮುಂದಿನ ವಾರ ಕಂಪನಿಯನ್ನ ಹೊಸ ಹೆಸರಿನೊಂದಿಗೆ ಬ್ರಾಂಡ್ ಮಾಡಲು ಯೋಜಿಸುತ್ತಿದೆ ಎಂದು ದಿ ವರ್ಜ್ ವರದಿ ಮಾಡಿದೆ. ಫೇಸ್‌ಬುಕ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಝುಕರ್‌ಬರ್ಗ್ ಅಕ್ಟೋಬರ್ 28ರಂದು ಕಂಪನಿಯ ವಾರ್ಷಿಕ ಕನೆಕ್ಟ್ ಕಾನ್ಫರೆನ್ಸ್‌ನಲ್ಲಿ ಹೆಸರು ಬದಲಾವಣೆಯ … Continued

ಇದೇ ಮೊದಲ ಬಾರಿಗೆ ಮಾನವನ ದೇಹಕ್ಕೆ ಹಂದಿಯ ಕಿಡ್ನಿ ಕಸಿ ಮಾಡುವಲ್ಲಿ ಅಮೆರಿಕದ ಸರ್ಜನ್​ಗಳು ಯಶಸ್ವಿ..!

ವಾಷಿಂಗ್ಟನ್: ಇದೇ ಮೊದಲ ಬಾರಿಗೆ ಹಂದಿಯ ಮೂತ್ರಪಿಂಡವನ್ನು (pig’s kidney) ಮನುಷ್ಯನ ದೇಹಕ್ಕೆ ಅಳವಡಿಸುವಲ್ಲಿಅಮೆರಿಕದ ಸರ್ಜನ್​ಗಳು ಯಶಸ್ವಿಯಾಗಿದ್ದಾರೆ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಹಂದಿಯ ಕಿಡ್ನಿಯನ್ನು ಅಳವಡಿಸಿರುವ ರೋಗಿಯ ದೇಹದಲ್ಲಿ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ. ಹಂದಿ ಮೂತ್ರಪಿಂಡವನ್ನು ಸ್ವೀಕರಿಸುವವರ ಪ್ರತಿರಕ್ಷಣಾ ವ್ಯವಸ್ಥೆಯಿಂದ ತಕ್ಷಣದ ಅಡ್ಡಪರಿಣಾಮವಾಗದಂತೆ ಮಾನವನಿಗೆ ಕಸಿ ಮಾಡಲಾಗಿದೆ, ಇದು ಸಂಭಾವ್ಯವಾಗಿ ಪ್ರಮುಖವಾದ ಮುನ್ನಡೆಯಾಗಿದ್ದು, … Continued

ಆತ್ಮಾಹುತಿ ಬಾಂಬರ್‌ಗಳ ಕುಟುಂಬಕ್ಕೆ ನಿವೇಶನದ ಜೊತೆ ನಗದು ಬಹುಮಾನ ಘೋಷಿಸಿದ ತಾಲಿಬಾನ್‌ ಸರ್ಕಾರ..!

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬರ್‌ಗಳಿಗೆ ಉತ್ತೇಜನ ನೀಡುವ ಹೊಸ ಭರವಸೆಯನ್ನು ತಾಲಿಬಾನ್ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ. ಅಮೆರಿಕ ಮತ್ತು ಅಫ್ಘಾನಿಸ್ತಾನದ ಯೋಧರ ಮೇಲೆ ದಾಳಿ ನಡೆಸಿದ ಆತ್ಮಾಹುತಿ ಬಾಂಬರ್ ಗಳ ಕುಟುಂಬಕ್ಕೆ ಭೂಮಿ ಮತ್ತು ನಗದು ಬಹುಮಾನ ನೀಡುವುದಾಗಿ ತಾಲಿಬಾನ್ ಭರವಸೆ ನೀಡಿದೆ. ಅಲ್ಲದೇ ಆತ್ಮಾಹುತಿ ಬಾಂಬರ್‌ಗಳನ್ನು ತಾಲಿಬಾನ್ ಸರ್ಕಾರ ಹುತಾತ್ಮರು ಎಂದು ಬಣ್ಣಿಸಿದೆ. ತಾಲಿಬಾನ್‌ನ … Continued

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂಸಾಚಾರ:ಹಿಂದೂಗಳ 66 ಮನೆ ಧ್ವಂಸ, 20 ಮನೆಗೆ ಬೆಂಕಿ

ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಹಿಂಸಾಚಾರ ಮುಂದುವರಿದಿದ್ದು, ಹಿಂದೂಗಳ ಮನೆಗಳನ್ನು ಧ್ವಂಸ ಮಾಡಲಾಗುತ್ತಿದೆ. ಹಿಂದೂಗಳಿಗೆ ಸೇರಿದ 66 ಮನೆಗಳನ್ನು ಧ್ವಂಸ ಮಾಡಲಾಗಿದ್ದು, ಕನಿಷ್ಠ 20 ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ವಾರವಷ್ಟೇ ಗುಂಪೊಂದು ದುರ್ಗಾ ಪೂಜೆ ಪೆಂಡಾಲ್‌ಗಳ ಮೇಲೆ ದಾಳಿ ನಡೆಸಿತ್ತು. ಅಲ್ಲದೇ ದೇವಸ್ಥಾನವನ್ನೂ ಧ್ವಂಸ ಮಾಡಿತ್ತು. ಇದನ್ನು ಖಂಡಿಸಿ … Continued

ಒಂದಲ್ಲ, ಎರಡಲ್ಲ, ಬರೋಬ್ಬರಿ 7 ಮಕ್ಕಳಿಗೆ ಜನ್ಮಕೊಟ್ಟ ಮಹಾತಾಯಿ..!

