ಬಾಂಗ್ಲಾದೇಶ: ದುರ್ಗಾ ಪೂಜೆಯ ಪೆಂಡಾಲಿನಲ್ಲಿ ಕುರಾನ್ ಪ್ರತಿ ಇಟ್ಟ ವ್ಯಕ್ತಿಯ ಬಂಧನ

ಢಾಕಾ: ಬಾಂಗ್ಲಾದೇಶದಲ್ಲಿ ಅಕ್ಟೋಬರ್ 13ರಂದು ಕೊಮಿಲಾ ಜಿಲ್ಲೆಯಲ್ಲಿ ದುರ್ಗಾಪೂಜೆಯ ಪೆಂಡಾಲ್ ನಲ್ಲಿ ಕುರ್ ಆನ್ ಪ್ರತಿ ಇರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ದಿ ಢಾಕಾ ಟ್ರಿಬ್ಯೂನಲ್ ಪತ್ರಿಕೆ ವರದಿ ಮಾಡಿದೆ. ಕೊಮಿಲಾ ನಗರದಲ್ಲಿ ದುರ್ಗಾಪೂಜೆಯ ಪೆಂಡಾಲಿನಲ್ಲಿ ಇರಿಸಿದ್ದ ಸಿಸಿಟಿವಿ ದೃಶ್ಯಾವಳಿಯ ಆಧಾರದಲ್ಲಿ ದುಷ್ಕರ್ಮಿಯನ್ನು ಇಕ್ಬಾಲ್ ಹುಸೇನ್ ಎಂದು ಗುರುತಿಸಲಾಗಿತ್ತು. ತಲೆಮರೆಸಿಕೊಂಡಿದ್ದ ಈತನನ್ನು ಕಾಕ್ಸ್ ಬಝಾರ್ … Continued

ಅಮೆರಿಕದಲ್ಲಿ ಹಸಿ ಈರುಳ್ಳಿ ತಿಂದು 650 ಮಂದಿ ಅಸ್ವಸ್ಥ: ಮನೆಯಲ್ಲಿರುವ ಈರುಳ್ಳಿ ಎಸೆಯಲು ಸರ್ಕಾರದಿಂದ ಸೂಚನೆ

ಅಮೆರಿಕ: ಕೋವಿಡ್‌ ಬಳಿಕ ಅಮೆರಿಕದಲ್ಲಿ ಮತ್ತೊಂದು ವಿಚಿತ್ರ ಸೋಂಕು ಕಾಣಿಸಿಕೊಂಡಿದೆ. ಸಾಲ್ಮೋನೆಲ್ಲಾ ಎಂಬ ಬ್ಯಾಕ್ಟೀರಿಯಾದಿಂದ ಈ ಸೋಂಕು ಹರಡುತ್ತಿದ್ದು, ಇದು ಅಮೆರಿಕದ ವಿಜ್ಞಾನಿಗಳಿಗೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸವಾಲಾಗಿ ಪರಿಗಣಮಿಸಿದೆ. ಹೊಸದಾಗಿ ಕಾಣಿಸಿಕೊಂಡ ಈ ಸೋಂಕು ಈರುಳ್ಳಿ ತಿಂದದವರಿಂದ ಹರಡುತ್ತಿದೆ ಎನ್ನಲಾಗಿದೆ. ಹಸಿ ಈರುಳ್ಳಿ ಸೇವಿಸಿದ ಸುಮಾರು 650 ಮಂದಿ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಚಿವಾವಾದಿಂದ … Continued

