ಮುರುಘಾ ಶರಣರ ಪೀಠ ತ್ಯಾಗಕ್ಕೆ ನಿರ್ದೇಶಿಸಲು ಕೋರಿ ಹೈಕೋರ್ಟ್‌ಗೆ ಶಾಸಕ ಯತ್ನಾಳ ಮನವಿ

ಬೆಂಗಳೂರು: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಮುರುಘಾ ಮಠದ ಪೀಠಾಧೀಶರಾದ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಪೀಠ ತ್ಯಾಗ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ವಿಜಯಪುರದ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಶನಿವಾರ ಪತ್ರ ಬರೆದಿದ್ದಾರೆ. ಮುರುಘಾ ಮಠದ ಆಡಳಿತ ಮತ್ತು … Continued

ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆ ಮಾತನಾಡುವ ಸಿಬ್ಬಂದಿ ನೇಮಕ ಮಾಡಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

ನವದೆಹಲಿ: ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆ ಮಾತನಾಡುವ ಸಿಬ್ಬಂದಿ ನೇಮಕ ಮಾಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಶುಕ್ರವಾರ, ಮುಂಬೈನಲ್ಲಿ ಭಾರತೀಯ ಬ್ಯಾಂಕ್‌ಗಳ ಸಂಘದ 75ನೇ ವಾರ್ಷಿಕ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಸೀತಾರಾಮನ್ ಶುಕ್ರವಾರ ಈ ಹೇಳಿಕೆ ನೀಡಿದ್ದಾರೆ. ಬ್ಯಾಂಕ್‌ಗಳು ಗ್ರಾಹಕರೊಂದಿಗೆ ಮಾತನಾಡುವ ರೀತಿಯಲ್ಲಿ “ಒಳಗೊಳ್ಳುವಿಕೆಯನ್ನು ತೋರಿಸಬೇಕು. ನೀವು ಪ್ರಾದೇಶಿಕ ಭಾಷೆ ಮಾತನಾಡದ … Continued

ನಮೀಬಿಯಾದಿಂದ ಭಾರತಕ್ಕೆ ಎಂಟು ಚಿರತೆಗಳನ್ನು ತಂದ ಬೋಯಿಂಗ್ ಜೆಟ್ ಒಳಗೆ ಹೇಗಿತ್ತು ವ್ಯವಸ್ಥೆ ..?…ಇಲ್ಲಿದೆ ನೋಡಿ

ನವದೆಹಲಿ: ಶನಿವಾರ ಮಧ್ಯಪ್ರದೇಶದ ಕುನೊ-ಪಾಲ್ಪುರ್ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಪಿಎನ್‌ಪಿ) ಎಂಟು ಚಿರತೆಗಳನ್ನು ಭಾರತೀಯ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು “ಐತಿಹಾಸಿಕ ದಿನ” ಎಂದು ಕರೆದಿದ್ದಾರೆ. ಐದು ಹೆಣ್ಣು ಮತ್ತು ಮೂರು ಗಂಡು ಚಿರತೆಗಳಿಗೆ ಸ್ಥಳಾವಕಾಶ ಕಲ್ಪಿಸಲು ವಿಶೇಷವಾಗಿ ಕಸ್ಟಮೈಸ್ ಮಾಡಲಾದ ಬೋಯಿಂಗ್ 747 ನಲ್ಲಿ ಚಿರತೆಗಳು ಭಾರತಕ್ಕೆ ಬಂದವು. ಈ ದೊಡ್ಡ … Continued

ನಬಾರ್ಡ್​ನಲ್ಲಿ 177 ಹುದ್ದೆಗೆ ನೇಮಕಾತಿ: ಅರ್ಜಿ ಸಲ್ಲಿಕೆ ಆರಂಭ, ಪದವಿಯಾದವರು ಸಲ್ಲಿಸಬಹುದು

ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್ (NABARD) 177 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಸಹಾಯಕ ವ್ಯವಸ್ಥಾಪಕ ಹುದ್ದೆ ಭರ್ತಿಗೆ ನಬಾರ್ಡ್​ ಅರ್ಜಿ ಆಹ್ವಾನಿಸಿದ್ದು, ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​​ ​10. 177 ಹುದ್ದೆಗಳಲ್ಲಿ ಕರ್ನಾಟಕ ವೃಂದಕ್ಕೆ 4 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಬ್ಯಾಂಕ್ ಹೆಸರು: … Continued

ನಮೀಬಿಯಾದಿಂದ ಬಂದ ಚಿರತೆಗಳು ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಲಿಡುತ್ತಿದ್ದಂತೆ ಮಧ್ಯಪ್ರದೇಶದ ಈ ಹಳ್ಳಿಗಳಲ್ಲಿ ಭೂಮಿ ಬೆಲೆ ಗಗನಕ್ಕೆ…!

