ಕುಂದುಜ್ ನಂತರ ಈಗ ಕಂದಹಾರದ ಶಿಯಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಸಮಯದಲ್ಲಿ ಬಾಂಬ್‌ ಸ್ಫೋಟ:ಕನಿಷ್ಠ 32 ಮಂದಿಸಾವು

ನವದೆಹಲಿ:  ದಕ್ಷಿಣ ಅಫ್ಗಾನಿಸ್ತಾನದ ಕಂದಹಾರ್ ನಗರದಲ್ಲಿರುವ ಶಿಯಾ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ಸಂದರ್ಭದಲ್ಲೇ ಸ್ಫೋಟ ಸಂಭವಿಸಿದೆ. ದುರ್ಘಟನೆಯಲ್ಲಿ ಕನಿಷ್ಠ 32ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೂರು ಕಡೆ ಸ್ಫೋಟ ಸಂಭವಿಸಿದೆ. ಮಸೀದಿಯ ಮುಖ್ಯದ್ವಾರ, ದಕ್ಷಿಣ‌ ಭಾಗ ಮತ್ತು ಪ್ರಾರ್ಥನೆಗೆ ಹಾಜರಾಗುವುದಕ್ಕೂ ಮುನ್ನ ಜನರು ಮುಖ ತೊಳೆಯುವ ಜಾಗದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಫ್ಘಾನಿಸ್ತಾನದ … Continued

ತಾಲಿಬಾನಿಗಳ ಹಸ್ತಕ್ಷೇಪ; ಕಾಬೂಲಿಗೆ ವಿಮಾನಗಳ ಹಾರಾಟ ಸ್ಥಗಿತಗೊಳಿಸಿದ ಪಾಕಿಸ್ತಾನ ಇಂಟರ್​ನ್ಯಾಶನಲ್​ ಏರ್​ಲೈನ್ಸ್​..!

ಕಾಬೂಲ್​​ನಿಂದ ಪಾಕಿಸ್ತಾನಕ್ಕೆ ಬರುತ್ತಿದ್ದ ಮತ್ತು ಪಾಕಿಸ್ತಾನದಿಂದ ಕಾಬೂಲ್​​ಗೆ ಹೋಗುತ್ತಿದ್ದ ಎಲ್ಲ ವಿಮಾನಗಳ ಹಾರಾಟವನ್ನೂ ಸ್ಥಗಿತಗೊಳಿಸುವುದಾಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ (PIA) ಹೇಳಿದೆ. ತಾಲಿಬಾನಿಗಳ ಮಿತಿಮೀರಿದ ಹಸ್ತಕ್ಷೇಪ, ಅನಿಯಂತ್ರಿತ ನಿಯಮ ಬದಲಾವಣೆ, ಮತ್ತು ಅಲ್ಲಿನ ಸಿಬ್ಬಂದಿಯ ಬೆದರಿಕೆ, ವಿಪರೀತ ಎನ್ನಿಸುವಷ್ಟು ಕಟ್ಟುನಿಟ್ಟಿನ ನಿಯಮಗಳೇ ಇದಕ್ಕೆ ಕಾರಣ ಎಂದು ಪಾಕಿಸ್ತಾನ ತಿಳಿಸಿದೆ. ಅಫ್ಘಾನಿಸ್ತಾನದ ಅತಿದೊಡ್ಡ ಖಾಸಗಿ ವಾಹಕವಾದ ಕಾಮ್​ … Continued

ತೈವಾನ್​ನಲ್ಲಿ ಬೆಂಕಿ ದುರಂತ; 46 ಜನರ ಸಜೀವ ದಹನ, 41ಕ್ಕೂ ಹೆಚ್ಚು ಮಂದಿಗೆ ಗಾಯ

ತೈವಾನ್: ದಕ್ಷಿಣ ತೈವಾನ್‌ನ ನಗರವಾದ ಕಾಹೊಹ್‌ಸ್ಯುಂಗ್​ನಲ್ಲಿ ಬುಧವಾರ ರಾತ್ರಿ ಕಟ್ಟಡವೊಂದಕ್ಕೆ ಬೆಂಕಿ ತಗುಲಿದ್ದು, 46 ಜನರು ಸಾವನ್ನಪ್ಪಿದ್ದಾರೆ. 13 ಮಹಡಿಗಳ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಅಗ್ನಿ ದುರಂತದಲ್ಲಿ ಸಾಕಷ್ಟು ಜನರು ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳದವರು ಅದನ್ನು ನಿಯಂತ್ರಣಕ್ಕೆ ತರುವ ಮುನ್ನ ಅನೇಕ ಮಹಡಿಗಳಿಗೆ ಬೆಂಕಿ ವ್ಯಾಪಿಸಿದೆ. 13 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಹಲವು … Continued

