ಸಿಡಿ ಪ್ರಕರಣದಲ್ಲಿ ಬಿಗ್‌ ಟ್ವಿಸ್ಟ್‌: ಮಗಳು ಕಿಡ್ನ್ಯಾಪ್‌, ಹುಡುಕಿ ಕೊಡಿ ಎಂದು ತಂದೆಯಿಂದ ದೂರು ದಾಖಲು

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮತ್ತೊಂದು ತಿರುವು ಕಂಡಿದೆ. ಸಿಡಿ ಪ್ರಕರಣದಲ್ಲಿದ್ದಾಳೆ ಎನ್ನಲಾದ ಯುವತಿಯ ತಂದೆ ತನ್ನ ಮಗಳು ಕಿಡ್ನ್ಯಾಪ್‌ ಆಗಿದ್ದಾಳೆ ಎಂದು ಬೆಳಗಾವಿಯಲ್ಲಿ ದೂರು ದಾಖಲಿಸಿದ್ದಾರೆ. ಸಿಡಿ ದೃಶ್ಯದಲ್ಲಿದ್ದಾಳೆ ಎಂದು ಹೇಳಲಾದ ಯುವತಿಯ ತಂದೆ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ‘ಮಾರ್ಚ್ 2 ರಿಂದ ನನ್ನ ಪುತ್ರಿ … Continued

ಕರ್ನಾಟಕದ ಉಪಚುನಾವಣೆ ದಿನಾಂಕ ಪ್ರಕಟ, ; ಏಪ್ರಿಲ್ 17ಕ್ಕೆ ಮತದಾನ, ಮೇ 2ಕ್ಕೆ ಫಲಿತಾಂಶ

ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ. ರಾಜ್ಯದ ಎರಡು ವಿಧಾನ ಸಭೆ ಮತ್ತು ಒಂದು ಲೋಕ ಸಭಾ ಉಪಚುನಾವಣೆಗೆ ಏಪ್ರಿಲ್‌ 17 ರಂದು ಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಬೆಳಗಾವಿ ಲೋಕಸಭಾ ಸ್ಥಾನ ಹಾಗೂ ಬಸವ ಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್‌ ೧೭ರಂದು ಚುನಾವಣೆ ನಡೆಯಲಿದೆ. … Continued

ಬಿಜೆಪಿಯಲ್ಲೇ ಜಂಗೀ ಕುಸ್ತಿ: ಯತ್ನಾಳ ಹೀಗೆ ಮಾತಾಡಿದ್ರೆ ಉಚ್ಚಾಟನೆಗೆ ಒತ್ತಾಯಿಸ್ಬೇಕಾಗುತ್ತೆ ಎಂದ ರೇಣುಕಾಚಾರ್ಯ

ಬೆಂಗಳೂರು: : ವಿಧಾನಸೌಧದಲ್ಲಿ ಮಂಗಳವಾರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಪಿ. ರೇಣುಕಾಚಾರ್ಯ, ಯತ್ನಾಳ್ ಅವರೇ ನಾಟಕ ಮಾಡುವುದನ್ನು ಬಿಡಿ, ಏಕೆ ಪದೇ ಪದೆ ಯಡಿಯೂರಪ್ಪ ಕುಟುಂಬದವರನ್ನು ಟಾರ್ಗೆಟ್ ಮಾಡಿಕೊಂಡು ಹೇಳಿಕೆ ನೀಡಿಕೊಂಡು ಓಡಾಡುತ್ತೀರಿ. ನಿಮಗೆ … Continued

ಸಿಡಿ ಪ್ರಕರಣ: ಎಸ್‌ಐಟಿಗೆ ದಾಖಲಿಸಿದ ಜಾರಕಿಹೊಳಿ ಹೇಳಿಕೆಯಲ್ಲಿ ಇರುವುದೇನು?

