2022ರಲ್ಲಿ ಗೂಗಲ್​ನಲ್ಲಿ ಅತೀ ಹೆಚ್ಚು ಹುಡುಕಾಡಿದ ಶಬ್ದಗಳು ಯಾವವು..? ಇಲ್ಲಿದೆ ಮಾಹಿತಿ

ಗೂಗಲ್ ತನ್ನ ವಾರ್ಷಿಕ “ಇಯರ್ ಇನ್ ಸರ್ಚ್” ವರದಿಯನ್ನು ಬಿಡುಗಡೆ ಮಾಡಿದ್ದು, ಪ್ರಪಂಚದಾದ್ಯಂತ ಗೂಗಲ್‌ನಲ್ಲಿ 2022ರಲ್ಲಿ ಉನ್ನತ ಹುಡುಕಾಟಗಳ ಬಗ್ಗೆ ಅದು ಮಾಹಿತಿ ನೀಡಿದೆ. 2022ರಲ್ಲಿ ಕೊವಿಡ್-19 ಗೂಗಲ್‌ ಸರ್ಚ್​ ಎಂಜಿನ್​ ಬಿಟ್ಟು ಸರಿದಿದೆ. ನೋವು, ನರಳಿಕೆ, ಆತಂಕದಿಂದ ಹೊರಬಂದ ಜನರು ಗೂಗಲ್‌ನಲ್ಲಿ ಮನಸಿಗೆ ಉಲ್ಲಾಸ ಕೊಡುವಂಥ ಸಂಗತಿಗಳ ಕಡೆ ಗಮನ ಹರಿಸಿದ್ದಾರೆ 2022ರ ಗೂಗಲ್‌ … Continued

ಜರ್ಮನಿಯಲ್ಲಿ ಚೀನಾದ 2 ‘ಪೊಲೀಸ್ ಠಾಣೆʼಗಳ ಸ್ಥಾಪನೆ…!

ಬರ್ಲಿನ್: ಚೀನಾವು ಜರ್ಮನಿಯಲ್ಲಿ ಕನಿಷ್ಠ ಎರಡು ʼಪೊಲೀಸ್ ಠಾಣೆಗಳನ್ನುʼ ಸ್ಥಾಪಿಸಿದೆ ಎಂದು ಜರ್ಮನ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇವುಗಳನ್ನು ಭಿನ್ನಮತೀಯರನ್ನು ಕಿರುಕುಳ ನೀಡಲು ಬಳಸುತ್ತಾರೆ ಎಂದಿರುವ ವಿಮರ್ಶಕರು, ಚೀನಾದ ಇಂತಹ ದುರುದ್ದೇಶಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಜರ್ಮನಿಯಲ್ಲಿ ಚೀನಾದ ಠಾಣೆಗಳು ಸ್ಥಿರವಾದ ಕಚೇರಿಗಳನ್ನು ಹೊಂದಿಲ್ಲ. ಆದರೆ ಚೀನಾ ನಿಯಂತ್ರಣ ಹೊಂದಿರುವ ಖಾಸಗಿ ವ್ಯಕ್ತಿಗಳಿಂದ ಅದು ಮೇಲ್ವಿಚಾರಣೆ … Continued

4 ವರ್ಷದ ಮಗುವಿನ ಹೊಟ್ಟೆಯಿಂದ 61 ಆಯಸ್ಕಾಂತೀಯ ಮಣಿಗಳನ್ನು ಹೊರತೆಗೆದ ಶಸ್ತ್ರಚಿಕಿತ್ಸಕರು…!

ಪೂರ್ವ ಚೀನಾದ ವೈದ್ಯರು ಶಸ್ತ್ರಚಿಕಿತ್ಸೆಯ ನಂತರ ನಾಲ್ಕು ವರ್ಷದ ಬಾಲಕಿಯ ಹೊಟ್ಟೆಯಿಂದ 61 ಮ್ಯಾಗ್ನೆಟಿಕ್ ಮಣಿಗಳನ್ನು ತೆಗೆದಿದ್ದಾರೆ ಮತ್ತು ಈ ಮಣಿಗಳು ಆಕೆಯ ಕರುಳಿನ ಗೋಡೆ ಗುದ್ದಿ ಉಂಟಾಗಿದ್ದ ಡಜನ್‌ಗಿಂತಲೂ ಹೆಚ್ಚು ರಂಧ್ರಗಳಿಗೆ ತೇಪೆ ಅವರು ಹಾಕಬೇಕಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜನಪ್ರಿಯ ಶೈಕ್ಷಣಿಕ ಆಟಿಕೆ ಮಾಡುವ ಈ ಮಣಿಗಳು ಸೋಯಾಬೀನ್‌ಗಳ ಗಾತ್ರದಷ್ಟು … Continued

