ವೀಡಿಯೊ : ಬೆಂಗಳೂರಲ್ಲಿ ಮೈಸೂರು ಸಿಲ್ಕ್​​​ ಸೀರೆಗಾಗಿ ಪರಸ್ಪರ ಜುಟ್ಟು ಹಿಡಿದು ಎಳೆದಾಡಿ ಬಡಿದಾಡಿಕೊಂಡ ಇಬ್ಬರು ಮಹಿಳೆಯರು…!

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಮೈಸೂರು ಸಿಲ್ಕ್ಸ್‌ನ ವಾರ್ಷಿಕ ಮಾರಾಟ ಮೇಳದಲ್ಲಿ ಸೀರೆಗಾಗಿ ಇಬ್ಬರು ಮಹಿಳೆಯರು ಜಗಳವಾಡುತ್ತಿರುವ ವೀಡಿಯೊವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಟ್ವಿಟರ್ ಬಳಕೆದಾರರಾದ ಆರ್ ವೈದ್ಯ ಎಂಬವರು ಹಂಚಿಕೊಂಡ ವೀಡಿಯೊದಲ್ಲಿ, ಬೆಂಗಳೂರಿನ ಮಲ್ಲೇಶ್ವರಂನ ಮೈಸೂರು ಸಿಲ್ಕ್ಸ್‌ನಲ್ಲಿ ಶಾಪಿಂಗ್ ಮಾಡುವಾಗ ಇಬ್ಬರು ಮಹಿಳೆಯರು ಸೀರೆಗಾಗಿ ಕೂದಲು ಹಿಡಿದು ಜಗ್ಗಿ ಜಗಳವಾಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಜಗಳವು ವಿಕೋಪಕ್ಕೆ ತಿರುಗಿ … Continued

ಬೆಂಗಳೂರು ಸೇರಿದಂತೆ ಬೆಳ್ಳಂಬೆಳಿಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ

ಬೆಂಗಳೂರು: ಸೋಮವಾರ ಬೆಳ್ಳಂಬೆಳಗ್ಗೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ‌ ಮೇಲೆ‌ ಬಿಬಿಎಂಪಿ‌ ನಗರ ಯೋಜನಾ ವಿಭಾಗದ ಯಲಹಂಕ ವಲಯ ಕಚೇರಿಯ ಸಹಾಯಕ ನಿರ್ದೇಶಕ ಗಂಗಾಧರಯ್ಯ ನಿವಾಸದ ಮೇಲೆಯೂ ದಾಳಿ ನಡೆದಿದೆ. ಅವರ ಯಲಹಂಕದ ನಿವಾಸದ ಮೇಲೆ ಸೋಮವಾರ ನಸುಕಿನ ಜಾವವೇ ದಾಳಿ ನಡೆದಿದ್ದು, … Continued

ಪ್ರಚಾರ ಸಭೆಯಲ್ಲಿ ಯುವಕನ ಕಪಾಳಕ್ಕೆ ಬಾರಿಸಿದ ಎಂ.ಬಿ. ಪಾಟೀಲ…!

ವಿಜಯಪುರ: ರಾಜ್ಯದಲ್ಲಿ ಮೇ 10ರಂದು ನಡೆಯುವ 2023ರ ವಿಧಾನಸಭೆ ಚುನಾವಣೆ ಪ್ರಚಾರ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಆದರೆ, ಪ್ರಚಾರದ ವೇಳೆ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಯುವಕನಿಗೆ ಕಪಾಳಮೋಕ್ಷ ಮಾಡಿದ ಘಟನೆ ವರದಿಯಾಗಿದೆ. ಮಾಜಿ ಸಚಿವ ಮತ್ತು ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ ಅವರು ಯುವಕನ ಕೆನ್ನೆಗೆ ಬಾರಿಸಿದ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರದ … Continued

