ಅರುಣಕುಮಾರ ಹಬ್ಬು ʼಬೊಗಸೆ ನೀರುʼ ಕೃತಿಗೆ ಬಸವರಾಜ ಕಟ್ಟಿಮನಿ ಆತ್ಮಕಥೆ ಪ್ರಶಸ್ತಿ

ಹುಬ್ಬಳ್ಳಿ: ಹಿರಿಯ ಪತ್ರಕರ್ತ ಹಾಗೂ ಬರಹಗಾರ ಅರುಣಕುಮಾರ ಹಬ್ಬು ಅವರ ಆತ್ಮಕಥನ ” ಬೊಗಸೆ ನೀರು” ಕೃತಿಯು ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು ಕೊಡಮಾಡುವ ಬಸವರಾಜ ಕಟ್ಟಿಮನಿ ಆತ್ಮಕಥೆ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಪ್ರಶಸ್ತಿಯನ್ನು ಜನವರಿ 18ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ … Continued

ಬೆಟ್ಟಿಂಗ್‌ ಪ್ರಕರಣ: ಶಾಸಕ ವೀರೇಂದ್ರ ಪಪ್ಪಿಗೆ ಜಾಮೀನು ಮಂಜೂರು

ಬೆಂಗಳೂರು : ಆನ್‌ಲೈನ್‌ – ಆಫ್‌ಲೈನ್‌ ಬೆಟ್ಟಿಂಗ್‌ ಆರೋಪದ ಸಂಬಂಧ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಬಂಧಿತರಾಗಿದ್ದ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ ಸಿ ವೀರೇಂದ್ರ ಅಲಿಯಾಸ್‌ ಪಪ್ಪಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ. ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಜಾಮೀನು ಆದೇಶವನ್ನು ವಿಶೇಷ ನ್ಯಾಯಾಧೀಶರಾದ ಗಜಾನನ ಭಟ್‌ ಮಂಗಳವಾರ … Continued

ಶಿರಸಿ-ಕುಮಟಾ ರಸ್ತೆಯಲ್ಲಿ ಡಿಸೆಂಬರ್‌ 30 ರಿಂದ ಬಸ್ ಸಂಚಾರ ; ಜಿಲ್ಲಾಧಿಕಾರಿ

ಕಾರವಾರ : ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ-766 ಇ ರಸ್ತೆಯಲ್ಲಿ ಡಿಸೆಂಬರ್‌ 30ರಿಂದ ಪುನಃ ಬಸ್ ಸಂಚಾರಕ್ಕೆ ಅನುವು ಮಾಡಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಪೊಲೀಸ್ ಅಧೀಕ್ಷಕರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ವರದಿ ಆಧಾರದ ಮೇಲೆ ಸದರಿ ರಸ್ತೆಯಲ್ಲಿ ಡಿಸೆಂಬರ್‌ 30 … Continued

ಕರ್ನಾಟಕದಲ್ಲಿ ದಾಖಲೆ ಮಟ್ಟದ ಚಳಿ: ಕಳೆದ 20 ವರ್ಷಗಳಲ್ಲೇ ಅತ್ಯಂತ ಶೀತಲ ಹವಾಮಾನ…!

ಬೆಂಗಳೂರು : ಕರ್ನಾಟಕದಲ್ಲಿ ಈ ವರ್ಷ ಚಳಿಯ ತೀವ್ರತೆ ಮಿತಿಮೀರಿದ್ದು, ಕಳೆದ ಎರಡು ದಶಕಗಳಲ್ಲಿ ರಾಜ್ಯದ ಅರ್ಧದಷ್ಟು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು ದಾಖಲೆ ಮಟ್ಟಕ್ಕೆ ಕುಸಿದಿದೆ. ಇದು ಕೇವಲ ಸಾಂದರ್ಭಿಕ ಬದಲಾವಣೆಯಲ್ಲ, ಬದಲಿಗೆ ದೀರ್ಘಕಾಲದ ಹವಾಮಾನ ವೈಪರೀತ್ಯದ ಸೂಚನೆಯಾಗಿದೆ ಎಂದು ದತ್ತಾಂಶಗಳು ತಿಳಿಸಿವೆ. ರಾಜ್ಯದಲ್ಲಿ ತಾಪಮಾನದ ವ್ಯವಸ್ಥಿತ ದಾಖಲೆಗಳನ್ನು ಸುಮಾರು ಒಂದು ಶತಮಾನದಿಂದ ನಿರ್ವಹಿಸಲಾಗುತ್ತಿದ್ದರೂ, ಹೆಚ್ಚಿನ … Continued

