ಪೊಲೀಸ್ ಇಲಾಖೆ ಆಧುನೀಕರಣಕ್ಕೆ ತಂತ್ರಜ್ಞಾನ ವಿನಿಮಯಕ್ಕೆಬವೇರಿಯಾ ಜತೆ ಒಪ್ಪಂದ

ಬೆಂಗಳೂರು:ಅಪರಾಧ ಪ್ರಕರಣಗಳ ಪತ್ತೆ ಮತ್ತು ನಿಗ್ರಹಕ್ಕೆ ನೂತನ ತಂತ್ರಜ್ಞಾನ ಬಳಕೆ ಹಾಗೂ ಪೊಲೀಸ್ ಇಲಾಖೆ ಆಧುನೀಕರಣಕ್ಕೆ ತಂತ್ರಜ್ಞಾನ ವಿನಿಮಯಕ್ಕೆ ಸಂಬಂಧಿಸಿದಂತೆ ಜರ್ಮನಿ ದೇಶದ ಬವೇರಿಯಾ ರಾಜ್ಯದ ಜತೆಗಿನ ದ್ವಿಪಕ್ಷೀಯ ಸಂಬಂಧ ಗಟ್ಟಿಯಾಗಿದ್ದು, ಅದು ಮತ್ತಷ್ಟು ಭದ್ರಗೊಳ್ಳಲಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನಲ್ಲಿರುವ ಫೆಡರಲ್ ರಿಪಬ್ಲಿಕ್ … Continued

ಗದಗ: ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥಗೊಂಡ ಮೆಡಿಕಲ್ ಕಾಲೇಜ್‌ ವಿದ್ಯಾರ್ಥಿಗಳು

ಗದಗ: ವಿಷಪೂರಿತ ಆಹಾರ ಸೇವಿಸಿ ಇಲ್ಲಿನ ವೈದ್ಯಕೀಯ ಮಹಾವಿದ್ಯಾಲಯದ ೧೫ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಎಂಬಿಬಿಎಸ್‌ ಹಾಗೂ ಬಿಎಸ್‌ಸಿ ನರ್ಸಿಂಗ್‌ ವಿಭಾಗದ  ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಅವರಿಗೆಲ್ಲ ಗದಗ ಜಿಮ್ಸ್‌ನಲ್ಲಿರುವ ಶಾರದಾ ಕ್ಯಾಂಟೀನಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ನಂತರ 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಅಸ್ವಸ್ಥರನ್ನು ಆಸ್ಪತ್ರೆಗೆ ಸೇರಿದ್ದಾರೆ. ದೈನಂದಿನ ಊಟಕ್ಕಿಂತ ಬೇರೆ … Continued

ಕರ್ನಾಟಕದಲ್ಲಿ ಒಂದೂವರೆ ಸಾವಿರ ದಾಟಿದ ಒಂದೇ ದಿನದ ಸೋಂಕಿತರ ಸಂಖ್ಯೆ..!

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಕೂಡ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕಳೆದ ಒಂದೇ ದಿನದಲ್ಲಿ ರಾಜ್ಯದಲ್ಲಿ 1587 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,66,689 ಕ್ಕೆ ಏರಿಕೆಯಾಗಿದೆ. ಕಳೆದ ಮೂರು ತಿಂಗಳಲ್ಲಿ ಪ್ರಥಮ ಬಾರಿಗೆ ಸಂಕಿತರ ಸಂಖ್ಯೆ ದಿನವೊಂದಕ್ಕೆ ಸಾವಿರ ದಾಟಿದೆ…! ರಾಜ್ಯದಲ್ಲಿ ಶುಕ್ರವಾರ 10 ಜನ ಸೋಂಕಿತರು ಮೃತಪಟ್ಟಿದ್ದು, … Continued

ಈಗ ಎಸಿಬಿಗೂ ಬಂದ ಸಿಡಿ ಪ್ರಕರಣ..!

