ಡಿಸೆಂಬರ್ 1ರಿಂದ ಧಾರ್ಮಿಕ-ರಾಜಕೀಯ ದೃಷ್ಟಿಕೋನಗಳ ವಿವರಗಳನ್ನು ಪ್ರೊಫೈಲ್‌ನಿಂದ ತೆಗೆದುಹಾಕುತ್ತಿರುವ ಫೇಸ್‌ಬುಕ್

ಮುಂದಿನ ತಿಂಗಳಿನಿಂದ ತಮ್ಮ ಪ್ರೊಫೈಲ್‌ಗಳಲ್ಲಿ ಹಂಚಿಕೊಳ್ಳಬಹುದಾದ ನಾಲ್ಕು ಪ್ರೊಫೈಲ್‌ ಬಯೋ ವಿವರಗಳನ್ನು ತೆಗೆದುಹಾಕುವುದಾಗಿ ಫೇಸ್‌ಬುಕ್ ಬಳಕೆದಾರರಿಗೆ ತಿಳಿಸುತ್ತಿದೆ. ಇವುಗಳು ಧಾರ್ಮಿಕ ದೃಷ್ಟಿಕೋನಗಳು, ರಾಜಕೀಯ ದೃಷ್ಟಿಕೋನಗಳು, ವಿಳಾಸಗಳು ಮತ್ತು ಬಳಕೆದಾರರ   “ಆಸಕ್ತಿ” ಕ್ಷೇತ್ರ ಸೂಚಿಸುವ ವಿವರಗಳನ್ನು ಒಳಗೊಂಡಿವೆ. ಈ ಬದಲಾವಣೆಯು ಡಿಸೆಂಬರ್ 1 ರಿಂದ ಜಾರಿಗೆ ಬರಲಿದೆ. ಸಾಮಾಜಿಕ ನೆಟ್‌ವರ್ಕ್ ಅನ್ನು ಬಳಸಲು ಸುಲಭವಾಗುವಂತೆ ಬದಲಾವಣೆಯ … Continued

ಮೊದಲ ಬಾರಿ ಸಾರ್ವಜನಿಕವಾಗಿ ಮಗಳ ಜೊತೆ ಕಾಣಿಸಿಕೊಂಡ ಉತ್ತರ ಕೊರಿಯಾದ ಸರ್ವೋಚ್ಚ ನಾಯಕ

ಪ್ಯೊಂಗ್ಯಾಗ್: ತಮ್ಮ ಖಾಸಗಿ ಜೀವನವನ್ನು ರಹಸ್ಯವಾಗಿಡಲು ಹೆಸರುವಾಸಿಯಾಗಿರುವ ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್ ಜೊಂಗ್ ಇದೇ ಮೊದಲ ಬಾರಿಗೆ ತಮ್ಮ ಮಗಳೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎಂದು ಸರ್ಕಾರಿ ಮಾಧ್ಯಮ ಕೆಸಿಎನ್‌ಎ (KCNA) ವರದಿ ಮಾಡಿದೆ. ಸರ್ಕಾರಿ ಏಜೆನ್ಸಿ ಹಂಚಿಕೊಂಡ ಚಿತ್ರಗಳಲ್ಲಿ ಅವರ ಮಗಳು ಬಿಳಿ ಪಫರ್ ಜಾಕೆಟ್‌ನಲ್ಲಿ ತಮ್ಮ ತಂದೆ ಕೈಹಿಡಿದುಕೊಂಡು ನಿಂತಿದ್ದಾರೆ, ಕೆಲವು … Continued

ಏನಿದರ ಮರ್ಮ…? :ಚೀನಾದ ಮಂಗೋಲಿಯಾದಲ್ಲಿ 12 ದಿನಗಳಿಂದ ನಿರಂತರವಾಗಿ ವೃತ್ತಕಾರದಲ್ಲಿ ಸುತ್ತುತ್ತಿರುವ ಕುರಿಗಳ ಹಿಂಡು | ವೀಕ್ಷಿಸಿ

ಕುರಿಗಳ ಹಿಂಡು ಇಡೀ ಹನ್ನೆರಡು ದಿನಗಳ ಕಾಲ ನಿಲ್ಲದೆ ವೃತ್ತಾಕಾರದಲ್ಲಿ ಸುತ್ತುತ್ತಿವೆ. ನವೆಂಬರ್ ಆರಂಭದಲ್ಲಿ ತೆಗೆದ ತುಣುಕಿನಲ್ಲಿ ಉತ್ತರ ಚೀನಾದಲ್ಲಿ ಕುರಿಗಳು ನಿರಂತರ ಪ್ರದಕ್ಷಿಣಾಕಾರವಾಗಿ ಸುತ್ತುತ್ತಿರುವುದನ್ನು ಕಾಣಬಹುದು.ವೈರಲ್ ಕ್ಲಿಪ್‌ನಲ್ಲಿನ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಜನರು ಆಘಾತಕ್ಕೊಳಗಾಗಿದ್ದಾರೆ ಮತ್ತು ಗೊಂದಲಕ್ಕೊಳಗಾಗಿದ್ದಾರೆ. ಉತ್ತರ ಚೀನಾದ ಇನ್ನರ್ ಮಂಗೋಲಿಯಾ ಪ್ರದೇಶದಲ್ಲಿ 12 ದಿನಗಳಿಂದ ನೂರಾರು ಕುರಿಗಳು ವೃತ್ತಾಕಾರವಾಗಿ ಸುತ್ತುತ್ತಿವೆ. ಕಣ್ಗಾವಲು … Continued

