ಲೋಕಸಭೆ, ವಿಧಾನಸಭೆ ಚುನಾವಣೆ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚದ ಮಿತಿ ಹೆಚ್ಚಳ

ನವದೆಹಲಿ: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು 70 ಲಕ್ಷದಿಂದ 95 ಲಕ್ಷಕ್ಕೆ ಮತ್ತು ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ವೆಚ್ಚವನ್ನು 28 ​​ಲಕ್ಷದಿಂದ 40 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಚುನಾವಣಾ ಆಯೋಗ ಗುರುವಾರ ಕಾನೂನು ಸಚಿವಾಲಯದ ಅಧಿಸೂಚನೆಯನ್ನು ಉಲ್ಲೇಖಿಸಿ ತಿಳಿಸಿದೆ. ಚುನಾವಣಾ ಸಮಿತಿ ನೀಡಿದ ಶಿಫಾರಸಿನ ಮೇರೆಗೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. … Continued

ಪಶ್ಚಿಮ ಬಂಗಾಳದಲ್ಲಿ ಗುರುವಾರ 15,421 ಹೊಸ ಕೋವಿಡ್ ಪ್ರಕರಣಗಳು ದಾಖಲು, 350ರಷ್ಟು ವೈದ್ಯರು-ವೈದ್ಯಕೀಯ ಸಿಬ್ಬಂದಿಗೆ ಸೋಂಕು..!

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕೋವಿಡ್ -19 ಪರಿಸ್ಥಿತಿಯು ಗಂಭೀರವಾಗಿಯೇ ಮುಂದುವರೆದಿದೆ, ಏಕೆಂದರೆ ರಾಜ್ಯವು ಕೋವಿಡ್ ಸೋಂಕುಗಳಲ್ಲಿ ಭಾರಿ ಏರಿಕೆಯನ್ನು ದಾಖಲಿಸುತ್ತಿದೆ. ಸಾಲ್ಟ್ ಲೇಕ್ ಕಚೇರಿಯ ಕನಿಷ್ಠ ಹದಿನೈದು ಜಾರಿ ನಿರ್ದೇಶನಾಲಯ (ಇಡಿ) ಉದ್ಯೋಗಿಗಳು ಕೋವಿಡ್‌ ಸೋಂಕಿಗೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಳೆದ 24 ಗಂಟೆಗಳಲ್ಲಿ 15,421 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ … Continued

ಮಹಾರಾಷ್ಟ್ರದಲ್ಲಿ 36,265 ಹೊಸ ಕೋವಿಡ್ ಪ್ರಕರಣಗಳು ದಾಖಲು, ಮುಂಬೈನಲ್ಲಿ ಇದುವರೆಗಿನ ಅತಿ ಹೆಚ್ಚು ಏಕದಿನದ ಜಿಗಿತ..!

ಮುಂಬೈ: ಮುಂಬೈ ಗುರುವಾರ 20,181 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಇದುವರೆಗಿನ ಅತಿ ಹೆಚ್ಚು ದೈನಂದಿನ ಸೋಂಕಿನ ವರದಿ ಇದಾಗಿದೆ. ಇದೇವೇಳೆ ನಾಲ್ಕು ಸಾವುಗಳು ದಾಖಲಾಗಿದೆ. ಆದಾಗ್ಯೂ, ಮಹಾನಗರ ಪಾಲಿಕೆಯ ಗ್ರೇಟರ್ ಮುಂಬೈನ ಸಾರ್ವಜನಿಕ ಆರೋಗ್ಯ ವಿಭಾಗವು ಒದಗಿಸಿದ ವಿವರಗಳ ಪ್ರಕಾರ, ತಾಜಾ ಕೊರೊನಾವೈರಸ್ ಪ್ರಕರಣಗಳಲ್ಲಿ 85 ಪ್ರತಿಶತವು ಲಕ್ಷಣರಹಿತವಾಗಿವೆ. ಇಲ್ಲಿಯವರೆಗೆ, ಲಭ್ಯವಿರುವ … Continued

