ಆಮ್ಲಜನಕದ ಟ್ಯಾಂಕರ್‌ ಕ್ಷಿಪ್ರ ಸಾಗಾಟಕ್ಕೆ ರೈಲ್ವೆ, ವಾಯುಪಡೆ ವಿಮಾನ ನಿಯೋಜನೆ: ಪ್ರಧಾನಿ ಮೋದಿ

ನವ ದೆಹಲಿ: ಕೋವಿಡ್ -19 ಹೋರಾಟದಲ್ಲಿ ಹಲವಾರು ರಾಜ್ಯಗಳು ವೈದ್ಯಕೀಯ ಆಮ್ಲಜನಕದ ಕೊರತೆ ಎದುರಿಸುತ್ತಿದ್ದು, ಆಕ್ಸಿಜನ್ ಟ್ಯಾಂಕರ್‌ಗಳ ಸಾರಿಗೆ ಸಮಯವನ್ನು ಕಡಿಮೆ ಮಾಡಲು ರೈಲ್ವೆ ಮತ್ತು ವಾಯುಪಡೆಯ ವಿಮಾನಗಳನ್ನು ನಿಯೋಜಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಶುಕ್ರವಾರ ಹನ್ನೊಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉನ್ನತಮಟ್ಟದ ಸಭೆ … Continued

ಎಲ್ಲ ರಾಜ್ಯಗಳಿಗೂ ಹೆಚ್ಚುವರಿ ಆಮ್ಲಜನಕ-ರೆಮ್ಡಿಸಿವಿರ್‌ ಪೂರೈಕೆ: ಪ್ರಧಾನಿ ಮೋದಿ

ಬೆಂಗಳೂರು: ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಮ್ಲಜನಕ ಹಾಗೂ ರೆಮ್ಡಿಸಿವಿರ್‌ ವ್ಯಾಕ್ಸಿನ್‌ ಹೆಚ್ಚುವರಿ ಉತ್ಪಾದನೆ ಹಾಗೂ ಪೂರೈಕೆಗೆ ಕೇಂದ್ರ ಸರ್ಕಾರ ಸಿದ್ಧವಿದ್ದು, ರಾಜ್ಯ ಸರ್ಕಾರಗಳೂ ಪರಸ್ಪರ ಸಹಕರಿಸುವ ಮೂಲಕ ಸವಾಲನ್ನು ಸಮರ್ಥವಾಗಿ ಎದುರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಶುಕ್ರವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಅವರು, … Continued

ಇಂದು ರಾತ್ರಿ 9ರಿಂದ ವೀಕೆಂಡ್‌ ಕರ್ಫ್ಯೂ ಯಾರ್ಯಾರಿಗೆ- ಯಾವುದಕ್ಕೆ ಅವಕಾಶ.. ಯಾವುದಕ್ಕೆ ಇಲ್ಲ..

ಬೆಂಗಳೂರು: ರಾಜ್ಯದಲ್ಲಿ ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತರುವ ಪ್ರಯತ್ನದಲ್ಲಿ ಕರ್ನಾಟಕ ಸರ್ಕಾರ ಈ ವಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿ ಇಡೀ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ವಿಧಿಸಿದೆ. ಅದರೊಂದಿಗೆ, ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ರಾಜ್ಯ ಸರ್ಕಾರವು ವಾರಾಂತ್ಯದ ಕರ್ಫ್ಯೂ ಸಹ ವಿಧಿಸಿದೆ. ಕರ್ನಾಟಕದಾದ್ಯಂತ, ಹೊಸ ಲಾಕ್‌ಡೌನ್ ಮಾರ್ಗಸೂಚಿಗಳು ಏಪ್ರಿಲ್ 21 ರಂದು ರಾತ್ರಿ … Continued

ಕೊರೊನಾ ಪೀಡಿತ ತಾಯಿಗೆ ಆಮ್ಲಜನಕ ಕೇಳಲು ಬಂದವನಿಗೆ ಕಪಾಳಕ್ಕೆ ಹೊಡೆಯುತ್ತೇನೆ ಎಂದ ಕೇಂದ್ರ ಸಚಿವ.! ವಿಡಿಯೋ ವೈರಲ್‌

