ನಾವು ಶಾಖ, ಸ್ಪರ್ಶಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ತೋರಿಸಿದಕ್ಕೆ ವೈದ್ಯಕೀಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಇಬ್ಬರು ಅಮೆರಿಕ ವಿಜ್ಞಾನಿಗಳು

ಸ್ಟಾಕ್ಹೋಮ್: ಇಬ್ಬರು ವಿಜ್ಞಾನಿಗಳು ಮಾನವ ದೇಹವು ತಾಪಮಾನ ಮತ್ತು ಸ್ಪರ್ಶವನ್ನು ಹೇಗೆ ಗ್ರಹಿಸುತ್ತದೆ, ಇದು ನೋವು ಅಥವಾ ಹೃದಯ ಕಾಯಿಲೆಗೆ ಚಿಕಿತ್ಸೆ ನೀಡುವ ಹೊಸ ವಿಧಾನಗಳಿಗೆ ಕಾರಣವಾಗಬಹುದು ಎಂದು ಕಂಡುಹಿಡಿದಿದ್ದಕ್ಕೆ ಸೋಮವಾರ ವೈದ್ಯಕೀಯದಲ್ಲಿ ಈ ವರ್ಷದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಮೆರಿಕನ್ನರಾದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್ ಅವರು ಶಾಖ ಮತ್ತು ಒತ್ತಡಕ್ಕೆ ಪ್ರತಿಕ್ರಿಯಿಸುವ … Continued

ಜಲಾಂತರ್ಗಾಮಿಯಿಂದ ಶಬ್ದಕ್ಕಿಂತ 9 ಪಟ್ಟು ವೇಗದ ಹೈಪರ್​ಸಾನಿಕ್ ಕ್ಷಿಪಣಿ ಯಶಸ್ವಿಯಾಗಿ ಉಡಾವಣೆ ಮಾಡಿದ ರಷ್ಯಾ

ಮಾಸ್ಕೊ: ಶಬ್ದದ ವೇಗಕ್ಕಿಂತಲೂ ಹಲವು ಪಟ್ಟು ವೇಗದಲ್ಲಿ ಸಂಚರಿಸುವ ಸಾಮರ್ಥ್ಯವಿರುವ ಅತ್ಯಾಧುನಿಕ ಹೈಪರ್​ಸಾನಿಕ್ ಕ್ಷಿಪಣಿಯೊಂದನ್ನು ರಷ್ಯಾ ನೌಕಾಪಡೆಅಣುಶಕ್ತಿ ಚಾಲಿತ ಜಲಾಂತರ್ಗಾಮಿಯಿಂದ (nuclear submarine) ಸೋಮವಾರ ಪರೀಕ್ಷಾರ್ಥ ಮಾಡಿದ ಉಡಾವಣೆ ಯಶಸ್ವಿಯಾಗಿದೆ. ಪರೀಕ್ಷೆಯು ಯಶಸ್ವಿಯಾಗಿದ್ದು, ನಿಗದಿಪಡಿಸಿದ್ದ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ರಷ್ಯಾದ ರಕ್ಷಣಾ ಇಲಾಖೆ ತಿಳಿಸಿದೆ. ಬರೆಂಟ್ಸ್​ ಸಾಗರದಲ್ಲಿದ್ದ ಅಣಕು ಗುರಿಯನ್ನು ಸೆವೆರೊಡ್ವಿನ್​ಸ್ಕ್​ ಜಲಾಂತರ್ಗಾಮಿಯಿಂದ ಹಾರಿಬಿಟ್ಟ … Continued

ಪಂಡೋರಾ ಪೇಪರ್‌ ಲೀಕ್: ಕಡಲಾಚೆಯ ಮಾಹಿತಿಯ ಅತಿದೊಡ್ಡ ಸೋರಿಕೆ ಶ್ರೀಮಂತ-ಗಣ್ಯ ವ್ಯಕ್ತಿಗಳ ಆರ್ಥಿಕ ರಹಸ್ಯಗಳು ಬಹಿರಂಗ..! ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ಅನಿಲ್‌ ಅಂಬಾನಿ ಐವರು ಭಾರತೀಯರ ಹೆಸರು ..!

