ದಕ್ಷಿಣ ಭಾರತದ ಹಿರಿಯ ನಟ ಶರತ್ ಬಾಬು ಆರೋಗ್ಯ ಸ್ಥಿತಿ ಗಂಭೀರ

ಹೈದರಾಬಾದ್ : ದಕ್ಷಿಣ ಭಾರತದ ಹಿರಿಯ  ನಟ ಶರತ್ ಬಾಬು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.  71 ವರ್ಷದ ನಟನನ್ನು ಎಐಜಿ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಿಸಲಾಗಿದೆ. ಬಹು ಅಂಗಾಂಗದ ತೊಂದರೆಯಿಂದ ನಟನ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ಹೇಳಿವೆ. ಕೆಲವು ವಾರಗಳ ಹಿಂದೆ, ಹಿರಿಯ ನಟ ಶರತ್‌ ಬಾಬು ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ … Continued

ಇಲ್ಲಿಯೇ ತಿನ್ನುತ್ತೇವೆ…ಇಲ್ಲಿಯೇ ಮಲಗುತ್ತೇವೆ…”: ದೆಹಲಿಯಲ್ಲಿ ಮತ್ತೆ ದೇಶದ ಅಗ್ರಮಾನ್ಯ ಕುಸ್ತಿಪಟುಗಳ ಪ್ರತಿಭಟನೆ

ನವದೆಹಲಿ: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಈ ವರ್ಷದ ಆರಂಭದಲ್ಲಿ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಮತ್ತು ಇತರ ತರಬೇತುದಾರರ ವಿರುದ್ಧ ಪ್ರತಿಭಟನೆ ನಡೆಸಿದ್ದ ಭಾರತದ ಅಗ್ರಮಾನ್ಯ ಕುಸ್ತಿಪಟುಗಳು ಹೊಸ ಪೊಲೀಸ್ ದೂರಿನೊಂದಿಗೆ ದೆಹಲಿಯ ಜಂತರ್ ಮಂತರ್‌ಗೆ ಪ್ರತಿಭಟನೆಗೆ ಮರಳಿದ್ದಾರೆ. ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ … Continued

ಬೆಳ್ಳಿ ಬಳಸಿ ತಯಾರಿಸಿದ 100 ರೂಪಾಯಿ ಮುಖಬೆಲೆಯ ಹೊಸ ನಾಣ್ಯ ಬಿಡುಗಡೆ ಮಾಡಲಿರುವ ಪ್ರಧಾನಿ ಮೋದಿ : ಈ ನಾಣ್ಯದ ವಿಶೇಷತೆ ಏನು?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಬಾನುಲಿ ಕಾರ‍್ಯಕ್ರಮ ‘ಮನ್‌ ಕಿ ಬಾತ್‌’ನ 100 ಸಂಚಿಕೆಗಳು ಏ.30ರಂದು ಪೂರ್ಣಗೊಳ್ಳಲಿವೆ. ಇದರ ನೆನಪಿಗಾಗಿ 100 ರೂಪಾಯಿ ವಿಶೇಷ ಹೊಸ ನಾಣ್ಯ ಬಿಡುಗಡೆಯಾಗಲಿದೆ. 20 ರೂಪಾಯಿ ನಾಣ್ಯವು ಅತಿ ಹೆಚ್ಚು ಮುಖಬೆಲೆಯ ಚಲಾವಣೆಯಲ್ಲಿರುವ ನಾಣ್ಯವಾಗಿತ್ತು. ಆದರೆ ಕೆಲವೇ ದಿನಗಳಲ್ಲಿ 100 ರೂಪಾಯಿ ನಾಣ್ಯ ಸಹ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ … Continued

ಶೀಘ್ರದಲ್ಲೇ ಭಾರತದ ರೂಪಾಯಿಯಲ್ಲಿ ನಡೆಯಲಿದೆ ಅಂತಾರಾಷ್ಟ್ರೀಯ ವ್ಯಾಪಾರ: ಪಿಯೂಷ್ ಗೋಯಲ್

ರಾಜಕೋಟ್: ವಿವಿಧ ದೇಶಗಳ ಹಲವಾರು ಬ್ಯಾಂಕ್‌ಗಳು ಭಾರತೀಯ ಬ್ಯಾಂಕ್‌ಗಳಲ್ಲಿ ವಿಶೇಷ ವೋಸ್ಟ್ರೋ ಖಾತೆಗಳನ್ನು ತೆರೆಯುತ್ತಿರುವುದರಿಂದ ವ್ಯಾಪಾರಿಗಳು ಶೀಘ್ರದಲ್ಲೇ ಭಾರತೀಯ ಕರೆನ್ಸಿ ರೂಪಾಯಿಯಲ್ಲಿ ವಿದೇಶಿ ವ್ಯಾಪಾರವನ್ನು ಇತ್ಯರ್ಥಪಡಿಸಲು ಸಾಧ್ಯವಾಗುತ್ತದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಶನಿವಾರ ಭರವಸೆ ವ್ಯಕ್ತಪಡಿಸಿದ್ದಾರೆ. ಯುಕೆ, ಸಿಂಗಾಪುರ ಮತ್ತು ನ್ಯೂಜಿಲೆಂಡ್ ಸೇರಿದಂತೆ 18 ದೇಶಗಳ ಕರೆಸ್ಪಾಂಡೆಂಟ್ ಬ್ಯಾಂಕ್‌ಗಳ ವಿಶೇಷ … Continued