ತೆಲುಗಿನ ಖ್ಯಾತ ನಟ ಮಹೇಶ್​ ಬಾಬುಗೆ ಕೊವಿಡ್ ಸೋಂಕು

ತೆಲುಗಿನ ಖ್ಯಾತ ನಟ ಮಹೇಶ್​ ಬಾಬು ಅವರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಈ ಕುರಿತು ಅವರು ಟ್ವೀಟ್‌ ಮಾಡಿದ್ದು, ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ಕೊವಿಡ್​ ಸೋಂಕು ತಗುಲಿದೆ ಎಂದು ತಿಳಿಸಿದ್ದಾರೆ. ನನಗೆ ಕೊವಿಡ್​ 19 ಅಂಟಿದೆ. ನಾನು ಮನೆಯಲ್ಲಿ ಕ್ವಾರಂಟೈನ್​ ಆಗಿದ್ದೇನೆ. ವೈದ್ಯರ ಸೂಚನೆ ಹಾಗೂ ಮಾರ್ಗದರ್ಶನವನ್ನು ಅನುಸರಿಸುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ನನ್ನ … Continued

ಒಡಿಶಾದಲ್ಲಿ ಓಮಿಕ್ರಾನ್‌ ವೈರಸ್ಸಿಂದ ಮೊದಲ ಸಾವು, ದೇಶದಲ್ಲಿ ಎರಡನೇ ಸಾವು: ವರದಿ

ಒಡಿಶಾ ಗುರುವಾರ ತನ್ನ ಮೊದಲ ಮತ್ತು ದೇಶದ ಎರಡನೇ ದೃಢಪಡಿಸಿದ ಓಮಿಕ್ರಾನ್-ಸಂಬಂಧಿತ ಸಾವನ್ನು ವರದಿ ಮಾಡಿದೆ. ರಾಜಸ್ಥಾನದ ಉದಯಪುರದ 72 ವರ್ಷದ ವ್ಯಕ್ತಿಯ ಸಾವನ್ನು ದೇಶದ ಮೊದಲ “ಓಮಿಕ್ರಾನ್ ಸಾವು” ಎಂದು ಪರಿಗಣಿಸಲಾಗಿದೆ ಎಂದು ಕೇಂದ್ರ ಸರ್ಕಾರ 24 ಗಂಟೆಗಳ ಮೊದಲು ಹೇಳಿತ್ತು. ಒಡಿಶಾದಲ್ಲಿ, ರಾಜ್ಯದ ಮೊದಲ ಓಮಿಕ್ರಾನ್ ಸಂಬಂಧಿತ ಸಾವು ಬಲಂಗೀರ್ ಜಿಲ್ಲೆಯಲ್ಲಿ ಬೆಳಕಿಗೆ … Continued

ಬುಲ್ಲಿ ಬಾಯಿ ಆ್ಯಪ್ ಸೃಷ್ಟಿಕರ್ತ ನೀರಜ್ ಬಿಷ್ಣೋಯ್ ಅಸ್ಸಾಂನಲ್ಲಿ ಬಂಧನ

ನವದೆಹಲಿ: ಬುಲ್ಲಿ ಬಾಯಿ ಆ್ಯಪ್‌ನ ಸೃಷ್ಟಿಕರ್ತ 21 ವರ್ಷದ ನೀರಜ್ ಬಿಷ್ಣೋಯ್ ಅವರನ್ನು ದೆಹಲಿ ಪೊಲೀಸರು ಅಸ್ಸಾಂನಲ್ಲಿ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ. ಹಲವಾರು ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಆನ್ಲೈನ್‌ನಲ್ಲಿ ಹರಾಜಿಗಾಗಿ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ಪ್ರಕರಣ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ನೀರಜ್ ಬಿಷ್ಣೋಯ್ ಭೋಪಾಲ್‌ನ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ … Continued

ಪ್ರಧಾನಿ ಮೋದಿ ಬೆಂಗಾವಲು ತಡೆದ ‘ಪ್ರತಿಭಟನೆಕಾರರೊಂದಿಗೆ’ ಪಂಜಾಬ್ ಪೊಲೀಸರ ಚಹಾಸೇವನೆ: ಹೊರಹೊಮ್ಮಿದ ವಿಡಿಯೋ..!!

