ಹವಾಯಿ ಕಾಳ್ಗಿಚ್ಚಿನ ಸಾವಿನ ಸಂಖ್ಯೆ 89 ಕ್ಕೆ ಏರಿಕೆ: ಅಮೆರಿಕದ ಇತಿಹಾಸದಲ್ಲೇ ಮಾರಣಾಂತಿಕ ಕಾಡ್ಗಿಚ್ಚು, ಬೂದಿಯ ಲ್ಯಾಂಡ್‌ ಸ್ಕೇಪ್‌ನಂತೆ ಕಾಣುತ್ತಿರುವ ಪಟ್ಟಣ

ಈ ವಾರ ಹವಾಯಿಯನ್ ದ್ವೀಪವಾದ ಮಾಯಿಯ ಸುಂದರವಾದ ಪಟ್ಟಣದ ಮೂಲಕ ವ್ಯಾಪಿಸಿರುವ ಕೆರಳಿದ ಕಾಳ್ಗಿಚ್ಚು ಕನಿಷ್ಠ 89 ಜನರನ್ನು ಆಹುತಿ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ, ಇದು ಕಳೆದ ಶತಮಾನದ ಅತ್ಯಂತ ಮಾರಣಾಂತಿಕ ಅಮೆರಿಕ ಕಾಡ್ಗಿಚ್ಚಾಗಿದೆ ಎಂದು ಹೇಳಲಾಗಿದೆ. ಶನಿವಾರದಂದು ಹೊಸ ಸಾವಿನ ಸಂಖ್ಯೆ ಬಂದಿತು. ತುರ್ತು ಕೆಲಸಗಾರರು ಬೆಂಕಿ ನಂದಿಸಿದ ನಂತರ ಕೆಲವರ … Continued

ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಅನ್ವರ್-ಉಲ್-ಹಕ್ ಕಾಕರ್ ನೇಮಕ

ಇಸ್ಲಾಮಾಬಾದ್ : ಅನ್ವರ್-ಉಲ್-ಹಕ್ ಕಾಕರ್ ಅವರನ್ನು ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ. ಪಾಕಿಸ್ತಾನದ ರಾಷ್ಟ್ರೀ ಅಸೆಂಬ್ಲಿ ವಿಜಸರ್ಜನೆಗೊಂಡಿದ್ದು, ನಿರ್ಗಮಿತ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ವಿರೋಧ ಪಕ್ಷದ ನಾಯಕ ರಾಜಾ ರಿಯಾಜ್ ನಡುವಿನ ಸಭೆಯ ಬಳಿಕ ಅನ್ವರ್-ಉಲ್-ಹಕ್ ಕಾಕರ್ ಅವರನ್ನು ಹಂಗಾಮಿ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ. ಪಾಕಿಸ್ತಾನದ ರಾಷ್ಟ್ರೀಯ ಚುನಾವಣೆಗಳ ಮೇಲ್ವಿಚಾರಣೆಗಾಗಿ ಹಂಗಾಮಿ ಪ್ರಧಾನಿಯಾಗಿ … Continued

ವಿಶ್ವವಿಖ್ಯಾತ ಐಫೆಲ್‌ ಟವರಿಗೆ ಬಾಂಬ್‌ ಬೆದರಿಕೆ : ಜನರ ಸ್ಥಳಾಂತರ

ಬಾಂಬ್ ಬೆದರಿಕೆ ಬಂದ ನಂತರ ಮುಂಜಾಗ್ರತಾ ಕ್ರಮವಾಗಿ ಶನಿವಾರದಂದು ಫ್ರಾನ್ಸ್‌ನ ವಿಶ್ವವಿಖ್ಯಾತ ಐಫೆಲ್ ಟವರ್ ಅನ್ನು ಸಂದರ್ಶಕರಿಗೆ ಮುಚ್ಚಲಾಗಿದೆ ಎಂದು ಫ್ರೆಂಚ್ ಪೊಲೀಸ್ ಮೂಲವು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದೆ. ಗೋಪುರದ ಎಲ್ಲಾ ಮೂರು ಮಹಡಿಗಳನ್ನು ತೆರವುಗೊಳಿಸಲಾಗಿದೆ. ಟವರ್‌ ನಡೆಸುತ್ತಿರುವ SETE, ಬಾಂಬ್ ವಿಲೇವಾರಿ ತಜ್ಞರು ಮತ್ತು ಪೊಲೀಸರ ತಂಡವು ಒಂದು ಮಹಡಿಯಲ್ಲಿ ರೆಸ್ಟೋರೆಂಟ್ ಸೇರಿದಂತೆ … Continued

