31,000 ವರ್ಷಗಳ ಹಿಂದೆಯೇ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಕಾಲು ಕತ್ತರಿಸಿ ತೆಗೆದ ಪೂರ್ವ-ಐತಿಹಾಸಿಕ ಮಾನವ…! ಅಸ್ಥಿಪಂಜರದ ಮೇಲಿನ ಸಂಶೋಧನೆಯಲ್ಲಿ ಬಹಿರಂಗ

31,000 ವರ್ಷಗಳ ಹಿಂದೆಯೇ ಮನುಷ್ಯನಿಗೆ ಅಂಗಚ್ಛೇದನ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು ಎಂಬುದರ ಬಗ್ಗೆ ಪುರಾತತ್ತ್ವಜ್ಞರು ಈಗ ಪುರಾವೆಗಳನ್ನು ಕಂಡುಕೊಂಡಿದ್ದಾರೆ…! ಇದು ಈವರೆಗೆ ಪತ್ತೆಯಾದ ವಿಶ್ವದ ಅತ್ಯಂತ ಹಳೆಯ ಶಸ್ತ್ರಚಿಕಿತ್ಸೆ ಎಂದು ಹೇಳಲಾಗಿದೆ. ಇಂಡೋನೇಷ್ಯಾದ ಗುಹೆಯೊಂದರಲ್ಲಿ ಕಂಡುಬಂದ ಯುವ ವಯಸ್ಕ ವ್ಯಕ್ತಿಯ ಅಸ್ಥಿಪಂಜರವು ಅದರ ಎಡ ಪಾದವನ್ನು ಕಳೆದುಕೊಂಡಿದೆ ಮತ್ತು ಅದರ ಭಾಗವನ್ನು ಅಂಗಚ್ಛೇದನದ ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿದೆ … Continued

ಟಿ-20 ಏಷ್ಯಾ ಕಪ್‌: ಪಾಕಿಸ್ತಾನವು ಅಫ್ಘಾನಿಸ್ತಾನ ಸೋಲಿಸಿದ ನಂತರ ಕ್ರೀಡಾಂಗಣದಲ್ಲಿ ಕುರ್ಚಿಗಳಿಂದ ಪರಸ್ಪರ ಹೊಡೆದಾಡಿಕೊಂಡ ಅಭಿಮಾನಿಗಳು | ವೀಕ್ಷಿಸಿ

ಟಿ-20  ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕೊನೆಯ ಓವರ್‌ನಲ್ಲಿ ಸೋತ ನಂತರ ನಿರಾಶೆಗೊಂಡ ಅಫ್ಘಾನಿಸ್ತಾನ ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣವನ್ನು ಧ್ವಂಸಗೊಳಿಸಿದರು, ನಂತರ, ಪಾಕಿಸ್ತಾನದ ಅಭಿಮಾನಿಗಳ ಮೇಲೆ ಕುರ್ಚಿಗಳನ್ನು ಎಸೆದ ಘಟನೆ ಬುಧವಾರ ರಾತ್ರಿ ನಡೆದಿದೆ. ನಂತರ ಕ್ರೀಡಾಂಗಣದ ಆವರಣದ ಹೊರಗೆ ಹೊಡೆದಾಡಿಕೊಂಡಿದ್ದಾರೆ. ಬುಧವಾರದ ಪಂದ್ಯವು ಅಫ್ಘಾನಿಸ್ತಾನವನ್ನು ಪಂದ್ಯಾವಳಿಯಿಂದ ಹೊರಹಾಕಿತು. ಪಂದ್ಯದ 19ನೇ … Continued

ಪಾರ್ಶ್ವವಾಯು ಹೊಡೆತದ ಆರಂಭಕ ಲಕ್ಷಣ ಅನುಭವಿಸಿದ ನಂತರ ಲೈವ್‌ನಲ್ಲೇ ತೊದಲಿದ ಟಿವಿ ಆಂಕರ್ : ವೀಡಿಯೊ ವೈರಲ್