ಅಬೋಟಾಬಾದ್‌: ಪಾಕಿಸ್ತಾನದಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಏಳು ಮಕ್ಕಳಿಗೆ ಮಹಿಳೆಯೊಬ್ಬಳು ಜನ್ಮ ನೀಡಿದ್ದಾಳೆ. ಪಾಕಿಸ್ತಾನದ ಅಬೋಟಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಏಳು ಶಿಶುಗಳಿಗೆ ಜನ್ಮ ನೀಡಿದ್ದಾರೆ ಎಂದು ಅರಿ (ARY) ನ್ಯೂಸ್ ವರದಿ ಮಾಡಿದೆ. ಇಲ್ಲಿನ ಖೈಬರ್ ಫಖ್ತಂಖ್ವಾ ಅಬೋಟಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಏಕಕಾಲದಲ್ಲಿ 7 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ವೈದ್ಯರು 5 ಮಕ್ಕಳು … Continued

ಮಗಳು ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ತನ್ನ ಇಬ್ಬರು ಹೆಣ್ಣುಮಕ್ಕಳು, ಮೊಮ್ಮಕ್ಕಳು ಸೇರಿ 7 ಜನರನ್ನು ಜೀವಂತವಾಗಿ ಸುಟ್ಟು ಹಾಕಿದ ವ್ಯಕ್ತಿ..!

ಲಾಹೋರ್‌: ಮಗಳು ತನ್ನ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದಾಳೆ ಎಂಬ ಕಾರಣಕ್ಕೆ ಸ್ವತಃ ತಂದೆಯೇ ತನ್ನ ಹೆಣ್ಣುಮಕ್ಕಳಿದ್ದ ಮನೆಗೆ ಬೆಂಕಿ ಹಚ್ಚಿದ ಪರಿಣಾಮ 7 ಮಂದಿ ಸಜೀವ ದಹನವಾದ ಘಟನೆ ಆಘಾತಕಾರಿ ಘಟನೆ ಪಾಕಿಸ್ತಾನದ ಮುಜಾಫರ್​​ಗರ್​ ಜಿಲ್ಲೆಯ ಪೀರ್​ ಜಹನೈನ್​​ ಪಟ್ಟಣದಲ್ಲಿ ವರದಿಯಾಗಿದೆ. ಈ ಸಂಬಂಧ ಆರೋಪಿ ಮಂಜೂರ್​ ಹುಸೇನ್​ ವಿರುದ್ಧ ಪೊಲೀಸರು ಲುಕ್​ಔಟ್​ ನೋಟಿಸ್​ ಜಾರಿ … Continued

ಟಿ 20 ವಿಶ್ವಕಪ್ :ಸತತ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್: ಹೊಸ ದಾಖಲೆ ಬರೆದ ಐರ್ಲೆಂಡ್ ಬೌಲರ್..!

ಅಬುಧಾಬಿ: ಐಸಿಸಿ ಟಿ 20 ವಿಶ್ವಕಪ್ ಕೂಟದ ಎರಡನೇ ದಿನದಾಟದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಐರ್ಲೆಂಡ್ ಬೌಲರ್ ಕರ್ಟಿಸ್ ಕ್ಯಾಂಫರ್ ಸತತ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಕಿತ್ತು ಈ ಹೊಸದಾಖಲೆ ಬರೆದಿದ್ದಾರೆ. ಶೇಕ್ ಝಯೀದ್ ಮೈದಾನದಲ್ಲಿ ನೆದರ್ಲಾಂಡ್ ವಿರುದ್ಧದ ಪಂದ್ಯದಲ್ಲಿ ಕ್ಯಾಂಫರ್ ಈ ದಾಖಲೆ ಮಾಡಿದ್ದಾರೆ.ಹೀಗೆ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿದ … Continued

ಬಾಂಗ್ಲಾದೇಶ: ಮತ್ತೊಂದು ಹಿಂದೂ ದೇವಾಲಯ ಧ್ವಂಸ, ಅಂಗಡಿಗಳ ಲೂಟಿ

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದು ಸಮುದಾಯದ ದುರ್ಗಾ ಪೂಜಾ ಕಾರ್ಯಕ್ರಮದಲ್ಲಿ ಧರ್ಮನಿಂದನೆ ಮಾಡಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡಿದ ನಂತರ ಭುಗಿಲೆದ್ದಿರುವ ಕೋಮು ಹಿಂಸಾಚಾರ ಮುಂದುವರಿದಿದ್ದು ಮತ್ತೊಂದು ಹಿಂದು ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ. ಈ ಮಧ್ಯೆ, ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ದೇಶದಾದ್ಯಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹಿಂದು ಸಂಘಟನೆಯ ಮುಖಂಡರು ಪ್ರಕಟಿಸಿದ್ದಾರೆ. ಶನಿವಾರ ನಡೆದ … Continued