ಪಾಕಿಸ್ತಾನದ ಇತಿಹಾಸದಲ್ಲೇ ಮೊದಲ ಬಾರಿಗೆ 300 ರೂ. ದಾಟಿದ ಪೆಟ್ರೋಲ್, ಡೀಸೆಲ್ ಬೆಲೆ

ಇಸ್ಲಾಮಾಬಾದ್‌ : ಪಾಕಿಸ್ತಾನದಲ್ಲಿ ಗಗನಕ್ಕೇರುತ್ತಿರುವ ವಿದ್ಯುತ್ ಶುಲ್ಕದ ಆಕ್ರೋಶದ ನಡುವೆ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇತಿಹಾಸದಲ್ಲಿ ಮೊದಲ ಬಾರಿಗೆ 300 ರೂಪಾಯಿಗಳ ಗಡಿ ದಾಟಿದೆ. ಇದು ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಜನರಿಗೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಪ್ರಧಾನ ಮಂತ್ರಿ ಅನ್ವರುಲ್ ಹಕ್ ಕಾಕರ್ ನೇತೃತ್ವದ ಉಸ್ತುವಾರಿ ಸರ್ಕಾರವು ಗುರುವಾರ ಪೆಟ್ರೋಲ್ ಮತ್ತು ಹೈಸ್ಪೀಡ್ … Continued

ಇನ್ನು ಆಡಿಯೋ-ವೀಡಿಯೊ ಕಾಲ್‌ ಮಾಡಲು ಫೋನ್ ನಂಬರ್ ಬೇಕಿಲ್ಲ : ‘ಎಕ್ಸ್‌’ (ಟ್ವಿಟರ್‌)ನಲ್ಲಿ ಬರಲಿದೆ ಹೊಸ ವೈಶಿಷ್ಟ್ಯ

ಫೋನ್ ಕರೆ ಮಾಡಲು ಫೋನ್ ನಂಬರ್ ಇಲ್ಲದೇ ಕರೆ ಮಾಡಬಹುದು..! ಆದರೆ, ಇಲ್ಲೊಂದು ಟ್ವಿಸ್ಟ್ ಇದೆ. ಏನೆಂದರೆ, ನೀವು ಎಕ್ಸ್ (ಟ್ವಿಟರ್‌) ವೇದಿಕೆಯಲ್ಲಿ ಖಾತೆ ಹೊಂದಿರಬೇಕಾಗುತ್ತದೆ. ಎಕ್ಸ್‌ ಮಾಲೀಕ ಎಲಾನ್ ಮಸ್ಕ್ ಅವರು, ತಮ್ಮ ಎಕ್ಸ್ ವೇದಿಕೆಯಲ್ಲಿ ಶೀಘ್ರವೇ ವಿಡಿಯೋ ಮತ್ತು ಆಡಿಯೋ ಕಾಲ್ ಫೀಚರ್ ಒದಗಿಸುವುದಾಗಿ ಪ್ರಕಟಿಸಿದ್ದಾರೆ. ಎಲಾನ್ ಮಾಸ್ಕ್ ತಮ್ಮ ಮಾಲೀಕತ್ವದ ಟ್ವಿಟ್ಟರ್ … Continued

ಆಮ್ಲಜನಕದ ಹೊಸ ರೂಪ ಕಂಡುಹಿಡಿದ ವಿಜ್ಞಾನಿಗಳು : ಅದರ ಬಗ್ಗೆ ತಿಳಿದುಕೊಳ್ಳಬೇಕಾದದ್ದು….

