ಕೋವಿಡ್-3ನೇ ಅಲೆ ಆತಂಕ: ಬೆಂಗಳೂರಲ್ಲಿ ಮಕ್ಕಳಲ್ಲಿ ಕಳೆದ ವರ್ಷದಷ್ಟೇ ಸೋಂಕಿನ ಪ್ರಮಾಣ

ಬೆಂಗಳೂರು:ನಗರದಲ್ಲಿ ಪತ್ತೆಯಾಗುತ್ತಿರುವ ಮಕ್ಕಳಲ್ಲಿನ ಕೋವಿಡ್ ಸೋಂಕಿನ ಪ್ರಮಾಣ ಕಳೆದ ವರ್ಷದಷ್ಟೇ ಇದೆ ಎಂದು ಬಿಬಿಎಂಬಿ ಆಯುಕ್ತ ಗೌರವ ಗುಪ್ತಾ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಗರದಲ್ಲಿ ಈವರೆಗೆ ವರದಿಯಾದ ಮಕ್ಕಳ ಪ್ರಕರಣಗಳನ್ನು ಕಳೆದ ವರ್ಷದ ದತ್ತಾಂಶಗಳೊಂದಿಗೆ ಹೋಲಿಸಲಾಗಿದೆ ಮತ್ತು ಇವೆರಡೂ ಬಹುತೇಕ ಒಂದೇ ಆಗಿರುತ್ತವೆ. ಕಳೆದ ನಾಲ್ಕು ದಿನಗಳಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 450 … Continued

ಕೇವಲ ಎರಡು ತಾಸಿನಲ್ಲೇ 5.50 ಕ್ವಿಂಟಲ್ ಜೋಳದ ಬಂಡಿ 12 ಕಿಮೀ ಎಳೆದು 5 ಗ್ರಾಂ ಬಂಗಾರ ಗೆದ್ದ ಯುವಕ..!

ಯಾದಗಿರಿ : ನಾಗರ ಪಂಚಮಿಯಂದು ಏರ್ಪಡಿಸಿದ್ದ ಶರತ್ತಿನ ಪಂದ್ಯದಲ್ಲಿ ಶಹಾಪುರ ತಾಲೂಕಿನ ಗೋಗಿಪೇಠದ ಶ್ರೀಕಾಂತ ಬದ್ದೇಳ್ಳಿ ಎಂಬ ಯುವಕ ಸಾಹಸ ಪ್ರದರ್ಶನ ಮಾಡಿ ಶರತ್ತಿನ ಪಂದ್ಯದಲ್ಲಿ ಗೆದ್ದಿದ್ದಾನೆ. ತಮ್ಮ ಗ್ರಾಮ ಗೋಗಿ ಪೇಠದಿಂದ ಎತ್ತಿನ ಬಂಡಿಯಲ್ಲಿ ಐದುವರೆ ಕ್ವಿಂಟಲ್ ಜೋಳ ತುಂಬಿದ ಚೀಲಗಳನ್ನು ಹಾಕಿಕೊಂಡು 12 ಕಿಮೀ ಗಳ ದೂರದ ಶಹಾಪುರ ನಗರ ತಲುಪಿ ಸೈ … Continued

ಕಾರ್ಮಿಕರಿಗೆ ಸಹಾಯಧನ ಹೆಚ್ಚಳ, ಕಾರ್ಮಿಕರು ಮೃತಪಟ್ಟರೆ 5 ಲಕ್ಷ ಪರಿಹಾರ ನೀಡುವ ಮಸೂದೆ ಮಂಡನೆ: ಸಚಿವ ಹೆಬ್ಬಾರ

ಬೆಂಗಳೂರು: ಕಾರ್ಮಿಕರ ಕಲ್ಯಾಣಕ್ಕಾಗಿ ಮುಂದಿನ ವಿಧಾನಮಂಡಲದ ಅಧಿವೇಶನದಲ್ಲೇ ನೂತನ ಕಾರ್ಮಿಕ ಕಾಯ್ದೆಯನ್ನು ಮಂಡಿಸಲಾಗುತ್ತಿದೆ. ಹಾಗೆಯೇ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಕಲ್ಯಾಣಕ್ಕಾಗಿ ನೀಡಲಾಗುತ್ತಿರುವ ವಿವಿಧ ಸಹಾಯಧನವನ್ನು ದುಪ್ಪಟ್ಟು ಮಾಡುವ ತೀರ್ಮಾನ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ ಹೇಳಿದರು. ವಿಧಾನಸೌಧದಲ್ಲಿ ಇಂದು (ಶುಕ್ರವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕಾಲಕ್ಕೆ ನಾನೇ ಚಾಲಕನಾಗಿ ಕೆಲಸ ಮಾಡಿದ್ದೆ. … Continued

ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಅಧಿಕಾರ ಸ್ವೀಕಾರ

ಬೆಂಗಳೂರು: ಏಳು ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದ ರಕ್ಷಾ ರಾಮಯ್ಯ ಅವರು ಇಂದು (ಶುಕ್ರವಾರ) ಅಧಿಕಾರ ಸ್ವೀಕರಿಸಿದ್ದಾರೆ. ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಕೃಷ್ಣ ಅಲಾವರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಮೊಹಮ್ಮದ್, … Continued

ಪ್ರಥಮ ವರ್ಷದ ಡಿಪ್ಲೋಮಾ ಇಂಜಿನಿಯರಿಂಗ್ ಕೋರ್ಸುಗಳಿಗೆ ಪ್ರವೇಶಕ್ಕೆ ಆನ್‌ಲೈನ್‌ ನಲ್ಲಿ ಅರ್ಜಿ ಆಹ್ವಾನ

ಧಾರವಾಡ: ಧಾರವಾಡ ನಗರದ ಪ್ರತಿಷ್ಠಿತ ಜನತಾ ಶಿಕ್ಷಣ ಸಮಿತಿಯ ಕೆ.ಎಚ್.ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆ (ಅನುದಾನಿತ ಪಾಲಿಟೆಕ್ನಿಕ್)ನಲ್ಲಿ ೨೦೨೧-೨೨ನೇ ಸಾಲಿನಲ್ಲಿ ಪ್ರಥಮ ವರ್ಷದ ಡಿಪ್ಲೋಮಾ ಇಂಜಿನಿಯರಿಂಗ್ ಕೋರ್ಸುಗಳಿಗೆ ಪ್ರವೇಶ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶ ಪಡೆಯಲು ಪ್ರಾಚಾರ್ಯರ ಹಂತದಲ್ಲಿಯೇ ಆನ್‌ಲೈನ್ ಮುಖಾಂತರ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅರ್ಹ ವಿದ್ಯಾರ್ಥಿಗಳಿಂದ ದಿನಾಂಕ:೧೨.೦೮.೨೦೨೧ ರಿಂದ ೨೧.೦೮.೨೦೨೧ರ ವರೆಗೆ ಅರ್ಜಿಗಳನ್ನು … Continued

ಖಾತೆ ಬದಲಿಗಾಗಿ ದೆಹಲಿಗೆ ಹೋಗುತ್ತೇನೆಂದು ಎಲ್ಲಿಯೂ ಹೇಳಿಲ್ಲ: ಸಚಿವ ಆನಂದ ಸಿಂಗ್‌

ಹೊಸಪೇಟೆ : ನನ್ನ ಸಮಸ್ಯೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿದ್ದೇನೆ. ಖಾತೆ ಬದಲಾವಣೆ ಕುರಿತಂತೆ ನಾನು ದೆಹಲಿಗೆ ಹೋಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ .ನಾನು ಹೋಗುವುದೂ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ಶುಕ್ರವಾರ ಹೊಸಪೇಟೆ ವೇಣುಗೋಪಾಲಸ್ವಾಮಿ ದೇವಾಲಯದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾತೆ ಬದಲಾವಣೆ ಬಗ್ಗೆ ಮುಖ್ಯಮಂತ್ರಿ ಬಸವರಾಜ … Continued

ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಐಎನ್ಎಸ್ ವಿಕ್ರಮಾದಿತ್ಯದಿಂದ ಜಾಯ್ ಆಫ್‌ ಗಿವಿಂಗ್‌ ವೀಕ್‌

ಕಾರವಾರ: ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ, ಐಎನ್ಎಸ್ ವಿಕ್ರಮಾದಿತ್ಯ ಆಗಸ್ಟ್ 15 ರ ಭಾರತದ ಸ್ವಾತಂತ್ರ್ಯೋತ್ಸವದ ವಾರವನ್ನು ‘ಜಾಯ್ ಆಫ್ ಗಿವಿಂಗ್ ವೀಕ್’ ಎಂದು ಆಚರಿಸಲಾಯಿತು. ಐಎನ್ಎಸ್ ವಿಕ್ರಮಾದಿತ್ಯ ಭಾರತೀಯ ನೌಕಾಪಡೆಯ ವಿಮಾನವಾಹಕ ನೌಕೆ., ಕಾರವಾರ ನೌಕಾನೆಲೆಯಲ್ಲಿ ನೆಲೆಗೊಂಡಿದೆ, ಇದು ರಾಷ್ಟ್ರದ ಅತ್ಯಂತ ಶಕ್ತಿಶಾಲಿ ಸೇನಾ ಆಸ್ತಿಗಳಲ್ಲಿ ಒಂದಾಗಿದೆ. ಆಜಾದಿ ಕಾ ಅಮೃತ್ ಮಹೋತ್ಸವದ … Continued

