ಉದ್ದೇಶಪೂರ್ವಕವಾಗಿ ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆಸಿದ ಚಾಲಕ; ಕೊಲೆ ಯತ್ನ ಕೇಸ್‌ ದಾಖಲು-ದೃಶ್ಯ ಮೊಬೈಲ್‌ನಲ್ಲಿ ಸೆರೆ

ನವದೆಹಲಿ: ಬೈಕ್‌ಗೆ ಮಹೀಂದ್ರಾ ಸ್ಕಾರ್ಪಿಯೊ ಕಾರು ಡಿಕ್ಕಿ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಘಟನೆ ನಿನ್ನೆ ನಡೆದಿದ್ದು, ಬೈಕ್‌ ಸವಾರ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ಇದೇಘಟನೆ ಸಂಬಂಧ ಇಂದು. ಸೋಮವಾರ ಪ್ರಕರಣ ದಾಖಲಾಗಿದೆ. ರಾಷ್ಟ್ರ ರಾಜಧಾನಿಯ ಅರ್ಜನ್ ಗಢ್ ಮೆಟ್ರೋ ನಿಲ್ದಾಣದಲ್ಲಿ ಬಳಿ, ಭಾನುವಾರ ನಡೆದ ಘಟನೆಯ ಈ ವಿಡಿಯೋವನ್ನು, ಗಾಯಗೊಂಡ … Continued

ಗಂಡ-ಹೆಂಡತಿಯನ್ನು ಕೊಂದು ದೇಹವನ್ನು ತುಂಡು-ತುಂಡು ಮಾಡಿ ಐದು ತಾಸು ತಿಂದ ಕರಡಿ..!

ಪನ್ನಾ: ಆಘಾತಕರ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ಕರಡಿಯೊಂದು ದಾಳಿ ನಡೆಸಿ ದಂಪತಿಯನ್ನು ಕೊಂದು ಹಾಕಿದ್ದಲ್ಲದೆ ಐದು ಗಂಟೆಗಳಿಗೂ ಹೆಚ್ಚು ಕಾಲ ಶವಗಳನ್ನು ತಿಂದು ಹಾಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇಹದ ಭಾಗಗಳನ್ನು ತಿನ್ನುತ್ತಿದ್ದಾಗ ಅದನ್ನು ಓಡಿಸುವ ಪ್ರಯತ್ನಗಳು ವ್ಯರ್ಥವಾಯಿತು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾದ ನಂತರವೇ ಕರಡಿಯನ್ನು … Continued

ಐವರು ಬಾಲಕಿಯರು ಸೇರಿ ಒಂದೇ ಕುಟುಂಬದ ಏಳು ಮಂದಿ ನೀರಿನಲ್ಲಿ ಮುಳುಗಿ ಸಾವು

ಕಡಲೂರು: ತಮಿಳುನಾಡಿನ ಕಡಲೂರು ಜಿಲ್ಲೆಯ ಕೆದಿಲಂ ಚೆಕ್ ಡ್ಯಾಂ ಬಳಿ ಭಾನುವಾರ ಮಧ್ಯಾಹ್ನ ಕೆಸರಿನಲ್ಲಿ ಸಿಲುಕಿ ಐವರು ಬಾಲಕಿಯರು ಸೇರಿದಂತೆ ಒಂದೇ ಕುಟುಂಬದ ಏಳು ಜನ ಸಾವಿಗೀಡಾಗಿದ್ದಾರೆ. ಅಲ್ಲಿ ಕೆಲ ವರ್ಷಗಳ ಹಿಂದೆ ಮರಳು ತೆಗೆದ ನಂತರ ಗುಂಡಿ ನಿರ್ಮಾಣವಾಗಿದ್ದು, ಅದನ್ನು ಹಾಗಿಯೇ ಬಿಡಲಾಗಿದೆ ಎಂದು ಅವರ ಸಂಬಂಧಿಕರು ದೂರಿದ್ದಾರೆ. ಎ ಕೂಚಿಪಾಳ್ಯಂ ಗ್ರಾಮದ ಎಂ … Continued