 ಜಪಾನ್‌ನ ಟೋಕಿಯೊ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪರಮಾಣು ಭೌತಶಾಸ್ತ್ರಜ್ಞ ಯೋಸುಕೆ ಕೊಂಡೋ ನೇತೃತ್ವದ ಭೌತಶಾಸ್ತ್ರಜ್ಞರ ತಂಡವು ಆಮ್ಲಜನಕದ ಹೊಸ ಐಸೊಟೋಪ್ ಆಕ್ಸಿಜನ್-28 ಅನ್ನು ಕಂಡುಹಿಡಿದಿದೆ. ಆಮ್ಲಜನಕ-28 ಆಮ್ಲಜನಕ ಪರಮಾಣುವಿನ ನ್ಯೂಕ್ಲಿಯಸ್‌ನಲ್ಲಿ ಇದುವರೆಗೆ ಕಂಡ ಅತ್ಯಧಿಕ ಸಂಖ್ಯೆಯ ನ್ಯೂಟ್ರಾನ್‌ಗಳನ್ನು ಹೊಂದಿದೆ. ವಿಜ್ಞಾನಿಗಳ ಪ್ರಕಾರ, ಆಮ್ಲಜನಕ-28 ಇದುವರೆಗೆ ರಚಿಸಲಾದ ಆಮ್ಲಜನಕದ ಹೆಚ್ಚು ತೂಕದ ಆವೃತ್ತಿಯಾಗಿದೆ. ಆಕ್ಸಿಜನ್-28 ರ ಆವಿಷ್ಕಾರವು … Continued

ಖೈಬರ್ ಪಖ್ತುಂಖ್ವಾದಲ್ಲಿ ಆತ್ಮಹತ್ಯಾ ಬಾಂಬರ್‌ ಸ್ಫೋಟ : 8 ಪಾಕ್ ಸೈನಿಕರು ಸಾವು : 17 ಮಂದಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಎಂಟು ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಟೆಲಿಗ್ರಾಫ್ ಗುರುವಾರ ವರದಿ ಮಾಡಿದೆ. ಮಾಲಿ ಖೇಲ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಬೆಂಗಾವಲು ಪಡೆಗೆ ಮೋಟಾರು ಬೈಕ್‌ನಲ್ಲಿ ಬಂದ ಆತ್ಮಹತ್ಯಾ ಬಾಂಬರ್ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿದ … Continued

ಸೌದಿಅರೇಬಿಯಾ: ಮಕ್ಕಳು 20ಕ್ಕಿಂತ ಹೆಚ್ಚು ದಿನ ಶಾಲೆಗೆ ಗೈರಾದರೆ ಪೋಷಕರಿಗೆ ಜೈಲು ಶಿಕ್ಷೆ…!

ಸೂಕ್ತ ಕಾರಣವಿಲ್ಲದೆ ಮಕ್ಕಳು 20 ದಿನಗಳಿಗಿಂತ ಹೆಚ್ಚು ಕಾಲ ಶಾಲೆಗೆ ಗೈರುಹಾಜರಾದರೆ ಅಂತಹ ಮಕ್ಕಳ ಪೋಷಕರು ಜೈಲು ಶಿಕ್ಷೆ ಎದುರಿಸಬೇಕಾದ ನಿಯಮವನ್ನು ಸೌದಿಅರೇಬಿಯಾ ಜಾರಿಗೆ ತರುತ್ತಿದೆ ಎಂದು ವರದಿಯಾಗಿದೆ. ಸೌದಿ ಅರೇಬಿಯಾದಲ್ಲಿನ ಮಕ್ಕಳು ಸಮರ್ಪಕ ಕಾರಣವಿಲ್ಲದೆ 20 ದಿನಗಳ ವರೆಗೆ ಶಾಲೆಗೆ ಗೈರಾದರೆ ಮಕ್ಕಳ ಪೋಷಕರು ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಗಲ್ಫ್ ನ್ಯೂಸ್ ವರದಿ … Continued

ಕ್ಯಾನ್ಸರ್ ಚಿಕಿತ್ಸೆಗೆ ವಿಶ್ವದ ಮೊದಲ, ಏಳು ನಿಮಿಷಗಳ ಅವಧಿಯ ಚುಚ್ಚುಮದ್ದು ನೀಡಲಿರುವ ಎನ್‌ ಎಚ್‌ ಎಸ್‌ ಇಂಗ್ಲೆಂಡ್

