45 ಗಂಟೆಗಳಲ್ಲಿ 20 ಸಭೆಗಳು, ದ್ವಿಪಕ್ಷೀಯ ಸಭೆ: ಪ್ರಧಾನಿ ಮೋದಿ ಜಿ20 ವೇಳಾಪಟ್ಟಿ

ನವದೆಹಲಿ: ಎರಡು ದಿನಗಳ ಸುದೀರ್ಘ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 14 ಸೋಮವಾರ ಇಂಡೋನೇಶ್ಯಾದ ಬಾಲಿಗೆ ಪ್ರಯಾಣಿಸಲಿದ್ದಾರೆ. ಇತರ ವಿಶ್ವ ನಾಯಕರೊಂದಿಗೆ ಹಲವಾರು ದ್ವಿಪಕ್ಷೀಯ ಸಭೆಗಳು ಮತ್ತು ಇಂಡೋನೇಷ್ಯಾದಲ್ಲಿನ ಭಾರತೀಯ ವಲಸಿಗರೊಂದಿಗೆ ಸಂಪರ್ಕ ಸಾಧಿಸಲು ಸಮುದಾಯ ಕಾರ್ಯಕ್ರಮ ಸೇರಿದಂತೆ 45 ಗಂಟೆಗಳ ಅವಧಿಯಲ್ಲಿ ಪ್ರಧಾನಿಯವರು ಸುಮಾರು 20 ಕಾರ್ಯಕ್ರಮಗಳನ್ನು ಹೊಂದಿದ್ದಾರೆ. … Continued

4 ರಾಜ್ಯಗಳ ರಾಜ್ಯಪಾಲರ ಕಾನೂನು ಸಲಹೆಗಾರರಾಗಿದ್ದ ವಿಕಾಸ್ ಬನ್ಸೋಡೆ ಬಿಜೆಪಿಗೆ ಸೇರ್ಪಡೆ

ನವದೆಹಲಿ : ಹಲವು ರಾಜ್ಯಗಳ ರಾಜ್ಯಪಾಲರ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದ ಸುಪ್ರೀಂ ಕೋರ್ಟ್‌ ವಕೀಲ ವಿಕಾಸ್ ಬನ್ಸೋಡೆ ಅವರು ಭಾನುವಾರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಹಂಸರಾಜ್ ಭಾರದ್ವಾಜ್ ಸೇರಿದಂತೆ ನಾಲ್ಕು ರಾಜ್ಯಗಳ ರಾಜ್ಯಪಾಲರ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದ ಸುಪ್ರೀಂ ಕೋರ್ಟ್‌ ವಕೀಲ ವಿಕಾಸ್ ಬನ್ಸೋಡೆ ಅವರು ಬಿಜೆಪಿ … Continued

ಭಾರತದಲ್ಲಿ ಶೇ.99ರಷ್ಟು ಮುಸ್ಲಿಮರು ತಮ್ಮ ಪೂರ್ವಜರು, ಸಂಸ್ಕೃತಿಯಿಂದ ‘ಹಿಂದೂಸ್ತಾನಿಗಳು’: ಆರ್‌ಎಸ್‌ಎಸ್ ನಾಯಕ

ಥಾಣೆ: ಭಾರತದಲ್ಲಿನ ಶೇಕಡಾ 99 ರಷ್ಟು ಮುಸ್ಲಿಮರು ತಮ್ಮ ಪೂರ್ವಜರು, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಈ ನೆಲದ ಮೂಲದಿಂದ“ಹಿಂದೂಸ್ತಾನಿ” ಆಗಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಮುಖರಾದ ಇಂದ್ರೇಶಕುಮಾರ್ ಭಾನುವಾರ ಹೇಳಿದ್ದಾರೆ. ಭಾರತೀಯರ ಪೂರ್ವಜರನ್ನು ನಾವು ಪರಿಗಣಿಸಿದರೆ ಅವರ ಡಿಎನ್‌ಎ ಒಂದೇ ಆಗಿದೆ ಎಂದು ಈ ಹಿಂದೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವ್ಯಕ್ತಪಡಿಸಿದ … Continued

ನಾನು ಗಾಂಧಿ ಕುಟುಂಬವನ್ನು ಪ್ರೀತಿಸುತ್ತೇನೆ, ಪ್ರತಿದಿನ ಅವರಿಗಾಗಿ ಪ್ರಾರ್ಥಿಸುತ್ತಿದ್ದೆ : ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ನಳಿನಿ

