ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ಸಹ-ಶಿಕ್ಷಣ ನಿಷೇಧಿಸಿದ ತಾಲಿಬಾನ್‌: ವರದಿ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮಹಿಳಾ ಹಕ್ಕುಗಳನ್ನು ಗೌರವಿಸುವುದಾಗಿ ಪ್ರತಿಜ್ಞೆ ಮಾಡಿದ ಕೆಲವು ದಿನಗಳ ನಂತರ, ಹೆರಾತ್‌ ಪ್ರಾಂತ್ಯದ ತಾಲಿಬಾನ್ ಅಧಿಕಾರಿಗಳು ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಸಹ-ಶಿಕ್ಷಣವನ್ನು ನಿಷೇಧಿಸಿದ್ದಾರೆ, ಇದನ್ನು ‘ಸಮಾಜದ ಎಲ್ಲ ಅನಿಷ್ಟಗಳ ಮೂಲ’ ಎಂದು ವಿವರಿಸಲಾಗಿದೆ. ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ಖಾಸಗಿ ಸಂಸ್ಥೆಗಳ ಮಾಲೀಕರು ಮತ್ತು ತಾಲಿಬಾನ್ ಅಧಿಕಾರಿಗಳ ನಡುವಿನ ಸಭೆಯ ನಂತರ ಈ ನಿರ್ಧಾರವನ್ನು … Continued

ಕಾಬೂಲ್ ಸ್ಥಳಾಂತರ ಇತಿಹಾಸದಲ್ಲಿ ಅತ್ಯಂತ ಕಷ್ಟಕರವಾದದ್ದು, ಆಗಸ್ಟ್ 14 ರಿಂದ 13,000 ಜನರ ಏರ್‌ಲಿಫ್ಟ್‌, : ಬಿಡೆನ್

ವಾಷಿಂಗ್ಟನ್‌: ಅಧ್ಯಕ್ಷ ಜೋ ಬಿಡೆನ್ ಅವರು ಶುಕ್ರವಾರ ಕಾಬೂಲ್ ವಿಮಾನ ನಿಲ್ದಾಣದಿಂದ ತುರ್ತು ಸ್ಥಳಾಂತರದ ಅಂತಿಮ ಫಲಿತಾಂಶವನ್ನು ಖಾತರಿಪಡಿಸುವುದಿಲ್ಲ ಎಂದು ಹೇಳಿದ್ದಾರೆ ಅಲ್ಲದೆ, ಇದು ಅತ್ಯಂತ ಕಷ್ಟಕರವಾದ ಏರ್‌ಲಿಫ್ಟ್ ಕಾರ್ಯಾಚರಣೆಗಳಲ್ಲಿ ಒಂದು ಎಂಬುದನ್ನೂ ಹೇಳಿದ್ದಾರೆ.. ಇದು ಇತಿಹಾಸದಲ್ಲಿ ಅತಿದೊಡ್ಡ, ಅತ್ಯಂತ ಕಷ್ಟಕರವಾದ ಏರ್‌ಲಿಫ್ಟ್‌ಗಳಲ್ಲಿ ಒಂದಾಗಿದೆ “ಎಂದು ಶ್ವೇತಭವನದ ದೂರದರ್ಶನದ ಭಾಷಣದಲ್ಲಿ ಹೇಳಿದ ಬಿಡೆನ್‌ “ಅಂತಿಮ ಫಲಿತಾಂಶ … Continued

ಅಫ್ಘಾನಿಸ್ತಾನದ ಆಟ ಇನ್ನೂ ಮುಗಿದಿಲ್ಲ.. 3 ಜಿಲ್ಲೆಗಳನ್ನು ಮರಳಿ ವಶಪಡಿಸಿಕೊಂಡ ತಾಲಿಬಾನ್ ವಿರೋಧಿ ಪಡೆಗಳು…!: ವರದಿ