ಬಂಧನದಲ್ಲಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್‌ ಮನೆ ಮೇಲೆ ಇಡಿ ದಾಳಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನದಲ್ಲಿರುವ ದೆಹಲಿಯ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಅವರ ಮನೆ ಮೇಲೆ ಸೋಮವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಕೋಲ್ಕತ್ತಾ ಮೂಲದ ಕಂಪನಿಗೆ ಸಂಬಂಧಿಸಿದಂತೆ ಅಕ್ರಮ ಹಣದ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಮೇ 30ರಂದು ಬಂಧಿಸಿತ್ತು. … Continued

ನೈಜೀರಿಯಾ: ಕ್ಯಾಥೋಲಿಕ್ ಚರ್ಚ್‌ ಮೇಲೆ ಬಂದೂಕುಧಾರಿಗಳಿಂದ ಗುಂಡಿನ ದಾಳಿ ; ಕನಿಷ್ಠ 50 ಮಂದಿ ಸಾವು

ಭಾನುವಾರ, ಜೂನ್ 5 ರಂದು ನೈಜೀರಿಯಾದ ಒಂಡೋ ರಾಜ್ಯದ ಕ್ಯಾಥೋಲಿಕ್ ಚರ್ಚ್‌ನಲ್ಲಿ ಬಂದೂಕುಧಾರಿಗಳು ಗುಂಡು ಹಾರಿಸಿದ ನಂತರ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ ಐವತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಹತ್ಯಾಕಾಂಡದ ನಿಖರವಾದ ಸಾವಿನ ಸಂಖ್ಯೆ ಇನ್ನೂ ಪತ್ತೆಯಾಗಿಲ್ಲ. ಆದಾಗ್ಯೂ, ಒಂಡೋ ರಾಜ್ಯದ ಪೊಲೀಸ್ ವಕ್ತಾರ ಫನ್ಮಿಲಾಯೊ ಇಬುಕುನ್ ಒಡುನ್ಲಾಮಿ, ದಾಳಿಕೋರರು … Continued

ಪ್ರವಾದಿ ಮಹಮ್ಮದ್‌ ಕುರಿತ ವಿವಾದಾತ್ಮಕ ಹೇಳಿಕೆಗಳಿಗೆ ಅರಬ್ ರಾಷ್ಟ್ರಗಳ ಆಕ್ಷೇಪ, ಬಿಜೆಪಿ ವಕ್ತಾರರ ಅಮಾನತು ಕ್ರಮಕ್ಕೆ ಸ್ವಾಗತ

ನವದೆಹಲಿ: ಅಮಾನತುಗೊಂಡಿರುವ ಇಬ್ಬರು ಬಿಜೆಪಿ ನಾಯಕರು ಪ್ರವಾದಿ ಮುಹಮ್ಮದ್ ಕುರಿತು ಮಾಡಿದ ಹೇಳಿಕೆಯನ್ನು ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳು ಖಂಡಿಸಿವೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಕತಾರ್ ಪ್ರವಾಸದ ನಡುವೆಯೇ ಈ ವಿವಾದ ಭುಗಿಲೆದ್ದಿದೆ. ಸೌದಿ ಅರೇಬಿಯಾವು ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಅವರ ಕಾಮೆಂಟ್‌ಗಳನ್ನು “ಅವಮಾನಕರ” ಎಂದು ಬಣ್ಣಿಸಿದೆ ಮತ್ತು “ನಂಬಿಕೆಗಳು ಮತ್ತು … Continued

25,000 ದಾಟಿದ ಭಾರತದ ಸಾಪ್ತಾಹಿಕ ಕೋವಿಡ್ ಪ್ರಕರಣಗಳು, ಇದು 3 ತಿಂಗಳಲ್ಲಿ ಅತಿ ಹೆಚ್ಚು

ನವದೆಹಲಿ: ಭಾರತವು 4,518 ಹೊಸ ಕೊರೊನಾ ವೈರಸ್ ಸೋಂಕನ್ನು ದಾಖಲಿಸಿದ್ದು, ಕೋವಿಡ್‌-19 ಪ್ರಕರಣಗಳ ಸಂಖ್ಯೆಯನ್ನು 4,31,81,335 ಕ್ಕೆ ಒಯ್ದಿದೆ. ಸಕ್ರಿಯ ಪ್ರಕರಣಗಳು 25,782 ಕ್ಕೆ ಏರಿದೆ ಎಂದು ಸೋಮವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಒಂಬತ್ತು ಹೊಸ ಸಾವುಗಳೊಂದಿಗೆ ಸಾವಿನ ಸಂಖ್ಯೆ 5,24,701 ಕ್ಕೆ ಏರಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ … Continued

