ಚಿನ್ನಾಭರಣ ಅಂಗಡಿಗೆ ಕದಿಯಲು ಬಂದ ಕಳ್ಳರಿಂದ ಫೈರಿಂಗ್​; ಯುವಕ ಸಾವು

ಮೈಸೂರು: ಹಾಡಹಗಲೇ ಚಿನ್ನಾಭರಣದ ಅಂಗಡಿಗೆ ನುಗ್ಗಿದ ಕಳ್ಳರು, ಆಭರಣಗಳನ್ನು ಕದಿಯಲು ಯತ್ನಿಸಿದ್ದಾರೆ ಹಾಗೂ ಇದಕ್ಕೆ ಪ್ರತಿರೋಧ ಒಡ್ಡಿದ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿದ್ದಾರೆ. ನಾಲ್ಕು ಜನರ ತಂಡ ಮೈಸೂರಿನ ವಿದ್ಯಾರಣ್ಯಪುರಂ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಚಿನ್ನಾಭರಣ ಅಂಗಡಿಗೆ ಅಭರಣ ಕದಿಯಲು ಆಗಮಿಸಿದೆ. ಕಳ್ಳತನಕ್ಕೆ ಬಂದಿರುವ ಬಗ್ಗೆ ಸುಳಿವು ಗೊತ್ತಾದ ಕೂಡಲೇ ಅಂಗಡಿಯಲ್ಲಿದ್ದ ಮಾಲೀಕ … Continued

ಬೆಂಗಳೂರು ಆಹಾರ ಉತ್ಪಾದನೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: ಇಬ್ಬರ ಸಾವು, ಹಲವರಿಗೆ ಗಾಯ

ಬೆಂಗಳೂರು: ಬೆಂಗಳೂರು: ಬೆಂಗಳೂರಿನ ಆಹಾರ ಉತ್ಪಾದನೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಇಬ್ಬರು ಮೃತಪಟ್ಟ ಘಟನೆ ಸೋಮವಾರ ನಡೆದ ವರದಿಯಾಗಿದೆ. ನಗರದ ಮಾಗಡಿ ರಸ್ತೆಯ 5ನೇ ಕ್ರಾಸ್ ನಲ್ಲಿ ಇರುವ ಎಂ ಎಂ ಫುಡ್ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದೆ. ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದಿರುವ ಘಟನೆಯಲ್ಲಿ ಸಜೀವವಾಗಿ ದಹನಗೊಂಡವರನ್ನು ಬಿಹಾರ ಮೂಲದ ಮನೀಷ ಮತ್ತು … Continued

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ

ಬೆಳಗಾವಿ :ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ.  . *ವಾರ್ಡ್ : ಅಭ್ಯರ್ಥಿಗಳ ಹೆಸರು 2-ಸ್ನೇಹಾ ಶಿವರಾಜ ಸೌದಾಗರ 3-ಕಿಶೋರಿ ಪರಶುರಾಮ ಹಲಗೇಕರ 4-ಜಯತೀರ್ಥ ಸವದತ್ತಿ 5-ಅಂಜನಾ ನಾರಾಯಣ ಉಪ್ಪಾರ 7-ಸೌರಬ್ ಸಾವಂತ 8-ಜ್ಯೋತಿಬಾ ನಾಯಿಕ 9-ಸಾರಿಕಾ ಕಟಾವಕರ 10-ಜ್ಯೋತಿ ಶೆಟ್ಟಿ 11-ಗಜಾನನ ಮಿಸಾಳೆ 12-ರಾಜಕುಮಾರ ಮನೋಹರ ಖಟಾವಕರ … Continued