ಕಾಬೂಲ್:‌ ಸ್ಥಳೀಯ ವರದಿಗಾರರ ಪ್ರಕಾರ, ಖೇರ್ ಮುಹಮ್ಮದ್ ಅಂದರಾಬಿ ನೇತೃತ್ವದ ಸಾರ್ವಜನಿಕ ಪ್ರತಿರೋಧ ಪಡೆಗಳು ಶುಕ್ರವಾರ ತಾಲಿಬಾನ್‌ನಿಂದ ಅಫ್ಘಾನಿಸ್ತಾನದ ಬಾಗ್ಲಾನ್‌ನ ಪೋಲ್-ಇ-ಹೆಸರ್, ದೇಹ್ ಸಲಾಹ್ ಮತ್ತು ಬಾನು ಜಿಲ್ಲೆಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದೆ. ಅಫ್ಘಾನ್ ಸುದ್ದಿ ಸಂಸ್ಥೆ ಅಶ್ವಕ ಪ್ರಕಾರ, ಇದರಲ್ಲಿ ಹಲವಾರು ತಾಲಿಬಾನ್ ಹೋರಾಟಗಾರರು ಗಾಯಗೊಂಡರು ಅಥವಾ ಕೊಲ್ಲಲ್ಪಟ್ಟರು. ಪ್ರತಿರೋಧ ಪಡೆಗಳು ಅವರು ಇತರ … Continued

ಬಯಲಾದ ತಾಲಿಬಾನಿಗಳ ಕ್ರೌರ್ಯ: ಅಫ್ಘಾನಿಸ್ತಾನದಲ್ಲಿ ಪೊಲೀಸ್ ಮುಖ್ಯಸ್ಥರ ಕಣ್ಣಿಗೆ ಬಟ್ಟೆಕಟ್ಟಿ ಗುಂಡಿಕ್ಕಿ ಹತ್ಯೆ…!

ನವದೆಹಲಿ: ವಿರೋಧಿಗಳ ವಿರುದ್ಧ ಸೇಡು ತೀರಿಸಿಕೊಳ್ಳುವುದಿಲ್ಲ ಎಂದು ತಮ್ಮ ಪ್ರತಿಜ್ಞೆಯ ಹೊರತಾಗಿಯೂ, ಜಿಹಾದಿ ಗುಂಪಿನ ವಿರುದ್ಧ ಹೋರಾಡಿದ ಪ್ರಾದೇಶಿಕ ಪೊಲೀಸ್ ಮುಖ್ಯಸ್ಥನನ್ನು ತಾಲಿಬಾನ್ ಗುಂಡಿಟ್ಟು ಕೊಂದಿದೆ. ಪ್ರಸ್ತುತ ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ತುಣುಕುಗಳು ಸ್ಪಷ್ಟವಾಗಿ ಹೆರಾತ್ ಬಳಿಯ ಬದ್ಘಿಸ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಜನರಲ್ ಹಾಜಿ ಮುಲ್ಲಾ ಅಚಕಜೈ ಅವರನ್ನು ಬಂಧಿಸಿ ಮತ್ತು ಅವರ … Continued

ಮೂರು ಮಕ್ಕಳ ನೀತಿಗೆ ಚೀನಾ ಸರ್ಕಾರದಿಂದ ಅನುಮೋದನೆ

ಬೀಜಿಂಗ್‌: ಜನನ ಪ್ರಮಾಣ ಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ಜನಸಂಖ್ಯೆ ಮತ್ತು ಕುಟುಂಬ ಯೋಜನೆಯ ನೀತಿ ಪರಿಷ್ಕರಿಸಿದ ಚೀನಾ ಸರ್ಕಾರ ಶುಕ್ರವಾರ ‘ಮೂರು ಮಕ್ಕಳ ನೀತಿ’ಗೆ ಅನುಮೋದನೆ ನೀಡಿದೆ. ದಂಪತಿಗೆ ಮೂರು ಮಕ್ಕಳನ್ನು ಹೊಂದಲು ಅನುವು ಮಾಡಿಕೊಡುವ ಪರಿಷ್ಕೃತ ‘ಜನಸಂಖ್ಯೆ ಮತ್ತು ಕುಟುಂಬ ಯೋಜನೆ ಕಾನೂನನ್ನು ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್‌ನ (ಎನ್‌ಪಿಸಿ) ಸ್ಥಾಯಿ ಸಮಿತಿ ಅಂಗೀಕರಿಸಿದೆ. ‌ … Continued

1982ರಲ್ಲಿ ಭಾರತೀಯ ಮಿಲಿಟರಿ ಅಕಾಡೆಮಿ ಬ್ಯಾಚ್‌ಮೇಟ್‌ಗಳಿಗೆ ಶೇರು ಆಗಿದ್ದ ತಾಲಿಬಾನ್‌ ಉನ್ನತ ವ್ಯಕ್ತಿ..!

