ರಾಜ್ಯ ಬಜೆಟ್‌: ಕಳಸಾ-ಬಂಡೂರಿ ಯೋಜನೆಗೆ 1,677 ಕೋಟಿ ರೂ. ಮೀಸಲು

ಬೆಂಗಳೂರು : ಮಹದಾಯಿ ಕಳಸಾ ಬಂಡೂರಿ ನಾಲಾ ತಿರುವು ಯೋಜನೆಗೆ ಬಜೆಟ್‌ನಲ್ಲಿ 1,677 ಕೋಟಿ ರೂ. ಅನುದಾನ ನೀಡುವ ಮೂಲಕ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕ ಭಾಗದ ರೈತರ ಬೇಡಿಕೆ ಈಡೇರಿಸಿದ್ದಾರೆ. ಬೆಳಗಾವಿ, ಗದಗ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ರೈತರು ಕಳಸಾ ಬಂಡೂರಿ ನಾಲಾ ತಿರುವು ಯೋಜನೆಗೆ ಆಗ್ರಹಿಸಿ ಕಳೆದ 20 ವರ್ಷಗಳಿಂದ … Continued

ರಾಜ್ಯ ಬಜೆಟ್‌: ಗ್ರಾಮೀಣ ಪ್ರದೇಶದಲ್ಲಿ ಮನೆಗಳಿಗೆ ನೀರೊದಗಿಸಲು 4,316 ಕೋಟಿ ರೂ ನಿಗದಿ

ಬೆಂಗಳೂರು : ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಎಲ್ಲ ವ್ಯವಹಾರಗಳ ಗಣಕೀಕರಣಕ್ಕೆ ಕ್ರಮ, ಜಲ ಜೀವನ್ ಮಿಷನ್ ಯೋಜನೆಯೊಂದಿಗೆ ಒಗ್ಗೂಡಿಸಿ ರೂಪಿಸಿರುವ ಮನೆ ಮನೆಗೆ ಗಂಗೆ ಯೋಜನೆಯಡಿ 2021-22 ಸಾಲಿನಲ್ಲಿ 4,316 ಕೋಟಿ ರೂ. ವೆಚ್ಚದಲ್ಲಿ 22 ಲಕ್ಷ ಗ್ರಾಮೀಣ ಕುಟುಂಬಗಳಿಗೆ ಕಾರ್ಯಾತ್ಮಕ ಸಂಪರ್ಕ ಒದಗಿಸಲು ಕ್ರಮ ಹಾಗೂ ಹಳ್ಳಿಗಳಿಗೆ ಬಲ್ಕ್ ನೀರು ಸರಬರಾಜು ಮಾಡಲು … Continued

ವೃದ್ಧರು, ವಿಧವೆಯರು, ವಿಶೇಷ ಚೇತನರಿಗೆ ಮನೆ ಬಾಗಿಲಿಗೇ ಮಾಸಾಶನ

ಬೆಂಗಳೂರು : ಬಜೆಟ್ನಲ್ಲಿ ಅಶಕ್ತರು, ವೃದ್ಧರು,ವಿಧವೆಯರು ಮತ್ತು ವಿಶೇಷ ಚೇತನರಿಗೆ ಸರ್ಕಾರದ ದತ್ತಾಂಶ ಆಧರಿಸಿ ಮನೆ ಬಾಗಿಲಿಗೇ ಮಾಸಾಶನ ಅಭಿಯಾನಕ್ಕೆ ಚಾಲನೆ ನೀಡಲಾಗವುದು ಎಂದು ತಿಳಿಸಿದ್ದಾರೆ. ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಎಲ್ಲ ವ್ಯವಹಾರಗಳ ಗಣಕೀಕರಣಕ್ಕೆ ಕ್ರಮ, ತ್ವರಿತವಾಗಿ ನಿಖರ ಭೂ-ದಾಖಲೆಗಳನ್ನು ಒದಗಿಸಲು ಗಣಕೀಕೃತ ಅಕಾರ ಬಂದ್ ಮಾಹಿತಿ ಮತ್ತು ಪರಣಿ ಮಾಹಿತಿಯನ್ನು ಸಂಯೋಜಿಸಲು ಕ್ರಮ … Continued

