ಚುನಾವಣೆ ಘೋಷಣೆಗೆ ಮುನ್ನವೇ ಪಶ್ಚಿಮ ಬಂಗಾಳಕ್ಕೆ ೧೨೫ ಕೇಂದ್ರ ಭದ್ರತಾ ಪಡೆ ತುಕಡಿ: ದೀದಿ ಸರ್ಕಾರಕ್ಕೆ ಅಚ್ಚರಿ

ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಭದ್ರತಾ ಪಡೆಗಳ ೧೨೫ ತುಕಡಿಗಳು ಪಶ್ಚಿಮ ಬಂಗಾಳಕ್ಕೆ ಆಗಮಿಸುತ್ತಿರುವುದು ರಾಜ್ಯ ಸರಕಾರಕ್ಕೆ ಅಚ್ಚರಿ ಮೂಡಿಸಿದೆ. ಚುನಾವಣಾ ಆಯೋಗದ ಅಧಿಕಾರಿಗಳ ಪ್ರಕಾರ, ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 60 ಕಂಪನಿಗಳು, ಸಶಸ್ತ್ರ ಸೀಮಾ ಬಲದ 30 ಕಂಪನಿಗಳು, ಗಡಿ ಭದ್ರತಾ ಪಡೆಯ 25 … Continued

ವಿದೇಶ ಸುತ್ತುವ ಪ್ರಧಾನಿಗೆ ರೈತರ ಸಮಸ್ಯೆ ಕೇಳಲು ಸಮಯವಿಲ್ಲ: ಪ್ರಿಯಾಂಕಾ ಲೇವಡಿ

ಪ್ರಪಂಚದ ಹಲವು ದೇಶಗಳಿಗೆ ಭೇಟಿ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಭಟನಾ ನಿರತ ರೈತರ ಕಣ್ಣೊರೆಸಲು ಸಮಯವಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ರೈತರು ದೆಹಲಿ ಗಡಿಯಲ್ಲಿ ಕಳೆದ ೯೦ ದಿನಗಳಿಂದ ಪ್ರತಿಭಟನೆ ನಡಸುತ್ತಿದ್ದಾರೆ. ಹಲವು ರೈತರು ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಜೀವ ಕಳೆದುಕೊಂಡರು. ಪ್ರತಿಭಟನಾನಿರತ ರೈತರ ವಿದ್ಯುತ್‌ ಹಾಗೂ … Continued

ಸಂಸದರು ಭಾರತೀಯ ಭಾಷೆಗಳ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು : ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ನವದೆಹಲಿ: ಸಂಸದರು ಭಾರತೀಯ ಭಾಷೆಗಳನ್ನು ಪ್ರೋತ್ಸಾಹಿಸಬೇಕು ಹಾಗೂ ಭಾಷೆಗಳ ಪ್ರಚಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ತಿಳಿಸಿದ್ದಾರೆ. ಫೆ.೨೧ರಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಅಂಗವಾಗಿ ಸಂಸದರಿಗೆ ಪತ್ರ ಬರೆದಿದ್ದಾರೆ. ನಾವು ಮೊದಲು ಮಾತನಾಡುವ ಭಾಷೆಯೇ ಮಾತೃ ಭಾಷೆ. ಮಾತೃಭಾಷೆಯನ್ನು ಉಳಿಸಿ ಬೆಳೆಸಬೇಕು. ಮಾತೃ ಭಾಷೆ ನಮ್ಮ ಸಾಹಿತ್ಯ ಕೌಶಲ, ಶೈಕ್ಷಣಿಕ … Continued

