ಪಾಕಿಸ್ತಾನ: ಸಿಂಧ್‌ನ ಕೊಟ್ರಿಯಲ್ಲಿ ಅಪರಿಚಿತರಿಂದ ಹಿಂದೂ ದೇವಾಲಯದ ಮೇಲೆ ದಾಳಿ, ಚಿನ್ನಾಭರಣ ದೋಚಿ ಪರಾರಿ

ಇಸ್ಲಾಮಾಬಾದ್: ನವರಾತ್ರಿ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ಮಾಡುತ್ತಿದ್ದಾಗಲೇ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದದ್ದು ಚರ್ಚೆಯಾಗುತ್ತಿರುವಾಗಲೇ ಈಗ ಪಾಕಿಸ್ತಾನದಲ್ಲಿಯೂ ಹಿಂದೂ ದೇವಸ್ಥಾನದ ಮೇಲೆ ದಾಳಿ ಮಾಡಲಾಗಿದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕೋಟ್ರಿ ಬಳಿ ಇರುವ ದೇವಿಯ ಮಂದಿರಕ್ಕೆ ನುಗ್ಗಿದ ದುಷ್ಕರ್ಮಿಗಳು  ದೇವಾಲಯವನ್ನು ಅಪವಿತ್ರಗೊಳಿಸಿ ದೇವಿಯ ವಿಗ್ರಹದ ಮೇಲಿದ್ದ ಚಿನ್ನಾಭರಣ ಮತ್ತು ಹಣ ದೋಚಿದ್ದಾರೆ ಎಂದು … Continued

ಇಂಡೋನೇಷ್ಯಾದಲ್ಲಿ ಮೀನುಗಾರರಿಗೆ ಕಂಡ ಚಿನ್ನದ ದ್ವೀಪ..ಅಲ್ಲಿದೆ ಲಕ್ಷಾಂತರ ಕೋಟಿ ನಿಧಿ.. ಈ ದ್ವೀಪಕ್ಕೆ ಭಾರತದೊಂದಿಗೆ ನಿಕಟ ಸಂಬಂಧ..!

ಇಂಡೋನೇಷ್ಯಾದ ಮೀನುಗಾರರು ಅಂತಿಮವಾಗಿ ಸುಮಾತ್ರದಲ್ಲಿ ಚಿನ್ನದ ಸಂಪತ್ತಿಗೆ ಹೆಸರುವಾಸಿಯಾದ  ಇಂಡೋನೇಷಿಯನ್ ಸಾಮ್ರಾಜ್ಯವನ್ನು ಕೊನೆಗೂ ಕಂಡುಹಿಡಿದರು. ಇದನ್ನು ಚಿನ್ನದ ದ್ವೀಪ ಎಂದೂ ಕರೆಯುತ್ತಾರೆ. ಕಳೆದ ಐದು ವರ್ಷಗಳಿಂದ, ಮೀನುಗಾರರು ಇದನ್ನು ಹುಡುಕುತ್ತಿದ್ದರು – ರತ್ನದ ಕಲ್ಲುಗಳು, ಚಿನ್ನದ ವಿಧ್ಯುಕ್ತ ಉಂಗುರಗಳು, ನಾಣ್ಯಗಳು ಮತ್ತು ಸನ್ಯಾಸಿಗಳ ಕಂಚಿನ ಗಂಟೆಗಳು ಹೀಗೆ ಅನೇಕ ವಸ್ತುಗಳು ಇಲ್ಲಿವೆ. ಮತ್ತು ಇಂಡೋನೇಷ್ಯಾದ ಸುಮಾತ್ರಾ … Continued

ನವೆಂಬರ್ 1 ರಿಂದ ಈ ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸ್​ಆ್ಯಪ್​ ಕಾರ್ಯನಿರ್ವಹಿಸುವುದಿಲ್ವಂತೆ…!

