ತಾಲಿಬಾನ್ ಉಪಸ್ಥಿತಿ ಹೆಚ್ಚಳದ ಮಧ್ಯೆ,ಅಫ್ಘಾನಿಸ್ತಾನದ ಕಂದಹಾರಿನಿಂದ ಭಾರತದ 50 ಅಧಿಕಾರಿಗಳ ಸ್ಥಳಾಂತರ

ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವೇಗವಾಗಿ ಬೆಳೆಯುತ್ತಿರುವುದರಿಂದ, ಭಾರತವು ಕಂದಹಾರ್‌ನಲ್ಲಿರುವ ತನ್ನ ದೂತಾವಾಸದಿಂದ ಸುಮಾರು 50 ರಾಜತಾಂತ್ರಿಕರು ಮತ್ತು ಭದ್ರತಾ ಸಿಬ್ಬಂದಿಯನ್ನು ಕರೆಸಿಕೊಂಡಿದೆ ಎಂದು ವರದಿಯಾಗಿದೆ. ನ್ಯಾಟೋ ಮತ್ತು ಅಮೆರಿಕ ತಮ್ಮ ಸೈನ್ಯವನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಮಧ್ಯೆ ದಕ್ಷಿಣ ಅಫ್ಘಾನಿಸ್ತಾನದ ಹೊಸ ಪ್ರದೇಶಗಳನ್ನು ತಾಲಿಬಾನ್ ಸ್ಥಿರವಾಗಿ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಭಾರತವು ಕಂದಹಾರ್‌ನಲ್ಲಿನ ತನ್ನ … Continued

ಹೊಸ ಜನಸಂಖ್ಯಾ ನೀತಿ ಅನಾವರಣಗೊಳಿಸಿದ ಸಿಎಂ ಯೋಗಿ ಅದಿತ್ಯನಾಥ, ಜನಸಂಖ್ಯೆ ಬೆಳವಣಿಗೆ 2.1% ಕ್ಕೆ ತರುವ ಗುರಿ

ಲಕ್ನೋ: ವಿಶ್ವ ಜನಸಂಖ್ಯಾ ದಿನಾಚರಣೆಯಂದು ಭಾನುವಾರ ಉತ್ತರ ಪ್ರದೇಶ ಸರ್ಕಾರ 2021-2030ರ ಹೊಸ ಜನಸಂಖ್ಯಾ ನೀತಿಯನ್ನು ಬಿಡುಗಡೆ ಮಾಡಿದೆ. ಹೊಸ ಜನಸಂಖ್ಯಾ ನೀತಿಯಲ್ಲಿ, ಜನನ ಪ್ರಮಾಣವನ್ನು 2026 ರ ವೇಳೆಗೆ ಪ್ರತಿ ಸಾವಿರ ಜನಸಂಖ್ಯೆಗೆ 2.1 ಕ್ಕೆ ಮತ್ತು 2030 ರ ವೇಳೆಗೆ 1.9 ಕ್ಕೆ ತಲುಪಿಸುವ ಗುರಿ ನಿಗದಿಪಡಿಸಲಾಗಿದೆ ರಾಜ್ಯದ ಒಟ್ಟು ಜನನ ಪ್ರಮಾಣ … Continued

ನಿವಾಸಿ ಕುಂದುಕೊರತೆ ಅಧಿಕಾರಿ ನೇಮಕ, ಭಾರತ ಪಾರದರ್ಶಕತೆ ವರದಿ‌ ಬಿಡುಗಡೆ ಮಾಡಿದ ಟ್ವಿಟ್ಟರ್‌

ಟ್ವಿಟ್ಟರ್‌ ವಿನಯ್ ಪ್ರಕಾಶ್ ಅವರನ್ನು ತನ್ನ ನಿವಾಸಿ ಕುಂದುಕೊರತೆ ಅಧಿಕಾರಿಯಾಗಿ ನೇಮಕ ಮಾಡಿದೆ ಮತ್ತು ಮೇ 26, 2021ರಿಂದ ಜೂನ್ 25, 2021 ರ ವರೆಗಿನ ಭಾರತ ಪಾರದರ್ಶಕತೆ ವರದಿ ಬಿಡುಗಡೆ ಮಾಡಿದೆ ಎಂದು ಟ್ವಿಟರ್ ಭಾನುವಾರ ತಿಳಿಸಿದೆ. ಭಾರತದ ಹೊಸ ಐಟಿ ನಿಯಮಗಳ ಅಡಿಯಲ್ಲಿ ಪಾರದರ್ಶಕತೆ ವರದಿ ಪ್ರಕಟಿಸುವುದು ಮತ್ತು ಕುಂದುಕೊರತೆ ಅಧಿಕಾರಿಗಳನ್ನು ನೇಮಿಸುವುದು … Continued

ಭಾರತದಲ್ಲಿ ಒಂದೇ ದಿನ 895 ಕೋವಿಡ್‌-19 ಸಾವುಗಳು..