ಮಹಾರಾಷ್ಟ್ರ ಕೇರಳದಲ್ಲಿ ಕೊರೋನಾ ಸೋಂಕು ಮತ್ತೆ ಹೆಚ್ಚಳ: ಹೆಚ್ಚಿದ ೨ನೇ ಅಲೆಯ ಭೀತಿ

ನವದೆಹಲಿ: ಮಹಾರಾಷ್ಟ್ರ ಮತ್ತು ಕೇರಳ ಸೇರಿ ಕೆಲರಾಜ್ಯಗಳಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕುಸಿತ ಕಂಡಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಹಲವು ತಿಂಗಳುಗಳಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಾ ೧.೪೦ ಲಕ್ಷಕ್ಕಿಂತ ಕಡಿಮೆ ಬಂದಿತ್ತು. ಆದರೆ ಇದೀಗ ಹಲವು ರಾಜ್ಯಗಳಲ್ಲಿ ಸೋಂಕು ಏರಿಕೆ ಹಿನ್ನೆಲೆಯಲ್ಲಿ ಸಕ್ರಿಯ … Continued

ಪೆಟ್ರೋಲ್, ಡೀಸೆಲ್‌ ಬೆಲೆ ಹೆಚ್ಚಳ: ನಿರ್ಮಲಾ ಬೇಸರ

ನವದೆಹಲಿ: ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಬೇಸರದ ಸಂಗತಿ ಎಂದು ಹೇಳಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಮುಂದಿನ ದಿನಗಳಲ್ಲಿ ಇಂಧನ ಬೆಲೆ ಇಳಿಸುವುದೇ ಇದಕ್ಕೆ ಉತ್ತರವಾಗಲಿದೆ ಎಂದು ಅಭಿಪ್ರಾಪಟ್ಟಿದ್ದಾರೆ. ಗ್ರಾಹಕರಿಗೆ ಇಂಧನವನ್ನು ಯೋಗ್ಯ ಬೆಲೆಗೆ ಒದಗಿಸುವ ದಿಸೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಚರ್ಚೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. ಮುಂಬೈನಲ್ಲಿ ಪೆಟ್ರೋಲ್‌ … Continued

ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಳ: ರೈತರ ಮಹಾಪಂಚಾಯತ್‌ ರದ್ದು

ನವದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ಬೀದಿಗಿಳಿದು ಹೋರಾಟ ಮಾಡಲು ರೈತರು ನಿರ್ಧರಿಸಿದ್ದು ಅದರ ಭಾಗವಾಗಿ ಹಲವೆಡೆ ಮಹಾಪಂಚಾಯತ್ ನಡೆಸಿ, ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿದ್ಧಾರೆ. ನವದೆಹಲಿಯ ಗಡಿಭಾಗದಲ್ಲಿ ನಡೆಸುತ್ತಿರುವ ಹೋರಾಟ ಮೂರು ತಿಂಗಳ ಸಮೀಪಕ್ಕೆ ಬಂದಿದೆ. ಅದರೆ ಮಹಾರಾಷ್ಟ್ರದಲ್ಲಿ ಮಹಾ ಪಂಚಾಯತ್‌ ನಡೆಸಲು ರೈತರಿಗೆ ಕೊರೊನಾ … Continued

ಪ್ರತಿಭಟನಾನಿರತ ರೈತ ಮುಖಂಡರನ್ನು ಭೇಟಿ ಮಾಡಲಿರುವ ದೆಹಲಿ ಸಿಎಂ ಕೇಜ್ರಿವಾಲ್‌

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಭಾನುವಾರ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರ ಆಂದೋಲನದ ಮುಖಂಡರನ್ನು ಭೇಟಿ ಮಾಡಲಿದ್ದಾರೆ. ದೆಹಲಿ ವಿಧಾನಸಭೆ ಸಭಾಂಗಣದಲ್ಲಿ ಭಾನುವಾರ ಕೇಜ್ರಿವಾಲ್‌, ಹೋರಾಟ ನಿರತ ರೈತರನ್ನು ಭೇಟಿ ಮಾಡಿ ಕೃಷಿ ಕಾನೂನುಗಳು ಹಾಗೂ ರೈತರ ಕಾಳಜಿ ಕುರಿತು ಚರ್ಚಿಸಲಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ, ದೆಹಲಿ ವಿಧಾನಸಭೆಯ ಅಧಿವೇಶನದಲ್ಲಿ, ಸಿಎಂ ಕೇಜ್ರಿವಾಲ್ … Continued

