ಧಾರವಾಡ ಜೈನ ಮಿಲನದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನ

ಧಾರವಾಡ: ಧಾರವಾಡ ಜೈನ ಮಿಲನ ವತಿಯಿಂದ ಧಾರವಾಡ ಜಿಲ್ಲೆಯಲ್ಲಿ ಓದುತ್ತಿರುವ ಜೈನ, ಬಡ ಪ್ರತಿಭಾವಂತ ಪ್ರಥಮ ವರ್ಷದ ಪಿ.ಯು.ಸಿ, ಪ್ಯಾರಾಮೆಡಿಕಲ್, ಐ.ಟಿ.ಐ, ಡಿಪ್ಲೋಮಾ, ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಸಂಪರ್ಕ ಸಂಖ್ಯೆ, ವಿಳಾಸ, ಇತ್ಯಾದಿ ವಿವರಗಳನ್ನು ನಮೂದಿಸಿದ ವಿನಂತಿ ಅರ್ಜಿಯೊಂದಿಗೆ, ಪ್ರವೇಶ ಶುಲ್ಕ ಪಾವತಿಸಿದ ರಶೀದಿ, ಜಾತಿ, ಆದಾಯ ಪ್ರಮಾಣ … Continued

ತಂಬಾಕು ದುಷ್ಪರಿಣಾಮಗಳ ಅರಿವು ಕಾರ್ಯಕ್ರಮ: ವಿದ್ಯಾರ್ಥಿಗಳೇ ದುಶ್ಚಟಕ್ಕೆ ಬಲಿಯಾಗಬೇಡಿ-ಡಾ. ಅಜಿತ ಪ್ರಸಾದ

ಧಾರವಾಡ: ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನಲ್ಲಿ ದುಶ್ಟಟಕ್ಕೆ ಬಲಿಯಾಗಿ ತಮ್ಮ ಜೀವನವನ್ನೆ ಹಾಳುಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಯುವಕರು ನಾನಾ ವಿಧಗಳಲ್ಲಿ ತಂಬಾಕು ಸೇವನೆ ಮಾಡುತ್ತಿದ್ದು, ಇದರಿಂದ ತಲೆ, ಕಣ್ಣು, ಬಾಯಿ, ಕಿವಿ, ಉದರ ಹಾಗೂ ಶ್ವಾಸಕೋಶದ ರೋಗಗಳಿಂದ ಯುವಕರು ಚಿಕ್ಕ ವಯಸ್ಸಿನಲ್ಲೆ ಸಾವನ್ನಪ್ಪುವ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಹೇಳಿದರು. ಧಾರವಾಡದ ವಿದ್ಯಾಗಿರಿಯ … Continued

ಧಾರವಾಡ: ವಿವಿಧ ಪ್ರಶಸ್ತಿ ಪಡೆದ ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು

ಧಾರವಾಡ: ಧಾರವಾಡದ ಎಂ. ನಗರ ಸವದತ್ತಿ ರಸ್ತೆ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ೧೦ನೇ ತರಗತಿಯ ದಿಶಾ ಮೊಗೇರ, ಸಾಂಸ್ಕೃತಿಕ ಸಾಕಾರ ಸಮಿತಿ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ೯ನೇ ತರಗತಿಯ ಅಫ್ತಾಬ್ ಹುಸೇನ್‌ ಮುಮ್ಮಿಗಟ್ಟಿ “ಹಮ್ ಹೋಂಗೆ ಕಾಮಿಯಾಬ್” ಚಿತ್ರದಲ್ಲಿ ನಟನೆಗಾಗಿ ನವ ಕರ್ನಾಟಕ ಚಿತ್ರ ಮಂಡಳಿಯವರು ಅತ್ಯುತ್ತಮ ಬಾಲ … Continued

