ಆಘಾತಕಾರಿ…ನಡು ರಸ್ತೆಯಲ್ಲೇ ಸ್ಕೂಟಿಯಲ್ಲಿದ್ದ ವಿಕಲಚೇತನನಿಗೆ ದೊಣ್ಣೆಯಿಂದ ಥಳಿಸಿದ ದಂಪತಿ…ದೃಶ್ಯ ವೀಡಿಯೊದಲ್ಲಿ ಸೆರೆ

ನವದೆಹಲಿ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಝೆವಾರ್ ಪ್ರದೇಶದಲ್ಲಿ ವಿಕಲಚೇತನ ವ್ಯಕ್ತಿಯನ್ನು ಪುರುಷ ಮತ್ತು ಮಹಿಳೆ ಅಮಾನುಷವಾಗಿ ಥಳಿಸಿದ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ 27 ರಂದು ಈ ಘಟನೆ ನಡೆದಿದ್ದು, ದುಷ್ಕರ್ಮಿಗಳಾದ ಜುಗೇಂದ್ರ ಮತ್ತು … Continued

ಮನೆಯಲ್ಲಿದ್ದ ಪ್ರಧಾನಿ ಮೋದಿ ಫೋಟೋ ತೆಗೆಯದಿದ್ದರೆ ಹೊರಹಾಕುವ ಬೆದರಿಕೆ : ಜಮೀನುದಾರನ ವಿರುದ್ಧ ಪೊಲೀಸರ ಮೊರೆ ಹೋದ ವ್ಯಕ್ತಿ..!

ಮಧ್ಯಪ್ರದೇಶದ ಇಂದೋರ್‌ನ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ತೆಗೆಯದಿದ್ದರೆ ಮನೆಯಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕ ವಿಚಾರಣೆ ಅಹವಾಲು ವೇದಿಕೆಯನ್ನು ಸಂಪರ್ಕಿಸಿದ್ದಾರೆ. ಇಂದೋರ್‌ನ ಪಿರ್ ಗಲಿ ನಿವಾಸಿ ಯೂಸುಫ್ ಅವರು ಮಂಗಳವಾರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಆಘಾತಕಾರಿ ದೂರು ನೀಡಿದ್ದಾರೆ. ಪ್ರಧಾನಿ ಮೋದಿಯವರ ಸಿದ್ಧಾಂತದಿಂದ ಪ್ರೇರಿತರಾದ ಯೂಸುಫ್ ಅವರು … Continued

ಹೈದರಾಬಾದ್ ಶಾಕರ್..: ಬ್ಯಾಂಕ್​ ಸಿಬ್ಬಂದಿ ನಿರ್ಲಕ್ಷ್ಯದಿಂದ 18 ತಾಸು ಕಾಲ ಬ್ಯಾಂಕ್‌ ಲಾಕರ್​​ ಕೋಣೆಯಲ್ಲಿ ಕಳೆದ ಮಧುಮೇಹ ಕಾಯಿಲೆಯ 89ರ ವೃದ್ಧ..!

ಹೈದರಾಬಾದ್‌: ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ 89 ವರ್ಷದ ವ್ಯಕ್ತಿಯೊಬ್ಬರು ಹೈದರಾಬಾದ್‌ನಲ್ಲಿ ಬ್ಯಾಂಕ್‌ನ ಲಾಕರ್ ಕೋಣೆಯಲ್ಲಿ ರಾತ್ರಿ ಕಳೆಯಬೇಕಾಯಿತು. ಸೋಮವಾರ, ಮಾರ್ಚ್ 28 ರಂದು ಸಿಬ್ಬಂದಿ ಆವರಣಕ್ಕೆ ಬೀಗ ಹಾಕಿ ಹೊರಟುಹೋದ ನಂತರ ವ್ಯಕ್ತಿ 18 ಗಂಟೆಗಳ ಕಾಲ ಬ್ಯಾಂಕ್‌ನಲ್ಲಿ ಕಳೆಯಬೇಕಾಯಿತು. ಈ ಆಘಾತಕಾರಿ ಘಟನೆಯು ಐಷಾರಾಮಿ ಜುಬಿಲಿ ಹಿಲ್ಸ್ ಪ್ರದೇಶದಲ್ಲಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ … Continued

ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಬ್ರಿಟನ್ ಸಂಸತ್ತಿಗೆ ಆಹ್ವಾನ

ಮುಂಬೈ : 1990 ರಲ್ಲಿ ಕಾಶ್ಮೀರ್ ಪಂಡಿತರು ಅಲ್ಲಿನ ಮುಸ್ಲಿಂ ಭಯೋತ್ಪಾದಕರಿಂದ ಅನುಭವಿಸಿದ ನರಕವನ್ನು ಎಳೆ ಎಳೆಯಾಗಿ ತೋರಿಸಿದ ಹಿಂದಿಯ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ನಿರ್ದೇಶಕ ವಿವೇಕ ಅಗ್ನಿಹೋತ್ರಿಗೆ ಈಗ ಬ್ರಿಟನ್ ಸಂಸತ್ತಿನಿಂದ ಅವರಿಗೆ ವಿಶೇಷ ಆಹ್ವಾನ ಬಂದಿದೆಯಂತೆ. ತನಗೆ ತನ್ನ ಪತ್ನಿ ಪಲ್ಲವಿಗೆ ಬ್ರಿಟನ್ ಸಂಸತ್​ನವರು ಆಹ್ವಾನಿಸಿದ್ದಾರೆ ಎಂದು ಈ ಬಗ್ಗೆ ಸ್ವತಃ … Continued

ಕೊನೆಗೂ ಬರೆಹರಿದ 50 ವರ್ಷಗಳಷ್ಟು ಹಳೆಯದಾದ ಗಡಿ ವಿವಾದ: ಒಪ್ಪಂದಕ್ಕೆ ಅಸ್ಸಾಂ-ಮೇಘಾಲಯ ಸರ್ಕಾರಗಳು ಸಹಿ

ನವದೆಹಲಿ: ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳು ತಮ್ಮ ರಾಜ್ಯಗಳ ನಡುವಿನ 50 ವರ್ಷಗಳ ಗಡಿ ವಿವಾದವನ್ನು ಪರಿಹರಿಸುವ ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಿವೆ. ಉಭಯ ರಾಜ್ಯಗಳ ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವಾ ಶರ್ಮಾ ಮತ್ತು ಕಾನ್ರಾಡ್ ಸಂಗ್ಮಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ಎರಡು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಗೃಹ ಸಚಿವಾಲಯದ ಇತರ … Continued

1957ರಿಂದ 1971: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ 6 ಬಾರಿ ವಿಟೋ ಅಧಿಕಾರ ಬಳಸಿ ಭಾರತದ ಹಿತಾಸಕ್ತಿ ಕಾಪಾಡಿದ್ದ ರಷ್ಯಾ, ಆರು ಬಾರಿಯೂ ಭಾರತ ವಿರೋಧಿ ನಿಲುವು ತಾಳಿದ್ದ ಅಮೆರಿಕ..! ಇಲ್ಲಿದೆ ಮಾಹಿತಿ

ಉಕ್ರೇನ್ ಮೇಲೆ ದಾಳಿ ಮಾಡಿದ್ದಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ರಷ್ಯಾ ವಿರುದ್ಧ ತರಲಾದ ಖಂಡನಾ ನಿರ್ಣಯದ ಮೇಲಿನ ಮತದಾನದಿಂದ ಭಾರತ ದೂರ ಉಳಿದಿದೆ. ಕೆಲವು ವಲಯಗಳಲ್ಲಿ ಇದನ್ನು ಟೀಕಿಸಲಾಗಿದೆ. ಆದರೆ ಹಿಂದಿನ ಘಟನೆ ಅವಲೋಕಿಸಿದ ನಂತರ, ಭಾರತದ ಯಾಕೆ ಈ ನಿರ್ಧಾರ ತೆಗೆದುಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ. ಹಿಂದಿನ ಸೋವಿಯತ್ ಯೂನಿಯನ್ (USSR) ಮತ್ತು ಇಂದಿನ … Continued

ಬಿಜೆಪಿಗೆ ಮತ ನೀಡಿದರೆ ಪರಿಣಾಮ ನೆಟ್ಟಗಿರಲ್ಲ: ಮತದಾರರಿಗೆ ಟಿಎಂಸಿ ಶಾಸಕ ಬೆದರಿಕೆ ಹಾಕಿರುವ ವೀಡಿಯೋ ವೈರಲ್