ಧಾರವಾಡ ಸೂಪರ್​ ಮಾರ್ಕೆಟ್​ನಲ್ಲಿ ಎಸಿಪಿ ಮೇಲೆಯೇ ಪೆಟ್ರೋಲ್ ಎರಚಿದ ವ್ಯಕ್ತಿ..!

ಧಾರವಾಡ: ಹುಬ್ಬಳ್ಳಿ-ಧಾರವಾಡ ಸೂಪರ್ ಮಾರುಕಟ್ಟೆಯಲ್ಲಿ ಅಕ್ರಮ ಅಂಗಡಿ ತೆರವುಗೊಳಿಸುವ ವೇಳೆ ನ್ಯಾಯವಾದಿಯೊಬ್ಬ ತನ್ನ ಮೇಲೆ ಸೀಮೆಎಣ್ಣೆ ಸುರಿದುಕೊಂಡಿದ್ದಲ್ಲದೇ ಎಸಿಪಿ ಮೇಲೆಯೂ ಎರಚುವ ಮೂಲಕ ಹೈಡ್ರಾಮಾದ ಘಟನೆಯೊಂದು ನಡೆದಿದೆ. ಗುರುವಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಧಾರವಾಡ ನಗರದ ಸೂಪರ್ ಮಾರುಕಟ್ಟೆಗೆ ಅಕ್ರಮ ಅಂಗಡಿ ತೆರವು ಕಾರ್ಯಾಚರಣೆಗೆ ಬಂದಿದ್ದರು. ಈ ವೇಳೆ ಜೆಸಿಬಿ ತಂದು ಅಂಗಡಿ ತೆರವು … Continued

ನೆಲೆಗಾಗಿ ಹುಲಿಗಳ ಕಾದಾಟ: ಐದು ವರ್ಷದ ಹುಲಿ ಸಾವು

ಚಾಮರಾಜನಗರ:ಎರಡು ಹುಲಿಗಳ ಮಧ್ಯೆ ನೆಲೆಗಾಗಿ ಕಾದಾಟ (Territorial Fight) ನಡೆದು ಒಂದು ಗಂಡು ಹುಲಿ ಮೃತಪಟ್ಟ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ವಲಯ ವ್ಯಾಪ್ತಿಯ ಕಣಿಯನಪುರ ಗ್ರಾಮದ ಕಾಡಿನ ಬಳಿ ಈ ಘಟನೆ ನಡೆದಿದ್ದು, ಸುಮಾರು 5 ವರ್ಷದ ಗಂಡು ಹುಲಿ ಈ ಕಾಳಗದಲ್ಲಿ ಮೃತಪಟ್ಟಿದೆ. … Continued

ಸೆಪ್ಟೆಂಬರ್‌ನಿಂದ 1ರಿಂದ 8ನೇ ತರಗತಿ ಆರಂಭಿಸಲು ಚಿಂತನೆ: ಶಿಕ್ಷಣ ಸಚಿವ ನಾಗೇಶ್‌

ಬೆಂಗಳೂರು: 1 ರಿಂದ 8ನೇ ತರಗತಿಗಳನ್ನು ಸೆಪ್ಟಂಬರ್‌ನಿಂದ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ. ಇದೇ 23ರಿಂದ 9ರಿಂದ 12ನೇ ತರಗತಿಗಳು ಆರಂಭವಾಗಲಿದ್ದು, ಆನಂತರ ಇದನ್ನು ಆಧರಿಸಿ ಪರಿಸ್ಥಿತಿ ನೋಡಿಕೊಂಡು 1-8ನೇ ತರಗತಿ ಆರಂಭಿಸಬೇಕು ಎಂದು ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ. ಆಗಸ್ಟ್‌ 23 ರಿಂದ ಆರಂಭವಾಗುವ ಭೌತಿಕ ತರಗತಿಗಳಿಗೆ … Continued