ಸಿರಿಯಾ: ಡ್ರೋಣ್ ದಾಳಿಯಲ್ಲಿ ಅಲ್‌ ಕೈದಾ ಉಗ್ರ ಸಂಘಟನೆ ಹಿರಿಯ ನಾಯಕನ ಹತ್ಯೆ ಮಾಡಿದ ಅಮೆರಿಕ

ವಾಷಿಂಗ್ಟನ್: ಸಿರಿಯಾದಲ್ಲಿ ಅಮೆರಿಕ ಸೇನೆ ನಡೆಸಿದ ಡ್ರೋಣ್‌ ದಾಳಿಯಲ್ಲಿ ಅಲ್‌-ಕೈದಾ ಉಗ್ರ ಸಂಘಟನೆಯ ಹಿರಿಯ ನಾಯಕ ಹತ್ಯೆಯಾಗಿದ್ದಾನೆ ಎಂದು ಪೆಂಟಗಾನ್‌ ತಿಳಿಸಿದೆ. ಇಸ್ಲಾಮಿಕ್‌ ಸ್ಟೇಟ್ ಸಂಘಟನೆ ವಿರುದ್ಧ ಹೋರಾಟ ನಡೆಸುತ್ತಿದ್ದ ಅಮೆರಿಕ ನೇತೃತ್ವದ ಸೇನಾ ಪಡೆಗಳು ಬಳಸುತ್ತಿದ್ದ ದಕ್ಷಿಣ ಸಿರಿಯಾದ ನೆಲೆಯ ಮೇಲೆ ಎರಡು ದಿನಗಳ ಹಿಂದಷ್ಟೇ ದಾಳಿ ನಡೆದಿತ್ತು.ಇದಕ್ಕೆ ಪ್ರತೀಕಾರವಾಗಿ ದಾಳಿ ನಡೆಸಲಾಗಿದೆ. ಸಿರಿಯಾದ … Continued

ಕಾಂಗೋದಲ್ಲಿ ನಿಗೂಢ ಕಾಯಿಲೆಯಿಂದ 165ಕ್ಕೂ ಹೆಚ್ಚು ಮಕ್ಕಳು ಸಾವು

ಕಾಂಗೋ: ಈಗಾಗಲೇ ಕೊವಿಡ್ ಮಹಾಮಾರಿಯಿಂದ ಜಗತ್ತಿನಾದ್ಯಂತ 49 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಈದರ ಮಧ್ಯೆಯೇ ಕಾಂಗೋದಲ್ಲಿ ಮಕ್ಕಳಲ್ಲಿ ನಿಗೂಢ ಕಾಯಿಲೆಯೊಂದು ಕಂಡುಬಂದಿದ್ದು, ಆಗಸ್ಟ್​ನಿಂದ ಇಲ್ಲಿಯ ವರೆಗೆ 165ಕ್ಕೂ ಹೆಚ್ಚು ಮಕ್ಕಳು ಿದರಿಂದ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಆಗಸ್ಟ್‌ನಲ್ಲಿ ಕ್ವಿಲು ಪ್ರಾಂತ್ಯದ ಗುಂಗು ಪಟ್ಟಣದಲ್ಲಿ ಈ ನಿಗೂಢ ರೋಗ ಮೊದಲು ಕಾಣಿಸಿಕೊಂಡಿತ್ತು. ಈ ಕಾಯಿಲೆ … Continued

ಅಮೆರಿಕದ ಟಕೋಮಾದಲ್ಲಿ ಗುಂಡಿನ ದಾಳಿ; ನಾಲ್ವರ ಹತ್ಯೆ

ವಾಷಿಂಗ್ಟನ್: ಅಮೆರಿಕದ ಟಕೋಮಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಈ ಘಟನೆ ನಡೆದಿದ್ದು, ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಹಾಗೂ ಗಾಯಗೊಂಡಿದ್ದ ಇನ್ನೊಬ್ಬನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆತ ಗುರುವಾರ ಸಂಜೆಯ ವೇಳೆಗೆ ಮೃತಪಟ್ಟಿದ್ದಾನೆ ಎಂದು ಟಕೋಮಾ ಪೊಲೀಸರು ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಿದ್ದಾರೆ. … Continued