ಉಕ್ರೇನ್-ರಷ್ಯಾ ಯುದ್ಧ: ಫಿಫಾ ವಿಶ್ವಕಪ್‌ಗೆ ಕತಾರ್‌ಗೆ ಹೋಗಲು ಪೋಲೆಂಡ್ ರಾಷ್ಟ್ರೀಯ ತಂಡಕ್ಕೆ ಎರಡು F-16 ಜೆಟ್‌ಗಳಿಂದ ಬೆಂಗಾವಲು | ವೀಕ್ಷಿಸಿ

ಕ್ರೀಡಾ ಜಗತ್ತು ತನ್ನ ಗಮನವನ್ನು ವಿಶ್ವದ ಅತಿದೊಡ್ಡ ಫುಟ್‌ಬಾಲ್ ಹಬ್ಬವಾದ ಕತಾರ್‌ನಲ್ಲಿ ನಡೆಯಲಿರುವ ಫಿಫಾ (FIFA) ವಿಶ್ವಕಪ್‌ನತ್ತ ಹೊರಳಿಸಿದೆ, ಆದರೆ ಉಕ್ರೇನ್-ರಷ್ಯಾ ಗಡಿಯಲ್ಲಿ ಎರಡು ದೇಶಗಳ ನಡುವೆ ನಡೆಯುತ್ತಿರುವ ಯುದ್ಧದ ನಡುವೆ ಉದ್ವಿಗ್ನತೆ ಮುಂದುವರೆದಿದೆ. ಉಕ್ರೇನ್ ಮತ್ತು ರಷ್ಯಾ ಎರಡರೊಂದಿಗೂ ತನ್ನ ಗಡಿಯನ್ನು ಹಂಚಿಕೊಳ್ಳುವ ದೇಶವಾದ ಪೋಲೆಂಡ್ ಕೂಡ ಕೆಲ ದಿನಗಳ ಹಿಂದೆ ಪೋಲೆಂಡ್-ಉಕ್ರೇನ್ ಗಡಿಯ … Continued

ಅಫ್ಘಾನಿಸ್ತಾನದ ನಿರ್ಬಂಧಿತ ಸ್ವತ್ತುಗಳನ್ನು ಬಿಡುಗಡೆ ಮಾಡುವಂತೆ ಅಮೆರಿಕವನ್ನು ಕೇಳಿದ ಭಾರತ, ಇತರ 13 ದೇಶಗಳು

ನವದೆಹಲಿ: ಕಳೆದ ವರ್ಷ ಕಾಬೂಲ್ ಅನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಕುಸಿದಿರುವ ತನ್ನ ಆರ್ಥಿಕತೆಗೆ ಸಹಾಯ ಮಾಡುವ ಸಲುವಾಗಿ ಫ್ರೀಜ್‌ ಮಾಡಿದ ಅಫ್ಘಾನಿಸ್ತಾನದ ಆಸ್ತಿಯನ್ನು ಬಿಡುಗಡೆ ಮಾಡುವಂತೆ ಭಾರತ ಮತ್ತು ಇತರ 13 ದೇಶಗಳು ಅಮೆರಿಕವನ್ನು ಕೇಳಿಕೊಂಡಿವೆ. ಬುಧವಾರ ರಷ್ಯಾ ನೇತೃತ್ವದ ‘ಮಾಸ್ಕೋ ಫಾರ್ಮೆಟ್‌’ ಮಾತುಕತೆಯ ನಾಲ್ಕನೇ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ.ಆದಾಗ್ಯೂ, ಅಮೆರಿಕ ಮಾತುಕತೆಯಲ್ಲಿ … Continued

ಮರುವಿಚಾರಣೆ ನಂತರ ಟರ್ಕಿಶ್ ಕಲ್ಟ್‌ ನಾಯಕನಿಗೆ 8,658 ವರ್ಷಗಳ ಜೈಲು ಶಿಕ್ಷೆ…!