ಬೆಂಗಳೂರು: ಸಚಿವ ಸ್ಥಾನಕ್ಕೆ ಕಾರಣವಾದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಅವರಿಂದ ವಿಶೇಷ ತನಿಖಾ ತಂಡ ಹೇಳಿಕೆ ದಾಖಲಿಸಿಕೊಂಡಿದೆ. ಅವರು ನೀಡಿದ ನಾಲ್ಕು ಪುಟಗಳ ಹೇಳಿಕೆಯಲ್ಲಿ ರಮೇಶ್ ಜಾರಕಿಹೊಳಿ ಕೆಲವು ಸ್ಫೋಟಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ ಎಂದು ತಿಳುದಬಂದಿದೆ. ಸದಾಶಿವನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದ ಅಂಶಗಳನ್ನೇ ಆಧಾರವಾಗಿಟ್ಟುಕೊಂಡು ಅವರು ತಮ್ಮ ಹೇಳಿಕೆ ದಾಖಲಿಸಿದ್ದು, … Continued

ಕನ್ನಡಿಗರು ಅಂಗಡಿ ಬಂದ್‌ ಮಾಡುವಂತೆ ಕೊಲ್ಲಾಪುರದಲ್ಲಿ ಶಿವಸೇನೆ ಧಮ್ಕಿ..!

ಬೆಳಗಾವಿ: ಶಿವಸೇನೆ ಮಹಾರಾಷ್ಟ್ರದಲ್ಲಿ ಮತ್ತೆ ಕನ್ನಡಿಗರ ವಿರುದ್ಧ ಪುಂಡಾಟಿಕೆ ನಡೆಸಿದ್ದು, ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಅಂಗಡಿಗಳನ್ನು ಬಂದ್ ಮಾಡುವಂತೆ ಧಮ್ಕಿ ಹಾಕಿದೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾಯ ಶಿವಸೇನೆ ಮುಖಂಡ ವಿಜಯ ದೇವಣೆ ಮಾರ್ಚ್ 20ರಂದು ಮಹಾರಾಷ್ಟ್ರದ ಸಾಂಗ್ಲಿ, ಮಿರಜ, ಕೊಲ್ಲಾಪುರ, ಸಾತಾರಾ ಮೊದಲಾದ ಪ್ರದೇಶಗಳಲ್ಲಿರುವ ಕನ್ನಡಿಗರ ಅಂಗಡಿಗಳನ್ನು ಬಂದ್ ಮಾಡಿ ಕರ್ನಾಟಕದಲ್ಲಿರುವ ಮರಾಠಿ ಭಾಷಿಕರಿಗೆ ಬೆಂಬಲ ಸೂಚಿಸಬೇಕೆಂದು … Continued

ಕೊರೊನಾ: ಮತ್ತೆ ಕಠಿಣ ನಿಯಮಗಳ ಮುನ್ಸೂಚನೆ ನೀಡಿದ ಆರೋಗ್ಯ ಸಚಿವ..!

ಬೆಂಗಳೂರು: ಕೊರೊನಾ ಬಗ್ಗೆ ಜನ ಎಚ್ಚರಿಕೆ ವಹಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವ ಮುನ್ಸೂಚನೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ.೧೭ರಂದು ಪ್ರಧಾನಿ ಜೊತೆ ಕೊರೊನಾ ನಿಯಂತ್ರಣದ ಬಗ್ಗೆ ವಿಡಿಯೋ ಸಂವಾದವಿದೆ. ಸಭೆ ಬಳಿಕ ರಾಜ್ಯ ಸರ್ಕಾರ ಈ ಬಗ್ಗೆ … Continued

ಕನ್ನಡಿಗರಿಗೆ ಧಮ್ಕಿ: ಎಂಇಎಸ್ ಮುಖಂಡ ಸಾಳುಂಕೆ ಪುಂಡಾಟಿಕೆ

ಬೆಳಗಾವಿ: ಕನ್ನಡಿಗರಿಗೆ ಗೊಡ್ಡು ಬೆದರಿಕೆ ಹಾಕಿ ಬೆಳಗಾವಿಯ ಎಂಇಎಸ್ ಮುಖಂಡ ಶುಭಂ ಸಾಳುಂಕೆ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕನ್ನಡಿಗರಿಗೆ ಧಮ್ಕಿ ಹಾಕಿ ಎಚ್ಚರಿಕೆ ನೀಡಿದ್ದಕ್ಕೆ ಈಗ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಬೆಳಗಾವಿಯಲ್ಲಿ ಎಂಇಎಸ್ ಮತ್ತು ಶಿವಸೇನೆ ಎರಡೂ ಒಂದಾಗಿವೆ ಎಂದು ಹೇಳಿದ್ದ ಸಾಳುಂಕೆ ಹಳದಿ, ಕೆಂಪು ಬಣ್ಣದ ಶಾಲು ಧರಿಸಿದವರನ್ನು ನಾವು ಕಂಡಲ್ಲಿ ಹೊಡೆಯುತ್ತೇವೆ, ನಮ್ಮ … Continued