ನವೆಂಬರ್ 1 ರ ಬಳಿಕ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಫೇಸ್​ಬುಕ್ ಒಡೆತನದ ವಾಟ್ಸ್‌ಆ್ಯಪ್ (WhatsApp) ಸೇವೆ ಸ್ಥಗಿತವಾಗಲಿದೆ. ಈ ಬಗ್ಗೆ ಸ್ವತಃ ವಾಟ್ಸ್‌ಆ್ಯಪ್ ಸಂಸ್ಥೆ ಮಾಹಿತಿ ನೀಡಿದ್ದು, 2011ಕ್ಕೂ ಮೊದಲು ಖರೀದಿಸಿದ ಆ್ಯಂಡ್ರಾಯ್ಡ್ (Android) ಆವೃತ್ತಿಯ ಸ್ಮಾರ್ಟ್ ಫೋನ್ ಹಾಗೂ ಐಫೋನ್ (iPhone) ಗಳಲ್ಲಿ ನವೆಂಬರ್ 1ರಿಂದ ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ ಎಂದು ಮಾಹಿತಿ ಹಂಚಿಕೊಂಡಿದೆ. ಇದು ನಿಜವಾಗಿದ್ದರೆ … Continued

ಭಾರತೀಯ ಮೂಲದ ಅನಿತಾ ಆನಂದ್ ಕೆನಡಾದ ರಕ್ಷಣಾ ಸಚಿವರಾಗಿ ನೇಮಕ

ಟೊರಂಟೊ,: ಕೆನಡಾದ ನೂತನ ರಕ್ಷಣಾ ಸಚಿವರಾಗಿ ಭಾರತೀಯ ಮೂಲದ ಕೆನಡಾ ರಾಜಕಾರಣಿ ಅನಿತಾ ಆನಂದ್‌ ಅವರು ನೇಮಕವಾಗಿದ್ದಾರೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ಅವರ ಲಿಬರಲ್ ಪಾರ್ಟಿ ಮತ್ತೊಂದು ಅವಧಿಗೆ ಅಧಿಕಾರ ನಡೆಸಲು ಜನಾದೇಶ ಪಡೆದ ಸುಮಾರು 1 ತಿಂಗಳ ಬಳಿಕ ಸಚಿವ ಸಂಪುಟವನ್ನು ರಚಿಸಲಾಗಿದೆ. ಸುದೀರ್ಘಾವಧಿಯಿಂದ ರಕ್ಷಣಾ ಸಚಿವರಾಗಿದ್ದ , ಭಾರತೀಯ ಮೂಲದ ಹರ್ಜೀತ್ … Continued

ಪಾಕಿಸ್ತಾನದ ಪಿಟಿವಿ ಶೋನಲ್ಲಿ ವೇಗದ ಬೌಲರ್‌ ಶೋಯಿಬ್ ಅಖ್ತರ್‌ಗೆ ಹೊರಹೋಗಬಹುದೆಂದು ಹೇಳಿ ಅವಮಾನಿಸಿದ ನಿರೂಪಕ..!

ಕರಾಚಿ: ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಅವರನ್ನು ಪಾಕಿಸ್ತಾನದ ಟಿವಿ ಕಾರ್ಯಕ್ರಮವೊಂದರಲ್ಲಿ ನಿರೂಪಕ ಸ್ಟುಡಿಯೋದಿಂದ ಹೊರಹೋಗುವಂತೆ ಹೇಳಿ ಅವಮಾನ ಮಾಡಿದ ಘಟನೆ ನಡೆದಿದೆ. ನ್ಯೂಜಿಲೆಂಡ್ ಹಾಗೂ ಪಾಕ್ ನಡುವಿನ ಟಿ20 ವಿಶ್ವಕಪ್ ಪಂದ್ಯದ ವಿಶ್ಲೇಷಣೆ ವೇಳೆ ಈ ಘಟನೆ ನಡೆದಿದ್ದು, ಜಗತ್ತಿನಲ್ಲಿ ಅತ್ಯಂತ ವೇಗದ ಬೌಲರ್ ಎನಿಸಿಕೊಂಡಿದ್ದ 46 ವರ್ಷದ ಶೋಯಿಬ್ ಅಖ್ತರ್ ಅವರನ್ನು … Continued