ಭೋಪಾಲ್: ಭಾರತ, ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾ ಮೂರು ದೇಶಗಳನ್ನು ಒಳಗೊಂಡಿರುವ ಏಶಿಯಾಟಿಕ್‌ ಚಿರತೆಗಳ ಮೊದಲ ಅಂತರ್-ಖಂಡಾಂತರ ಸ್ಥಳಾಂತರ ಯೋಜನೆ ಮೂಲಕ ತಂದಿದ್ದರಿಂದ ಭಾರತವನ್ನು ವಿಶ್ವ ಭೂಪಟದಲ್ಲಿ ಮತ್ತೊಮ್ಮೆ ಬಂದಿದೆ. ನಮೀಬಿಯಾದಿಂದ ಎಂಟು ಚಿರತೆಗಳು ಆಗಮಿಸಿದ್ದು, ಉಳಿದ 12 ಚಿರತೆಗಳನ್ನು ಮುಂದಿನ ತಿಂಗಳು ದಕ್ಷಿಣ ಆಫ್ರಿಕಾದಿಂದ ಇಲ್ಲಿಗೆ ಸ್ಥಳಾಂತರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಚಿರತೆಗಳನ್ನು … Continued

70 ವರ್ಷಗಳ ನಂತರ ಭಾರತದ ನೆಲಕ್ಕೆ ಕಾಲಿಟ್ಟ ಏಶಿಯಾಟಿಕ್‌ ಚಿರತೆಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನದ ಕಾಡಿಗೆ ಬಿಟ್ಟ ಪ್ರಧಾನಿ ಮೋದಿ | ವೀಕ್ಷಿಸಿ

ಭಾರತದಲ್ಲಿ ಅಳಿದು ಹೋಗಿ 70 ವರ್ಷಗಳ ನಂತರ, ಚಿರತೆಗಳು ಭಾರತದ ನೆಲಕ್ಕೆ ಮರಳಿವೆ. ಮಧ್ಯಪ್ರದೇಶದ ಕುನೊ-ಪಾಲ್ಪುರ್ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಪಿಎನ್‌ಪಿ) ಎಂಟು ಏಷಿಯಾಟಿಕ್‌ ಚಿರತೆಗಳನ್ನು ಶನಿವಾರ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು “ಐತಿಹಾಸಿಕ ದಿನ” ಎಂದು ಬಣ್ಣಿಸಿದ್ದಾರೆ. ಭಾರತವು ಹಿಂದೆ ಏಷ್ಯಾಟಿಕ್ ಚಿರತೆಗಳಿಗೆ ನೆಲೆಯಾಗಿತ್ತು, ಆದರೆ 1952 ರ ವೇಳೆಗೆ ಈ … Continued

ಶಾಂಘೈ ಸಹಕಾರ ಸಂಘಟನೆಯ ಮೊದಲ ಪ್ರವಾಸಿ-ಸಾಂಸ್ಕೃತಿಕ ರಾಜಧಾನಿಯಾಗಿ ಕಾಶಿ ಹೆಸರು ಘೋಷಣೆ

ನವದೆಹಲಿ: ಶಾಂಘೈ ಸಹಕಾರ ಸಂಘಟನೆಯ (SCO) ನಾಯಕರು ಶುಕ್ರವಾರ ಭಾರತದ ಅಧ್ಯಾತ್ಮಿಕ ಹಾಗೂ ಧಾರ್ಮಿಕ ವಾರಾಣಸಿ (ಕಾಶಿ)ಯನ್ನು 2022-23ರ ಗುಂಪಿನ ಮೊದಲ ಪ್ರವಾಸಿ ಮತ್ತು ಸಾಂಸ್ಕೃತಿಕ ರಾಜಧಾನಿಯಾಗಿ ಅನುಮೋದಿಸಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಮಾಧ್ಯಮಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಈ ಐತಿಹಾಸಿಕ ಉಜ್ಬೆಕ್ ನಗರ ಸಮರ್‌ಕಂಡ್‌ನಲ್ಲಿ ನಡೆದ SCO ಶೃಂಗಸಭೆಯಲ್ಲಿ ಭಾರತೀಯ ನಿಯೋಗವನ್ನು ಪ್ರಧಾನಿ … Continued

