ಕಾಶ್ಮೀರ ಕಣಿವೆಯಲ್ಲಿ ಮೂವರು ಭಯೋತ್ಪಕರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದು ಹಾಕಿವೆ. ಶ್ರೀನಗರದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಮುಜಾಹಿದ್ದೀನ್ ಗಜ್ವಾತುಲ್ ಹಿಂದ್‌ಗೆ ಸೇರಿದ ಪುಲ್ವಾಮಾದ ಅಮೀರ್ ರಿಯಾಜ್ ಎಂದು ಗುರುತಿಸಲಾದ ಒಬ್ಬ ಭಯೋತ್ಪಾದಕನನ್ನು ಸೇನೆ ಕೊಂದು ಹಾಕಿದೆ. ಈತ ಲೆಥ್‌ಪೋರಾ ಭಯೋತ್ಪಾದಕ ದಾಳಿಯ ಆರೋಪಿಗಳಲ್ಲಿ ಒಬ್ಬನ … Continued

ಕೋವಿಡ್‌ ಲಸಿಕೆ ತೆಗೆದುಕೊಂಡ್ರೆ ರೆಫ್ರಿಜರೇಟರ್‌, ವಾಷಿಂಗ್‌ ಮಶಿನ್‌, ಎಲ್‌ಇಡಿ ಟಿವಿ ಬಹುಮಾನದ ಭಾಗ್ಯ..!

ಚಂದ್ರಾಪುರ: ಕೋವಿಡ್ -19 ವಿರುದ್ಧ ಹೆಚ್ಚು ಹೆಚ್ಚು ಜನರು ಲಸಿಕೆ ಹಾಕಿಸಿಕೊಳ್ಳಲು ಪ್ರೋತ್ಸಾಹಿಸುವ ಪ್ರಯತ್ನದ ಅಂಗವಾಗಿ ಮಹಾರಾಷ್ಟ್ರದ ಚಂದ್ರಾಪುರ್ ಮುನ್ಸಿಪಲ್ ಕಾರ್ಪೊರೇಶನ್ ಲಸಿಕೆ ತೆಗೆದುಕೊಂಡವರಿಗೆ ಬಂಪರ್ ಲಕ್ಕಿ ಡ್ರಾ ಘೋಷಿಸಿದೆ. ಇದು ಎಲ್ಇಡಿ ಟಿವಿಗಳು, ರೆಫ್ರಿಜರೇಟರ್‌ಗಳಿಂದ ಹಿಡಿದು ವಾಷಿಂಗ್ ಮೆಷಿನ್‌ಗಳ ವರೆಗಿನ ಬಹುಮಾನಗಳನ್ನು ಒಳಗೊಂಡಿದೆ..! ನವೆಂಬರ್ 12 ರಿಂದ 24ರ ವರೆಗೆ ಲಸಿಕೆ ಹಾಕಿಸಿಕೊಳ್ಳಲು ಲಸಿಕೆ … Continued

ನನಗೆ… ಒಪ್ಪಿಗೆ ಇಲ್ಲ..! ಕುಡಿದು ಬಂದ ವರನನ್ನು ಮದುವೆಯಾಗಲು ನಿರಾಕರಿಸಿದ ವಧು

ರಾಜ್‌ಗಢ: ಭಾರತೀಯ ವಿವಾಹವು ಚಲನಚಿತ್ರದ ಕಥಾವಸ್ತುಕ್ಕಿಂತ ಕಡಿಮೆಯಿಲ್ಲ. ಯಾಕೆಂದರೆ ವಧುಗಳು ಬೇರೆಬೇರೆ ಕಾರಣಗಳಿಗಾಗಿ ಮದುವೆಯಾಗಲು ನಿರಾಕರಿಸಿದ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ. ಮಧ್ಯಪ್ರದೇಶದ ರಾಜ್‌ಗಢದಲ್ಲಿ ನಡೆದಇಂಥದ್ದೇ ಒಂದು ಘಟನೆ ನಡೆದದ ಬಗ್ಗೆ ವರದಿಯಾಗಿದೆ. ಮದುವೆಯ ಸ್ಥಳದಲ್ಲಿ ವರ ಕುಡಿದು ಬಂದ ಕಾರಣಕ್ಕೆ ವಧು ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ದಿ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, … Continued

ಭಾರತದಲ್ಲಿ 12,516 ಹೊಸ ಕೋವಿಡ್ -19 ಪ್ರಕರಣಗಳು ದಾಖಲು, ನಿನ್ನೆಗಿಂತ 4.4% ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 12,516 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ 4.4% ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ. ಒಟ್ಟು ಕೋವಿಡ್‌ ಪ್ರಕರಣ ಈಗ 3,44,14,186 ಆಗಿದೆ. ಕಳೆದ 24 ಗಂಟೆಗಳಲ್ಲಿ ಕೋವಿಡ್ -19 ನಿಂದಾಗಿ 501 ಸಾವುಗಳು ವರದಿಯಾದ ನಂತರ ಒಟ್ಟು ಸಾವಿನ … Continued

ಭಾರತದಲ್ಲಿ ಇದೇ ಮೊದಲ ಬಾರಿಗೆ ಅಪರೂಪದ ಗುಲಾಬಿ ಚಿರತೆ ಪತ್ತೆ..!

ಪಾಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜಸ್ಥಾನದ ಪಾಳಿ ಜಿಲ್ಲೆಯ ರಣಕ್​ಪುರ ಪ್ರದೇಶದಲ್ಲಿ ಅಪರೂಪದ ಗುಲಾಬಿ ಚಿರತೆಯನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತದಲ್ಲಿ ಚಿರತೆ ಸಾಮಾನ್ಯವಾಗಿ ಮಸುಕಾದ ಹಳದಿ ಬಣ್ಣ ಅಥವಾ ಹಳದಿ- ಕಂದು ಬಣ್ಣವನ್ನು ಹೊಂದಿರುತ್ತದೆ. ಪತ್ತೆಯಾದ ಗುಲಾಬಿ ಚಿರತೆ ಕೆಂಪು ಕಂದು ಮಿಶ್ರಿತ ಚರ್ಮವನ್ನು ಹೊಂದಿರುವುದು ವಿಶೇಷವಾಗಿದೆ. ರಣಕ್​ಪುರ ಮತ್ತು ಕುಂಭಲ್​ಗಢದ … Continued

ಕೋವಿಡ್ ವಿರುದ್ಧ ಕೋವಾಕ್ಸಿನ್ ಲಸಿಕೆ ಪರಿಣಾಮಕಾರಿತ್ವ 78%, ಯಾವುದೇ ಗಂಭೀರ ಅಡ್ಡ ಪರಿಣಾಮ ಇಲ್ಲ: ಲ್ಯಾನ್ಸೆಟ್ ಅಧ್ಯಯನ

ನವದೆಹಲಿ: ಭಾರತ್ ಬಯೋಟೆಕ್‌ನ ಭಾರತದ ಕೋವಿಡ್ -19 ಲಸಿಕೆ ಕೊವ್ಯಾಕಿಸನ್‌ (Covaxin) ಹೆಚ್ಚು ಪರಿಣಾಮಕಾರಿಯಾಗಿದೆ, ಚೆನ್ನಾಗಿ ಸಹಿಸಿಕೊಳ್ಳುತ್ತದೆ ಮತ್ತು ಯಾವುದೇ ಸುರಕ್ಷತಾ ಕಾಳಜಿಯನ್ನು ಪ್ರಸ್ತುತಪಡಿಸುವುದಿಲ್ಲ ಎಂದು ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನ ತಿಳಿಸಿದೆ. ಕೋವಿಡ್-19 ರೋಗಲಕ್ಷಣದ ರೋಗಿಗಳ ವಿರುದ್ಧ ಕೋವಾಕ್ಸಿನ್ 77.8% ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ದಿ ಲ್ಯಾನ್ಸೆಟ್‌ ವೈದ್ಯಕೀಯ ಜರ್ನಲ್ ಹೇಳಿದೆ. ಸಾಂಪ್ರದಾಯಿಕ, … Continued

5ಜಿ ಪರೀಕ್ಷೆಗಾಗಿ ವಿ, ರಿಲಯನ್ಸ್‌ಗೆ ಪರವಾನಗಿ ನೀಡಿದ ದೂರ ಸಂಪರ್ಕ ಇಲಾಖೆ

ನವದೆಹಲಿ: ಗುಜರಾತ್‌ನಲ್ಲಿ 5ಜಿ ಪರೀಕ್ಷೆಗಾಗಿ ದೂರಸಂಪರ್ಕ ಇಲಾಖೆ (ಡಿಒಟಿ) 2021ರ ವೊಡಾಫೋನ್ ಐಡಿಯಾಸಂಸ್ಥೆ ಹಾಗೂ ರಿಲಾಯನ್ಸ್ ಜಿಯೋ ಇನ್ಫೋಕಾಮ್‌ ಪರವಾನಗಿ ಮತ್ತು ತರಂಗಗುಚ್ಛವನ್ನು ಹಂಚಿಕೆ ಮಾಡಿದೆ. ಈ ಕುರಿತ ವಿವರವನ್ನು ಕೇಂದ್ರ ಸರ್ಕಾರದ ಸಂಪರ್ಕ ಇಲಾಖೆ ಹಂಚಿಕೊಂಡಿದೆ. ವೊಡಾಫೋನ್ ಐಡಿಯಾ ಲಿಮಿಟೆಡ್‌ಗೆ ಗಾಂಧಿನಗರದ (ನಗರ ಪ್ರದೇಶ), ಮನ್ಸಾ(ಉಪನಗರ) ಮತ್ತು ಉನಾವದಲ್ಲಿ (ಗ್ರಾಮೀಣ) – ಉಪಕರಣಗಳ ಪೂರೈಕೆದಾರನಾಗಿ … Continued