ಟಿವಿ ಆ್ಯಂಕರ್ ಸುದ್ದಿಯನ್ನು ಪ್ರಸ್ತುತಪಡಿಸುತ್ತಿರುವಾಗ ಮಧ್ಯದಲ್ಲಿ ಎಡವುತ್ತಿರುವುದನ್ನು ತೋರಿಸುವ ವೀಡಿಯೊವು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಕ್ಲಿಪ್‌ನಲ್ಲಿ ಎನ್‌ಬಿಸಿ ಯೂನಿವರ್ಸಲ್‌ನ ಪತ್ರಕರ್ತೆ ಜೂಲಿ ಚಿನ್ ಕಾಣಿಸಿಕೊಂಡಿದ್ದಾರೆ. ಈ ಘಟನೆಯು ತುಲ್ಸಾದ NBC ಸ್ಟುಡಿಯೋದಲ್ಲಿ ನಡೆದಿದ್ದು, ಜೂಲಿಗೆ ಟೆಲಿಪ್ರಾಂಪ್ಟರ್‌ನಿಂದ ಓದಲು ಕಷ್ಟವಾಗಿದೆ. ಎನ್‌ಬಿಸಿಯ ಹಿರಿಯ ಕಾರ್ಯನಿರ್ವಾಹಕ ಮೈಕ್ ಸಿಂಗ್ಟನ್ ಹಂಚಿಕೊಂಡ ವೀಡಿಯೊದಲ್ಲಿ, ಜೂಲಿ ನಾಸಾದ ಇತ್ತೀಚಿನ ಉಡಾವಣೆಯ ಸುದ್ದಿಯನ್ನು … Continued

ವಕೀಲೆ, ಭಾರತೀಯ ಮೂಲದ ಸುಯೆಲ್ಲಾ ಬ್ರಾವರ್‌ಮನ್‌ ಬ್ರಿಟನ್‌ನ ನೂತನ ಗೃಹ ಕಾರ್ಯದರ್ಶಿ

ಲಂಡನ್‌: ಬ್ರಿಟಿಷ್ ಪ್ರಧಾನಿ ಲಿಜ್ ಟ್ರಸ್ ಅವರು ಮಂಗಳವಾರ ಭಾರತೀಯ ಮೂಲದ ಬ್ಯಾರಿಸ್ಟರ್ ಸುಯೆಲ್ಲಾ ಬ್ರಾವರ್‌ಮನ್ ಅವರನ್ನು ಬ್ರಿಟನ್‌ನ ಹೊಸ ಗೃಹ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ . ಮತ್ತು ಅವರು ಭಾರತೀಯ ಮೂಲದ ಪ್ರೀತಿ ಪಟೇಲ್ ಅವರ ಸಹೋದ್ಯೋಗಿ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. 42 ವರ್ಷದ ಸುಯೆಲ್ಲಾ ಬ್ರಾವರ್‌ಮನ್ ಅವರು ಆಗ್ನೇಯ ಇಂಗ್ಲೆಂಡ್‌ನ ಫರೆಹ್ಯಾಮ್‌ನ ಕನ್ಸರ್ವೇಟಿವ್ ಪಕ್ಷದ … Continued

ಚೀನಾ ಭೂಕಂಪದಲ್ಲಿ 65ಕ್ಕೂ ಹೆಚ್ಚು ಜನರು ಸಾವು: 6.8 ತೀವ್ರತೆಯ ಭೂಕಂಪದ ಮೈ ಜುಂ ಎನ್ನುವ ಕ್ಷಣದ ದೃಶ್ಯಗಳು ವೀಡಿಯೊದಲ್ಲಿ ಸೆರೆ | ವೀಕ್ಷಿಸಿ

ಸೋಮವಾರ 6.8 ತೀವ್ರತೆಯ ಭೂಕಂಪದಿಂದ ಚೀನಾ ತತ್ತರಿಸಿದ್ದು, ಇತ್ತೀಚಿನ ವರ್ಷಗಳಲ್ಲಿ ನೈಋತ್ಯ ಸಿಚುವಾನ್ ಪ್ರಾಂತ್ಯದಲ್ಲಿ ಸಂಭವಿಸಿದ ಅತ್ಯಂತ ಶಕ್ತಿಶಾಲಿ ಕಂಪನಗಳಲ್ಲಿ ಒಂದಾಗಿದೆ. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, 65 ಜನರು ಮೃತಪಟ್ಟಿದ್ದಾರೆ ಹಾಗೂ 50,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು. ಸ್ಥಳೀಯ ಕಾಲಮಾನ ಮಧ್ಯಾಹ್ನ 12:25 ಕ್ಕೆ ಸಂಭವಿಸಿದ ಭೂಕಂಪವು 16 ಕಿಮೀ … Continued