ನವದೆಹಲಿ: ಭಾರತವು ಒಂದು ದಿನದಲ್ಲಿ 41,506 ಹೊಸ ಕೊರೊನಾ ಸೋಂಕು ದಾಖಲಿಸಿದೆ. ಇದು ಭಾರತದ ಒಟ್ಟು ಕೋವಿಡ್‌-19 ಪ್ರಕರಣಗಳು 3,08,37,222 ಕ್ಕೆ ಏರಿದೆ. ಇದೇ ವೇಳೆ ಸಕ್ರಿಯ ಪ್ರಕರಣಗಳು 4,54,118 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಭಾನುವಾರ ನವೀಕರಿಸಿದೆ. 895 ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 4,08,040 ಕ್ಕೆ ಏರಿದೆ. … Continued

ಹಿಂದುತ್ವ ಜೀವನ ವಿಧಾನ, ಹೆಚ್ಚಿನ ಧರ್ಮಗಳ ಅನುಯಾಯಿಗಳು ಹಿಂದೂಗಳ ವಂಶಸ್ಥರು: ಅಸ್ಸಾಂ ಸಿಎಂ, ಲವ್‌ ಜಿಹಾದ್‌ ಕಾನೂನಿಗೆ ಬೆಂಬಲ

ಗುವಾಹಟಿ: ಹಿಂದುತ್ವವು ಒಂದು ಜೀವನ ವಿಧಾನ ಎಂದು ಪ್ರತಿಪಾದಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಭಾರತದಲ್ಲಿ ಹೆಚ್ಚಿನ ಧರ್ಮಗಳನ್ನು ಅನುಸರಿಸುವವರು ಹಿಂದೂಗಳ ವಂಶಸ್ಥರು ಎಂದು ಹೇಳಿದ್ದಾರೆ. ಹಿಂದುತ್ವವು ಒಂದು ಜೀವನ ವಿಧಾನವಾಗಿದೆ. ನಾನು ಅಥವಾ ಯಾರಾದರೂ ಅದನ್ನು ಹೇಗೆ ತಡೆಯಬಹುದು? ಇದು ಯುಗಯುಗದಲ್ಲಿ ಹರಿಯುತ್ತಿದೆ. ಬಹುತೇಕ ಎಲ್ಲರೂ ಹಿಂದೂಗಳ ವಂಶಸ್ಥರು. ಒಬ್ಬ ಕ್ರಿಶ್ಚಿಯನ್ ಅಥವಾ … Continued

ಕೋವಿಡ್‌-19ರ ಡೆಲ್ಟಾ-ಡೆಲ್ಟಾ ಪ್ಲಸ್-ಕಪ್ಪಾ -ಲ್ಯಾಂಬ್ಡಾ ರೂಪಾಂತರಗಳ ತುಲನಾತ್ಮಕ ವಿವರಣೆ ಇಲ್ಲಿದೆ

ಕೋವಿಡ್‌-19 ಸಾಂಕ್ರಾಮಿಕದ ಕ್ರೂರ ಎರಡನೇ ಅಲೆಯ ನಂತರ, ಕೇವಲ ಡೆಲ್ಟಾ ರೂಪಾಂತರವಲ್ಲ, ಆದರೆ ಡೆಲ್ಟಾ ಪ್ಲಸ್, ಲ್ಯಾಂಬ್ಡಾ ಮತ್ತು ಇತರ ಕೆಲವು ರೂಪಾಂತರಗಳು ಭಾರತದಲ್ಲಿ ಕಳವಳಕ್ಕೆ ಕಾರಣವಾಗಿದೆ. ಕೋವಿಡ್‌-19 ರ ಕಡಿಮೆ-ಪ್ರಮುಖ ಕಪ್ಪಾ ರೂಪಾಂತರದ ಉತ್ತರ ಪ್ರದೇಶ ರಾಜ್ಯದಿಂದ ಹೊರಹೊಮ್ಮಿದೆ. ವೈರಸ್ಸುಗಳು ಸಾರ್ವಕಾಲಿಕವಾಗಿ ರೂಪಾಂತರಗೊಳ್ಳುತ್ತವೆ, ವಿಭಿನ್ನ ಆವೃತ್ತಿಗಳು ಅಥವಾ ರೂಪಾಂತರಗಳನ್ನು ಉತ್ಪಾದಿಸುತ್ತವೆ. ಈ ರೂಪಾಂತರಗಳಲ್ಲಿ ಹೆಚ್ಚಿನವು … Continued

ಉತ್ತರ ಪ್ರದೇಶ ಬ್ಲಾಕ್ ಪಂಚಾಯತ್ ಮುಖ್ಯಸ್ಥರ ಚುನಾವಣೆ: ಬಿಜೆಪಿ ದೊಡ್ಡ ಗೆಲುವು ಸಾಧಿಸಿದೆ ಎಂದ ಸಿಎಂ ಯೋಗಿ

