ಗಾಳಕ್ಕೆ ಸಿಕ್ಕಿಬಿದ್ದ ಮಾನವನಂತೆ ಹಲ್ಲುಗಳಿರುವ ಅಪರೂಪದ ಮೀನು…

ವಾರಾಂತ್ಯದಲ್ಲಿ ಅಮೆರಿಕದ ಒಕ್ಲಹೋಮಾ ಕೊಳದಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ಮಾನವನಂತೆ ಹಲ್ಲುಗಳನ್ನು ಹೊಂದಿರುವ ಅಪರೂಪದ ಮೀನನ್ನು ಹಿಡಿದ ನಂತರ 11 ವರ್ಷದ ಬಾಲಕ ಆಶ್ಚರ್ಯಚಕಿತನಾದನು ಎಂದು ಲೈವ್ ಸೈನ್ಸ್ ವರದಿ ಮಾಡಿದೆ. ಈ ಚಿತ್ರಗಳನ್ನು ಒಕ್ಲಹೋಮ ವನ್ಯಜೀವಿ ಸಂರಕ್ಷಣಾ ಇಲಾಖೆಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. ಇಲಾಖೆಯ ಪ್ರಕಾರ, ಮೀನುಗಳು ಪಾಕು ಕುಟುಂಬಕ್ಕೆ ಸೇರಿದವು ಎಂದು ತಿಳಿದುಬಂದಿದೆ, … Continued

ʼಆಲ್ಟರ್‌ಇಗೋʼ ಎಂಬ ವಿಶಿಷ್ಟ ಸಾಧನ ವಿನ್ಯಾಸಗೊಳಿಸಿದ ಭಾರತೀಯ ಮೂಲದ ವಿದ್ಯಾರ್ಥಿ: ನಿಮ್ಮ ಮನಸ್ಸನ್ನು ತಿಳಿಯುವ ಮೂಲಕ ಪಿಜ್ಜಾ ಆರ್ಡರ್ ಮಾಡುತ್ತದೆ-ಅದು ಹೇಗೆ..?

ದೆಹಲಿಯಲ್ಲಿ ಜನಿಸಿದ ದಿ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ವಿದ್ಯಾರ್ಥಿ ಅರ್ನವ್ ಕಪೂರ್ ಆಲ್ಟರ್‌ಇಗೋ(AlterEgo) ವಿಶಿಷ್ಟ ಸಾಧನವನ್ನು ವಿನ್ಯಾಸಗೊಳಿಸಿದ್ದಾರೆ. ಇದು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಸಹಾಯದೊಂದಿಗೆ “ಮನಸ್ಸು-ಓದುವ” ಹೆಡ್‌ಸೆಟ್ ಆಗಿದೆ. ಇದು ಜನರು ತಮ್ಮ ಬಾಯಿ ತೆರೆಯದೆಯೇ ಅಥವಾ ದೈಹಿಕ ಸನ್ನೆಗಳನ್ನು ಮಾಡದೆಯೇ ಯಂತ್ರಗಳು ಮತ್ತು ಮನುಷ್ಯರೊಂದಿಗೆ ಸಂವಹನ ನಡೆಸಲು ಬಳಸಬಹುದಾದ ಸಾಧನವಾಗಿದೆ. ಇದರರ್ಥ … Continued

ನಂಬಲಸಾಧ್ಯವಾದ ಪ್ರಕೃತಿ ವಿಸ್ಮಯ..: ನದಿಯನ್ನು ಸ್ವರ್ಗಕ್ಕೆ ಜೋಡಿಸುವ ನೀರಿನ ಸುಳಿಗಂಬದ ಅದ್ಭುತ ದೃಶ್ಯ | ವೀಕ್ಷಿಸಿ

ಪ್ರಕೃತಿಯು ತನ್ನ ವಿಸ್ಮಯಕಾರಿ ಅದ್ಭುತಗಳಿಂದ ನಮ್ಮನ್ನು ವಿಸ್ಮಯಗೊಳಿಸುತ್ತವೆ. ಇತ್ತೀಚೆಗೆ, ರಷ್ಯಾದ ಪೆರ್ಮ್ ಪ್ರದೇಶದ ಕಾಮಾ ನದಿಯಲ್ಲಿ ತನ್ನ ಅಂತಹ ಒಂದು ವಿಸ್ಮಯ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ದೋಣಿಯಲ್ಲಿದ್ದ ಕೆಲವು ಅದೃಷ್ಟವಂತರು ಕ್ಯಾಮರಾದಲ್ಲಿ ಆಕರ್ಷಕವಾದ ಹವಾಮಾನದ ಅಪರೂಪದ ವಿದ್ಯಮಾನವನ್ನು ಸೆರೆಹಿಡಿದಿದ್ದಾರೆ. ವೀಡಿಯೊದಲ್ಲಿ ಈ ವಿಸ್ಮಯವನ್ನು ಜುಲೈ 13 ರಂದು ಸೆರೆಹಿಡಿಯಲಾಗಿದೆ. ಈ ವಿಡಿಯೋ ಕ್ಲಿಪ್ ನಲ್ಲಿ ರಷ್ಯಾದ ಪೆರ್ಮ್ … Continued

ಮೃಗಾಲಯದಲ್ಲಿ ಹೆಣ್ಣು ಮರಿಗೆ ಜನ್ಮ ನೀಡಿದ ‘ಗಂಡು’ ಗೊರಿಲ್ಲಾ…!