ಶೆರ್ ಮೊಹಮ್ಮದ್ ಅಬ್ಬಾಸ್ ಸ್ತಾನಿಕ್‌ಜಾಯ್, ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥರಾಗಿದ್ದಾರೆ. ಅವರಿಗೂ ಭಾರತಕ್ಕೂ ಸಂಬಂಧವಿದೆ. ಯಾಕೆಂದರೆ ಅವರು ಹಿಂದೆ ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ (ಐಎಂಎ) ಒಬ್ಬ ಸಂಭಾವಿತ ಕೆಡೆಟ್ ಆಗಿದ್ದರು, ಅಲ್ಲಿ ಅವರನ್ನು ಬ್ಯಾಚ್‌ಮೇಟ್‌ಗಳು ‘ಶೇರು’ ಎಂದು ಕರೆಯುತ್ತಿದ್ದರು. ರಾಜಕೀಯ ವಿಜ್ಞಾನವನ್ನು ಅಧ್ಯಯನ ಮಾಡಿದ ನಂತರ, ಶೇರ್ ಮೊಹಮ್ಮದ್ ಸ್ತಾನಿಕ್‌ಜಾಯ್ ಡೆಹ್ರಾಡೂನಿನ ಭಾರತೀಯ ಮಿಲಿಟರಿ … Continued

ಅಫಘಾನ್‌ ಬಿಕ್ಕಟ್ಟು: ಮಹಿಳಾ ನಿರೂಪಕಿಗೆ ನೀನು ಮಹಿಳೆ ಮನೆಗೆ ತೆರಳು ಎಂದ ತಾಲಿಬಾನ್‌

ಕಾಬೂಲ್: ಅಪ್ಘಾನಿಸ್ತಾನ್ ದ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ನಿರೂಪಕಿ ಈಗ ತಾಲಿಬಾನಿಂದಾಗಿ ಕೆಲಸ ಕಳೆದುಕೊಂಡಿದ್ದಾರ. ಹೀಗೆಂದು ಅವರು ಸಾಮಾಜಿ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ನೀನು ಮಹಿಳೆ. ಆದ್ದರಿಂದ ಕೆಲಸ ಮಾಡುವುದು ಬೇಡ, ಮನೆಗೆ ತೆರಳು ಎಂದು ತಾಲಿಬಾನ್ ಅಧಿಕಾರಿಗಳು ನನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ನಿರೂಪಕಿ ನಮಗೆ ಸಹಾಯ ಮಾಡಿ ಎಂದು … Continued

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಡಿಯಲ್ಲಿ ಮಹಿಳೆಯರಿಗೆ ಶರಿಯಾ ಕಾನೂನಿನ ಅರ್ಥವೇನು? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಶರಿಯಾ ಕಾನೂನಿನ ಅಡಿಯಲ್ಲಿ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ತಮ್ಮ ಹಕ್ಕುಗಳನ್ನು ಅನುಭವಿಸುತ್ತಾರೆ ಎಂದು ತಾಲಿಬಾನ್ ಹೇಳಿದೆ. ಶರಿಯಾ ಇಸ್ಲಾಂನ ಕಾನೂನು ವ್ಯವಸ್ಥೆಯಾಗಿದೆ. ಆದರೆ ತಾಲಿಬಾನ್‌ಗಳು ಶರಿಯಾ ಕಾನೂನಿಗೆ ತಮ್ಮದೇ ಆದ ವ್ಯಾಖ್ಯಾನವನ್ನು ಹೊಂದಿದ್ದಾರೆ.ಅದು ಉಳಿದ ಇಸ್ಲಾಂ ದೇಶಗಳಿಗಿಂತ ಭಿನ್ನವಾಗಿದೆ ಎಂದು ಹೇಳಲಾಗಿದೆ. ತಾಲಿಬಾನ್ ತಮ್ಮನ್ನು ಹೆಚ್ಚು ಸುಧಾರಣಾವಾದಿ ಶಕ್ತಿಯೆಂದು ತೋರಿಸಲು ಪ್ರಯತ್ನಿಸಿದೆ. ಅವರು ಮಹಿಳೆಯರ ಹಕ್ಕುಗಳನ್ನು ಗೌರವಿಸುವ … Continued