ನವದೆಹಲಿ: ಬಿಜೆಪಿ ಬಂಗಾಳದ ಸಹ-ಪ್ರಭಾರಿ ಅಮಿತ್ ಮಾಳವಿಯಾ ಅವರು ಟಿಎಂಸಿ ಶಾಸಕ ನರೇನ್ ಚಕ್ರವರ್ತಿ ಬಿಜೆಪಿ ಪಕ್ಷದ ಮತದಾರರಿಗೆ ಬೆದರಿಕೆ ಹಾಕುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೋವನ್ನು ಗಮನಿಸುವಂತೆ ಚುನಾವಣಾ ಆಯೋಗವನ್ನು ಕೋರಿದ ಮಾಳವಿಯಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸಿದ್ದಾರೆ ಮತ್ತು ಹಾಗೂ ಮುಖ್ಯಮಂತ್ರಿಗಳು ಅಂತಹ ಶಾಸಕರನ್ನು ಬೆಂಬಲಿಸುತ್ತಿದ್ದಾರೆ … Continued

ಮನೆಯ ಹೊರಗೆ ಜೆಡಿಯು ರಾಜ್ಯ ಕಾರ್ಯದರ್ಶಿ ಗುಂಡಿಕ್ಕಿ ಹತ್ಯೆ

ಪಾಟ್ನಾ: ಜನತಾದಳ (ಯುನೈಟೆಡ್) ರಾಜ್ಯ ಕಾರ್ಯದರ್ಶಿ ಮತ್ತು ದಾನಪುರ ನಗರ ಪರಿಷತ್ತಿನ ಉಪಾಧ್ಯಕ್ಷ ದೀಪಕ್ ಮೆಹ್ತಾ (47) ಅವರನ್ನು ಸೋಮವಾರ ರಾತ್ರಿ ಪಾಟ್ನಾದಿಂದ ಕೇವಲ 10 ಕಿಮೀ ದೂರದಲ್ಲಿರುವ ದಾನಪುರ ಅವರ ಮನೆಯ ಹೊರಗೆ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಕೀಯ ಮತ್ತು ವ್ಯಾಪಾರ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು … Continued

ಇಂದು ಮತ್ತೆ ಪೆಟ್ರೋಲ್‌-ಡೀಸೆಲ್‌ ದರ ಏರಿಕೆ..ಎಂಟು ದಿನಗಳಲ್ಲಿ ಏಳನೇ ಬಾರಿಗೆ ಹೆಚ್ಚಳ..!

ನವದೆಹಲಿ: ಇಂದು. ಮಂಗಳವಾರ ಸಹ ಪ್ರತಿ ಲೀಟರಿಗೆ ಪೆಟ್ರೋಲ್‌ 80 ಪೈಸೆ ಮತ್ತು ಡೀಸೆಲ್‌ನಲ್ಲಿ 70 ಪೈಸೆ ಹೆಚ್ಚಳದೊಂದಿಗೆ, ಒಂದು ವಾರದ ಪರಿಷ್ಕರಣೆಯ ನಂತರ ಎಂಟ ದಿನದಲ್ಲಿ ಇಂಧನ ಬೆಲೆಯಲ್ಲಿ 4.80 ರೂ.ಗಳಷ್ಟು ಹೆಚ್ಚಳವಾಗಿದೆ. ದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್‌ಗೆ 100.21 ರೂ ಆಗಿದ್ದರೆ, ಡೀಸೆಲ್ ಪ್ರತಿ ಲೀಟರ್‌ಗೆ 91.47 ರೂ.ಗಳಾಗಿವೆ. ದೇಶದ ವಾಣಿಜ್ಯ … Continued

ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಟ್ವೀಟ್‌: ಕ್ರಮ ಯಾಕೆ ತೆಗೆದುಕೊಂಡಿಲ್ಲ ಎಂದು ಟ್ವಿಟರ್‌ಗೆ ದೆಹಲಿ ಹೈಕೋರ್ಟ್ ಪ್ರಶ್ನೆ

ನವದೆಹಲಿ: ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದಾರೆಂಬ ಕಾರಣಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನೇ ಅಮಾನತ್ತಿನಲ್ಲಿಟ್ಟಿದ್ದ ನೀವು ಹಿಂದೂ ದೇವಾನುದೇವತೆಗಳ ಬಗ್ಗೆ ಅಂತಹುದೇ ಟ್ವೀಟ್‌ ಮಾಡುವ ಖಾತೆಗಳನ್ನು ಯಾಕೆ ಅಮಾನತು ಮಾಡುತ್ತಿಲ್ಲ? ಅಂತಹ ಖಾತೆಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೆಹಲಿ ಹೈಕೋರ್ಟ್ ಸೋಮವಾರ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ ಅನ್ನು ಪ್ರಶ್ನಿಸಿದೆ. … Continued