ರಾಜ್ಯ ಬಜೆಟ್‌: ಎಪಿಎಂಸಿ ಮಾರುಕಟ್ಟೆ ಕಾರ್ಯಕ್ಷಮತೆ ಹೆಚ್ಚಳಕ್ಕೆ 198 ಕೋಟಿ

ಬೆಂಗಳೂರು: ರಾಜ್ಯದಲ್ಲಿ 5500 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯಕ್ಷಮತೆ ಹೆಚ್ಚಿಸಲು 198 ಕೋಟಿ ವೆಚ್ಚದಲ್ಲಿ ಗಣಕೀಕರಣಗೊಳಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಡಿಸಿಸಿ ಬ್ಯಾಂಕ್‍ನಲ್ಲಿ ಸರ್ಕಾರದ ಸಹಭಾಗಿತ್ವ ಪ್ರೋತ್ಸಾಹಿಸಲು ಷೇರು ಬಂಡವಾಳ ಹೆಚ್ಚಿಸುವ ಉದ್ದೇಶದಿಂದ 21 ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ಗಳಿಗೆ 10 ಲಕ್ಷ ರೂ.ಗಳ ಗರಿಷ್ಠ ಮಿತಿಗೊಳಪಟ್ಟು ಶೇ.25ರಷ್ಟು ಷೇರು … Continued

ರಾಜ್ಯ ಬಜೆಟ್‌: ಮೀನು ಮಾರಾಟ ಘಟಕ-ಮತ್ಸ್ಯ ದರ್ಶನಿ 30 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ

ಬೆಂಗಳೂರು : ವಿಧಾನಸೌಧದಲ್ಲಿ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯದಲ್ಲಿ ಮೀನಿನ ಮಾರಾಟವನ್ನು ಉತ್ತೇಜಿಸಲು ಹಾಗೂ ಮೀನಿನ ವಿವಿಧ ಪ್ರಭೇದಗಳ ಕುರಿತು ಅರಿವು ಮೂಡಿಸಲು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ ಮೀನು ಮಾರಾಟ ಘಟಕಗಳು ಹಾಗೂ ಮತ್ಸ ದರ್ಶನಿಗಳನ್ನು 30 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ ಮಾಡುವುದಾಗಿ ಪ್ರಕಟಿಸಿದರು. ರಾಜ್ಯದ 16 ಮೀನುಮರಿ ಉತ್ಪಾದನಾ … Continued

ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ ಘೋಷಣೆ, ೫೦೦ ಕೋಟಿ ರೂ. ಅನುದಾನ ಪ್ರಕಟ

ಬೆಂಗಳೂರು:ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಮೂಲಕ, ಸಮುದಾಯದ ಅಭಿವೃದ್ಧಿ ಕಾರ್ಯಕ್ಕೆ ಅನುಕೂಲವಾಗುವಂತೆ ಒಕ್ಕಲಿಗ ಸಮುದಾಯದ ಅನೇಕ ಮುಖಂಡರು ಪ್ರತಿಭಟನೆ ಹಾಗೂ ಮನವಿ ಮೂಲಕ, ಮುಖ್ಯಮಂತ್ರಿಗೆ ಒತ್ತಾಯ ಮಾಡಿದ್ದು ಬಜೆಟ್‌ ಮೂಲಕ ಫಲಿಸಿದೆ. ಇದಕ್ಕೆ ಬ ಒಪ್ಪಿಗೆ ನೀಡಿರುವ ಹಣಕಾಸು ಸಚಿವರೂ ಆಗಿರುವ ಯಡಿಯೂರಪ್ಪ, ರಾಜ್ಯ ಬಜೆಟ್ ನಲ್ಲಿ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒಪ್ಪಿಗೆ ನೀಡಿದ್ದಲ್ಲದೆ … Continued

ರಾಜ್ಯ ಬಜೆಟ್‌: ಮಹಿಳಾ ಉದ್ಯೋಗಿಗಳಿಗೆ ಪ್ರಸೂತಿ ರಜೆ ಜೊತೆ ಮಕ್ಕಳ ಆರೈಕೆ ರಜೆ ಗಿಫ್ಟ್‌

ಬೆಂಗಳೂರು : ರಾಜ್ಯ ಸರ್ಕಾರದ ಮಹಿಳಾ ಉದ್ಯೋಗಿಗಳು ಹಾಲಿ ಜಾರಿಯಲ್ಲಿರುವ ಪ್ರಸೂತಿ ರಜೆಯೊಂದಿಗೆ ಒಟ್ಟು ಸೇವಾವಧಿಯಲ್ಲಿ ಆರು ತಿಂಗಳ ವರೆಗೆ ಮಕ್ಕಳ ಆರೈಕೆ ರಜೆ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದ್ದಾರೆ. ಈ ಮೂಲಕ ವಿಶ್ವ ಮಹಿಳಾ ದಿನಾಚರಣೆಯಂದೇ ಯಡಿಯೂರಪ್ಪ ಮಹಿಳೆಯರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. 2021-22ನೇ ರಾಜ್ಯ ಬಜೆಟ್ ಮಂಡಿಸಿ ಮಾತನಾಡಿದ ಅವರು, ನಿರ್ಭಯಾ … Continued