ಶಾಂಘೈ ಸಹಕಾರ ಸಂಘಟನೆ ಸಭೆಯಲ್ಲಿ ರಷ್ಯಾ ಅಧ್ಯಕ್ಷ ಪುತಿನ್ ಪ್ರಧಾನಿ ಮೋದಿಗೆ ಜನ್ಮದಿನದ ಶುಭಾಶಯ ಏಕೆ ಹೇಳಲಿಲ್ಲ?…ಕಾರಣ ಇಲ್ಲಿದೆ

ನವದೆಹಲಿ: ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಒಂದು ದಿನ ಮುಂಚಿತವಾಗಿ, ಅವರು ತಾಜಕಿಸ್ತಾನದಲ್ಲಿ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆಯ ಭಾಗವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರನ್ನು ಭೇಟಿ ಮಾಡಿದರು. ಆದಾಗ್ಯೂ, ಮರುದಿನದ ತನ್ನ ಜನ್ಮದಿನವಿರುವ ಪ್ರಧಾನಿ ಮೋದಿಗೆ ಜನ್ಮದಿನದ ಶುಭಾಶಯ ಹೇಳಲು ಸಾಧ್ಯವಿಲ್ಲ ಎಂದು ಪುತಿನ್‌ ಹೇಳಿದರು. ನನ್ನ “ಆತ್ಮೀಯ … Continued

ಭಾರತಕ್ಕೆ ಬಂದಿಳಿದ ಎಂಟು ಏಸಿಯಾಟಿಕ್‌ ಚಿರತೆಗಳು: ಅವನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಲಿರುವ ಪ್ರಧಾನಿ ಮೋದಿ

ನವದೆಹಲಿ: ನಮೀಬಿಯಾದಿಂದ ಎಂಟು ಚಿರತೆಗಳು ತಮ್ಮ ಹೊಸ ಮನೆಯಾದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸಿದ್ದು, ಅವುಗಳನ್ನು ಭಾರತದಲ್ಲಿ ಮತ್ತೆ ಪರಿಚಯಿಸುವ ಕಾರ್ಯಕ್ರಮದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಲಿದ್ದಾರೆ. ಎಂಟು ಚಿರತೆಗಳನ್ನು ಹೊತ್ತ ವಿಮಾನವು ಬೆಳಿಗ್ಗೆ 8 ಗಂಟೆಗೆ ಸ್ವಲ್ಪ ಮೊದಲು ಗ್ವಾಲಿಯರ್‌ನ ಮಹಾರಾಜಪುರದ ವಾಯುನೆಲೆಗೆ … Continued

ಮದುವೆಯಾದ 8 ವರ್ಷಗಳ ನಂತರ, ತನ್ನ ಪತಿ ಮಹಿಳೆಯಾಗಿದ್ದಳು ಎಂದು ಕಂಡುಕೊಂಡ ಹೆಂಡತಿ

ನವದೆಹಲಿ: ಗುಜರಾತ್‌ನ ವಡೋದರದ 40 ವರ್ಷದ ಮಹಿಳೆಯೊಬ್ಬರು ಮದುವೆಯಾಗಿ 8 ವರ್ಷಗಳಾದ ನಂತರ ತನ್ನ ಪತಿ ಮಹಿಳೆಯಾಗಿದ್ದು,  ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ ಎಂದು ಕಂಡುಕೊಂಡ ನಂತರ ಆಘಾತಕ್ಕೊಳಗಾಗಿದ್ದಾರೆ. ಗೋತ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಶೀತಲ್ ಎಂಬ ಮಹಿಳೆ ವಿರಾಜ್ ವರ್ಧನ್ (ಹಿಂದಿನ ವಿಜಯತಾ) ವಿರುದ್ಧ “ಅಸ್ವಾಭಾವಿಕ ಲೈಂಗಿಕತೆ” ಮತ್ತು … Continued