ಪರಾರಿಯಾದ 36 ದಿನಗಳ ನಂತರ ಪೊಲೀಸರ ಮುಂದೆ ಶರಣಾದ ಖಾಲಿಸ್ತಾನಿ ಪ್ರತಿಪಾದಕ ಅಮೃತಪಾಲ್ ಸಿಂಗ್ ; ಬಂಧನ

ನವದೆಹಲಿ: ಮಾರ್ಚ್ 18 ರಿಂದ ಪರಾರಿಯಾಗಿದ್ದ ಖಾಲಿಸ್ತಾನಿ ಪ್ರತಿಪಾದಕ ಅಮೃತಪಾಲ್ ಸಿಂಗ್ ಇಂದು, ಭಾನುವಾರ ಮೊಗಾದಲ್ಲಿ ಪಂಜಾಬ್ ಪೊಲೀಸರ ಮುಂದೆ ಶರಣಾಗಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನವನ್ನು ದೃಢೀಕರಿಸಿದ ಪಂಜಾಬ್ ಪೊಲೀಸರು ಶಾಂತಿಯನ್ನು ಕಾಪಾಡುವಂತೆ ಮತ್ತು ಸುಳ್ಳು ಸುದ್ದಿಗಳನ್ನು ಹರಡದಂತೆ ಜನರಿಗೆ ಕೇಳಿಕೊಂಡಿದ್ದಾರೆ. “ಅಮೃತಪಾಲ್ ಸಿಂಗ್‌ ನನ್ನು ಪಂಜಾಬ್‌ನ ಮೋಗಾದಲ್ಲಿ ಬಂಧಿಸಲಾಗಿದೆ. ಹೆಚ್ಚಿನ ವಿವರಗಳನ್ನು ಪಂಜಾಬ್ … Continued

ಜೈಶಂಕರ ಪೋನ್‌ ಕರೆ ಮಾಡಿದ ನಂತರ ಯುದ್ಧ ಪೀಡಿತ ಸುಡಾನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ಸೌದಿ ಅರೇಬಿಯಾ

ನವದೆಹಲಿ: ಹಿಂಸಾಚಾರ ಪೀಡಿತ ದೇಶವಾದ ಸುಡಾನ್‌ನಿಂದ ಭಾರತೀಯರು ಮತ್ತು ಇತರ ರಾಷ್ಟ್ರಗಳ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಸೌದಿ ಅರೇಬಿಯಾ ಶನಿವಾರ ಪ್ರಕಟಿಸಿದೆ. ಸೌದಿ ಅರೇಬಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯಲ್ಲಿ, “ಸುಡಾನ್ ಗಣರಾಜ್ಯದಿಂದ ಸ್ಥಳಾಂತರಿಸಲ್ಪಟ್ಟ ನಾಗರಿಕರ ಸುರಕ್ಷಿತ ಆಗಮನ ಘೋಷಿಸಲು ನಾವು ಸಂತೋಷಪಡುತ್ತೇವೆ. ಸಶಸ್ತ್ರ ಪಡೆಗಳ ವಿವಿಧ ವಿಭಾಗಗಳ ಬೆಂಬಲದೊಂದಿಗೆ ರಾಯಲ್ ಸೌದಿ ನೌಕಾ … Continued

ಸತ್ಯ ಹೇಳಿದ್ದಕ್ಕೆ ಬೆಲೆ ತೆರಬೇಕಾಯ್ತು… ಆದರೆ …”: ದೆಹಲಿ ಬಂಗಲೆ ಖಾಲಿ ಮಾಡಿದ ನಂತರ ರಾಹುಲ್ ಗಾಂಧಿ