ಸಮಾಜದ ಸರ್ವತೋಮುಖ ಅಭಿವೃದ್ದಿಗೆ ಶಿಕ್ಷಣವೊಂದೇ ಮಾರ್ಗ: ಡಾ. ಅಜಿತ ಪ್ರಸಾದ

ಧಾರವಾಡ: ವಿದ್ಯೆ, ವಿದ್ಯಾಭ್ಯಾಸ, ವಿದ್ಯಾರ್ಥಿ, ಅಧ್ಯಾಪಕ, ವಿದ್ಯಾ ಸಂಸ್ಥೆಗಳು ಇವುಗಳು ಮಾನವ ಸಮಾಜದ ಸಂಸ್ಕೃತಿ, ಸಮೃದ್ಧಿ, ಪ್ರಗತಿ, ಉನ್ನತಿಗಳನ್ನು ನಿರ್ಧರಿಸುವ ಶಬ್ದಗಳು, ವ್ಯಕ್ತಿಯ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ದಿಗೆ ಶಿಕ್ಷಣವೊಂದೇ ಮಾರ್ಗ ಎಂದು ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದ ಹೇಳಿದರು. ಅವರು ಧಾರವಾಡದ ವಿದ್ಯಾಗಿರಿಯ ಸನ್ನಿಧಿ ಕಲಾಕ್ಷೇತ್ರದಲ್ಲಿ ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ … Continued

ಜೆಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿವರ್ಷ ೨೫೦ಕ್ಕೂ ಅಧಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ-ಕ್ರೀಡಾಪಟುಗಳಿಗೆ ಉಚಿತ ಪ್ರವೇಶ:ಡಾ.ಅಜಿತಪ್ರಸಾದ

ಧಾರವಾಡ : ಅನ್ನದಾನಂ ಕ್ಷಣಿಕ ತೃಪ್ತಿಃ ವಿದ್ಯಾದಾನಂ ಯಾವಜ್ಜೀವಂ ಎಂಬ ಮಾತು ಸರ್ವಕಾಲಿಕವಾದದ್ದು, ಹಸಿದವರಿಗೆ ಅನ್ನ ಹಾಕಿದಾಗ ಆ ಕ್ಷಣದ ತೃಪ್ತಿ ಮಾತ್ರ ಹಸಿದವನಿಗೆ ಸಿಗುತ್ತದೆ. ಆದರೆ ವಿದ್ಯಾದಾನ ಮಾತ್ರ ವಿದ್ಯೆಯನ್ನು ಪಡೆದವನ ಜೀವನದುದ್ದಕ್ಕೂ ಅವನಿಗೆ ತೃಪ್ತಿಯನ್ನು ಕೊಡುತ್ತದೆ. ಆ ನಿಟ್ಟಿನಲ್ಲಿ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ ವಿದ್ಯೆಯನ್ನು ನೀಡುತ್ತ ಬಂದಿದೆ ಎಂದು ಜನತಾ ಶಿಕ್ಷಣ ಸಮಿತಿಯ … Continued

ಇಂದು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಬಹುಮಾನ ವಿತರಣೆ

ಧಾರವಾಡ: ಇಲ್ಲಿನ ವಿದ್ಯಾಗಿರಿಯ ಜೆ.ಎಸ್.ಎಸ್ ಡಿ.ಆರ್.ಹೆಚ್ ಸಭಾಭವನದಲ್ಲಿ ನವೆಂಬರ್‌ ೧೨ರಂದು ಬೆಳಿಗ್ಗೆ ೧೦.೩೦ ಕ್ಕೆ ಧಾರವಾಡ ಶಹರ ಅಟೋ ಚಾಲಕರ/ಮಾಲಿಕರ ಸಂಘ (ರಿ) ಹಾಗೂ ಜನತಾ ಶಿಕ್ಷಣ ಸಮಿತಿ, ವಿದ್ಯಾಗಿರಿ, ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ. ಜೆ.ಎಸ್.ಎಸ್.ನ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ … Continued