ತುಂಗಭದ್ರಾ ನದಿಯಲ್ಲಿ ಮೂವರು ಹುಡುಗರು ನೀರುಪಾಲು

ದಾವಣಗೆರೆ : ತುಂಗಭದ್ರಾ ನದಿಯಲ್ಲಿ ಮೂವರು ಹುಡುಗರು ನೀರು ಪಾಲಾಗಿರುವ ಘಟನೆ ಭಾನುವಾರ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಭಾನುವಾರ ನಡೆದಿದೆ. ಗ್ರಾಮದ ಪವನ (16), ಕಿರಣ (14) ಹಾಗೂ ವರುಣ (15) ನೀರು ಪಾಲಾದವರು ಎಂದು ಹೇಳಲಾಗಿದೆ. ಭಾನುವಾರ ಬೆಳಿಗ್ಗೆ ಹೊಲದಲ್ಲಿ ಬೇಸಾಯ ಮುಗಿಸಿದ ನಂತರ ತುಂಗಭದ್ರಾ ನದಿಯಲ್ಲಿ ಎತ್ತುಗಳಿಗೆ ನೀರು ಕುಡಿಸಲು … Continued

ಬ್ರಹ್ಮಾವರ: ದೋಣಿ ಅವಘಡ – ಮೂವರು ಸಾವು, ಮತ್ತೋರ್ವ ನಾಪತ್ತೆ

ಬ್ರಹ್ಮಾವರ :  ಇಲ್ಲಿನ ಕುಕ್ಕುಡೆಕುದ್ರು ಎಂಬಲ್ಲಿ ಸ್ವರ್ಣಾ ನದಿಯಲ್ಲಿ ನಾಲ್ವರು ಯುವಕರು ನೀರು ಪಾಲಾದ ದುರ್ಘಟನೆ ಭಾನುವಾರ ಸಂಜೆ ಸಂಭವಿಸಿದೆ ಎಂದು ವರದಿಯಾಗಿದೆ. ಹೂಡೆ ಗ್ರಾಮದ ಇಬ್ಬರು ಯುವಕರು ಮತ್ತು ಅವರ ಸಂಬಂಧಿಕರಾದ ಶೃಂಗೇರಿಯ ಇಬ್ಬರು ಯುವಕರು ನೀರು ಪಾಲಾದವರು ಎನ್ನಲಾಗಿದೆ. ಶನಿವಾರ ರಂಜಾನ್ ಹಬ್ಬಕ್ಕೆ ಆಗಮಿಸಿದವರು ಚಿಪ್ಪು ಮೀನು, ಮರುವಾಯಿ ಹಿಡಿಯಲು ಒಟ್ಟಾಗಿ ನದಿಗೆ … Continued

ಜಾತಿ ಗಣತಿ: ಬಿಜೆಪಿ ರಾಜಕೀಯ ಬೂಟಾಟಿಕೆ ಬಹಿರಂಗ-ಕಾಂಗ್ರೆಸ್ ಟೀಕೆ

ಹುಬ್ಬಳ್ಳಿ: ಸಾಮಾಜಿಕ, ಆರ್ಥಿಕ, ಜಾತಿ ಜನಗಣತಿಗೆ ಬಿಜೆಪಿ ವಿರೋಧಿಸುತ್ತಿದೆ. ಇದನ್ನು ತಾವೇ ಸ್ಪಷ್ಟಪಡಿಸುವುದರ ಜೊತೆಗೆ ತನ್ನ ರಾಜಕೀಯ ಬೂಟಾಟಿಕೆಯನ್ನೂ ತಾನೇ ಬಹಿರಂಗಪಡಿಸಿದೆ ಎಂದು ಕಾಂಗ್ರೆಸ್ಸಿನ ರಾಜ್ಯ ಪ್ರಚಾರ ಸಮಿತಿಯ ಸಂಯೋಜಕರಾದ ವಸಂತ ಲದವಾ ಟೀಕಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸಾಮಾಜಿಕ, ಆರ್ಥಿಕ, ಜಾತಿ ಜನಗಣತಿಗಾಗಿ ೨೦೧೦ ರಂದು ಸಂಸತ್ತಿನಲ್ಲಿ ಮಸೂದೆ ಮಂಡಿಸಿ ಒಪ್ಪಿಗೆ ಪಡೆದಿತ್ತು. … Continued