ನವದೆಹಲಿ : ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ನಂತರ ಶನಿವಾರ ನವದೆಹಲಿಯಲ್ಲಿರುವ ಅಧಿಕೃತ ನಿವಾಸ ಖಾಲಿ ಮಾಡಿದ ಬಳಿಕ ಮಾತನಾಡಿದ ರಾಹುಲ್‌ ಗಾಂಧಿ ಸತ್ಯ ಮಾತನಾಡಿದ್ದಕ್ಕಾಗಿ ಯಾವುದೇ ಬೆಲೆ ತೆರಲು ಸಿದ್ಧ ಎಂದು ಹೇಳಿದ್ದಾರೆ. 2005 ರಿಂದ ರಾಹುಲ್‌ ಗಾಂಧಿ ಅವರು, 12 ತುಘಲಕ್ ಲೇನ್‌ನಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದರು. ಗುಜರಾತ್‌ನ ಸೂರತ್‌ನ ನ್ಯಾಯಾಲಯವು ಅಪರಾಧಿ ಎಂದು … Continued

2005ರಿಂದ ವಾಸವಿದ್ದ ಸರ್ಕಾರಿ ಬಂಗಲೆ ಖಾಲಿ ಮಾಡಿದ ರಾಹುಲ್ ಗಾಂಧಿ

ನವದೆಹಲಿ:  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನ ಕೆಳಮನೆಯ ಸಂಸದರಾಗಿ ಅನರ್ಹಗೊಂಡ ನಂತರ ಗಡುವಿನ ಕೊನೆಯ ದಿನವಾದ ಇಂದು, ಶನಿವಾರ ಕೇಂದ್ರ ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದಾರೆ. ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬೆಳಿಗ್ಗೆಯಿಂದ ಎರಡು ಬಾರಿ ಬಂಗಲೆಗೆ … Continued

ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ ಬಿ.ವಿ. ವಿರುದ್ಧ ಕಿರುಕುಳ ಆರೋಪದ ನಂತರ ಅಸ್ಸಾಂ ಯುವ ಕಾಂಗ್ರೆಸ್ ಮುಖ್ಯಸ್ಥೆ ಅಂಕಿತಾ ದತ್ತಾ ಉಚ್ಚಾಟಿಸಿದ ಕಾಂಗ್ರೆಸ್‌

ನವದೆಹಲಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಶನಿವಾರ ಅಸ್ಸಾಂ ರಾಜ್ಯದ ಯುವ ಕಾಂಗ್ರೆಸ್ (ಎಪಿವೈಸಿ) ಅಧ್ಯಕ್ಷೆ ಅಂಗಿತಾ ದತ್ತಾ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಅವರ “ಪಕ್ಷ ವಿರೋಧಿ ಚಟುವಟಿಕೆ” ಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಚಾಟಿಸಲಾಗಿದೆ ಎಂದು ತಿಳಿಸಲಾಗಿದೆ. ರಾಷ್ಟ್ರೀಯ ಯುವ ಕಾಂಗ್ರೆಸ್‌ ಭಾರತೀಯ ಯುವ ಕಾಂಗ್ರೆಸ್ … Continued

ಟ್ವಿಟರ್‌ಗೆ ಈಗ ಬ್ಲೂ ಸ್ಕೈ ಸವಾಲು : ಆಂಡ್ರಾಯ್ಡ್ ಅಪ್ಲಿಕೇಶನಿನಲ್ಲಿ ಬ್ಲೂ ಸ್ಕೈ ಪ್ರಾರಂಭಿಸಿದ ಜ್ಯಾಕ್ ಡಾರ್ಸೆ…!

ಟ್ವಿಟರ್‌ ಸಹ-ಸಂಸ್ಥಾಪಕ ಮತ್ತು ಮಾಜಿ ಟ್ವಿಟರ್ ಸಿಇಒ ಜ್ಯಾಕ್ ಡಾರ್ಸೆ ಅವರು ಟ್ವಿಟರ್‌ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ಗೆ ಪರ್ಯಾಯವಾಗಿ ಬ್ಲೂ ಸ್ಕೈ ಎಂಬ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಆಂಡ್ರಾಯ್ಡ್‌ನಲ್ಲಿ ಅನಾವರಣಗೊಳಿಸಿದ್ದಾರೆ ಎಂದು ವರದಿಯಾಗಿದೆ. ನಾವು AT ಪ್ರೋಟೋಕಾಲ್ ಅನ್ನು ನಿರ್ಮಿಸುತ್ತಿದ್ದೇವೆ, ಇದು ಸಾಮಾಜಿಕ ನೆಟ್‌ವರ್ಕಿಂಗ್‌ಗಾಗಿ ಹೊಸ ಅಡಿಪಾಯವನ್ನು ರಚಿಸುತ್ತಿದೆ, ಇದು ಪ್ಲಾಟ್‌ಫಾರ್ಮ್‌ಗಳಿಂದ ರಚನೆಕಾರರಿಗೆ ಸ್ವಾತಂತ್ರ್ಯವನ್ನು ನೀಡುತ್ತದೆ, ಡೆವಲಪರ್‌ಗಳಿಗೆ … Continued