ಹದಿಹರೆಯದವರಿಗೆ ಹಣ ನೀಡಿ ಭಾರತದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಚಿತ್ರಗಳನ್ನು ಸಂಗ್ರಹಿಸಿದ್ದ ಲಂಡನ್ ಶಿಕ್ಷಕನಿಗೆ 12 ವರ್ಷ ಜೈಲು: ಈತನ ಬಳಿ ಸಿಕ್ಕಿವೆ 1.2 ಲಕ್ಷ ಅಶ್ಲೀಲ ಫೋಟೋಗಳು…!

ಸಣ್ಣ ಮಕ್ಕಳನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಳ್ಳಲು ಭಾರತದಲ್ಲಿ ಹದಿಹರೆಯದವರಿಗೆ ಹಣ ನೀಡಿ ಭಾರತದ ಮಕ್ಕಳ ಬೆತ್ತಲೆ ಹಾಗೂ ಅಶ್ಲೀಲ ಚಿತ್ರಗಳನ್ನು ಪಡೆಯುತ್ತಿದ್ದ ಲಂಡನ್ ಶಿಕ್ಷಕನಿಗೆ 12 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಲಂಡನ್​ನ ಸೌತ್​ವಾರ್ಕ್ ಕ್ರೌನ್​ ಕೋರ್ಟ್​ ಈತನಿಗೆ ಬುಧವಾರ ಈ ಶಿಕ್ಷೆಯನ್ನು ವಿಧಿಸಿದೆ. ದಕ್ಷಿಣ ಲಂಡನ್‌ನ ಪೂರ್ವ ಡಲ್ವಿಚ್‌ನ ಮ್ಯಾಥ್ಯೂ ಸ್ಮಿತ್ (35) ಕಳೆದ ವರ್ಷ … Continued

ಲ್ಯುಕೇಮಿಯಾದಿಂದ ಸಾಯುವ ಮೊದಲು ತನ್ನ ಆತ್ಮೀಯ ಗೆಳೆಯನನ್ನು ಮದುವೆಯಾದ 10 ವರ್ಷದ ಹುಡುಗಿ

ಮದುವೆಯಾಗುವ ಕನಸು ಕಂಡಿದ್ದ ಅಮೆರಿಕದ 10 ವರ್ಷದ ಬಾಲಕಿಯೊಬ್ಬಳು ಲ್ಯುಕೇಮಿಯಾದಿಂದ ಸಾಯುವ ಕೆಲವೇ ದಿನಗಳ ಮೊದಲು ತನ್ನ ಬಾಲ್ಯದ ಸ್ನೇಹಿತನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಳು. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಎಮ್ಮಾ ಎಡ್ವರ್ಡ್ಸ್ ಮತ್ತು ಡೇನಿಯಲ್ ಮಾರ್ಷಲ್ ಕ್ರಿಸ್ಟೋಫರ್ “ಡಿಜೆ” ವಿಲಿಯಮ್ಸ್ ಜೂನ್ 29 ರಂದು ವಿವಾಹವಾದರು. ಇದು 10 ವರ್ಷ ವಯಸ್ಸಿನ ಬಾಲಕಿ ನಿಧನದ ಕೇವಲ … Continued