ಮರಿಯಾನೆ ತಂಟೆಗೆ ಬಂದ ಮೊಸಳೆಯನ್ನು ಕೊಂದೇ ಹಾಕಿದ ತಾಯಿ ಆನೆ.. ಕೋಪ ನೋಡಿದ್ರೆ ಬೆರಗಾಗ್ತೀರಾ..! ದೃಶ್ಯ ವಿಡಿಯೊದಲ್ಲಿ ಸೆರೆ

ಕೆಲವೊಂದು ಪ್ರಾಣಿಗಳು ಶಕ್ತಿಶಾಲಿಯಾಗಿದ್ದರೂ ಬೇರೆ ಪ್ರಾಣಿಗಳ ಮೇಲೆ ದಾಳಿ ಮಾಡುವುದಿಲ್ಲ. ತಮ್ಮಷ್ಟಕ್ಕೆ ತಾವು ಇರುತ್ತವೆ. ಅದರೆ ಕೆಣಕಿದರೆ ಅಥವಾ ಅದರ ಮರಿಗಳ ಸುದ್ದಿಗೆ ಬಂದರೆ ದಾಳಿ ಮಾಡುತ್ತವೆ.. ಇಂಥ ಪ್ರಾಣಿಗಳಲ್ಲಿ ಆನೆ ಪ್ರಮುಖವಾದದ್ದು. ಹಿಂಡುಗಳಲ್ಲೇ ವಾಸಿಸುವ ಆನೆಗಳು ಸಾಮಾನ್ಯವಾಗಿ ಯಾವ ಪ್ರಾಣಿಗಳ ತಂಡೆಗೂ ಹೋಗುವುದಿಲ್ಲ,. ಅವುಗಳಿಗೆ ಸಿಟ್ಟು ಬಂದರೆ ಉಳಿದ ಪ್ರಾಣಿಗಳಿಗೆ ದೂರ ಹೋಗುವಂತೆ ಕೂಗಿ … Continued

ಫೇಸ್ಬುಕ್‌, ಟ್ವಿಟ್ಟರ್‌ಗೆ ಡೊನಾಲ್ಡ್ ಟ್ರಂಪ್ ಸಡ್ಡು..? : ಸ್ವಂತ ಸಾಮಾಜಿಕ ಜಾಲತಾಣ ಟ್ರುತ್ ಸೋಶಿಯಲ್ ಆರಂಭಿಸಲಿರುವ ಅಮೆರಿಕ ಮಾಜಿ ಅಧ್ಯಕ್ಷ ..!

ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್‌ ಸೋಶಿಯಲ್ (TRUTH Social) ಎನ್ನುವ ನೂತನ ಸಾಮಾಜಿಕ ಜಾಲತಾಣ ಆರಂಭಿಸಲಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಹೊಸ ಸಾಮಾಜಿಕ ಜಾಲತಾಣ ನವೆಂಬರ್‌ನಲ್ಲಿ ಇದು ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ಪ್ರಬಲ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟ್ಟರ್ ತನ್ನನ್ನು ಬ್ಯಾನ್ ಮಾಡಿದ ಬಳಿಕ ಡೊನಾಲ್ಡ್ ಟ್ರಂಪ್ ಈ … Continued

ಫೇಸ್​ಬುಕ್ ಹೆಸರಿನಲ್ಲಿ ಬದಲಾವಣೆ..ಹೊಸ ಹೆಸರಿನೊಂದಿಗೆ ಮರುಬ್ರ್ಯಾಂಡ್ ಆಗಲಿದೆಯಂತೆ

ನವದೆಹಲಿ : ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್‌ ಈಗ ತನ್ನ ಹೆಸರು ಬದಲಾಯಿಸಲು ಮುಂದಾಗಿದೆ. ಫೇಸ್‌ಬುಕ್ ಇಂಕ್ ಮುಂದಿನ ವಾರ ಕಂಪನಿಯನ್ನ ಹೊಸ ಹೆಸರಿನೊಂದಿಗೆ ಬ್ರಾಂಡ್ ಮಾಡಲು ಯೋಜಿಸುತ್ತಿದೆ ಎಂದು ದಿ ವರ್ಜ್ ವರದಿ ಮಾಡಿದೆ. ಫೇಸ್‌ಬುಕ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಝುಕರ್‌ಬರ್ಗ್ ಅಕ್ಟೋಬರ್ 28ರಂದು ಕಂಪನಿಯ ವಾರ್ಷಿಕ ಕನೆಕ್ಟ್ ಕಾನ್ಫರೆನ್ಸ್‌ನಲ್ಲಿ ಹೆಸರು ಬದಲಾವಣೆಯ … Continued