ನಾಯಿಗಳ ದಾಳಿಯಿಂದ ಜಿಂಕೆ ರಕ್ಷಿಸಿದ ಸಾರ್ವಜನಿಕರು, ಅರಣ್ಯ ಇಲಾಖೆ ಸಿಬ್ಬಂದಿ

ಧಾರವಾಡ: ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದಿದ್ದ ಜಿಂಕೆಯೊಂದನ್ನು ಜನರು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಬೇಸಿಗೆ ಬಂದಿದ್ದರಿಂದ ನೀರನ್ನೋ ಆಹಾರವನ್ನೋ ಹುಡುಕಿಗೊಂಡು ಊರೊಳಗೆ ಬಂದಿದ್ದ ಜಿಂಕೆಯನ್ನು ಊರ ನಾಯಿಗಳು ಅಟ್ಟಾಡಿಸಿ ಸುತ್ತುಗಟ್ಟಿ ಕಚ್ಚಿ ಗಾಯಗೊಳಿಸಿದ್ದವು.ಜಿಂಕೆಗಳ ಮೇಲೆ ನಾಯಿಗಳು ಮುಗಿಬಿದ್ದಿದ್ದ್ನು ಕಂಡ ಸ್ಥಳೀಯರು ತಕ್ಷಣವೇ ಜಿಂಕೆಯ ರಕ್ಷಣೆಗೆ ಧಾವಿಸಿದರು. ಇದು ನಡೆದ್ದು ಧಾರವಾಡದ ಗಿರಿ ನಗರ … Continued

ಹುಲಿ ದಾಳಿಗೆ ಬಾಲಕ ಸಾವು, ಅಜ್ಜನಿಗೆ ಗಂಭೀರ ಗಾಯ

ಮಡಿಕೇರಿ: ಕಾಡುಗಳು ನಶವಾಗುತ್ತಿರುವಂತೆಯೇ ಕಾಡುಪ್ರಾಣಿಗಳಿಗೂ ಮಾನವರಿಗೂ ಸಂಘರ್ಷ ಮುಂದುವರಿದೆ. ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿಗೆ ಬಾಲಕನೊಬ್ಬ ಸಾವಿಗೀಡಾಗಿದ್ದು ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಏಕಾಏಕೀ ದಾಳಿ ನಡಸಿದ ಹುಲಿಯು ಎಂಟು ವರ್ಷದ ಬಾಲಕ ರಂಗಸ್ವಾಮಿ ಕೊಂದು ಹಾಕಿದೆ ಮತ್ತು ಜೊತೆಯಲ್ಲಿದ್ದ ಆತನ ಅಜ್ಜ ಕೆಂಚ‌ (52) … Continued

ಕಾಣೆಯಾಗಿದ್ದ ಮಾಜಿ ಶಾಸಕರ ಮೊಮ್ಮಕ್ಕಳು ಶವವಾಗಿ ಪತ್ತೆ

ರಾಯಚೂರು : ಭಾನುವಾರ ಆಟವಾಡುತ್ತಿದ್ದಂತ ಸಂದರ್ಭದಲ್ಲಿ ನಾಪತ್ತೆಯಾಗಿದ್ದಂತ ಮಾಜಿ ಶಾಸಕರ ಮೊಮ್ಮಕ್ಕಳಿಬ್ಬರು, ಸೋಮವಾರ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಾಜಿ ಶಾಸಕ ಹಂಪಯ್ಯ ನಾಯಕ ಅವರ ಮೊಮ್ಮಕ್ಕಳ್ಳಾದ ವರುಣ್(9) ಹಾಗೂ ಸಣ್ಣಯ್ಯ(5) ಭಾನುವಾರ ಮಧ್ಯಾಹ್ನ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದರು. ಸಿರವಾರ ಪೊಲೀಸ್ ಠಾಣೆಯಲ್ಲಿ … Continued