ಬೆಳಗಾವಿ ಪಾಲಿಕೆ ಚುನಾವಣೆ: ಮಧ್ಯರಾತ್ರಿ 51 ವಾರ್ಡುಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಗೆ ಒಟ್ಟು 58 ವಾರ್ಡುಗಳಲ್ಲಿ ಕಾಂಗ್ರೆಸ್ 51 ವಾರ್ಡುಗಳ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಮಧ್ಯರಾತ್ರಿ ಬಿಡುಗಡೆ ಮಾಡಿದೆ. ಈ ಅಭ್ಯರ್ಥಿಗಳು ಬಿ ಫಾರ್ಮ್‌ ನೊಂದಿಗೆ ಇಂದು (ಸೋಮವಾರ) ನಾಮಪತ್ರ ಸಲ್ಲಿಸಲಿದ್ದಾರೆ. ವಾರ್ಡ್ ನಂ 1 ಇಕ್ರಾ ಮುಲ್ಲಾ, ವಾರ್ಡ್ ನಂ 2 ಮುಮ್ಮಿಲ್ ಡೋಣಿ, ವಾರ್ಡ್ ನಂ 3 ಜ್ಯೋತಿ … Continued

ಕರ್ನಾಟಕದಲ್ಲಿ ಇಂದಿನಿಂದ 9ರಿಂದ 12ನೇ ತರಗತಿಗಳು ಆರಂಭ

ಬೆಂಗಳೂರು: ಬಹುದೊಡ್ಡ ಸವಾಲಿನೊಂದಿಗೆ ಒಂದೂವರೆ ವರ್ಷಗಳ ಬಳಿಕ ರಾಜ್ಯಾದ್ಯಂತ ಶಾಲೆಗಳು ಇಂದು (ಸೋಮವಾರ) ಆರಂಭವಾಗುತ್ತಿವೆ. ಕೊರೊನಾ ವೈರಸ್ ಸೋಂಕಿ ಹಿನ್ನೆಲೆಯಲ್ಲಿ 2020ರ ಮಾರ್ಚ್‌ ತಿಂಗಳಿನಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು. ಆಮೇಲೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ನಡೆಸಲಾಗಿತ್ತಾದರೂ, ಉಳಿದ ತರಗತಿಗಳ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನೂ ಸಹ ನಡೆಸಿರಲಿಲ್ಲ. ಈಗ ಕೊರೊನಾ ಮೂರನೇ ಅಲೆಯ ಆತಂಕದ ಮಧ್ಯೆ ಇಂದಿನಿಂದ 9 … Continued

ಬೆಳಗಾವಿ ಮಹಾ ನಗರಪಾಲಿಕೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಳಗಾವಿ :ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಹೊಸ ಮುಖಗಳಿಗೆ ಟಿಕೆಟ್ ನೀಡಿದೆ. ಕೆಲವರ ವಾರ್ಡ್ ಬದಲಾವಣೆ ಆಗಿರುವುದು ಕಂಡುಬಂದಿದೆ. ಭಾನುವಾರ ಬಿಜೆಪಿ ನಾಯಕರು ತನ್ನ ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದ್ದಾರೆ. ವಾರ್ಡ್ ನಂಬರ್ 1-ಉಷಾ ಸತೀಶ್ ಚವಾಣ್. ವಾರ್ಡ್ ನಂಬರ್-6 ಸಂತೋಷ್ ಪೇಡ್ನೇಕರ. ವಾರ್ಡ್ ನಂಬರ್-13 ನಾಗವೇಣಿ … Continued

ಉಳಿದ ಬೃಹನ್‌ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಕೋವಿಡ್ -19 ವರದಿ ಮಾಡುವಿಕೆ ಹೆಚ್ಚು ಪಾರದರ್ಶಕ:ಅಧ್ಯಯನ