ನವದೆಹಲಿ: 91 ದೇಶದ 35 ಮಂದಿ ಪ್ರಭಾವಿ ವಿಶ್ವ ನಾಯಕರು, 330 ರಾಜಕಾರಣಿಗಳು ಮತ್ತು ಸಾರ್ವಜನಿಕ ಅಧಿಕಾರಿಗಳ ರಹಸ್ಯ ಸಂಪತ್ತಿನ ಮಾಹಿತಿಯನ್ನೊಳಗೊಂಡ ಲಕ್ಷಾಂತರ ದಾಖಲೆಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿವೆ. 117 ದೇಶಗಳ 600 ಪತ್ರಕರ್ತದ ಸಹಯೋಗದಲ್ಲಿ ನಡೆದ ಈ ಕಾರ್ಯಚರಣೆಗೆ ಪ್ಯಾಂಡೋರಾ ಪೇಪರ್ಸ್ ಎಂದು ಹೆಸರಿಡಲಾಗಿದೆ. ಪ್ರಭಾವಿ ವ್ಯಕ್ತಿಗಳು ವಿದೇಶದಲ್ಲಿ ನಡೆಸಿರುವ ಹೂಡಿಕೆ ಮಾಹಿತಿಯನ್ನು ಈ ದಾಖಲೆಗಳು … Continued

ಶಾಹೀನ್‌ ಚಂಡ ಮಾರುತ: ಒಮನ್‌ನಲ್ಲಿ ವಿಮಾನ ಹಾರಾಟ ಬಂದ್‌, ಯುಎಇನಲ್ಲಿ ಹೈ ಅಲರ್ಟ್‌ ಘೋಷಣೆ

ಯುಎಇ : ಶಾಹೀನ್‌ ಚಂಡಮಾರುತದ ಕಾರಣದಿಂದ ಯುಎಇನಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಒಮನ್‌ನಲ್ಲಿ ಒಳಬರುವ ಹಾಗೂ ಹೊರ ಹೋಗುವ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಶಾಹೀನ್ ಚಂಡಮಾರುತವು ಭಾನುವಾರ ಓಮನ್ ರಾಜಧಾನಿ ಮಸ್ಕತ್ ಅನ್ನು 116 ಕಿಲೋಮೀಟರ್ (72 ಮೈಲಿಗಳು) ವೇಗದಲ್ಲಿ ತಲುಪುತ್ತಿದೆ. ಇದು ವರ್ಗ 1 ರ ಉಷ್ಣವಲಯದ ಚಂಡಮಾರುತವಾಗಿ ಬಲಗೊಳ್ಳುವ ನಿರೀಕ್ಷೆಯಿದೆ … Continued

ಕಾಬೂಲ್‌ ಬಾಂಬ್‌ ಸ್ಫೋಟ: ಮೃತರ ಸಂಖ್ಯೆ 12ಕ್ಕೆ ಏರಿಕೆ:32 ಜನರಿಗೆ ಗಾಯ

ಕಾಬೂಲ್(ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ರಾಜಧಾನಿಯಲ್ಲಿ ಭಾನುವಾರ ನಡೆದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಏರಿದೆ. ಮತ್ತು 32 ಜನರು ಗಾಯಗೊಂಡಿದ್ದಾರೆ. ತಾಲಿಬಾನ್ ವಕ್ತಾರರ ಪ್ರಕಾರ, ಸ್ಫೋಟವು ಕಾಬೂಲ್‌ನ ಮಸೀದಿಯ ಹೊರಗೆ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಅಫ್ಘಾನ್ ಆಂತರಿಕ ಸಚಿವಾಲಯದ ವಕ್ತಾರ ಖಾರಿ ಸಯೀದ್ ಖೋಸ್ಟಿ ಹೇಳಿದ್ದಾರೆ. ಮಾಹಿತಿ ಮತ್ತು ಸಂಸ್ಕೃತಿಯ ಉಪ … Continued

ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ: ಇಬ್ಬರು ಸಾವು, ಹಲವರಿಗೆ ಗಾಯ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿ ಭಾನುವಾರ ಬಾಂಬ್ ಸ್ಫೋಟಿಸಿದ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಕಾಬೂಲಿನ ಈದ್ಗಾ ಮಸೀದಿಯಲ್ಲಿ ಸೇರಿದ್ದವರನ್ನು ಈ ಬಾಂಬ್ ಸ್ಫೋಟದ ಮೂಲಕ ಗುರಿಯಾಗಿಸಲಾಗಿತ್ತು. ಬಾಂಬ್ ಸ್ಫೋಟ ಸಂಭವಿಸಿದಾಗ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿತ್ತು ಎಂದು ತಾಲಿಬಾನ್ ವಕ್ತಾರ ಝಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಇಬ್ಬರು ನಾಗರಿಕರು ಮೃತಪಟ್ಟಿದ್ದು, ಮೂವರು … Continued

ರೋಗಿಯ ಹೊಟ್ಟೆಯಿಂದ 1 ಕೆಜಿಗಿಂತ ಹೆಚ್ಚು ಕಬ್ಬಿಣದ ತುಂಡು-ಉಗುರು ಹೊರತೆಗೆದ ವೈದ್ಯರು..!

ಹೊಟ್ಟೆ ನೋವಿನಿಂದ ಬಳಲುತ್ತಿರುವ ರೋಗಿಯ ಹೊಟ್ಟೆಯಲ್ಲಿ 1 ಕೆಜಿಗಿಂತಲೂ ಹೆಚ್ಚಿನ ಉಗುರು ಮತ್ತು ಕಬ್ಬಿಣದ ತುಂಡುಗಳು ಇರುವುದು ಪತ್ತಯಾಗಿದೆ. ಇದು ಲಿಥುವೇನಿಯಾದ ಕ್ಲೈಪೆಡಾ ನಗರದಲ್ಲಿ ವರದಿಯಾಗಿದೆ. ವ್ಯಕ್ತಿಯನ್ನು ಹೊಟ್ಟೆ ನೋವಿನಿಂದ ಬಾಲ್ಟಿಕ್ ಬಂದರು ನಗರ ಕ್ಲೈಪೆಡಾ ಆಸ್ಪತ್ರೆಗೆ ದಾಖಲಾಗಿದ್ದ. ಆತ ಕುಡಿಯುವುದನ್ನು ನಿಲ್ಲಿಸಿದ ನಂತರ ಲೋಹದ ತುಂಡುಗಳನ್ನು ನುಂಗಲು ಪ್ರಾರಂಭಿಸಿದನೆಂದು ಆ ವ್ಯಕ್ತಿ ಒಪ್ಪಿಕೊಂಡಿದ್ದಾನೆ. ತೀವ್ರವಾದ … Continued