ನವ ದೆಹಲಿ: ಕೊರೊನಾ ಸೋಂಕು ಪೀಡಿತ ತಾಯಿಗೆ ಆಮ್ಲಜನಕ ಒದಗಿಸುವಂತೆ ಬೇಡಿಕೊಂಡ ವ್ಯಕ್ತಿಯೊಬ್ಬರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಅವರು ಕಪಾಳಕ್ಕೆ ಹೊಡೆಯುತ್ತೇನೆ ಎಂದು ಹೇಳಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಎರಡು ದಿನಗಳ ಹಿಂದೆ ದಾಮೋಹ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಘಟನೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ದಾಮೋಹ್‌ ಜಿಲ್ಲಾ … Continued

ನಾನು ಸತ್ತಿಲ್ಲ, ಬದುಕಿದ್ದೇನೆ: ಇಲ್ಲಸಲ್ಲದ ಸುದ್ದಿ ಮಾಡಬೇಡಿ

ಮುಂಬೈ,: ನಾನು ಸತ್ತಿಲ್ಲ ಬದುಕಿದ್ದೇನೆ. ನನ್ನ ಸಾವಿನ ಬಗ್ಗೆ ಇಲ್ಲ ಸಲ್ಲದ ಸುದ್ದಿ ಮಾಡಬೇಡಿ ಎಂದು ಲೋಕಸಭೆ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಮನವಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ನಿನ್ನೆ ರಾತ್ರಿ ಮಹಾಜನ್ ಅವರಿಗೆ ಟ್ವಟರಿನಲ್ಲಿ ಶ್ರದ್ದಾಂಜಲಿ ಸಲ್ಲಿಸಿದ್ದರು. ಇದರ ಜತೆಗೆ ಕೆಲ ಮಾಧ್ಯಮಗಳು ಅವರ ಸಾವಿನ ಸುದ್ದಿ ಬಿತ್ತರಿಸಿದ್ದವು. ತಮ್ಮ … Continued

ಕ್ಷಮಿಸಿ, ಕೋವಿಡ್‌ ಲಸಿಕೆಯೆಂದು ತಿಳಿದಿರಲಿಲ್ಲ ‘:ಈ ಪತ್ರದೊಂದಿಗೆ ಆಸ್ಪತ್ರೆಯಿಂದ ಕದ್ದ ಕೋವಿಡ್ ಲಸಿಕೆ ಹಿಂತಿರುಗಿಸಿದ ಕಳ್ಳರು..!

ಚಂಡೀಗಡ: ಹರಿಯಾಣದ ಜಿಂದ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ವೇಳೆ 1700 ಡೋಸ್ ಕೋವಿಡ್‌ ವೈರಸ್ ಲಸಿಕೆಯನ್ನು ಕದ್ದುಕೊಂಡು ಹೋಗಿದ್ದ ಕಳ್ಳರು ಕೆಲವೇ ಗಂಟೆಗಳಲ್ಲಿ ಅದನ್ನು ಮರಳಿ ತಂದಿಟ್ಟಿರುವ ವಿದ್ಯಮಾನ ಘಟನೆ ಬೆಳಕಿಗೆ ಬಂದಿದೆ. ಒಟ್ಟು 1270 ಡೋಸ್ ಕೊವಿಶೀಲ್ಡ್ ಲಸಿಕೆ ಹಾಗೂ 440 ಡೋಸ್ ಕೊವ್ಯಾಕ್ಸಿನ್ ಲಸಿಕೆ ಕಳ್ಳತನವಾಗಿತ್ತು ಎಂದು ಸಿವಿಲ್ ಲೈನ್ಸ್ … Continued

ಭಾರತದಲ್ಲಿ 3.30 ಲಕ್ಷ ದಾಟಿದ ದೈನಂದಿನ ಕೊರೊನಾ ಸೋಂಕು..!, ಸಾವುಗಳಲ್ಲಿಯೂ ಹೆಚ್ಚಳ..