ಜರ್ಮನ್ ನಗರದಲ್ಲಿ ವಿಶ್ವ ಮಹಾಯುದ್ಧ-IIರ ಬೃಹತ್‌ ಬಾಂಬ್ ಪತ್ತೆ : 13,000 ಜನರ ಸ್ಥಳಾಂತರ

ಜರ್ಮನಿಯ ಡಸೆಲ್ಡಾರ್ಫ್‌ (Dusseldorf) ನಗರದಲ್ಲಿ ಎರಡನೇ ವಿ‍ಶ್ವ ಮಹಾಯುದ್ಧದ ಬೃಹತ್ ಬಾಂಬ್‌ (World War II bomb) ಪತ್ತೆಯಾಗಿದೆ. ಹೀಗಾಗಿ ಆ ನಗರದ 13,000 ನಿವಾಸಿಗಳನ್ನು ತಕ್ಷಣ ಅಲ್ಲಿಂದ ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಿದ ನಗರಡಳಿತವು ಬಾಂಬ್‌ ವಿಲೇವಾರಿಗೆ ಕ್ರಮ ಕೈಗೊಂಡಿದೆ ಎಂದು ಜರ್ಮನ್‌ ಸುದ್ದಿವಾಹಿನಿ ಡ್ಯೂಷ್‌ ವೆಲ್ಲೆ ವರದಿ ಮಾಡಿದೆ. ನಗರದ ಮೃಗಾಲಯದ ಸಮೀಪ ಆಗಸ್ಟ್ 7-8 … Continued

ವಿಶ್ವದಲ್ಲೇ ದಾಖಲೆ ಮೊತ್ತಕ್ಕೆ ಮಾರಾಟವಾದ ಬೃಹತ್ ಹಸು : ಬ್ರೆಜಿಲ್‌ನಲ್ಲಿ ಹರಾಜಿನಲ್ಲಿ ಬರೋಬ್ಬರಿ ₹35 ಕೋಟಿ ರೂ.ಗಳಿಗೆ ಖರೀದಿ; ಈ ಹಸುವಿನ ಮೂಲ ಭಾರತ

ಹಸು, ಎತ್ತುಗಳು ಲಕ್ಷಕ್ಕೆ ಮಾರಾಟವಾದರೂ ಬೆರಗಾಗುತ್ತಾರೆ. ಆದರೆ ಬ್ರೆಜಿಲ್‌ನಲ್ಲಿ ನಡೆದಿದ್ದ ಹರಾಜಿನಲ್ಲಿ ಬಿಳಿ ಹಸುವೊಂದು ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಇದರ ಬೆಲೆ ಕೇಳಿದರೆ ಹೌಹಾರಲೇಬೇಕು. ಕಳೆದ ಜೂನ್ ತಿಂಗಳಿನಲ್ಲಿ ಬ್ರೆಜಿಲ್‌ನಲ್ಲಿ ನಡೆದ ಹರಾಜಿನಲ್ಲಿ ಬರೋಬ್ಬರಿ 35 ಕೋಟಿ ರೂ.ಗಳಿಗೆ ಬೆಲೆಗೆ ಬೃಹತ್ ಬಿಳಿ ಹಸುವೊಂದು ಮಾರಾಟವಾಗಿದೆ. ನೆಲೋರ್ ತಳಿಯ ಹಸು 35 ಕೋಟಿ ರೂ.ಗೆ ಮಾರಾಟವಾಗಿದ್ದು, … Continued

ಪಾಕಿಸ್ತಾನದಲ್ಲಿ ರೈಲಿನ ಬೋಗಿಗಳು ಹಳಿತಪ್ಪಿ 33 ಮಂದಿ ಸಾವು, 80ಕ್ಕೂ ಹೆಚ್ಚು ಮಂದಿಗೆ ಗಾಯ

ರೈಲು ಹಳಿತಪ್ಪಿ ರಾವಲ್ಪಿಂಡಿಗೆ ತೆರಳುತ್ತಿದ್ದ ಹಜಾರಾ ಎಕ್ಸ್‌ಪ್ರೆಸ್‌ನ 10 ಬೋಗಿಗಳು ಪಲ್ಟಿಯಾದ ನಂತರ ಪಾಕಿಸ್ತಾನದಲ್ಲಿ ಕನಿಷ್ಠ 33 ಜನರು ಸಾವನ್ನಪ್ಪಿದ್ದಾರೆ ಮತ್ತು 80 ಮಂದಿ ಗಾಯಗೊಂಡಿದ್ದಾರೆ. ಶಹಜಾದ್‌ಪುರ ಮತ್ತು ನವಾಬ್‌ಶಾ ನಡುವಿನ ಸಹಾರಾ ರೈಲು ನಿಲ್ದಾಣದ ಬಳಿ ಭಾನುವಾರ ಅಪಘಾತ ಸಂಭವಿಸಿದೆ ಎಂದು ಜಿಯೋ ಟಿವಿ ವರದಿ ಮಾಡಿದೆ. ಹಜಾರಾ ಎಕ್ಸ್‌ಪ್ರೆಸ್ ಕರಾಚಿಯಿಂದ ರಾವಲ್ಪಿಂಡಿಗೆ ಹೊರಟಿತ್ತು. … Continued