ನಾಲ್ಕು ವರ್ಷಗಳಿಂದ ಗಂಡು ಎಂದು ನಂಬಿದ್ದ ಗೊರಿಲ್ಲಾ ಗುರುವಾರ (ಜುಲೈ 20) ಮರಿಗೆ ಜನ್ಮ ನೀಡಿದ ನಂತರ ಓಹಿಯೋ ಮೃಗಾಲಯದಲ್ಲಿ ಕೆಲಸ ಮಾಡುವ ಸಿಬ್ಬಂದಿ ಆಶ್ಚರ್ಯಚಕಿತರಾದರು. 2019 ರಿಂದ ಕೊಲಂಬಸ್ ಮೃಗಾಲಯದಲ್ಲಿ ವಾಸಿಸುತ್ತಿರುವ ಗೊರಿಲ್ಲಾ ಸುಲ್ಲಿ ಗುರುವಾರ ಮರಿಗೆ ಜನ್ಮ ನೀಡಿದೆ. ಬ್ಲಾಗ್ ಪೋಸ್ಟ್‌ನಲ್ಲಿ, ಮೃಗಾಲಯದ ಸಿಬ್ಬಂದಿ ಮರಿ ಆರೋಗ್ಯಕರವಾಗಿ ತೋರುತ್ತಿದೆ” ಮತ್ತು ಸುಲ್ಲಿ ಅತ್ಯುತ್ತಮ … Continued

ಅಮೆರಿಕದಲ್ಲಿ ಅಕ್ಕಿ ಖರೀದಿಗೆ ಮುಗಿಬಿದ್ದ ಭಾರತೀಯರು, ಹಲವೆಡೆ ನೂಕು-ನುಗ್ಗಲು : ಖರೀದಿಗೆ ಮಿತಿ ಹೇರಿಕೆ…!

ಅಮೆರಿಕದ ಅಂಗಡಿಗಳಲ್ಲಿ ಅಕ್ಕಿ ಖರೀದಿಸಲು ಭಾರತೀಯರು ಮುಗಿಬೀಳುತ್ತಿದ್ದಾರೆ. ಅಮೆರಿಕದ ಸೂಪರ್‌ ಮಾರ್ಕೆಟ್‌ಗಳ ಮುಂದೆ ಅನಿವಾಸಿ ಭಾರತೀಯರು ಕ್ಯೂದಲ್ಲಿ ನಿಂತು ಅಕ್ಕಿ ಖರೀದಿಸುತ್ತಿದ್ದಾರೆ. ಕೆಲವು ಕಡೆ ನೂಕು-ನುಗ್ಗಲು ಸಹ ನಡೆದ ವರದಿಯಾಗಿದೆ. ಭಾರತ ಸರ್ಕಾರವು ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಿದ ನಂತರ ಅಮೆರಿಕದಲ್ಲಿ ಅಕ್ಕಿ ಅಭಾವ ಉಂಟಾಗಿದೆ. ಹೀಗಾಗಿ ಅಮೆರಿಕದಲ್ಲಿ ಅಕ್ಕಿ ಕೊಳ್ಳಲು ಭಾರತೀಯ ಅಮೆರಿನ್ನರು … Continued

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯ ಧ್ವಂಸ, ವಿಗ್ರಹಗಳಿಗೆ ಹಾನಿ

ಢಾಕಾ: 36 ವರ್ಷದ ವ್ಯಕ್ತಿಯೊಬ್ಬ ಬಾಂಗ್ಲಾದೇಶದ ಬ್ರಹ್ಮನ್‌ಬರಿಯಾ ಜಿಲ್ಲೆಯ ಹಿಂದೂ ದೇವಾಲಯದಲ್ಲಿ ದೇವರ ವಿಗ್ರಹವನ್ನು ಧ್ವಂಸಗೊಳಿಸಿದ್ದಾನೆ. ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಸ್ಥಳೀಯ ಹಿಂದೂ ಸಮುದಾಯದಲ್ಲಿ ಕೋಲಾಹಲ ಉಂಟು ಮಾಡಿದೆ. ನಿಯಾಮತ್‌ಪುರ ಗ್ರಾಮದಲ್ಲಿರುವ ನಿಯಾಮತ್ ಪುರ್ ದುರ್ಗಾ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಖಲೀಲ್ ಮಿಯಾ ಎಂದು ಗುರುತಿಸಲಾಗಿದೆ. ವಿಧ್ವಂಸಕ ಕೃತ್ಯದ ಸುದ್ದಿ … Continued