ಒಸಿಐ ಮಾನ್ಯತೆ ರದ್ದತಿ ಪ್ರಕರಣ : ನಟ ಚೇತನಗೆ ಷರತ್ತುಬದ್ಧ ರಿಲೀಫ್‌ ನೀಡಿದ ಹೈಕೋರ್ಟ್

ಬೆಂಗಳೂರು: ಒಸಿಐ (ಸಾಗರೋತ್ತರ ಭಾರತೀಯ ಪ್ರಜೆ) ಮಾನ್ಯತೆ ರದ್ದಾದ ಹಿನ್ನೆಲೆಯಲ್ಲಿ ಭಾರತದಿಂದ ಗಡೀಪಾರಾಗುವ ಭೀತಿಯಲ್ಲಿದ್ದ ನಟ ಚೇತನ್‌ ಅವರಿಗೆ ಕರ್ನಾಟಕ ಹೈಕೋರ್ಟ್‌ ಷರತ್ತುಬದ್ಧ ರಿಲೀಫ್‌ ನೀಡಿದೆ. ಪ್ರಕರಣದ ವಾಸ್ತವಾಂಶ ಮತ್ತು ಸಂದರ್ಭಗಳನ್ನು ಗಮನಿಸಿ ಮುಂದಿನ ವಿಚಾರಣೆ ನಡೆಯುವ ಜೂನ್‌ 2ರ ವರೆಗೆ ಒಸಿಐ ಕಾರ್ಡ್‌ಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳದಂತೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ … Continued

ಕರ್ನಾಟಕ ವಿಧಾನಸಭೆ ಚುನಾವಣೆ : ಕಾಂಗ್ರೆಸ್ ಕಾರ್ಯಕರ್ತನಿಗೆ ಚಾಕು ಇರಿತ

ಬೀದರ: ಕಾಂಗ್ರೆಸ್ ಅಭ್ಯರ್ಥಿ ಈಶ್ವರ್ ಖಂಡ್ರೆ ಪರವಾಗಿ ಪ್ರಚಾರ ಮಾಡುತ್ತಿದ್ದ ಕಾರ್ಯಕರ್ತನಿಗೆ ಚಾಕು ಇರಿದು ಗಾಯಗೊಳಿಸಿದ ಘಟನೆ ಬೀದರ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಶನಿವಾರ ತಡರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಗಾಯಗೊಂಡ ಯುವಕನನ್ನು ಹೈದರಾಬಾದ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾಲ್ಕಿ ತಾಲೂಕಿನ ಮಾವಿನಹಳ್ಳಿ ಗ್ರಾಮದ ಗಣೇಶ ಶಾಲಿವಾನ ಯರಬಾಗೆ (23) ಎಂಬ ಯುವಕ ಭಾಲ್ಕಿ ಪಟ್ಟಣದ ಇಶಾನ್ … Continued

ಬೆಂಗಳೂರು ಶಿವಾಜಿನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ದಿ ಬೆಂಗಳೂರಿನ ಶಿವಾಜಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ‌ಅಬ್ದುಲ್ ಜಫರ್ ಅಲಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಇಷ್ಟು ದಿನ ವಿದೇಶದಲ್ಲಿ ನೆಲೆಸಿದ್ದ ಜಫರ್ ಅಲಿ ಅವರು ಇತ್ತಿಚಿಗಷ್ಟೇ ಬೆಂಗಳೂರಿಗೆ ಹಿಂತಿರುಗಿದ್ದರು. ಜಫರ್ ಅಲಿ ಅವರ ಹೆಸರು ಯಾವ ಕ್ಷೇತ್ರದ ಮತದಾರರ ಪಟ್ಟಿಯಲ್ಲೂ ಇಲ್ಲ. ಹೀಗಾಗಿ ಆದ್ದರಿಂದ … Continued

ಕನ್ನಡ ಧಾರಾವಾಹಿಯ ಜನಪ್ರಿಯ ನಟ ಸಂಪತ್​ ಜಯರಾಮ ಆತ್ಮಹತ್ಯೆ …!

ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಅಗ್ನಿಸಾಕ್ಷಿ’ಯಲ್ಲಿ ನಟಿಸಿ ಫೇಮಸ್ ಆಗಿದ್ದ ಹಾಗೂ ಸಾಕಷ್ಟು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದ ನಟ ಸಂಪತ್ ಜಯರಾಮ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅವರಿಗೆ 35 ವರ್ಷ ವಯಸ್ಸಾಗಿತ್ತು. ಶನಿವಾರ (ಏಪ್ರಿಲ್‌ 22) ನೆಲಮಂಗಲದಲ್ಲಿರುವ ತಮ್ಮ ನಿವಾಸದಲ್ಲೇ ಸಂಪತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೆಲಮಂಗಲದ ಅರಿಶಿನಕುಂಟೆಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ನೇಣುಬಿಗಿದುಕೊಂಡು ನಟ … Continued