ಕ್ಯಾನ್ಸರ್‌ ಗುಣಪಡಿಸಬಲ್ಲ ಮಾತ್ರೆ : ಅಮೆರಿಕ ಸಂಶೋಧಕರಿಗೆ ಸಿಕ್ತು ಅತಿದೊಡ್ಡ ಯಶಸ್ಸು

ಅಮೆರಿಕದಲ್ಲಿನ ಸಂಶೋಧಕರ ತಂಡವು “ಕ್ಯಾನ್ಸರ್-ಕೊಲ್ಲುವ ಮಾತ್ರೆ”ಯೊಂದನ್ನು ಅಭಿವೃದ್ಧಿಪಡಿಸಿದೆ. ಇದು ಕ್ಯಾನ್ಸರ್‌ ರೋಗದ ಚಿಕಿತ್ಸೆಯಲ್ಲಿ ಒಂದು ಪ್ರಗತಿ ಎಂದು ನಂಬಲಾಗಿದೆ. ಅಮೆರಿಕದ ಅತಿದೊಡ್ಡ ಕ್ಯಾನ್ಸರ್ ಸಂಶೋಧನೆ ಮತ್ತು ಚಿಕಿತ್ಸಾ ಸಂಸ್ಥೆಗಳಲ್ಲಿ ಒಂದಾದ ಸಿಟಿ ಆಫ್ ಹೋಪ್‌ನ ಸಂಶೋಧಕರು ಅಭಿವೃದ್ಧಿಪಡಿಸಿದ ಮಾತ್ರೆ ಇದಾಗಿದ್ದು, ಉದ್ದೇಶಿತ ಕೀಮೋಥೆರಪಿ ಮೂಲಕ ಘನ ಗೆಡ್ಡೆಗಳನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿಯಾಗಿದೆ. AOH1996 … Continued

ಬ್ರಿಟನ್ನಿನಲ್ಲಿ ಮತ್ತೊಂದು ಕೊರೊನಾ ಅಲೆಯ ಭಯಕ್ಕೆ ಕಾರಣವಾದ ಕೋವಿಡ್ ಹೊಸ ರೂಪಾಂತರಿ ‘ಎರಿಸ್’

ಎರಿಸ್ ಎಂಬ ಸಂಕೇತನಾಮದ ಮತ್ತೊಂದು ಕೋವಿಡ್ ರೂಪಾಂತರವು ಬ್ರಿಟನ್‌ನಲ್ಲಿ ಹರಡಲು ಪ್ರಾರಂಭಿಸಿದೆ, ಇದು ತಾಜಾ ಕೊರೊನಾ ವೈರಸ್ ಅಲೆಯ ಭಯಕ್ಕೆ ಕಾರಣವಾಗಿದೆ. ಬ್ರಿಟನ್‌ ಹೆಲ್ತ್ ಸೆಕ್ಯುರಿಟಿ ಏಜೆನ್ಸಿಯ (ಯುಕೆಎಚ್‌ಎಸ್‌ಎ) ಹಿರಿಯ ಅಧಿಕಾರಿಗಳು ಎರಿಸ್ ಕೋವಿಡ್‌ ರೂಪಾಂತರದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ, ಇದು ಮೇ ಅಂತ್ಯದ ವೇಳೆಗೆ ಬ್ರಿಟನ್‌ ತಲುಪಿದ ನಂತರ ಪ್ರತಿ ಏಳು ಹೊಸ ಪ್ರಕರಣಗಳಲ್ಲಿ … Continued