ಒಂದೇ ದಿನದಲ್ಲಿ 2.71 ಲಕ್ಷ ಕೋಟಿ ರೂ. ಗಳಿಸಿದ ಎಲೋನ್ ಮಸ್ಕ್…!; ಇದು ಬಿಲಿಯನೇರ್ಸ್ ಇಂಡೆಕ್ಸ್‌ ಇತಿಹಾಸದಲ್ಲಿ ಅತಿದೊಡ್ಡ ಏಕದಿನ ಲಾಭ

ನ್ಯೂ ಯಾರ್ಕ್: ಹರ್ಟ್ಜ್ ಗ್ಲೋಬಲ್ ಹೋಲ್ಡಿಂಗ್ಸ್ 1,00,000 ಟೆಸ್ಲಾ ವಾಹನಗಳಿಗೆ ಆರ್ಡರ್ ಮಾಡಿದ ನಂತರ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ವೈಯಕ್ತಿಕ ಸಂಪತ್ತು ಸೋಮವಾರ ಒಂದೇ ದಿನ 36.2 ಶತಕೋಟಿ ಡಾಲರ್(2.71 ಲಕ್ಷ ಕೋಟಿ ರೂ.)ಗಳಷ್ಟು ಹೆಚ್ಚಾಗಿದೆ. ಬ್ಲೂಮ್‌ಬರ್ಗ್ ಮಿಲಿಯನೇರ್ಸ್ ಇಂಡೆಕ್ಸ್‌ನ ಇತಿಹಾಸದಲ್ಲಿ ಇದು ಅತಿದೊಡ್ಡ ದೈನಂದಿನ ಲಾಭವಾಗಿದೆ. ಕಳೆದ ವರ್ಷ ಬಾಟಲ್ ವಾಟರ್ … Continued

ಟಿ-20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಗೆಲುವನ್ನು ‘ಇಸ್ಲಾಮಿನ ವಿಜಯ’ ಎಂದು ಹೇಳಿದ ಪಾಕ್ ಸಚಿವ, ವೀಕ್ಷಿಸಿ

ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ ಅವರು ಟಿ-20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಗೆಲುವನ್ನು ‘ಇಸ್ಲಾಮಿನ ವಿಜಯ’ ಎಂದು ಹೇಳಿದ್ದಾರೆ. ಈ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ಗಳಿಂದ ಗೆದ್ದ ಬೆನ್ನಲ್ಲೇ ರಶೀದ್ ಈ ಹೇಳಿಕೆ ನೀಡಿದ್ದಾರೆ. پاکستان انڈیا میچ ٹکرا: پاکستانی کرکٹ ٹیم اور عوام کو مبارکباد پیش کرتا … Continued

ಇಸ್ಲಾಂ ತೊರೆದು ಹಿಂದೂ ಧರ್ಮ ಸ್ವೀಕರಿಸಲಿರುವ ಇಂಡೋನೇಷ್ಯಾದ ಸ್ಥಾಪಕ ಅಧ್ಯಕ್ಷನ ಪುತ್ರಿ ,ಇಂದು ದೀಕ್ಷಾ ಸಮಾರಂಭ

ಇಂಡೋನೇಷ್ಯಾದ ಮೊದಲ ಅಧ್ಯಕ್ಷ ಸುಕರ್ಣೋ ಅವರ ಪುತ್ರಿ ಸುಕ್ಮಾವತಿ ಸುಕ್ರಣೋಪುತ್ರಿ ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದ್ದಾರೆ. ಅಕ್ಟೋಬರ್ 26 ರಂದು ನಡೆಯಲಿರುವ ಔಪಚಾರಿಕ ಸಮಾರಂಭದಲ್ಲಿ ಅವರು ಹಿಂದೂ ಧರ್ಮವನ್ನು ಸ್ವೀಕರಿಸಲಿದ್ದಾರೆ ಎಂದು ಸಿಎನ್ಎನ್ ಇಂಡೋನೇಷ್ಯಾ ವರದಿ ಮಾಡಿದೆ. ಪರಿವರ್ತನಾ ಸಮಾರಂಭ ‘ಸುಧಿ ವಡಾನಿ’ಯನ್ನು ಬಾಲಿ ಅಗುಂಗ್ ಸಿಂಗರಾಜದಲ್ಲಿ ಅಂದರೆ ಕುಟುಂಬದ ಪೂರ್ವಜರ ಭೂಮಿಯಾದ … Continued