ಫಿರೋಜ್‌ಪುರದಲ್ಲಿ ಪ್ರಧಾನಿ ಮೋದಿಯವರ ಬೆಂಗಾವಲು ವಾಹನವನ್ನು ತಡೆಯುವಲ್ಲಿ ಪಂಜಾಬ್ ಪೊಲೀಸರು ನಿಷ್ಕ್ರಿಯರಾಗಿದ್ದರು ಹಾಗೂ ನಿರ್ಲಕ್ಷ್ಯ ವಹಿಸಿದ್ದರು ಎಂಬುದಕ್ಕೆ ಈಗ ಪಂಜಾಬ್‌ ಪೊಲೀಸರು ಪ್ರತಿಭಟನಾಕಾರರೊಂದಿಗೆ ಚಹಾ ಕುಡಿಯುತ್ತಿರುವ ವಿಡಿಯೊ ವೈರಲ್‌ ಆಗಿದೆ. ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಹುಸೇನಿವಾಲಾ ಬಳಿ 5 ಜನವರಿ 2022 ರಂದು ಸಂಭವಿಸಿದ ಪ್ರಧಾನಿ ಮೋದಿಯ ಭದ್ರತಾ ಲೋಪದ ಪ್ರಮುಖ ಅಪ್‌ಡೇಟ್‌ನಂತೆ ಈ ವೀಡಿಯೊಗಳು … Continued

ಇಟಲಿ-ಅಮೃತಸರ ಚಾರ್ಟರ್ಡ್ ವಿಮಾನದ 125 ಪ್ರಯಾಣಿಕರಿಗೆ ಕೋವಿಡ್-19 ಪಾಸಿಟಿವ್

ನವದೆಹಲಿ: ಇಟಲಿಯಿಂದ ಅಂತಾರಾಷ್ಟ್ರೀಯ ಚಾರ್ಟರ್ಡ್ ವಿಮಾನದ 125 ಪ್ರಯಾಣಿಕರು ಅಮೃತಸರ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಬುಧವಾರ ಮಧ್ಯಾಹ್ನ 1:30ರ ಸುಮಾರಿಗೆ ಇಟಲಿಯ ಮಿಲನ್‌ನಿಂದ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಚಾರ್ಟರ್ ಫ್ಲೈಟ್ YU-661 ನಲ್ಲಿ ಒಟ್ಟು 170 ಪ್ರಯಾಣಿಕರಿದ್ದರು. ಇದನ್ನು … Continued

ಐದಾರು ಜನರ ಮೇಲೆ ದಾಳಿ ಮಾಡಿ ಅಪಹರಣದಿಂದ ತನ್ನ ಯಜಮಾನನ್ನು ರಕ್ಷಿಸಿದ ನಾಯಿ…! ದೃಶ್ಯ ಸಿಸಿಟಿವಿಯಲ್ಲಿ ಸೆರೆ…ವೀಕ್ಷಿಸಿ

ಗ್ವಾಲಿಯರ್‌:ನಾಯಿಯು ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂದು ಹೇಳುತ್ತಾರೆ ಮತ್ತು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಾಯಿಯೊಂದು ತನ್ನ ಯಜಮಾನನ್ನು ಅಪಹರಣ ಪ್ರಯತ್ನದಿಂದ ರಕ್ಷಿಸಿ ಈ ಗಾದೆಯನ್ನು ನಿಜವೆಂದು ಸಾಬೀತುಪಡಿಸಿದೆ..!. ಗ್ವಾಲಿಯರ್‌ನ ಅಶೋಕ್ ನಗರದಲ್ಲಿ ಈ ಘಟನೆ ನಡೆದಿದ್ದು, ಕೆಲ ದುಷ್ಕರ್ಮಿಗಳು ನಿತಿನ್ ಮೇಲೆ ಹಲ್ಲೆ ನಡೆಸಿ ಅಪಹರಣಕ್ಕೆ ಯತ್ನಿಸಿದ್ದಾರೆ. ನಿತಿನ್ ಅವರ ನಾಯಿ ತಕ್ಷಣವೇ ಬೊಗಳಲು ಪ್ರಾರಂಭಿಸಿತು ಮತ್ತು … Continued

ಪಂಜಾಬ್ ಭೇಟಿ ವೇಳೆ ಪ್ರಧಾನಿ ಭದ್ರತಾ ಲೋಪ: ತನಿಖೆ ಕೋರಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ನಾಳೆ ವಿಚಾರಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರದಿಂದ ಗಂಭೀರ ಮತ್ತು ಉದ್ದೇಶಪೂರ್ವಕ ಲೋಪ ಆಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಇದು ನಾಳೆಗೆ ವಿಚಾರಣೆಗೆ ಬರಲಿದೆ. ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠವು ಪಂಜಾಬ್ ಸರ್ಕಾರದ … Continued