ಬ್ರಿಟನ್‌ನ ಸರ್ಕಾರಿ ರಾಷ್ಟ್ರೀಯ ಆರೋಗ್ಯ ಸೇವೆಯು ಇಂಗ್ಲೆಂಡ್‌ನಲ್ಲಿ ನೂರಾರು ರೋಗಿಗಳಿಗೆ ಕ್ಯಾನ್ಸರ್‌ಗೆ ಚಿಕಿತ್ಸೆಗೆ ಚುಚ್ಚುಮದ್ದನ್ನು ನೀಡಲಿದ್ದು, ಹೀಗೆ ಚಿಕಿತ್ಸೆ ನೀಡುವ ವಿಶ್ವದ ಮೊದಲ ರಾಷ್ಟ್ರವಾಗಿದೆ. ಚುಚ್ಚುಮದ್ದು ನೀಡುವುದರಿಂದ ಚಿಕಿತ್ಸೆಯ ಸಮಯವನ್ನು ಮುಕ್ಕಾಲು ಭಾಗದಷ್ಟು ಕಡಿತಗೊಳಿಸಬಹುದು ಎಂದು ಹೇಳಲಾಗಿದೆ. ಮೆಡಿಸಿನ್ಸ್ ಮತ್ತು ಹೆಲ್ತ್‌ಕೇರ್ ಪ್ರಾಡಕ್ಟ್ ರೆಗ್ಯುಲೇಟರಿ ಏಜೆನ್ಸಿ (ಎಂಎಚ್‌ಆರ್‌ಎ)ಯ ಅನುಮೋದನೆಯ ನಂತರ, ಎನ್‌ಎಚ್‌ಎಸ್ ಇಂಗ್ಲೆಂಡ್ ಮಂಗಳವಾರ ಇಮ್ಯುನೊಥೆರಪಿ, … Continued

ಹಿಜಾಬ್‌ ಸರಿಯಾಗಿ ಧರಿಸಿಲ್ಲವೆಂದು 14 ವಿದ್ಯಾರ್ಥಿನಿಯರ ತಲೆ ಬೋಳಿಸಿದ ಶಿಕ್ಷಕಿ…!

ಇಂಡೋನೇಷ್ಯಾದ ಮುಖ್ಯ ದ್ವೀಪದಲ್ಲಿರುವ ಶಾಲೆಯೊಂದು 14 ಬಾಲಕಿಯರ ತಲೆಯನ್ನು ಭಾಗಶಃ ಬೋಳಿಸುವ ಮೂಲಕ ವಿವಾದವನ್ನು ಸೃಷ್ಟಿಸಿದೆ. ಈ ವಿದ್ಯಾರ್ಥಿಗಳು ಹಿಜಾಬ್ (ಶಿರಸ್ತ್ರಾಣವನ್ನು) ಸರಿಯಾಗಿ ಧರಿಸಲಿಲ್ಲ ಎಂಬ ಕಾರಣಕ್ಕೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ. 27 ಕೋಟಿ ಜನರಿರುವ ದ್ವೀಪಸಮೂಹದ ರಾಷ್ಟ್ರವಾದ ಇಂಡೋನೇಶಿಯಾದ ಸಂಪ್ರದಾಯವಾದಿಗಳು ಹೆಚ್ಚಿನ ಸಂಖ್ಯೆಗಳಲ್ಲಿರುವ ಭಾಗಗಳಲ್ಲಿ ಮುಸ್ಲಿಮ್ ಮತ್ತು … Continued