ಬೆಂಗಳೂರು: ರಾಜ್ಯದ ಸಿಡಿ ಪ್ರಕರಣ ಈಗ ಮತ್ತೊಂದು ಬೆಳವಣಿಗೆ ಕಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಸಿಡಿ ಪ್ರಕರಣದಲ್ಲಿ ತಮ್ಮ ಮೇಲೆ ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಆರೋಪಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ … Continued

ಚಿತ್ರಮಂದಿರ ಭರ್ತಿಗೆ ಯಾವುದೇ ನಿರ್ಬಂಧವಿಲ್ಲ: ಸಿಎಂ ಬಿಎಸ್‌ವೈ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿನಿಮಾ ಥಿಯೇಟರ್​ಗಳಲ್ಲಿ ಜನರ ಸಂಖ್ಯೆಯನ್ನು ಶೇ.50 ರಷ್ಟು ಸೀಮಿತ ಮಾಡಿ ಸರ್ಕಾರ ಆದೇಶ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಂತಹ ಯಾವುದೇ ಪ್ರಸ್ತಾಪವೂ ಸದ್ಯ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಈ ಕುರಿತು ಟ್ವೀಟ್‌ ಮೂಲಕ … Continued

ಮಹಿಷಿ ಪ್ರತಿಷ್ಠಾನ ಯೋಗ – ಪ್ರಕೃತಿ ಚಿಕಿತ್ಸೆ – ಸಂಶೋಧನಾ ಕೇಂದ್ರ

  ಆರೋಗ್ಯವೆಂದರೆ ದೈಹಿಕ, ಮಾನಸಿಕ, ಆಧ್ಯಾತ್ಮಕ, ಸಾಮಾಜಿಕ ಮತ್ತು ಭಾವನಾತ್ಮಕವಾಗಿ ಸಮತೋಲನದಲ್ಲಿರುವುದು. ಈ ರೀತಿಯ ಆರೋಗ್ಯ ಕಾಪಾಡಿಕೊಳ್ಳವದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪಾತ್ರ ಅತ್ಯಂತ ಮಹತ್ವ ಪೂರ್ಣವಾಗಿದೆ. ಪ್ರಕೃತಿ ಚಿಕಿತ್ಸೆ ಅಥವಾ ನ್ಯಾಚುರೋಪಧಿ ಎಂದು ಕರೆಯಲ್ಪಡುವ ಅತ್ಯಂತ ಪುರಾತನವಾದ ಭಾರತೀಯ ಚಿಕಿತ್ಸಾ ಪದ್ಧತಿ. ಪ್ರಾಕೃತಿಕವಾಗಿಯೇ ನಿರೋಗಿಗಳನ್ನಾಗಿ ಮಾಡುವುದೇ ಈ ಚಿಕಿತ್ಸೆಯ ವಿಶೇಷತೆ. ಪ್ರಕೃತ್ಯಾಧೀನಮಾರೋಗ್ಯಂ ಎಂಬ … Continued

ನಾನು ಬೆಂಗಳೂರು ಬಿಟ್ಟು ಹೋಗಿಲ್ಲ, ನನಗೆ ಬೆದರಿಕೆಯಿದೆ: ಹಿತೇಶಾ ಚಂದ್ರಾಣಿ

ಬೆಂಗಳೂರು: ಜೊಮಾಟೊ ಡೆಲಿವರಿ ಬಾಯ್ ಕಾಮರಾಜ್ ತಮ್ಮ ಮುಖಕ್ಕೆ ಹೊಡೆದಿದ್ದಾರೆ ಎಂದು ಆರೋಪಿಸಿರುವ ಹಿತೇಶಾ ಚಂದ್ರಾಣಿ ಇದೇ ಮೊದಲ ಬಾರಿಗೆ ಈ ಬಗ್ಗೆ ಮಾತನಾಡಿದ್ದು, ಪೊಲೀಸ್ ತನಿಖೆಯನ್ನು ತಪ್ಪಿಸಲು ತಾನು ಬೆಂಗಳೂರಿನಿಂದ ಹೊರನಡೆದಿದ್ದೇನೆ ಎಂಬ ವರದಿಯನ್ನು ಅವರು ನಿರಾಕರಿಸಿದ್ದಾರೆ. ಹಾಗೂ ನಾನು ಬೆಂಗಳೂರು ಬಿಟ್ಟು ಹೋಗಿಲ್ಲ ಎಂದು ಹೇಳಿದ್ದಾರೆ. ಘಟನೆ ಸಂಭವಿಸಿದಾಗಿನಿಂದ, ನನಗೆ ಕಿರುಕುಳ, ನಿಂದನೆ … Continued