ಟರ್ಕಿಯ ಟೆಲಿವಾಂಜೆಲಿಸ್ಟ್ ಹಾಗೂ ಕಲ್ಟ್‌ ನಾಯಕ ಅದ್ನಾನ್ ಒಕ್ಟಾರ್‌ಗೆ ಮರುವಿಚಾರಣೆ ನಂತರ 8,658 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. “ಬೆಕ್ಕಿನ ಮರಿಗಳು (kittens)” ಎಂದು ಕರೆಯುವ ಅಲ್ಪ ವಸ್ತ್ರಧಾರಿ ಮಹಿಳೆಯರಿಂದ ಸುತ್ತುವರೆದಿರುವ ದೂರದರ್ಶನ ಕಾರ್ಯಕ್ರಮವನ್ನು ಮುನ್ನಡೆಸಿದ “ಕಲ್ಟ್ ಲೀಡರ್” ಅದ್ನಾನ್ ಒಕ್ಟಾರ್‌ ವಿರುದ್ಧದ ಆರೋಪಗಳ ಸರಣಿಗಾಗಿ ಮರುವಿಚಾರಣೆ ಮಾಡಲಾಗಿದೆ. ಹರುನ್ ಯಾಹ್ಯಾ ಎಂಬ ಹೆಸರಿನಿಂದ ಕೂಡಿದ … Continued

ಪ್ರಧಾನಿ ಮೋದಿ ಭೇಟಿಯ ನಂತರ ಭಾರತೀಯರಿಗೆ ಪ್ರತಿವರ್ಷ 3,000 ವೀಸಾ ನೀಡಲು ಒಪ್ಪಿದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌

ಲಂಡನ್‌: ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಅವರು ಪ್ರತಿ ವರ್ಷ ಭಾರತದಿಂದ ಯುವ ವೃತ್ತಿಪರರಿಗೆ ಬ್ರಿಟನ್‌ನಲ್ಲಿ ಕೆಲಸ ಮಾಡಲು 3,000 ವೀಸಾಗಳನ್ನು ನೀಡುವುದಕ್ಕೆ ಚಾಲನೆ ನೀಡಿದ್ದಾರೆ. ಇಂತಹ ಯೋಜನೆಯಿಂದ ಪ್ರಯೋಜನ ಪಡೆಯುವ ಮೊದಲ ರಾಷ್ಟ್ರ ಭಾರತ ಎಂದು ಬ್ರಿಟಿಷ್ ಸರ್ಕಾರ ಹೇಳಿದೆ, ಕಳೆದ ವರ್ಷ ಒಪ್ಪಿಕೊಂಡ ಯುಕೆ-ಇಂಡಿಯಾ ವಲಸೆ ಮತ್ತು ಮೊಬಿಲಿಟಿ ಪಾಲುದಾರಿಕೆಯ ಬಲವನ್ನು ಇದು … Continued

800 ಕೋಟಿ ಮೈಲಿಗಲ್ಲು ದಾಟಿದ ಜಾಗತಿಕ ಜನಸಂಖ್ಯೆ, ಭಾರತದ್ದೇ ಅತಿದೊಡ್ಡ ಕೊಡುಗೆ ; 2023ರಲ್ಲಿ ಚೀನಾ ಮೀರಿಸಲಿರುವ ಭಾರತದ ಜನಸಂಖ್ಯೆ : ವಿಶ್ವಸಂಸ್ಥೆ

ನವದೆಹಲಿ: ಮಂಗಳವಾರ ವಿಶ್ವದ ಜನಸಂಖ್ಯೆಯು 800 ಕೋಟಿಯನ್ನು ಮುಟ್ಟಿದೆ. ಮುಂದಿನ ವರ್ಷದ ವೇಳೆಗೆ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಈ ಶತಕೋಟಿಗೆ ಭಾರತವು 17.7 ಕೋಟಿ ಜನರನ್ನು ಸೇರಿಸಿದ್ದು, ಮೈಲಿಗಲ್ಲಿಗೆ ಅತಿದೊಡ್ಡ ಕೊಡುಗೆ ನೀಡಿದೆ. ಆದರೆ ಜಾಗತಿಕ ಜನಸಂಖ್ಯೆಯಲ್ಲಿ ಮುಂದಿನ ಶತಕೋಟಿಗೆ ಚೀನಾದ ಕೊಡುಗೆಯು ಋಣಾತ್ಮಕವಾಗಿರುತ್ತದೆ … Continued

10,000 ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸಿದ ಅಮೆಜಾನ್ : ವರದಿ

ಕಳೆದ ಕೆಲವು ತ್ರೈಮಾಸಿಕಗಳು ಲಾಭದಾಯಕವಾಗಿಲ್ಲದ ಕಾರಣ ಅಮೆಜಾನ್ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಮತ್ತು ವೆಚ್ಚ ಕಡಿತ ಕ್ರಮಗಳನ್ನು ಜಾರಿಗೆ ತರಲು ಯೋಜಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಈ ವಾರದಿಂದಲೇ ಕಂಪನಿಯು 10,000 ಉದ್ಯೋಗಿಗಳನ್ನು ವಜಾ ಮಾಡಬಹುದು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ವಜಾಗೊಳಿಸುವಿಕೆಗಳ ಒಟ್ಟು ಸಂಖ್ಯೆಯು ಸುಮಾರು 10,000 ಆಗಿದ್ದರೆ, ಇದು ಅಮೆಜಾನ್ ಇತಿಹಾಸದಲ್ಲಿ … Continued