ಇಂಗ್ಲೆಂಡಿನ ಸಮಾಧಿ ಸ್ಥಳದಲ್ಲಿ ಪತ್ತೆಯಾದ 1300 ವರ್ಷಗಳಷ್ಟು ಹಳೆಯದಾದ ‘ಅದ್ಭುತ’ ಚಿನ್ನದ ನೆಕ್ಲೇಸ್‌…!

ಮಧ್ಯ ಇಂಗ್ಲೆಂಡ್‌ನ ಆರಂಭಿಕ ಆಂಗ್ಲೋ ಸ್ಯಾಕ್ಸನ್ ಸಮಾಧಿ ಸ್ಥಳದಲ್ಲಿ 1,300 ವರ್ಷಗಳ ಹಿಂದಿನ ಚಿನ್ನ ಮತ್ತು ಅಮೂಲ್ಯ ಮಣಿಗಳಿಂದ ಮಾಡಿದ ಹಾರವೊಂದು ಪತ್ತೆಯಾಗಿದೆ. ಮ್ಯೂಸಿಯಂ ಆಫ್ ಲಂಡನ್ ಆರ್ಕಿಯಾಲಜಿಯ ಅಧಿಕೃತ ವೆಬ್‌ಸೈಟ್ (MOLA) ಇದು 630 AD ಮತ್ತು 670 AD ನಡುವಿನ ಕಾಲದ್ದಾಗಿದೆ ಎಂದು ಹೇಳಿದೆ. ಮ್ಯೂಸಿಯಂ ಆಫ್ ಲಂಡನ್ ಆರ್ಕಿಯಾಲಜಿ (MOLA) ಪ್ರಕಾರ, … Continued

ʼ3D ಅವತಾರʼ ಹೊರತರಲು ಪ್ರಾರಂಭಿಸಿದ ವಾಟ್ಸಾಪ್‌: ಇದನ್ನು ಚಾಟ್‌ಗಳಲ್ಲಿ ಸ್ಟಿಕ್ಕರ್‌ಗಳಾಗಿ ಫಾರ್ವರ್ಡ್ ಮಾಡಬಹುದು : ಅದರ ಬಗ್ಗೆ ತಿಳಿದುಕೊಳ್ಳಬೇಕಾದದ್ದು…

ಫೇಸ್‌ಬುಕ್ ನಂತರ, ಅದರ ಮಾತೃ ಕಂಪನಿ ಮೆಟಾ ಈಗ ತನ್ನ ವೈಯಕ್ತೀಕರಿಸಿದ 3D ಅವತಾರಗಳನ್ನು ವಾಟ್ಸಾಪ್‌ (WhatsApp)ಗೆ ಲಭ್ಯವಾಗುವಂತೆ ಮಾಡಿದೆ. ಕಂಪನಿಯ ಸಿಇಒ ಮಾರ್ಕ್ ಜುಕರ್‌ಬರ್ಗ್ ತಮ್ಮ ಫೇಸ್‌ಬುಕ್ ಪುಟದಲ್ಲಿ ವಾಟ್ಸಾಪ್‌ಗೆ 3D ಅವತಾರಗಳನ್ನು ಹೊರತರುವ ಘೋಷಣೆ ಮಾಡಿದ್ದಾರೆ. ಮೆಟಾದ ಅಪ್ಲಿಕೇಶನ್‌ಗಳಲ್ಲಿ ಶೀಘ್ರದಲ್ಲೇ ಹೆಚ್ಚಿನ ಶೈಲಿಗಳು ಬರಲಿವೆ ಎಂದು ಅವರು ಹೇಳಿದ್ದಾರೆ. ಮೆಟಾ-ಮಾಲೀಕತ್ವದ ವಾಟ್ಸಾಪ್‌ (WhatsApp) … Continued

ಡ್ರೋನ್‌-ಭದ್ರತಾ ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳುವ ʼಅದೃಶ್ಯ ಮೇಲಂಗಿʼ ಅಭಿವೃದ್ಧಿಪಡಿಸಿದ ಚೀನಾದ ವಿದ್ಯಾರ್ಥಿಗಳು…!