ಬೆಂಗಳೂರು: ನಿರ್ವಹಣಾ ಸಲಹಾ ಸಂಸ್ಥೆ ಪ್ರಾಕ್ಸಿಮಾ ಕನ್ಸಲ್ಟಿಂಗ್ ಮತ್ತು ಲಾಭರಹಿತ ಸಂಸ್ಥೆಯ ಉಪಕ್ರಮವಾದ ಜೀವನ್ ರಕ್ಷಾ ಮಾಡಿದ ನೋಂದಾಯಿತ ಆರೋಗ್ಯ ವಿಮಾ ಕ್ಲೈಮ್‌ಗಳ ಇತ್ತೀಚಿನ ವಿಶ್ಲೇಷಣೆಯ ಪ್ರಕಾರ, ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ, ಕೋವಿಡ್ -19 ಡೇಟಾ ವರದಿಯ ವಿಷಯದಲ್ಲಿ ಬೆಂಗಳೂರು ಅತ್ಯಂತ ಪಾರದರ್ಶಕವಾಗಿದೆ. ಭಾರತದ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನ (PHFI) ಜನರಲ್ ಇನ್ಶೂರೆನ್ಸ್ ಕೌನ್ಸಿಲ್ … Continued

ಅಮಿತಾಬ್ ಬಚ್ಚನ್ ಹೆಸರಲ್ಲಿ ನೋಂದಣಿಯಾಗಿದ್ದ ರೋಲ್ಸ್​ ರಾಯ್ಸ್ ಕಾರು ಜಪ್ತಿ

ಬೆಂಗಳೂರು: ಬಿಗ್ ಬಿ ಅಮಿತಾಭ್ ಬಚ್ಚನ್ ಹೆಸರಲ್ಲಿ ನೋಂದಣಿಯಾಗಿದ್ದ ಆದರೆ ಸೂಕ್ತ ದಾಖಲೆ ಇಲ್ಲದ ರೋಲ್ಸ್ ರಾಯ್ಸ್ ಕಾರನ್ನು ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಕಾರನ್ನು ಬೆಂಗಳೂರಿನ ಯುಬಿ ಸಿಟಿಯಲ್ಲಿ ಸೀಜ್ ಮಾಡಲಾಗಿದೆ. MH 02, BB 2 ಸಂಖ್ಯೆಯ ರೋಲ್ಸ್ ರಾಯ್ಸ್ ಕಾರು ಸೀಜ್ ಆಗಿದ್ದು, ಸೂಕ್ತ ದಾಖಲೆ ಇರಲಿಲ್ಲ … Continued

ಕರ್ನಾಟಕದಲ್ಲಿ ಭಾನುವಾರ 1,189 ಕೊರೊನಾ ಹೊಸ ಸೋಂಕು ದಾಖಲು

ಬೆಂಗಳೂರು: ಕರ್ನಾಟಕದಲ್ಲಿ ಭಾನುವಾರ 1,189 ಹೊಸ ಕೊರೊನಾ ಸೋಂಕು ದೃಢಪಟ್ಟಿವೆ. ಇದೇ ಸಮಯದಲ್ಲಿ 22 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. 1,456 ಜನರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29,38,616ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 37,145ಕ್ಕೆ ತಲುಪಿದೆ. ಒಟ್ಟು ಸಕ್ರಿಯ ಪ್ರಕರಣ ಸಂಖ್ಯೆ 20,556 ಇಳಿದಿದೆ. ರಾಜಧಾನಿಯಲ್ಲಿ ರವಿವಾರದಂದು 267 ಜನರಿಗೆ ಕೊರೋನ … Continued

ಭಟ್ಕಳ: ತಲಾಂದ ಸಮೀಪ ಚಿರತೆ ಸಾವು

ಭಟ್ಕಳ: ಉತತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತಲಾಂದ ಗ್ರಾಮದ ಸಮೀಪ ಚಿರತೆಯ ಮೃತಪಟ್ಟ ವರದಿಯಾಗಿದೆ. ಚಿರತೆ ಸತ್ತುಬಿದ್ದಿರುವುದನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆಯ ವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಸತ್ತಿರುವುದು ಹೆಣ್ಣು ಚಿರತೆ ಎಂದು ಹೇಳಿದ್ದಾರೆ. ಸಾವಿಗೆ ನಿಖರ ಕಾರಣ … Continued