ರಮೇಶ ಜಾರಕಿಹೊಳಿ ಹೇಳಿಕೆ ದಾಖಲಿಸಿದ ಎಸ್‌ಐಟಿ

ಬೆಂಗಳೂರು: ಸೆಕ್ಸ್‌ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಯನ್ನ ಆರಂಭಿಸಿದ್ದು, ಸೋಮವಾರ ರಾತ್ರಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹೇಳಿಕೆಯನ್ನು ವಿಶೇಷ ತನಿಖಾ ತಂಡವು ದಾಖಲಿಸಿಕೊಂಡಿದೆ. ರಮೇಶ್‌ ಜಾರಕಿಹೊಳಿ ಅವರ ಸುಮಾರು 4 ಪುಟಗಳ ಹೇಳಿಕೆಯನ್ನ ಎಸ್‌ಐಟಿ ದಾಖಲಿಸಿಕೊಂಡಿದೆ  ಎನ್ನಲಾಗಿದೆ. ಸಿಡಿ ಮಾಡಿದವರು ಎನ್ನುವವರಿಂದ ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು ಎಂಬ ವಿಚಾರವೂ ಈ ಹೇಳಿಕೆಯಲ್ಲಿ ದಾಖಲಾಗಿದೆ … Continued

ಬೆಳಗಾವಿ-ಕೊಲ್ಲಾಪುರ ಬಸ್‌ ಸಂಚಾರ ಆರಂಭ

ಬೆಳಗಾವಿ: ಬೆಳಗಾವಿ-ಕೊಲ್ಲಾಪುರ ನಡುವಿನ ಬಸ್‌ ಸಂಚಾರ ಪುನಃ ಆರಂಭಗೊಂಡಿದೆ. ಕೊಲ್ಲಾಪುರದಲ್ಲಿ ಕರ್ನಾಟಕದ ಬಸ್‌ಗಳಿಗೆ ಶಿವಸೇನೆ ಕಾರ್ಯಕರ್ತರು ಮಸಿ ಬಳಿದ ನಂತರ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿಯಿಂದ ಕೊಲ್ಲಾಪುರಕ್ಕೆ ಬಸ್‌ ಸಂಚಾರವನ್ನು ಮೂರು ದಿನಗಳ ಹಿಂದೆ ರದ್ದುಗೊಳಿಸಲಾಗಿತ್ತು. ಕರ್ನಾಟಕ-ಮಹಾರಾಷ್ಟ್ರದ ಗಡಿ ನಿಪ್ಪಾಣಿ ವರೆಗೆ ಮಾತ್ರ ಬಸ್‌ ಸಂಚಾರ ಇತ್ತು. ಈಗ ಕೊಲ್ಲಾಪುರದ ವರೆಗೆ ಮತ್ತೆ ಬಸ್‌ ಸಂಚಾರ ಆರಂಭವಾಗಿದೆ.

ಕರ್ನಾಟಕ: ದೈನಂದಿನ ಕೊರೊನಾ  ಸೋಂಕು 932, ಸಾವು 7 

ಬೆಂಗಳೂರು: ಕಳೆದ 24 ತಾಸಿನಲ್ಲಿ ಕೊರೊನಾದಿಂದ ಕಳೆದ 24 ಗಂಟೆಗಳಲ್ಲಿ 932 ಜನರಿಗೆ ಸೊಂಕು ದೃಢ ಪಟ್ಟಿದೆ. 7 ಜನ ಮೃತಪಟ್ಟಿದ್ದು, ಬೆಂಗಳೂರು ನಗರ ದಲ್ಲಿ 5 ಮಂದಿ ಮೃತಪಟ್ಟಿದ್ದಾರೆ ಮೈಸೂರು ಹಾಗೂ ಬೀದರಿಲ್ಲಿ ತಲಾ ಒಬ್ಬ ಸೋಂಕಿತರು ಮೃತಪಟ್ಟಿದ್ದಾರೆ. ಸೋಮವಾರ 429 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ961204ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ … Continued