ಉಸಿರಾಟದ ಮೂಲಕ ತೆಗೆದುಕೊಳ್ಳುವ ವಿಶ್ವದ ಮೊದಲ ಕೋವಿಡ್ ಲಸಿಕೆಗೆ ಅನುಮೋದಿಸಿದ ಚೀನಾ

ಟಿಯಾಂಜಿನ್ ಮೂಲದ ಕ್ಯಾನ್ಸಿನೊ ಬಯೋಲಾಜಿಕ್ಸ್ ಇಂಕ್ ತಯಾರಿಸಿದ ಸೂಜಿ-ಮುಕ್ತ, ಉಸಿರಾಟ ಮೂಲಕ ತೆಗೆದುಕೊಳ್ಳುವ (ಇನ್ಹೇಲ್) ಕೋವಿಡ್ -19 ಲಸಿಕೆಯನ್ನು ಚೀನಾ ಅನುಮೋದಿಸಿದೆ. ಇದನ್ನು ಅನುಮೋದಿಸಿದ ಮೊದಲ ದೇಶವಾಗಿದೆ. ಇದಕ್ಕೆ ಅನುಮೋದನೆ ದೊರೆತ ನಂತರ ಹಾಂಗ್ ಕಾಂಗ್‌ನಲ್ಲಿ ಸೋಮವಾರ ಬೆಳಿಗ್ಗೆ ಕಂಪನಿಯ ಷೇರುಗಳನ್ನು 14.5% ರಷ್ಟು ಹೆಚ್ಚಿಸಿದೆ. ಚೀನಾದ ರಾಷ್ಟ್ರೀಯ ವೈದ್ಯಕೀಯ ಉತ್ಪನ್ನಗಳ ಆಡಳಿತವು CanSino ನ … Continued

ಅಫ್ಘಾನಿಸ್ತಾನ: ಕಾಬೂಲ್ ಬಾಂಬ್ ದಾಳಿಯಲ್ಲಿ ರಷ್ಯಾ ರಾಯಭಾರಿ ಕಚೇರಿ ಇಬ್ಬರು ಸೇರು ಕನಿಷ್ಠ ಆರು ಮಂದಿ ಸಿಬ್ಬಂದಿ ಸಾವು

ಕಾಬೂಲ್:‌ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ ಆರು ಮಂದಿ ಸಾವಿಗೀಡಾಗಿದ್ದು, ರಷ್ಯಾದ ರಾಯಭಾರಿ ಕಚೇರಿಯ ಇಬ್ಬರು ಸಿಬ್ಬಂದಿ ಸೇರಿದ್ದಾರೆ ಎಂದು ರಷ್ಯಾ ಮತ್ತು ತಾಲಿಬಾನ್ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಕೋರನು ಕಾನ್ಸುಲರ್ ವಿಭಾಗದ ಪ್ರವೇಶದ್ವಾರವನ್ನು ಸಮೀಪಿಸುತ್ತಿದ್ದಂತೆ ಗಾರ್ಡ್‌ಗಳು ಗುಂಡಿಕ್ಕಿ ಕೊಂದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು … Continued

ಬ್ರಿಟನ್ ಪ್ರಧಾನಿ ಹುದ್ದೆಗೆ ಲಿಜ್ ಟ್ರಸ್ ಆಯ್ಕೆ : ಭಾರತೀಯ ಮೂಲದ ರಿಷಿ ಸುನಕ್ ಜೊತೆ ತುರುಸಿನ ಸ್ಪರ್ಧೆಯಲ್ಲಿ ಜಯಿಸಿದ ಟ್ರಸ್‌

ಲಂಡನ್: ಬ್ರಿಟನ್‌ ವಿದೇಶಾಂಗ ಸಚಿವೆ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್ ಟ್ರಸ್ ಅವರು ಬ್ರಿಟನ್ನಿನ ಮುಂದಿನ ಪ್ರಧಾನಿಯಾಗಿ ಸೋಮವಾರ ಆಯ್ಕೆಯಾಗಿದ್ದಾರೆ. ಲಿಜ್ ಟ್ರಸ್ ಅವರು ರಾಜೀನಾಮೆ ನೀಡಿದ್ದ ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಟೋರಿ ನಾಯಕತ್ವ ಸ್ಪರ್ಧೆ ಗೆಲ್ಲಲು ಲಿಜ್ ಟ್ರಸ್ ತನ್ನ ಪ್ರತಿಸ್ಪರ್ಧಿ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರನ್ನು ಸೋಲಿಸಿದರು. … Continued