ಇದೇ ಮೊದಲ ಬಾರಿಗೆ ಮಾನವನ ದೇಹಕ್ಕೆ ಹಂದಿಯ ಕಿಡ್ನಿ ಕಸಿ ಮಾಡುವಲ್ಲಿ ಅಮೆರಿಕದ ಸರ್ಜನ್​ಗಳು ಯಶಸ್ವಿ..!

ವಾಷಿಂಗ್ಟನ್: ಇದೇ ಮೊದಲ ಬಾರಿಗೆ ಹಂದಿಯ ಮೂತ್ರಪಿಂಡವನ್ನು (pig’s kidney) ಮನುಷ್ಯನ ದೇಹಕ್ಕೆ ಅಳವಡಿಸುವಲ್ಲಿಅಮೆರಿಕದ ಸರ್ಜನ್​ಗಳು ಯಶಸ್ವಿಯಾಗಿದ್ದಾರೆ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಹಂದಿಯ ಕಿಡ್ನಿಯನ್ನು ಅಳವಡಿಸಿರುವ ರೋಗಿಯ ದೇಹದಲ್ಲಿ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ. ಹಂದಿ ಮೂತ್ರಪಿಂಡವನ್ನು ಸ್ವೀಕರಿಸುವವರ ಪ್ರತಿರಕ್ಷಣಾ ವ್ಯವಸ್ಥೆಯಿಂದ ತಕ್ಷಣದ ಅಡ್ಡಪರಿಣಾಮವಾಗದಂತೆ ಮಾನವನಿಗೆ ಕಸಿ ಮಾಡಲಾಗಿದೆ, ಇದು ಸಂಭಾವ್ಯವಾಗಿ ಪ್ರಮುಖವಾದ ಮುನ್ನಡೆಯಾಗಿದ್ದು, … Continued

ಆತ್ಮಾಹುತಿ ಬಾಂಬರ್‌ಗಳ ಕುಟುಂಬಕ್ಕೆ ನಿವೇಶನದ ಜೊತೆ ನಗದು ಬಹುಮಾನ ಘೋಷಿಸಿದ ತಾಲಿಬಾನ್‌ ಸರ್ಕಾರ..!

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬರ್‌ಗಳಿಗೆ ಉತ್ತೇಜನ ನೀಡುವ ಹೊಸ ಭರವಸೆಯನ್ನು ತಾಲಿಬಾನ್ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ. ಅಮೆರಿಕ ಮತ್ತು ಅಫ್ಘಾನಿಸ್ತಾನದ ಯೋಧರ ಮೇಲೆ ದಾಳಿ ನಡೆಸಿದ ಆತ್ಮಾಹುತಿ ಬಾಂಬರ್ ಗಳ ಕುಟುಂಬಕ್ಕೆ ಭೂಮಿ ಮತ್ತು ನಗದು ಬಹುಮಾನ ನೀಡುವುದಾಗಿ ತಾಲಿಬಾನ್ ಭರವಸೆ ನೀಡಿದೆ. ಅಲ್ಲದೇ ಆತ್ಮಾಹುತಿ ಬಾಂಬರ್‌ಗಳನ್ನು ತಾಲಿಬಾನ್ ಸರ್ಕಾರ ಹುತಾತ್ಮರು ಎಂದು ಬಣ್ಣಿಸಿದೆ. ತಾಲಿಬಾನ್‌ನ … Continued