ಮಗುವಿನ ಹೃದಯ ಶಸ್ತ್ರಚಿಕಿತ್ಸೆಗೆ ಧನ ಸಹಾಯಕ್ಕಾಗಿ ತನ್ನ ಟೊಕಿಯೋ ಒಲಿಂಪಿಕ್ಸ್‌ ಪದಕ ಹರಾಜು ಹಾಕಿದ ಮರಿಯಾ ಆಂಡ್ರೆಜಿಕ್..!

ಪೋಲಿಷ್ ಜಾವೆಲಿನ್ ಎಸೆತಗಾರ್ತಿ ಮಾರಿಯಾ ಆಂಡ್ರೆಜಿಕ್ ಟೋಕಿಯೊ ಒಲಿಂಪಿಕ್ಸ್ ನಲ್ಲಿ ತಾನು ಗೆದ್ದ ಬೆಳ್ಳಿ ಪದಕವನ್ನು 1,25,000 ಡಾಲರ್ ಗೆ ಹರಾಜು ಹಾಕಿದ್ದು, ತನ್ನ ದೇಶದ ಎಂಟು ತಿಂಗಳ ಬಾಲಕನ ಹೃದಯ ಶಸ್ತ್ರಚಿಕಿತ್ಸೆಗೆ ಧನ ಸಹಾಯ ಮಾಡಿದ್ದಾರೆ. ಪೋಲೆಂಡ್ ಅಬ್ಕಾ ಪೋಲ್ಸ್ಕಾ ಅವರ ಕನ್ವೀನಿಯನ್ಸ್ ಸ್ಟೋರಿ ಕಂಪನಿಯು ಆಂಡ್ರೆಜ್ಜಿಕ್ ಅವರ ಬೆಳ್ಳಿ ಪದಕವನ್ನು $ 125,000 … Continued

ಅಫಘಾನಿಸ್ತಾನ್‌ದಿಂದ ಪಲಾಯನ ಮಾಡುವವರ ಚದುರಿಸಲು ಗುಂಡು ಹಾರಿಸುತ್ತಿರುವ ತಾಲಿಬಾನಿಗಳು:ಈವರೆಗೆ 12 ಜನರು ಸಾವು

ಕಾಬೂಲ್: ಅಫಘಾನಿಸ್ತಾನ ಬಿಟ್ಟು ಹೋಗುವ ಧಾವಂತದಲ್ಲಿ ಗುಂಪುಗೂಡುತ್ತಿರುವ ಜನರನ್ನು ಚದುರಿಸಲು ತಾಲಿಬಾನಿಗಳು ಗುಂಡು ಹಾರಿಸಿದ ಘಟನೆಗಳಲ್ಲಿ ಭಾನುವಾರದಿಂದ ಈವರೆಗೆ 12 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಎಲ್ಲರೂ ತಮ್ಮ ಮನೆಯಲ್ಲೇ ಇರಬೇಕು ಎಂದು ತಾಲಿಬಾನಿಗಳು ಕಟ್ಟಪ್ಪಣೆ ಮಾಡಿದ್ದಾರೆ. ಆಫ್ಘಾನಿಸ್ತಾನ ಬಿಟ್ಟು ಯಾರು ಹೊರ ಹೋಗುವ ಅಗತ್ಯ ಇಲ್ಲ ಎಂದು ಹೇಳಿದೆ. ಭಾನುವಾರದಿಂದ ಕಾಬೂಲ್ ಅಂತರರಾಷ್ಟ್ರೀಯ ವಿಮಾನ … Continued