ಮನೆಯ ಮೇಲ್ಛಾವಣಿಯಿಂದ ಮರಕ್ಕೆ 16 ಅಡಿ ಉದ್ದದ ಹೆಬ್ಬಾವಿನ ಹರಿದಾಟ | ವೀಕ್ಷಿಸಿ

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಅಕ್ಕಪಕ್ಕದ ನಿವಾಸಿಗಳು ಇತ್ತೀಚೆಗೆ ತಮ್ಮ ಹಿತ್ತಲಿನಲ್ಲಿ ಬೃಹತ್ ಹೆಬ್ಬಾವನ್ನು ಕಂಡು ಭಯಭೀತರಾಗಿದ್ದರು. ಹೆಬ್ಬಾವು ಮೇಲ್ಛಾವಣಿಯ ಮೇಲೆ ಚಲಿಸುತ್ತಿರುವುದನ್ನು ಕಂಡು ಸ್ಥಳೀಯರು ಕ್ಷಣಕಾಲ ಬೆಚ್ಚಿಬಿದ್ದರು. ಅವರು ಮೊದಲು ಈ ಹೆಬ್ಬಾವು ಮನೆಯ ಮೇಲ್ಛಾವಣಿ ಮೇಲೆ ಹೇಗೆ ಬಂದಿತು ಎಂದು ಆಶ್ಚರ್ಯಪಟ್ಟರು. ಅಸಾಮಾನ್ಯ ದೃಶ್ಯವನ್ನು ನೋಡಲು ಅನೇಕ ಜನರು ಹೊರಗೆ ಜಮಾಯಿಸಿದರು; ಒಬ್ಬ ವ್ಯಕ್ತಿಯು ದೃಶ್ಯವನ್ನು … Continued

ವ್ಲಾದಿಮಿರ್‌ ಪುತಿನ್ ನವದೆಹಲಿಯಲ್ಲಿ ಜಿ20 ಶೃಂಗಸಭೆಯಲ್ಲಿ ಖುದ್ದು ಭಾಗವಹಿಸಲು ಯೋಜಿಸಿಲ್ಲ: ರಷ್ಯಾ

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಮುಂಬರುವ G20 ಶೃಂಗಸಭೆಯಲ್ಲಿ ಖುದ್ದು ಭಾಗವಹಿಸಲು ಯೋಜಿಸಿಲ್ಲ ಎಂದು ಕ್ರೆಮ್ಲಿನ್ ಶುಕ್ರವಾರ ತಿಳಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪುತಿನ್ ಭಾಗವಹಿಸುವಿಕೆಯ ಸ್ವರೂಪವನ್ನು ನಂತರ ನಿರ್ಧರಿಸಲಾಗುವುದು ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಉಕ್ರೇನ್‌ನಲ್ಲಿ ರಷ್ಯಾದ ಅಧ್ಯಕ್ಷರ ವಿರುದ್ಧ ಯುದ್ಧ ಅಪರಾಧಗಳ ಆರೋಪದ … Continued

WWE ಸೂಪರ್‌ಸ್ಟಾರ್ ಬ್ರೇ ವ್ಯಾಟ್ 36ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನ

‘ಬ್ರೇ ವ್ಯಾಟ್’ ಎಂಬ ಹೆಸರಿನಿಂದ ಪರಿಚಿತರಾಗಿರುವ ಡಬ್ಲ್ಯುಡಬ್ಲ್ಯು ಇ ಕುಸ್ತಿಪಟು ವಿಂಡ್‌ಹ್ಯಾಮ್ ರೊಟುಂಡಾ ಗುರುವಾರ ಹೃದಯಾಘಾತದಿಂದ ನಿಧನರಾದರು. ಅಮೆರಿಕದ ಕುಸ್ತಿಪಟುವಿನ ಅನಿರೀಕ್ಷಿತ ಸಾವಿಗೆ ಜನರು ಕಂಬನಿ ಮಿಡಿದಿದ್ದಾರೆ. “ಬ್ರೇ ವ್ಯಾಟ್ ಎಂದೂ ಕರೆಯಲ್ಪಡುವ ವಿಂಡ್‌ಹ್ಯಾಮ್ ರೊಟುಂಡಾ ಅವರು 36 ನೇ ವಯಸ್ಸಿನಲ್ಲಿ ಗುರುವಾರ, ಆಗಸ್ಟ್. 24 ರಂದು ನಿಧನರಾದರು ಎಂದು ತಿಳಿಸಲು ಡಬ್ಲ್ಯುಡಬ್ಲ್ಯು ಇ (WWE) … Continued