6 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಸಮೇತ ನೈಜೀರಿಯಾ ಪ್ರಜೆ ಬಂಧನ

ಮುಂಬೈ : ಮುಂಬೈ ಪೊಲೀಸ್‌ನ ಎಂಟಿ ನಾರ್ಕೋಟಿಕ್ಸ್ ಸೆಲ್ 36 ವರ್ಷದ 6 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಮನರಂಜನಾ ಔಷಧವಾದ ಮೆಟಾಕ್ವಾಲೋನ್‌ ಸಮೇತ ನೈಜೀರಿಯನ್ ವ್ಯಕ್ತಿಯನ್ನು ಬುಧವಾರ ಬಂಧಿಸಿದ್ದಾರೆ. ಇನುಸಾ ಗಾಡ್ವಿನ್ ಅಲಿಯಾಸ್ ಜಾನ್‌ ಎಂಬಾತನನ್ನು ಉಪನಗರ ಗೋರೆಗಾಂವ್‌ನ ರಸ್ತೆಯಲ್ಲಿ ಬುಧವಾರ ಬಂಧಿಸಲಾಯಿತು, ಡ್ರಗ್ ತಲುಪಿಸಲು ಆಗಮಿಸುತ್ತಿರುವ ಖಚಿತ ಮಾಹಿತಿಯ ಆಧಾರದ ಮೇಲೆ ಬಂಧಿಸಲಾಗಿದೆ … Continued

ಗಡಿ ಪ್ರದೇಶದಲ್ಲಿ ಅಕ್ರಮ ಚೀನೀ ನಿರ್ಮಾಣ ಒಪ್ಪಿಕೊಳ್ಳುವುದಿಲ್ಲ: ಅಮೆರಿಕ ವರದಿ ನಂತರ ಭಾರತ ಹೇಳಿಕೆ

ನವದೆಹಲಿ: ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಚೀನಾದ ಕಡೆಯಿಂದ ನಿರ್ಮಾಣ ಚಟುವಟಿಕೆಗಳನ್ನು ಉಲ್ಲೇಖಿಸಿರುವ ಅಮೆರಿಕ ವರದಿಯನ್ನು ಗಮನಿಸಿರುವುದಾಗಿ ಭಾರತ ಗುರುವಾರ ಹೇಳಿದೆ. ಅರುಣಾಚಲ ಪ್ರದೇಶದ ವಿವಾದಿತ ಪ್ರದೇಶದಲ್ಲಿ ಬೀಜಿಂಗ್ ದೊಡ್ಡ ಗ್ರಾಮವನ್ನು ನಿರ್ಮಿಸುತ್ತಿರುವ ಕುರಿತು ಪೆಂಟಗನ್ ವರದಿಗೆ ಪ್ರತಿಕ್ರಿಯಿಸಿದ ಭಾರತ, ಚೀನಾ ತನ್ನ ಭೂಪ್ರದೇಶವನ್ನು ಯಾವುದೇ ಅಕ್ರಮ ವಶಪಡಿಸಿಕೊಂಡಿರುವುದನ್ನು ಒಪ್ಪಿಕೊಂಡಿಲ್ಲ ಅಥವಾ ನ್ಯಾಯಸಮ್ಮತವಲ್ಲದ ಚೀನಾದ ಹಕ್ಕುಗಳನ್ನು ಒಪ್ಪಿಕೊಂಡಿಲ್ಲ … Continued

ಬಾಲಿವುಡ್‌ ನಟಿ ಕಂಗನಾ ರಣಾವತ್ ವಿರುದ್ಧ ದೂರು ದಾಖಲು

ಮುಂಬೈ: ಭಾರತಕ್ಕೆ 2014ರಿಂದ ನಿಜವಾದ ಸ್ವಾತಂತ್ರ್ಯ ಬಂದಿದೆ. 1947ರಲ್ಲಿ ಸಿಕ್ಕಿದ್ದು ಭಿಕ್ಷೆ ಎಂಬ ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿಕೆ ವಿರುದ್ಧ ಮುಂಬೈ ನಲ್ಲಿ ದೂರು ದಾಖಲಾಗಿದೆ. ನಟಿ ಕಂಗನಾ ರಣಾವತ್ ಅವರು ದೇಶದ್ರೋಹದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಅಧ್ಯಕ್ಷೆ ಪ್ರೀತಿ ಮೆನನ್ ದೂರು ದಾಖಲು ಮಾಡಿದ್ದಾರೆ‌ … Continued