ಲಕ್ನೋ: ಬ್ಲಾಕ್ ಪಂಚಾಯತ್ ಮುಖ್ಯ ಹುದ್ದೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಹೇಳಿದ್ದಾರೆ. ಚುನಾವಣೆಯಲ್ಲಿ ಬ್ಲಾಕ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯಸ್ಥರ ಹುದ್ದೆಗಳಿಗೆ ಬಿಜೆಪಿ ನೀಡಿದ ಅತ್ಯುತ್ತಮ ಪ್ರದರ್ಶನವನ್ನು ಪ್ರತಿಪಾದಿಸಿದ ಆದಿತ್ಯನಾಥ್, ಶೇಕಡಾ 85 ರಷ್ಟು ಸ್ಥಾನಗಳು ಆಡಳಿತ ಪಕ್ಷದ ಪರವಾಗಿ ಬಂದಿವೆ … Continued

ಅಮೆರಿಕದ ಲಾಸ್ ಏಂಜಲೀಸ್ ಮೇಯರ್ ಎರಿಕ್ ಗಾರ್ಸೆಟ್ಟಿ ಭಾರತದ ನೂತನ ರಾಯಭಾರಿಯಾಗಿ ನೇಮಕ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಶುಕ್ರವಾರ ಲಾಸ್ ಏಂಜಲೀಸ್ ಮೇಯರ್ ಎರಿಕ್ ಗಾರ್ಸೆಟ್ಟಿ ಅವರನ್ನು ಭಾರತದ ನೂತನ ರಾಯಭಾರಿಯಾಗಿ ನೇಮಕ ಮಾಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಅವರು ಸೆನೆಟ್ ಸಮ್ಮತಿ ದೃಢೀಕರಣ ಪಡೆದರೆ ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅಧ್ಯಯನ ಮಾಡಿದ 50 ವರ್ಷದ ಗಾರ್ಸೆಟ್ಟಿ 2021 ರ ಜನವರಿ ನಂತರ ನವದೆಹಲಿಯಲ್ಲಿ … Continued

ಆರ್‌ಬಿಐ ಮಹತ್ವದ ಸೂಚನೆ.. ಸೂಕ್ಷ್ಮ ಹುದ್ದೆಗಳಲ್ಲಿರುವ ಬ್ಯಾಂಕ್‌ ನೌಕರರಿಗೆ ಪೂರ್ವ ಮಾಹಿತಿ ಇಲ್ಲದೆ ಕಡ್ಡಾಯ’ ರಜೆ: ಬ್ಯಾಂಕುಗಳಿಗೆ ಆರ್‌ಬಿಐ ಸೂಚನೆ

ಮುಂಬೈ:  ಸೂಕ್ಷ್ಮ ಸ್ಥಾನಗಳು ಅಥವಾ ಕಾರ್ಯಾಚರಣೆಯ ಪ್ರದೇಶಗಳಲ್ಲಿ ನೇಮಕಗೊಂಡಿರುವ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೆ ‘ಕಡ್ಡಾಯ ರಜೆ’ಯಲ್ಲಿ ಕೆಲವು ದಿನಗಳ ವರೆಗೆ (10 ಕೆಲಸದ ದಿನಗಳಿಗಿಂತ ಕಡಿಮೆಯಿಲ್ಲ) ಕಡ್ಡಾಯವಾಗಿ ಕಳುಹಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕ್‌ಗಳನ್ನು ಕೇಳಿದೆ. ‘ಕಡ್ಡಾಯ ರಜೆ’ ಕುರಿತು ನವೀಕರಿಸಿದ ಸೂಚನೆಗಳಲ್ಲಿನ ‘ಪೂರ್ವ ಮಾಹಿತಿ ಇಲ್ಲ’ ಎಂಬುದು ಅಚ್ಚರಿಯ ಅಂಶವನ್ನು ಕಾಪಾಡಿಕೊಳ್ಳುವ … Continued

ಜುಲೈ 17 ರಿಂದ 21ರ ವರೆಗೆ ತೆರೆಯಲಿರುವ ಶಬರಿಮಲೆ

ಪಥನಮತ್ತಟ್ಟ: ಕೇರಳದಲ್ಲಿ ನಡೆಯುತ್ತಿರುವ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೆಯ ಅಲೆಯ ಮಧ್ಯೆ ಮಾಸಿಕ ಪೂಜೆಗಳನ್ನು ನಡೆಸಲು ಭಗವಾನ್ ಅಯ್ಯಪ್ಪನ ಪ್ರಸಿದ್ಧ ಸಬರಿಮಲೆ ದೇವಾಲಯವು ಐದು ದಿನಗಳ ಅವಧಿಗೆ ಮತ್ತೆ ತೆರೆಯುತ್ತದೆ. ಜುಲೈ 17 ರಿಂದ 21 ರವರೆಗೆ ಭಕ್ತರಿಗೆ ಈ ದೇವಾಲಯ ತೆರೆದಿರುತ್ತದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ತಿಳಿಸಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, … Continued