ಎಲ್‌ಕೆಜಿ -ಯುಕೆಜಿ ಮಕ್ಕಳನ್ನು ಆರತಿ ಮಾಡಿ ಸಿಹಿ ಹಂಚುವ ಮೂಲಕ ಸ್ವಾಗತ

ಧಾರವಾಡ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳನ್ನು ಆರತಿ ಮಾಡಿ, ಸಿಹಿ ಹಂಚುವ ಮೂಲಕ ಸ್ವಾಗತಿಸಲಾಯಿತು. ಧಾರವಾಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮೋಹನಕುಮಾರ ಹಂಚಾಟೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ ಹಾಗೂ ಪ್ರಾಚಾರ್ಯೆ ವಿದ್ಯಾ ಕೊಲ್ಹಾಪುರೆ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಕನ್ನಡ ಕವಿಗಳ ಕಾವ್ಯ ಕೃತಿಗಳನ್ನು ಓದಿದರೆ ಬದುಕಿಗೆ ಹೊಸ ಅರ್ಥ

ಧಾರವಾಡ : ಕರ್ನಾಟಕ ರಾಜ್ಯೋತ್ಸವವನ್ನು ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಮತ್ತು ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ‘ಐಕ್ಯೂಎಸಿ’ ಮತ್ತು ಕರ್ನಾಟಕ ಸಂಘದ ಸಹಯೋಗದೊಂದಿಗೆ ಜೆ.ಎಸ್.ಎಸ್. ಡಿ.ಆರ್.ಎಚ್. ಸಭಾಭವನದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟಕರಾದ ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿ ಡಾ. ಅಜಿತಪ್ರಸಾದ … Continued

ಜೆಎಸ್‌ಎಸ್‌ ಅಂಗಸ್ಥೆಗಳ 28 ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಡಾ.ವೀರೇಂದ್ರ ಹೆಗ್ಗಡೆ ಸನ್ಮಾನ

ಧಾರವಾಡ: ಜೆ.ಎಸ್.ಎಸ್ ಶಿಸ್ತು ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದ ಸಂಸ್ಥೆ, ಇಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ, ಉತ್ತಮ ವ್ಯಕ್ತಿತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಿಕೊಡಲಾಗುತ್ತದೆ ಆದ್ದರಿಂದ ಇಲ್ಲಿ ಪ್ರತಿ ವಿದ್ಯಾರ್ಥಿಯ ಭವಿಷ್ಯ ಉಜ್ವಲಾವಾಗುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಜೆ.ಎಸ್.ಎಸ್ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಜೆ.ಎಸ್.ಎಸ್ ಎಂಬಿಎ ಸಭಾಭವನದಲ್ಲಿ ಜೆ.ಎಸ್.ಎಸ್ … Continued

ಯಾವುದೇ ಕಾರಣಕ್ಕೂ ಕಣ್ಣಿನ ನಿರ್ಲಕ್ಷ್ಯ ಮಾಡಬೇಡಿ: ಡಾ. ಕಾತ್ಯಾಯಿನಿ

ಧಾರವಾಡ: ಕಣ್ಣು ಮಾನವನ ದೇಹದ ಅತಿ ಮುಖ್ಯ ಅಂಗ, ಪ್ರತಿ ದಿನ ನಮ್ಮ ಕಣ್ಣು ೨೫೦೦೦ ಬಾರಿ ಮಿಟುಕಿಸುತ್ತದೆ. ಕಣ್ಣಿನಿಂದಲೇ ನಾವು ಪ್ರಪಂಚದ ಆಗುಹೋಗುಗಳನ್ನು ನೋಡುತ್ತೇವೆ. ಕಣ್ಣಿಗೆ ಏನಾದರೂ ಸಮಸ್ಯೆ ಆದಲ್ಲಿ ನುರಿತ ತಜ್ಞರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು ಇಲ್ಲವಾದಲ್ಲಿ ಮುಂದೆ ಅಂಧಕಾರದಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಬರಬಹುದು ಎಂದು ಡಾ.ಕಾತ್ಯಾಯಿನಿ ಹೇಳಿದರು. ಜೆ.ಎಸ್.ಎಸ್ ಶ್ರೀ … Continued