ಅಫ್ಘಾನಿಸ್ತಾನ ಗಡಿಗಳಲ್ಲಿ ತಾಲಿಬಾನಿಗಳಿಂದ ಆತ್ಮಹತ್ಯಾ ಬಾಂಬರ್‌ಗಳ ನಿಯೋಜನೆ:ವರದಿ

ಕಾಬೂಲ್: ತಾಲಿಬಾನ್ ಆತ್ಮಾಹುತಿ ಬಾಂಬರ್‌ಗಳ ವಿಶೇಷ ಬೆಟಾಲಿಯನ್ ಅನ್ನು ರಚಿಸಿದ್ದು, ಅದನ್ನು ಅಫ್ಘಾನಿಸ್ತಾನದ ಗಡಿಗಳಲ್ಲಿ ವಿಶೇಷವಾಗಿ ಬಡಕ್ಷಾನ್ ಪ್ರಾಂತ್ಯದಲ್ಲಿ ನಿಯೋಜಿಸಲಾಗುತ್ತದೆ ಎಂದು ವರದಿಗಳು ಹೇಳಿವೆ. ಪ್ರಾಂತ್ಯದ ಉಪ ಗವರ್ನರ್ ಮುಲ್ಲಾ ನಿಸಾರ್ ಅಹ್ಮದ್ ಅಹ್ಮದಿತಜಾಕಿಸ್ತಾನ್ ಮತ್ತು ಚೀನಾದ ಗಡಿಯಾಗಿರುವ ಈಶಾನ್ಯ ಪ್ರಾಂತ್ಯದ ಬಡಕ್ಷಾನಿನಲ್ಲಿ ಆತ್ಮಾಹುತಿ ಬಾಂಬರ್ ಗಳ ಬೆಟಾಲಿಯನ್ ಸೃಷ್ಟಿಯ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು … Continued

ಸಾವಿನ ನಂತರ ಭೂಮಿಯಲ್ಲೇ ಅತ್ಯಂತ ಗಿಡ್ಡ ಹಸು ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡಿಗೆ ಸೇರ್ಪಡೆಯಾದ ಈ ಗೋವು: ಎತ್ತರ ತಿಳಿದರೆ ಹೌಹಾರುತ್ತೀರಿ..!

ಬಾಂಗ್ಲಾದೇಶದಲ್ಲಿ ಸಂಚಲನ ಮೂಡಿಸಿದ ಅಕ್ನಿ-ಹೈ ಸೆಲೆಬ್ರಿಟಿ ಹಸು ಮರಣದ ಕೆಲವೇ ವಾರಗಳ ನಂತರ ವಿಶ್ವದ ಅತಿ ಕಡಿಮೆ ಎತ್ತರದ (ಅತಿ ಗಿಡ್ಡ) ಹಸು ಎಂದು ಮರಣೋತ್ತರ ಮನ್ನಣೆ ಗಳಿಸಿದೆ. ಹಸು ರಾಣಿ, ಕೇವಲ 50.8 ಸೆಂಟಿಮೀಟರ್ (20 ಇಂಚು) ಎತ್ತರವಿತ್ತು. ಇದು ತತಕ್ಷಣದ ಇಂಟರ್ನೆಟ್ ಸೆಲೆಬ್ರಿಟಿಯಾಯಿತು. ಢಾಕಾದ ಹೊರ ವಲಯದಲ್ಲಿದ್ದ ಇದು ಇದ್ದ ಜಮೀನಿಗೆ ಈ … Continued

ಎಂಥಾ ಲೋಕವಯ್ಯಾ…ಕುಕ್ಕರ್ ಜೊತೆ ಇಂಡೋನೇಷ್ಯಾ ಯುವಕನ ಮದುವೆ..!

ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಆದರೆ, ಇಂಡೋನೇಷ್ಯಾದ ಯುವಕನೊಬ್ಬತಾನು ದಿನನಿತ್ಯ ಅನ್ನ ಬೇಯಸಿಕೊಳ್ಳುವ ಮಾಡುವ ಕುಕ್ಕರ್ ಜೊತೆಯೇ ಮದುವೆಯಾಗಿದ್ದಾನೆ..! ಇದು ವಿಚಿತ್ರವಾದರೂ ಸತ್ಯ.. ಇಂಡೋನೇಷ್ಯಾದ ಯುವಕ ಉದ್ಯೋಗದ ನಿಮಿತ್ತ ಮನೆಯಿಂದ ದೂರವಾಗಿ ಬೇರೆ ಊರಿನಲ್ಲಿ ಇದ್ದ. ಆಗ ತಾನೇ ಅಡುಗೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು ಹೀಗಾಗಿ, ಆತ ಅಡುಗೆ ಸಾಮಾನುಗಳನ್ನು ಖರೀದಿಸಿದ್ದ. ಅದರಲ್ಲಿ ಕುಕ್ಕರ್ … Continued