ಚೀನಾದ ವುಹಾನ್‌ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು “ಅದೃಶ್ಯ ಮೇಲಂಗಿ’ ಯೊಂದನ್ನು ಸಂಶೋಧಿಸಿದ್ದಾರೆ. ಇದನ್ನು ಧರಿಸಿದರೆ ಬೆಳಗಿನ ಸಮಯದಲ್ಲಿ ಕ್ಯಾಮೆರಾಗಳು ಮತ್ತು ರಾತ್ರಿ ವೇಳೆ ಇನ್ರ್ಫಾರೆಡ್‌ ಕ್ಯಾಮೆರಾಗಳಿಂದ ಅದೃಶ್ಯವಾಗಬಹುದಾಗಿದೆ. ‘ಇನ್ವಿಸ್ ಡಿಫೆನ್ಸ್ ಕೋಟ್’ ಎಂದು ಕರೆಯಲ್ಪಡುವ ಈ ಆವಿಷ್ಕಾರದ ಮೇಲಂಗಿಯನ್ನು ಮಾನವ ಕಣ್ಣುಗಳ ಮೂಲಕ ನೋಡಬಹುದು, ಆದರೆ ಹಗಲಿನ ವೇಳೆಯಲ್ಲಿ ಕ್ಯಾಮೆರಾಗಳಿಗೆ ಮಾತ್ರ ಅದು ಕಾಣುವುದಿಲ್ಲ ಮತ್ತು ರಾತ್ರಿಯಲ್ಲಿ … Continued

ಕೆಲ ಸಮಯದ ವರೆಗೆ ವಿಶ್ವದ ನಂ.1 ಶ್ರೀಮಂತ ಪಟ್ಟ ಕಳೆದುಕೊಂಡಿದ್ದ ಎಲೋನ್‌ ಮಸ್ಕ್‌

ನವದೆಹಲಿ: ಟ್ವಿಟರ್ ಮಾಲೀಕ ಹಾಗೂ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಅವರು ಫೋರ್ಬ್ಸ್ ಪ್ರಕಾರ ಬುಧವಾರ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಶೀರ್ಷಿಕೆಯನ್ನು ಕೆಲ ಸಮಯದ ವರೆಗೆ ಕಳೆದುಕೊಂಡಿದ್ದರು, ಎಲೆಕ್ಟ್ರಿಕ್-ಕಾರ್ ತಯಾರಕ ಟೆಸ್ಲಾದ ಅವರ ಪಾಲಿನ ಮೌಲ್ಯದಲ್ಲಿ ಕುಸಿತದ ನಂತರ ಐಷಾರಾಮಿ ಬ್ರಾಂಡ್ ಲೂಯಿಸ್ ವಿಟಾನ್ ಅವರ ಮೂಲ ಕಂಪನಿ LVMH ನ ಮುಖ್ಯ … Continued

ಅಫ್ಘಾನಿಸ್ತಾನ ಸ್ವಾಧೀನಪಡಿಸಿಕೊಂಡ ನಂತರ ಕೊಲೆ ಆರೋಪಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ತಾಲಿಬಾನ್