ಉತ್ತರಾಖಂಡ: ಯಮುನೋತ್ರಿ ಯಾತ್ರಾರ್ಥಿಗಳಿದ್ದ ಬಸ್ ಕಂದಕಕ್ಕೆ ಬಿದ್ದು 25 ಮಂದಿ ಸಾವು

ದಾಮ್ತಾ( ಉತ್ತರಾಖಂಡ): ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಕಮರಿಗೆ ಬಿದ್ದು 25 ಮಂದಿ ಸಾವಿಗೀಡಾದ ಘಟನೆ ಉತ್ತರಾಖಂಡದಲ್ಲಿ ಭಾನುವಾರ ನಡೆದಿದೆ. 28 ಪ್ರಯಾಣಿಕರಿದ್ದ ಬಸ್ಸು ಗುಡ್ಡಗಾಡು ಪ್ರದೇಶದ ಪ್ರಮುಖ ಯಾತ್ರಾ ಸ್ಥಳವಾದ ಯಮುನೋತ್ರಿ ಮಾರ್ಗವಾಗಿ ಸಾಗುತ್ತಿತ್ತು. ಬಸ್ ಮಧ್ಯಪ್ರದೇಶದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿತ್ತು. ಸದ್ಯ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ … Continued

ತನ್ನ ಭಾವಿ ಪತಿಯನ್ನೇ ಬಂಧಿಸಿ ದೇಶಾದ್ಯಂತ ಸುದ್ದಿಯಾಗಿದ್ದ ಅಸ್ಸಾಂನ “ಲೇಡಿ ಸಿಂಘಂ ಕೂಡ ಈಗ ಅರೆಸ್ಟ್‌..!

ಗುವಾಹತಿ: ಕಳೆದ ತಿಂಗಳು ವಂಚನೆ ಆರೋಪದ ಮೇಲೆ ತನಗೆ ಮದುವೆ ನಿಶ್ಚಯವಾಗಿದ್ದ ತಮ್ಮ ಭಾವಿ ಪತಿಯನ್ನೇ ಬಂಧಿಸಿ ಜೈಲಿಗೆ ಕಳುಹಿಸಿ ದೇಶಾದ್ಯಂತ ವ್ಯಾಪಕವಾಗಿ ಪ್ರಶಂಸೆಗೆ ಒಳಗಾಗಿದ್ದ ಅಸ್ಸಾಂ ಪೊಲೀಸ್ ಅಧಿಕಾರಿ ಜುನ್ಮೋನಿ ರಭಾ ಅವರನ್ನು ಸಹ ಇದೇ ಪ್ರಕರಣದಲ್ಲಿ ತನ್ನ ಭಾವಿ ಪತಿಯ ಜೊತೆ ಸೇರಿ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದೆ…! ಅಸ್ಸಾಂನ ನಾಗಾಂವ್ … Continued

ಬಾಲಿವುಡ್‌ ನಟ ಸಲ್ಮಾನ್ ಖಾನ್-ತಂದೆ ಸಲೀಂ ಖಾನ್‌ಗೆ ಬೆದರಿಕೆ ಪತ್ರ: ಸಿದ್ದು ಮೂಸೆವಾಲಾ ಹತ್ಯೆಯ ಉಲ್ಲೇಖ

ಮುಂಬೈ: ಮುಂಬೈನ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್ ವಾಯುವಿಹಾರದಲ್ಲಿ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರನ್ನು ಉದ್ದೇಶಿಸಿ “ತುಮ್ಹಾರಾ ಮೂಸ್ ವಾಲಾ ಕರ್ ದೇಂಗೆ (ನೀವು ಮೂಸ್ ವಾಲಾನಂತೆ ಕೊನೆಗೊಳ್ಳುತ್ತೀರಿ) ಎಂಬ ಸಂದೇಶದೊಂದಿಗೆ ಸಹಿ ಮಾಡದ ಪತ್ರವೊಂದು ಪತ್ತೆಯಾಗಿದೆ. ಈ ಪತ್ರವನ್ನು ಸಲೀಂ ಖಾನ್ ಅವರ ಕಾವಲುಗಾರರು ಗುರುತಿಸಿದ್ದಾರೆ, ಅಲ್ಲಿ ಹಿರಿಯ ಚಿತ್ರಕಥೆಗಾರ … Continued