ಅಜೀಂ ಪ್ರೇಮ್ ಜಿʼ ವಿರುದ್ಧ ತನಿಖೆ ಕೋರಿದ್ದ ರಿಟ್ ಅರ್ಜಿ ವಜಾ, ಅರ್ಜಿದಾರರಿಗೆ 10 ರೂ. ಲಕ್ಷ ದಂಡ

ಬೆಂಗಳೂರು: ಅಜೀಂ ಪ್ರೇಮ್ ಜಿ ಕಂಪೆನಿಗಳ ವಿರುದ್ಧ ತನಿಖೆ ಕೋರಿದ್ದ ರಿಟ್ ಅರ್ಜಿಯನ್ನ  ಹೈಕೋರ್ಟ್  ವಜಾಗೊಳಿಸಿದೆ, ಅಲ್ಲದೆ ಅರ್ಜಿದಾರರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇಂಡಿಯಾ ಅವೇಕ್ ಫಾರ್ ಟ್ರಾನ್ಸಪರೆನ್ಸಿ ಸಂಸ್ಥೆಯು  ಅರ್ಜಿ ಸಲ್ಲಿಸಿ, ಅಜೀಂ ಪ್ರೇಮ್ಜಿ  ಅವರ ಕಂಪನಿಗಳ ವಿರುದ್ಧ ಕಾರ್ಪೊರೇಟ್ ವ್ಯವಹಾರಗಳ ಇಲಾಖೆ ಮೂಲಕ ತನಿಖೆಗೆ ಕೋರಿತ್ತು. ಈ ಹಿಂದೆಯೂ ಇದೇ … Continued

ಹೊಸ ವ್ಯಾಜ್ಯ ನಿರ್ವಹಣಾ ನೀತಿ ಜಾರಿ: ಬೊಮ್ಮಾಯಿ

ಕಾರ್ಕಳ : ಶೀಘ್ರದಲ್ಲಿ ಹೊಸ ವ್ಯಾಜ್ಯ ನಿರ್ವಹಣಾ ನೀತಿ ಜಾರಿಗೆ ತರಲಾಗುತ್ತದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕಾರ್ಕಳದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೋರ್ಟ್ ಕಾಂಪ್ಲೆಕ್ಸ್ ಕಟ್ಟಡ ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ಈಗಾಗಲೇ ವ್ಯಾಜ್ಯ ನಿರ್ವಹಣೆ ನೀತಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ವಿವಿಧ ಇಲಾಖೆಗಳ ನಡುವೆ ಹೆಚ್ಚಿರುವ ವ್ಯಾಜ್ಯಗಳ ಸಂಖ್ಯೆ … Continued

ಕೊರೊನಾ ಸಂಕಷ್ಟ ಕಾಲದಲ್ಲಿ ಬಿಜೆಪಿಯಿಂದ ರಾಮ ಮಂದಿರ ದೇಣಿಗೆ ಸಂಗ್ರಹ: ಅಖಿಲೇಶ್‌ ಆರೋಪ

ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ಅಯೋಧ್ಯಾ ರಾಮಮಂದಿರಕ್ಕಾಗಿ ಜನರಿಂದ ದೇಣಿಗೆ ಪಡೆಯುತ್ತಿರುವುದನ್ನು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್‌ ಯಾದವ್‌ ಖಂಡಿಸಿದ್ದಾರೆ. ವಿಪತ್ತಿನಿಂದ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕೆಂದು ಹೇಳುವ ಬಿಜೆಪಿ ಕೊವಿಡ್‌ ವಿಪತ್ತಿನ ಸಮಯದಲ್ಲಿ ಜನರಿಂದ ಮಂದಿರಕ್ಕಾಗಿ ದೇಣಿಗೆ ಪಡೆಯುತ್ತಿದೆ ಎಂದು ಆರೋಪ ಮಾಡಿದರು. ಇತ್ತೀಚೆಗೆ ಸಂಸತ್ತಿನಲ್ಲಿ ಬಿಜೆಪಿ ಮುಖಂಡರನ್ನು ‘ಚಂದಾಜೀವಿ’ ಎಂದು ಜರಿದಿದ್ದ … Continued