ಕಾಬೂಲ್: ಪಶ್ಚಿಮ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು ಇಂದು, ಬುಧವಾರ ಕೊಲೆ ಆರೋಪಿಗೆ ಸಾರ್ವಜನಿಕವಾಗಿ ಮರಣದಂಡನೆ ವಿಧಿಸಲಾಗಿದೆ ಎಂದು ಅದರ ವಕ್ತಾರರು ಹೇಳಿದ್ದಾರೆ, ಕಳೆದ ವರ್ಷ ತಾಲಿಬಾನ್‌ ದೇಶವನ್ನು ಸ್ವಾಧೀನಕ್ಕೆ ತೆಗೆದುಕೊಂಡ ನಂತರ ಮೊದಲ ಅಧಿಕೃತವಾಗಿ ಸಾರ್ವಜನಿಕ ಮರಣದಂಡನೆಯನ್ನು ಅಧಿಕೃತವಾಗಿ ದೃಢಪಡಿಸಿದೆ. ಪಶ್ಚಿಮ ಫರಾಹ್ ಪ್ರಾಂತ್ಯದಲ್ಲಿ ಮರಣದಂಡನೆಯು 2017 ರಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಇರಿದು ಕೊಂದ ಆರೋಪ … Continued

ದೇಶಾದ್ಯಂತ ಅಧ್ಯಕ್ಷ ಕ್ಸಿ ವಿರೋಧಿ ಪ್ರತಿಭಟನೆಗಳ ನಂತರ ‘ಶೂನ್ಯ ಕೋವಿಡ್’ ನಿರ್ಬಂಧ ಸಡಿಲಗೊಳಿಸಲು ಮುಂದಾದ ಚೀನಾ

ಚೀನಾದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ ಪ್ರಮುಖ ಬೆಳವಣಿಗೆಯೊಂದರಲ್ಲಿ, ದೇಶದಲ್ಲಿ ವಿಧಿಸಲಾಗಿರುವ ಕಠೋರವಾದ ಕೋವಿಡ್-19 ನಿರ್ಬಂಧಗಳನ್ನು ಸಡಿಲಗೊಳಿಸುವ ಪ್ರಯತ್ನದಲ್ಲಿ ಚೀನಾ ಸರ್ಕಾರವು ಬುಧವಾರ ಸರಣಿ ಕ್ರಮಗಳನ್ನು ಪ್ರಕಟಿಸಿದೆ. ಇತ್ತೀಚಿನ ಪ್ರಕಟಣೆಯ ಪ್ರಕಾರ, ಲಕ್ಷಣರಹಿತ ಅಥವಾ ಸೌಮ್ಯವಾದ ಕೋವಿಡ್ ರೋಗಲಕ್ಷಣಗಳನ್ನು ಹೊಂದಿರುವ ಜನರಿಗೆ ಈಗ ಸರ್ಕಾರಿ ಸೌಲಭ್ಯಗಳಿಗಿಂತ ಮನೆಯಲ್ಲಿಯೇ ಕ್ವಾರಂಟೈನ್ ಮಾಡಲು ಅನುಮತಿಸಲಾಗುವುದು ಎಂದು ಚೀನಾ ಸರ್ಕಾರ ಹೇಳಿದೆ. … Continued

ಮರಣೋತ್ತರ ಪರೀಕ್ಷೆ ವೇಳೆ ಸತ್ತ ದೇಹದಿಂದ ಹೊರಬಂದ ಹಾವು….!

ಮರಣೋತ್ತರ ಪರೀಕ್ಷೆಯ ವೇಳೆ ಮೃತ ದೇಹದಿಂದ ಹಾವೊಂದು ಹೊರಬಂದ ವಿಚಿತ್ರ ಘಟನೆ ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ನಡೆದಿದೆ ಎಂದು ವರದಿಗಳು ತಿಳಿಸಿವೆ. ಶವಪರೀಕ್ಷೆ ತಂತ್ರಜ್ಞರು ಪರೀಕ್ಷೆ ಮಾಡುವಾಗ ಮೃತದೇಹದೊಳಗಿಂದ ಜೀವಂತಹಾವು ಹೊರಬಂದಿದೆ ಎಂದು ಶವಪರೀಕ್ಷೆ ತಂತ್ರಜ್ಞರಾದ ಜೆಸ್ಸಿಕಾ ಲೋಗನ್ ಹೇಳೊಕೊಂಡಿದ್ದಾರೆ. ಜೆಸ್ಸಿಕಾ ಲೋಗನ್ ಅವರು ಒಂಬತ್ತು ವರ್ಷಗಳಿಂದ ಶವಪರೀಕ್ಷೆ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಈ ಭಯಾನಕ … Continued