ಚೆನ್ನೈ: ನಾನು ಗಾಂಧಿ ಕುಟುಂಬವನ್ನು ಪ್ರೀತಿಸುತ್ತೇನೆ ಮತ್ತು ನಾನು ಅವರಲ್ಲಿ ಪ್ರತಿಯೊಬ್ಬರಿಗಾಗಿ ಪ್ರತಿದಿನ ಪ್ರಾರ್ಥಿಸುತ್ತೇನೆ. ನಾನು ಅವರಿಗೆ ಶುಭ ಹಾರೈಸುತ್ತೇನೆ” ಎಂದು ಜೈಲಿನಿಂದ ಬಿಡುಗಡೆಯಾಗಿರುವ ರಾಜೀವ ಗಾಂಧಿ ಹತ್ಯೆ ಅಪರಾಧಿ ನಳಿನಿ ಶ್ರೀಹರನ್ ಹೇಳಿದ್ದಾಳೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿ ಮತ್ತು ಇತರ ಐವರು ಜೀವಾವಧಿ ಅಪರಾಧಿಗಳನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದ ಒಂದು … Continued

ಭಾರತಕ್ಕೆ ಶೀಘ್ರದಲ್ಲೇ ಬರಲಿದೆ ಚಾಲಕ ರಹಿತ ರೈಲುಗಳ ಸಂಚಾರ…!

ನವದೆಹಲಿ: ಭಾರತದಲ್ಲಿ (India) ಮೊದಲ ಬಾರಿಗೆ ಮಾನವರಹಿತ ಚಾಲಿತ ರೈಲು (Unmanned Train) ಶೀಘ್ರವೇ ಸಂಚಾರ ಆರಂಭಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (DMRC)ನೊಂದಿಗೆ ಸ್ಥಳೀಯ ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಒಪ್ಪಂದಕ್ಕೆ ಸಹಿ ಹಾಕಿದ್ದು, ಸಂಕೀರ್ಣವಾದ ರೈಲ್ವೆ ಜಾಲಕ್ಕೆ ಹೆಸರುವಾಸಿಯಾದ … Continued

ಹಣಕ್ಕಾಗಿ ತನ್ನ ಪತ್ನಿಯನ್ನೇ ಬೇರೊಬ್ಬನಿಗೆ ಮಾರಾಟ ಮಾಡಿ ಮದುವೆಯನ್ನೂ ಮಾಡಿದ ಈ ಪತಿ ಮಹಾಶಯ…!

ಒರಿಸ್ಸಾದ ಕಲಹಂಡಿ ಜಿಲ್ಲೆಯ ಪೊಲೀಸರು ಶನಿವಾರ ತನ್ನ 22 ವರ್ಷದ ಹೆಂಡತಿಯನ್ನು ಬೇರೊಬ್ಬನಿಗೆ ಮಾರಾಟ ಮಾಡಿ ಆತನ ಜೊತೆ ವಿವಾಹ ಮಾಡಿದ ಕಾರಣದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಕೆಲಸ ಹುಡುಕುವ ನೆಪದಲ್ಲಿ ತನ್ನ ಹೆಂಡತಿಯನ್ನು ನವದೆಹಲಿಗೆ ಕರೆದೊಯ್ದ ನಂತರ ಹರಿಯಾಣದ ಇನ್ನೊಬ್ಬ ವ್ಯಕ್ತಿಗೆ ಮಾರಾಟ ಮಾಡಿ ಆತನೊಂದಿಗೆ ಮದುವೆ ಮಾಡಿದ ಆರೋಪದ ಮೇಲೆ 25 ವರ್ಷದ … Continued

ಟಿಕೆಟ್ ಸಿಗದ ಕಾರಣ ಟೆಲಿಫೋನ್ ಟವರ್‌ ಏರಿ ಬೆದರಿಕೆ ಹಾಕಿದ ಆಪ್ ಮುಖಂಡ…!

ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖಂಡನೊಬ್ಬ ದೆಹಲಿಯಲ್ಲಿ ಮುಂಬರುವ ಪಾಲಿಕೆ ಚುನಾವಣೆಗೆ (Election) ಟಿಕೆಟ್‌ ಸಿಗದ ಕಾರಣ ಟೆಲಿಫೋನ್ ಟವರ್ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ವಿದ್ಯಮಾನ ನಡೆದಿದೆ. ಪೂರ್ವ ದೆಹಲಿಯ ಮಾಜಿ ಕೌನ್ಸಿಲರ್ ಹಸೀಬ್-ಉಲ್ ಹಸನ್ ಟವರ್ ಏರಿ ಕುಳಿತವ. ಇನ್ನೂ ಘಟನೆಯ ಬಗ್ಗೆ ಆತನೇ ಫೇಸ್‍ಬುಕ್ ಲೈವ್ ಮಾಡಿದ್ದಾನೆ. ತನಗೆ … Continued

ಸಂಸ್ಕೃತ, ಭಗವದ್ಗೀತೆ, ಉಪನಿಷತ್ತುಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಮಾದರಿಯಾದ ಕೇರಳದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆ…!

ತ್ರಿಶೂರ್ (ಕೇರಳ): ಮಧ್ಯ ಕೇರಳದ ಜಿಲ್ಲೆಯ ತ್ರಿಶೂರ್‌ನ ಇಸ್ಲಾಮಿಕ್ ಶಿಕ್ಷಣ ನೀಡುವ ಸಂಸ್ಥೆಯೊಂದರಲ್ಲಿ ಉದ್ದನೆಯ ಬಿಳಿ ನಿಲುವಂಗಿ ಮತ್ತು ಬಿಳಿಯ ಶಿರೋವಸ್ತ್ರಗಳನ್ನು ಧರಿಸಿರುವ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ‘ಶ್ಲೋಕ ಮತ್ತು ‘ಮಂತ್ರ’ಗಳನ್ನು ಪಠಣ ಮಾಡುತ್ತಾರೆ…! ಕೇರಳದಲ್ಲಿರುವ ಈ ಇಸ್ಲಾಮಿಕ್ ಸಂಸ್ಥೆಯಲ್ಲಿ ಮಕ್ಕಳು ಹಿಂದೂ ಶಿಕ್ಷಕರ ಬಳಿ ಸಂಸ್ಕೃತ ಶ್ಲೋಕ, ಮಂತ್ರ ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಗುರುರ್‌ ಬ್ರಹ್ಮ … Continued

ಮೃತ ಅಪ್ಪನನ್ನು ಬದುಕಿಸಲು 2 ತಿಂಗಳ ಹಸುಗೂಸು ಬಲಿ ನೀಡಲು ಯತ್ನಿಸಿದ ಮಹಿಳೆ…!

ನವದೆಹಲಿ: ತನ್ನ ತಂದೆಯನ್ನು ಬದುಕಿಸಲು ಮಹಿಳೆಯೊಬ್ಬರು 2 ತಿಂಗಳ ಹಸುಗೂಸನ್ನು ಬಲಿಕೊಡಲು ಪ್ರಯತ್ನಿಸಿದ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. 25 ವರ್ಷದ ಮಹಿಳೆಯೊಬ್ಬಳು ಸತ್ತ ತನ್ನ ಮೃತ ತಂದೆ ಮರಳಿ ಬದುಕಬೇಕು ಎಂಬ ಆಶಯದಲ್ಲಿ ಹಸುಗೂಸನ್ನೇ ನರಬಲಿ ನೀಡಲು ಪ್ರಯತ್ನಿಸಿದ್ದಾಳೆ. ದೆಹಲಿ ಪೊಲೀಸರು ಶುಕ್ರವಾರ 24 ಗಂಟೆಗಳಲ್ಲಿ ನರಬಲಿಯಾಗುತ್ತಿದ್ದ ಮಗುವನ್ನು ರಕ್ಷಿಸಿದ್ದಾರೆ. ಅಲ್ಲದೆ, … Continued

ನವೆಂಬರ್ 10ರ ವರೆಗೆ 10.54 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹ, 31% ರಷ್ಟು ಏರಿಕೆ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಒಟ್ಟು 10.54 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದೆಕಾರ್ಪೊರೇಟ್ ಮತ್ತು ವೈಯಕ್ತಿಕ ಆದಾಯದ ಮೇಲಿನ ತೆರಿಗೆ ಸಂಗ್ರಹವು ಶೇ. 31ರಷ್ಟು ಏರಿಕೆ ಕಂಡಿದೆ ಎಂದು ಆದಾಯ ತೆರಿಗೆ ಇಲಾಖೆ ಶುಕ್ರವಾರ ತಿಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹವು (ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ … Continued