ಸುರಕ್ಷಿತವಾಗಿ ಲ್ಯಾಂಡ್‌ ಆದ ಅಮೆರಿಕದ ಕದ್ದ ವಿಮಾನ: ವಾಲ್ಮಾರ್ಟ್ ಸ್ಟೋರ್ಸ್‌ಗೆ ಅಪ್ಪಳಿಸುವುದಾಗಿ ಬೆದರಿಕೆ ಹಾಕಿದ್ದ ಪೈಲಟ್‌ ಬಂಧನ

ಅಮೆರಿಕದ ಮಿಸ್ಸಿಸ್ಸಿಪ್ಪಿ ರಾಜ್ಯದ ವಾಲ್ಮಾರ್ಟ್ ಸ್ಟೋರ್ಸ್‌ಗೆ ವಿಮಾನ ಅಪ್ಪಳಿಸುವುದಾಗಿ ಬೆದರಿಕೆ ಹಾಕಿದ್ದ “ಕದ್ದ” ವಿಮಾನದ ಪೈಲಟ್‌ ಶನಿವಾರ ವಿಮಾನದ ಇಂಧನ ಖಾಲಿಯಾದ ನಂತರ ಮೈದಾನದಲ್ಲಿ ವಿಮಾನ ಇಳಿಸಿದ ನಂತರ ಬಂಧಿಸಲಾಯಿತು. ಸ್ಥಳೀಯ ಮಾಧ್ಯಮಗಳ ಪ್ರಕಾರ, 9 ಆಸನಗಳ ವಿಮಾನವನ್ನು ಸ್ಥಳೀಯ ಸಮಯ ಸುಮಾರು 5 ಗಂಟೆಗೆ ಈ ವ್ಯಕ್ತಿ ಟ್ಯುಪೆಲೋ ವಿಮಾನ ನಿಲ್ದಾಣದಿಂದ ತೆಗೆದುಕೊಂಡು ಹೋಗಿದ್ದ … Continued

ಈ ಮಹಿಳೆಗೆ ಗುರುತ್ವಾಕರ್ಷಣೆಯೇ ಅಲರ್ಜಿಯಂತೆ: ದಿನದಲ್ಲಿ 23 ಗಂಟೆ ಹಾಸಿಗೆಯಲ್ಲೇ ಕಳೆಯುತ್ತಾಳೆ …!

ಅಮೆರಿಕ ಸಂಯುಕ್ತ ಸಂಸ್ಥಾನದ 28 ವರ್ಷದ ಮಹಿಳೆಯೊಬ್ಬರು, “ಗುರುತ್ವಾಕರ್ಷಣೆ ಅಲರ್ಜಿ”ಗೆ ತುತ್ತಾಗಿದ್ದಾರೆ. ಹೀಗಾಗಿ ದಿನದ 23 ಗಂಟೆ ಅವರು ಹಾಸಿಗೆಯಲ್ಲಿಯೇ ಕಳೆಯಬೇಕಾಗಿದೆ, ದಿನಕ್ಕೆ 10 ಬಾರಿ ಮೂರ್ಛೆಯ ಅನುಭವ ಪಡೆಯುತ್ತಾರೆ ಮತ್ತು ಮೂರು ನಿಮಿಷಗಳಿಗಿಂತ ಹೆಚ್ಚು ಕಾಲ ಅವರಿಗೆ ನಿಲ್ಲಲು ಸಾಧ್ಯವಾಗುವುದಿಲ್ಲವಂತೆ. ಅಮೆರಿಕದ ನೌಕಾಪಡೆಯ ಮಾಜಿ ಏವಿಯೇಷನ್ ​​ಡೀಸೆಲ್ ಮೆಕ್ಯಾನಿಕ್ ಲಿಂಡ್ಸಿ ಜಾನ್ಸನ್ ಎಂಬ ಮಹಿಳೆ … Continued