ಕಾಮೆಡ್‌-ಕೆ ಪ್ರವೇಶ ಪರೀಕ್ಷೆ ದಿನಾಂಕ ಪ್ರಕಟ

ಬೆಂಗಳೂರು : ರಾಜ್ಯದಲ್ಲಿನ ಖಾಸಗಿ ಕಾಲೇಜುಗಳಲ್ಲಿನ ಇಂಜಿನಿಯರಿಂಗ್ ಸೀಟುಗಳ ಭರ್ತಿಗಾಗಿ ನಡೆಸಲಾಗುವ ಕಾಮೆಡ್-ಕೆ ಪ್ರವೇಶ ಪರೀಕ್ಷೆಗೆ ದಿನಾಂಕ ಪ್ರಕಟಿಸಲಾಗಿದೆ. ಜೂನ್ 20ರಂದು ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ ಎಂಬುದಾಗಿ ಕಾಮೆಡ್-ಕೆ ತಿಳಿಸಿದೆ. ಈ ಕುರಿತಂತೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಮೆಡ್-ಕೆ ಕಾರ್ಯಕಾರಿ ಕಾರ್ಯದರ್ಶಿ ಡಾ.ಕುಮಾರ್ ಅವರು, ಈ ಸಲದ ಕಾಮೆಡ್-ಕೆ ಪರೀಕ್ಷೆ ಜೂನ್ 20ರಂದು ನಡೆಸಲಾಗುತ್ತದೆ ಎಂದು … Continued

ಹೃದಯಾಘಾತ: ಬಿಜೆಪಿ ಹಿರಿಯ ನಾಯಕ ವಾಲ್ಮೀಕಿ ನಾಯಕ ನಿಧನ

ಕಲಬುರಗಿ: ಬಿಜೆಪಿಯ ಹಿರಿಯ ಧುರೀಣ ಹಾಗೂ ಮಾಜಿ ಶಾಸಕ ವಾಲ್ಮೀಕ ನಾಯಕ (೭೦) ಶುಕ್ರವಾರ (ಮಾ.೧೯) ಹೃದಯಾಪಘಾತದಿಂದ ನಿಧನರಾಗಿದ್ದಾರೆ. ಇಲ್ಲಿನ ಜಯದೇವ ಆಸ್ಪತ್ರೆಯಲ್ಲಿ ತೀವ್ರ ಎದೆ ನೋವಿನಿಂದಾಗಿ ದಾಖಲಾಗಿದ್ದು, ಬೆಳಿಗ್ಗೆ 9 ಗಂಟೆಗೆ ನಿಧನರಾಗಿದ್ದಾರೆ. ನಾಯಕ ಅವರು ಕಳೆದ ಬಾರಿ ಚಿತ್ತಾಪುರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಮೊದಲು ಅವರಿಗೆ ಹೃದಯ ಶಸ್ತ್ರಚಿಕಿತ್ಸೆಯಾಗಿದ್ದು, … Continued

ಸಿಡಿ ಪ್ರಕರಣ : ದೆಹಲಿಯಲ್ಲಿ ಎಸ್‍ಐಟಿ ಹುಡುಕಾಟ

ಬೆಂಗಳೂರು: ಸಿಡಿ ಪ್ರಕರಣದ ಕಿಂಗ್‍ಪಿನ್‍ಗಳು ಎನ್ನಲಾದ ಇಬ್ಬರು ವ್ಯಕ್ತಿಗಳು ಹಾಗೂ ಆ ಯುವತಿ ದೆಹಲಿಯಲ್ಲಿ ಇರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ಎಸ್‍ಐಟಿ ಪೊಲೀಸರು ದೆಹಲಿ ಹಾಗೂ ಸುತ್ತಮುತ್ತ ಶೋಧ ನಡೆಸುತ್ತಿದ್ದಾರೆ. ಕಿಂಗ್‍ಪಿನ್ ಎಂದು ಹೇಳಲಾದ ವ್ಯಕ್ತಿ ಬುಧವಾರ ವಿಡಿಯೋ ತುಣುಕು ಬಿಡುಗಡೆ ಮಾಡಿದ್ದಾರೆ. ಆ ವಿಡಿಯೋವನ್ನು ದೆಹಲಿಯಿಂದಲೇ ಅಪ್‍ಲೋಡ್ ಮಾಡಲಾಗಿದೆ ಎಂಬುದು ಎಸ್‍ಐಟಿ ಶಂಕೆ. ಈ ಹಿನ್ನೆಲೆಯಲ್ಲಿ … Continued