ನವ ದೆಹಲಿ: ಭಾರತವು ಶುಕ್ರವಾರ ಸತತ ಎರಡನೇ ದಿನಕ್ಕೆ 3 ಲಕ್ಷಕ್ಕಿಂತ ಹೆಚ್ಚು ದೈನಂದಿನ ಕೊರೊನಾ ವೈರಸ್ ಸೋಂಕು (ಕೋವಿಡ್ -19) ಪ್ರಕರಣಗಳನ್ನು ವರದಿ ಮಾಡಿದೆ, ಕಳೆದ 24 ಗಂಟೆಗಳಲ್ಲಿ 3,32,730 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿದೆ. ಭಾರತವು ಗುರುವಾರ 3,14,835 ಹೊಸ ಪ್ರಕರಣಗಳನ್ನು ದಾಖಲಿಸಿತ್ತು. ಇದರೊಂದಿಗೆ, ವಿಶ್ವದ … Continued

ಉಸಿರಾಟದ ಸಮಸ್ಯೆ ಎದುರಾದ ಕೊರೊನಾ ಸೋಂಕಿತರಿಗೆ ಕೇಂದ್ರ ಆರೋಗ್ಯ ಸಚಿವಾಲಯದ ಮಹತ್ವದ ಸಲಹೆ

ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರು ಉಸಿರಾಟದ ಸಮಸ್ಯೆ ಅನುಭವಿಸಿದರೆ ಮಾಡಬೇಕಾದ ಪ್ರೋನಿಂಗ್​ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಮಾಹಿತಿ ನೀಡಿದೆ. ಆಮ್ಲಜನಕ ಮಟ್ಟ ಸುಧಾರಿಸಿಕೊಳ್ಳಲು ಮಾಡಬೇಕಾದ ಪ್ರೋನಿಂಗ್​ ಬಗ್ಗೆ ವಿಸ್ತೃತ ವರದಿಯನ್ನ ತಯಾರಿಸಲಾಗಿದೆ. ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರೋದ್ರ ಹಿನ್ನೆಲೆ ಆಸ್ಪತ್ರೆಗಳ ಅಭಾವ ಕಂಡುಬರುತ್ತಿದೆ. ಹೀಗಾಗಿ ವೈದ್ಯರು ಆದಷ್ಟು ಮನೆಯಲ್ಲೇ ಚಿಕಿತ್ಸೆ ಪಡಯಿರಿ … Continued

ಮಹಾರಾಷ್ಟ್ರ ವಿರಾರ್‌ ಆಸ್ಪತ್ರೆಯಲ್ಲಿ ಬೆಂಕಿ ಅವಘಡ:14 ಕೊರೊನಾ ರೋಗಿಗಳು ಸಾವು

ಮುಂಬೈ: ಪಾಲ್ಘರ್ ಜಿಲ್ಲೆಯ ವಾಸೈ ವಿರಾರ್ ಪುರಸಭೆಯ ಮಿತಿಯಲ್ಲಿರುವ ವಿರಾರ್‌ನ ಕೋವಿಡ್‌ -19 ಕೇಂದ್ರದಲ್ಲಿ ಶುಕ್ರವಾರ ಬೆಳಿಗ್ಗೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಕನಿಷ್ಠ 14 ಕೊರೊನಾ ವೈರಸ್ ರೋಗಿಗಳು ಮೃತಪಟ್ಟಿದ್ದಾರೆ. ಈ ಘಟನೆ ವಿಜಯ್ ವಲ್ಲಭ್ ಆಸ್ಪತ್ರೆಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಕೋವಿಡ್‌-19 ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದರ ನಂತರ ರೋಗಿಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. … Continued

ಆಮ್ಲಜನಕ ಲಭ್ಯತೆ ಪುನರ್‌ ಪರಿಶೀಲನಾ ಸಭೆ: ಮೂರು ಸಲಹೆ ನೀಡಿದ ಪ್ರಧಾನಿ

ನವ ದೆಹಲಿ: ದೇಶದಾದ್ಯಂತ ಆಮ್ಲಜನಕದ ಪೂರೈಕೆ ಪುನರ್‌ ಪರಿಶೀಲಿಸಲು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯು ಅದರ ಲಭ್ಯತೆ ಹೆಚ್ಚಳದ ಮಾರ್ಗೋಪಾಯಗಳ ಕುರಿತು ಚರ್ಚಿಸಿತು. ಈ ಸಂದರ್ಭದಲ್ಲಿ ಆಮ್ಲಜನಕ ಲಭ್ಯತೆ ಹೆಚ್ಚಳಕ್ಕೆ ಪ್ರಧಾನಿ ಮೋದಿ ಮೂರು ಸಲಹೆಗಳನ್ನು ನೀಡಿದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಿಶ್ರಾ,ಆರೋಗ್ಯ … Continued