ಬಾಂಗ್ಲಾದೇಶದಲ್ಲಿ ದುರ್ಗಾ ಪೂಜಾ ಪಂಡಲ್‌ಗಳು ಧ್ವಂಸ, ಕನಿಷ್ಠ 3 ಸಾವು

ಢಾಕಾ: ಬಾಂಗ್ಲಾದೇಶದಲ್ಲಿ ದುರ್ಗಾ ಪೂಜಾ ಪಂಡಲ್‌ಗಳು ಮತ್ತು ವಿಗ್ರಹಗಳ ಮೇಲೆ ಹಲವಾರು ದಾಳಿಗಳು ನಡೆದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ದುರ್ಗಾಪೂಜೆ ಆಚರಣೆಯಲ್ಲಿ ಕೋಮು ಉದ್ವಿಗ್ನತೆ ಆವರಿಸಿದೆ. ಕೊಮಿಲ್ಲಾ ಪಟ್ಟಣದ ನನುವಾರ್ ದಿಗಿ ಸರೋವರದ ಬಳಿ ದುರ್ಗಾ ಪೂಜಾ ಪಂಡಲ್‌ ಒಂದರಲ್ಲಿ ಕುರಾನ್ ಅನ್ನು ಅಪವಿತ್ರಗೊಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ … Continued

ವಾಟ್ಸಪ್, ಜಿಮೇಲ್ ಬಳಸುತ್ತಿರುವ ಮುಸ್ಲಿಂ ಮಹಿಳೆಯರನ್ನು ವಶಕ್ಕೆ ಪಡೆಯುತ್ತಿರುವ ಚೀನಾ ಪೊಲೀಸರು

ಬೀಜಿಂಗ್: ಉಯ್ಗಿರ್ ಮುಸ್ಲಿಮರ (Uyghurs) ಮೇಲಿನ ದಾಳಿಯನ್ನು ಚೀನಾ ತೀವ್ರಗೊಳಿಸಿದೆ. ಮಾಧ್ಯಮಗಳ ವರದಿ ಪ್ರಕಾರ, ಚೀನಾದ ಸೈನಿಕರು ಮತ್ತು ಪೊಲೀಸರು ವಾಟ್ಸಪ್ ಮತ್ತು ಜಿಮೇಲ್ ಬಳಸುತ್ತಿರುವ ಮುಸ್ಲಿಂ ಮಹಿಳೆಯರನ್ನು ವಶಕ್ಕೆ ತೆಗೆಕೊಳ್ಳುತ್ತಿದ್ದಾರೆ. ಚೀನಾ ಸರ್ಕಾರ ಇವರನ್ನು ‘ಪ್ರಿ-ಕ್ರಿಮಿನಲ್ಸ್’ ಎಂದು ಹೇಳುತ್ತಿದೆ. ಅಂದ್ರೆ ವಾಟ್ಸಪ್ ಮತ್ತು ಜಿ ಮೇಲ್ ಬಳಸುತ್ತಿರುವ ಮಹಿಳೆಯರು ಭವಿಷ್ಯದಲ್ಲಿ ಗಂಭೀರ ಅಪರಾಧಗಳನ್ನು ಮಾಡುವ … Continued

ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ Gmail ಸೇವೆಗಳಲ್ಲಿ ವ್ಯತ್ಯಯ..! ಇಮೇಲ್‌ ಕಳುಹಿಸಲು ಪರದಾಟ

ನವದೆಹಲಿ : ಸಾಮಾಜಿಕ ಜಾಲತಾಣಗಳ ಸರ್ವರ್‌ ಡೌನ್‌ ಆಗಿರುವ ಬೆನ್ನಲ್ಲೇ ಈಗ ಭಾರತದ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಜಿಮೇಲ್‌ ಡೌನ್‌ ಾದ ವರದಿಗಳು ಬಂದಿವೆ. ಮಧ್ಯಾಹ್ನ 3 ಗಂಟೆಯಿಂದ ಈ ಸಮಸ್ಯೆ ಎದುರಾಗಿದ್ದು, ಲಕ್ಷಾಂತರ ಗ್ರಾಹಕರು ಜಿಮೇಲ್‌ ಮೂಲಕ ಇಮೇಲ್‌ ಕಳುಹಿಸಲಾಗದೆ ಪರದಾಡುತ್ತಿದ್ದಾರೆ. ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿನ ಜನರು ಹೆಚ್ಚಾಗಿ ಗೂಗಲ್ಲಿನ … Continued

ಅಮೆರಿಕ ಮೂಲದ ಮೂವರು ಅರ್ಥಶಾಸ್ತ್ರಜ್ಞರಿಗೆ 2021ರ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿ

ನ್ಯೂಯಾರ್ಕ್: ಅಮೆರಿಕ ಮೂಲದ ಮೂವರು ಆರ್ಥಿಕ ತಜ್ಞರಿಗೆ 2021 ರ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿಯನ್ನು ನೀಡಲಾಗಿದೆ. 2021 ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿಯನ್ನು ಸೋಮವಾರ ಘೋಷಣೆ ಮಾಡಿದ್ದು, ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿ ಡೇವಿಡ್‌ ಕಾರ್ಡ್, ಜೋಶುವಾ ಡಿ.ಅಂಗ್ರಿಸ್ಟ್‌ ಮತ್ತು ಗ್ವಿಡೊ ಡಬ್ಲ್ಯೂ ಇಂಬೆನ್ಸ್‌ ಅವರಿಗೆ ದೊರಕಿದೆ. ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಡೇವಿಡ್‌ ಕಾರ್ಡ್‌ಗೆ ಕಾರ್ಮಿಕರ … Continued

ನದಿಯಲ್ಲಿ ದೋಣಿ ಮಗುಚಿ 50 ಸಾವು; 60 ಪ್ರಯಾಣಿಕರು ನಾಪತ್ತೆ

ಮಂಗೋಲಾ: ಕಾಂಗೋದಲ್ಲಿ ದೋಣಿ ಮಗುಚಿ 50ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಹಾಗೂ 60 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಕಾಂಗೋ ನದಿಯಲ್ಲಿ ಈ ದುರ್ಘಟನೆ ನಡೆದಿದ್ದು, ಇದುವರೆಗೂ 51 ಶವಗಳನ್ನು ಹೊರಗೆ ತೆಗೆಯಲಾಗಿದೆ. ಸ್ಥಳೀಯರು ಮತ್ತು ಪ್ರಯಾಣಿಕರ ಮಾಹಿತಿ ಮೇರೆಗೆ ಇನ್ನೂ 60 ಜನ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. 39 ಜನರು ಸುರಕ್ಷಿತವಾಗಿದ್ದು, … Continued

ಅಫ್ಘಾನಿಸ್ತಾನದ ಕುಂಡುಜ್‌ನ ಶಿಯಾ ಮಸೀದಿಯಲ್ಲಿ ಬಾಂಬ್ ಸ್ಫೋಟ: ಕನಿಷ್ಠ 100 ಮಂದಿ ಸಾವು

ಅಮೆರಿಕ ಪಡೆಗಳು ದೇಶವನ್ನು ತೊರೆದ ನಂತರ ನಡೆದ ಅತ್ಯಂತ ದೊಡ್ಡ ರಕ್ತಪಾತದ ದಾಳಿಯಲ್ಲಿ ಅಫ್ಘಾನಿಸ್ತಾನದ ಕುಂಡುಜ್ ನಗರದ ಶಿಯಾ ಮಸೀದಿಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಶುಕ್ರವಾರ ಕನಿಷ್ಠ 100 ಜನರು ಮೃತಪಟ್ಟಿದ್ದಾರೆ. ಸ್ಫೋಟದಲ್ಲಿ ಶಿಯಾ ಅಲ್ಪಸಂಖ್ಯಾತ ಸಮುದಾಯದ ಹೆಚ್ಚಿನ ಸಂತ್ರಸ್ತರು ಗಾಯಗೊಂಡಿದ್ದಾರೆ. ಕುಂದುಜ್ ಪ್ರಾಂತೀಯ ಆಸ್ಪತ್ರೆಯ ವೈದ್ಯಕೀಯ ಮೂಲವೊಂದು ಹೇಳುವಂತೆ 35 ಸಾವುಗಳು ಮತ್ತು 50 … Continued

ಅಕ್ಟೋಬರ್ 11 ರಿಂದ ಕೋವಿಶೀಲ್ಡ್-ಲಸಿಕೆ ಹಾಕಿದ ಪ್ರಯಾಣಿಕರಿಗೆ ನಿರ್ಬಂಧ ತೆಗೆದ ಬ್ರಿಟನ್‌..!

ನವದೆಹಲಿ: ಗುರುವಾರ, ಬ್ರಿಟನ್‌ ಸಂಪೂರ್ಣ ಲಸಿಕೆ ಹಾಕಿದ ಭಾರತೀಯ ಪ್ರಯಾಣಿಕರು ದೇಶವನ್ನು ಪ್ರವೇಶಿಸುವಾಗ ನಿರ್ಬಂಧಿಸಬೇಕಾಗಿಲ್ಲ ಎಂದು ಘೋಷಿಸಿತು. ಹೊಸ ನಿಯಮವು ಅಕ್ಟೋಬರ್ 11 ರಿಂದ ಜಾರಿಗೆ ಬರಲಿದೆ. ಆದಾಗ್ಯೂ, ಕೋವಿಶೀಲ್ಡ್ ಅಥವಾ ಬ್ರಿಟನ್‌ ಅನುಮೋದಿಸಿದ ಯಾವುದೇ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಇದು ಅನ್ವಯವಾಗುತ್ತದೆ. ಅಲೆಕ್ಸ್ ಎಲ್ಲಿಸ್, ಭಾರತದಲ್ಲಿನ ಬ್ರಿಟಿಷ್ ಹೈ ಕಮೀಷನರ್, ತನ್ನ ಅಧಿಕೃತ ಟ್ವಿಟರ್ … Continued