ಇರಾಕ್‌ನಲ್ಲಿ 2,700 ವರ್ಷಗಳಷ್ಟು ಹಳೆಯದಾದ ವೈನ್ ಕಾರ್ಖಾನೆ ಪತ್ತೆ ಹಚ್ಚಿದ ಪುರಾತತ್ವ ತಜ್ಞರು…!

ದೋಹಕ್:‌ ಇರಾಕ್‌ನ ಪುರಾತತ್ವ ತಜ್ಞರು ಭಾನುವಾರ 2,700 ವರ್ಷಗಳ ಹಿಂದೆ ಅಸಿರಿಯಾದ ರಾಜರ ಆಳ್ವಿಕೆ ಕಾಲದ ದೊಡ್ಡ ಪ್ರಮಾಣದ ವೈನ್ ಕಾರ್ಖಾನೆಯನ್ನು ಕಂಡುಹಿಡಿದಿದ್ದನ್ನು ಬಹಿರಂಗಪಡಿಸಿದ್ದಾರೆ, ಜೊತೆಗೆ ಶಿಲೆಯಲ್ಲಿ ಕೆತ್ತಿದ ರಾಜ ಪರಿವಾರಗಳು ಕಂಡುಬಂದಿದೆ. ಉತ್ತರ ಇರಾಕ್‌ನ ಫೈಡಾದಲ್ಲಿ ಸುಮಾರು ಒಂಬತ್ತು-ಕಿಲೋಮೀಟರ್ ಉದ್ದದ (5.5-ಮೈಲಿ) ನೀರಾವರಿ ಕಾಲುವೆಯ ಗೋಡೆಗಳಿಗೆ ರಾಜರು ದೇವರನ್ನು ಪ್ರಾರ್ಥಿಸುತ್ತಿರುವುದನ್ನು ತೋರಿಸುವ ಕಲ್ಲಿನ ಮೂಲ-ಉಬ್ಬುಗಳು, … Continued

ಬ್ರಿಟನ್ನಿನಲ್ಲಿ ಸಾಕು ನಾಯಿಗೆ ಸಸ್ಯಾಹಾರಿ ಊಟ ಮಾತ್ರ ಕೊಟ್ಟರೆ ದಂಡ, ಜೈಲು…!

ಲಂಡನ್:‌ ನೀವು ಬ್ರಿಟನ್ನಿನಲ್ಲಿ ನಾಯಿ ಮಾಲೀಕರಾಗಿದ್ದರೆ, ನಿಮ್ಮ ಪ್ರೀತಿಯ ಸಾಕುಪ್ರಾಣಿಗಾಗಿ ಮಾಂಸ-ಮುಕ್ತ ಆಹಾರವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀವು ಶೀಘ್ರದಲ್ಲೇ ಕಳೆದುಕೊಳ್ಳಲಿದ್ದೀರಿ. ವರದಿಗಳ ಪ್ರಕಾರ, ಬ್ರಿಟನ್ನಿನಲ್ಲಿ ಸಾಕುಪ್ರಾಣಿಗಳ ಮಾಲೀಕರು ತಮ್ಮ ನಾಯಿಗಳನ್ನು ಸಸ್ಯಾಹಾರಿ ಆಹಾರ ಮಾತ್ರ ಕೊಡುವುದರ ವಿರುದ್ಧ ಎಚ್ಚರಿಸಿದ್ದಾರೆ. ತಮ್ಮ ಸಾಕುಪ್ರಾಣಿಗಳಿಗೆ ಇಂತಹ ಆಹಾರವು ದಂಡ ಅಥವಾ ಜೈಲುವಾಸಕ್ಕೆ ಕಾರಣವಾಗಬಹುದು ಎಂದು ಅವರಿಗೆ ತಿಳಿಸಲಾಗಿದೆ. … Continued