ಅಮೆರಿಕ ನೌಕಾಪಡೆ ಮುಖ್ಯಸ್ಥರಾಗಿ ಇದೇ ಮೊದಲ ಬಾರಿಗೆ ಮಹಿಳೆ ಆಯ್ಕೆ

ವಾಷಿಂಗ್ಟನ್: ಅಮೆರಿಕದ ನೌಕಾಪಡೆ ಮುನ್ನಡೆಸಲು ಅಡ್ಮಿರಲ್ ಲಿಸಾ ಫ್ರಾಂಚೆಟ್ಟಿ ಅವರನ್ನು ನಾಮನಿರ್ದೇಶನ ಮಾಡುವುದಾಗಿ ಅಧ್ಯಕ್ಷ ಜೋ ಬೈಡನ್‌ ಶುಕ್ರವಾರ ಪ್ರಕಟಿಸಿದ್ದಾರೆ. ಈ ಸ್ಥಾನಕ್ಕೆ ನೇಮಕವಾಗಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಲಿಸಾ ಫ್ರಾಂಚೆಟ್ಟಿ ಪಾತ್ರರಾಗಿದ್ದಾರೆ. ಅವರು ಜಂಟಿ ಚೀಫ್ಸ್ ಆಫ್ ಸ್ಟಾಫ್‌ನಲ್ಲಿ ಸೇವೆ ಸಲ್ಲಿಸಲಿದ್ದಾರೆ. ಆದರೆ ಸೆನೆಟ್ ಅವರ ಹೆಸರನ್ನು ದೃಢೀಕರಿಸುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ, ಸೆನೆಟ್ … Continued

ಪರಿಶೀಲಿಸಿದ ಕಂಪನಿಗಳಿಗೆ ಉದ್ಯೋಗ ಪಟ್ಟಿಯ ವೈಶಿಷ್ಟ್ಯ ಪರಿಚಯಿಸಲಿರುವ ಟ್ವಟರ್‌ : ವರದಿ

ಲಿಂಕ್ಡ್‌ಇನ್ ಗೆ ಸ್ಪರ್ಧೆ ನೀಡುವ ಕ್ರಮದಲ್ಲಿ, ಎಲೋನ್ ಮಸ್ಕ್ ನೇತೃತ್ವದ ಟ್ವಿಟರ್ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಪರಿಶೀಲಿಸಿದ ಸಂಸ್ಥೆಗಳಿಗೆ ಉದ್ಯೋಗ ಪಟ್ಟಿಗಳನ್ನು ಪೋಸ್ಟ್ ಮಾಡಲು ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ಈವರೆಗೆ ಟ್ವಟರಿನಿಂದ ಯಾವುದೇ ಔಪಚಾರಿಕ ಪ್ರಕಟಣೆಯಿಲ್ಲದಿದ್ದರೂ, ಟೆಕ್‌ಕ್ರಂಚ್‌ ವರದಿಯ ಪ್ರಕಾರ, ಕೆಲವು ಪರಿಶೀಲಿಸಿದ ಖಾತೆಗಳಿಗೆ ವೈಶಿಷ್ಟ್ಯವನ್ನು ಈಗಾಗಲೇ ಹೊರತರಲಾಗಿದೆ. ಪಟ್ಟಿಗಳನ್ನು ಟ್ವಿಟರ್‌(Twitter)ನಲ್ಲಿ ಕಂಪನಿಯ ಖಾತೆಯ ಬಯೋ ಅಡಿಯಲ್ಲಿ ಇರಿಸಲಾಗುತ್ತದೆ. … Continued

ಉಪವಾಸ ಮಾಡಿದರೆ ಯೇಸು ಭೇಟಿ ಸಾಧ್ಯ ಎಂದ ನಕಲಿ ಪಾದ್ರಿಯ ಮಾತು ನಂಬಿ ಹಸಿವಿನಿಂದ 403 ಮಂದಿ ಸಾವು, 610 ಜನ ನಾಪತ್ತೆ

ನೈರೋಬಿ (ಕೀನ್ಯಾ) : ಉಪವಾಸ ಮಾಡಿದರೆ ಯೇಸು ಕ್ರಿಸ್ತನನ್ನು (Jesus) ಭೇಟಿಯಾಗಬಹುದು ಎಂಬ ನಕಲಿ ಧಾರ್ಮಿಕ ಬೋಧಕನ ಮಾತನ್ನು ನಂಬಿ ಉಪವಾಸ ಮಾಡಿ ಸಾವಿಗೀಡಾದ ಘಟನೆಯಲ್ಲಿ ಕೀನ್ಯಾದಲ್ಲಿ ಇನ್ನೂ 12 ಜನರ ಶವ ಪತ್ತೆಯಾಗಿದ್ದು, ಈವರೆಗೆ 403ಕ್ಕೂ ಹೆಚ್ಚು ಜನ ಸಾವೀಗೀಡಾಗಿದ್ದಾರೆ. ಈ 12 ಶವಗಳು ಕೀನ್ಯಾದ (Kenya) ಶಕಹೋಲಾ ಅರಣ್ಯದಲ್ಲಿ ಪತ್ತೆಯಾಗಿದೆ. ಕೀನ್ಯಾದ ಆರಾಧನೆಗೆ … Continued