ಬೆಂಗಳೂರಲ್ಲಿ 55 ಕೋಟಿ ರೂ ಡ್ರಗ್ಸ್​​ ಪತ್ತೆ ; ಮಹಾರಾಷ್ಟ್ರ ಪೊಲೀಸರ ವಾದ ತಳ್ಳಿಹಾಕಿದ ಗೃಹ ಸಚಿವ ಪರಮೇಶ್ವರ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮೆಫೆಡ್ರೋನ್ (Mephedrone) ಉತ್ಪಾದನಾ ಘಟಕಗಳ ಮೇಲೆ ಮಹಾರಾಷ್ಟ್ರ ಡ್ರಗ್ ವಿರೋಧಿ ದಳ (ANTF) ನಡೆಸಿದ ದಾಳಿಗೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ ಭಾನುವಾರ ಸ್ಪಷ್ಟಪಡಿಸಿದ್ದಾರೆ. ಇದು ಕೇವಲ ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆಯಲ್ಲ, ಬದಲಿಗೆ ಅವರ ಜೊತೆಗೆ ಕರ್ನಾಟಕ ಪೊಲೀಸರು ಮತ್ತು ಎನ್‌ಸಿಬಿ (NCB) ತಂಡಗಳ ‘ಜಂಟಿ ಕಾರ್ಯಾಚರಣೆ’ … Continued

ಕಾರವಾರ : ನೌಕಾಪಡೆಯ ಸಬ್‌ಮರಿನ್‌ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಚಾರ

ಕಾರವಾರ: ಭಾರತೀಯ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಕಾರವಾರದಲ್ಲಿ ನೌಕಾಪಡೆಯ ‘ಐಎನ್ಎಸ್ ವಾಗ್ಶೀರ್’ (INS Vaghsheer) ಸಬ್‌ಮರಿನ್‌ನಲ್ಲಿ (ಜಲಾಂತರ್ಗಾಮಿ) ಸಮುದ್ರದ ಆಳಕ್ಕೆ ಇಳಿಯುವ ಮೂಲಕ ಐತಿಹಾಸಿಕ ಸಾಹಸ ಮೆರೆದಿದ್ದಾರೆ. ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ನಂತರ ಸಬ್‌ಮರಿನ್‌ನಲ್ಲಿ ಪಯಣಿಸಿದ ಎರಡನೇ ರಾಷ್ಟ್ರಪತಿ ಎಂಬ … Continued

ಬೆಂಗಳೂರಲ್ಲಿ ʼವರದಯೋಗಿ ಶ್ರೀಧರʼ ನಾಟಕ ಪ್ರದರ್ಶನ

ಬೆಂಗಳೂರು : ಭಗವಾನ್‌ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ ಜೀವನಾಧಾರಿತ ʼವರದಯೋಗಿʼ ಶ್ರೀಧರ ಎಂಬ ಭಕ್ತಿ ಪ್ರಧಾನ ನಾಟಕವನ್ನು ಗುರುವಾರ (ಡಿಸೆಂಬರ್‌ 25 ) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಯಶಸ್ವಿಯಾಗಿ ಪ್ರದರ್ಶಗೊಂಡಿತು. ಮೂರೂವರೆ ತಾಸುಗಳ ಕಾಲ ನಡೆದ ಈ ಪ್ರದರ್ಶನವು ಶ್ರೀ ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ಮಣ್ಣಿಗೆ, ಹೊನ್ನಾವರ (ಉತ್ತರ ಕನ್ನಡ) … Continued

ಬೆಂಗಳೂರು : ಮೂರು ಕಡೆ ದಾಳಿ, 55.88 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ವಶಕ್ಕೆ

ಬೆಂಗಳೂರು/ ಮುಂಬೈ : ಮಹಾರಾಷ್ಟ್ರದ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ, ಅಂತಾರಾಜ್ಯ ಎಂಡಿ (MD) ಡ್ರಗ್ಸ್ ಉತ್ಪಾದನಾ ಜಾಲವನ್ನು ಧ್ವಂಸಗೊಳಿಸಿದೆ ಎಂದು ವರದಿಯಾಗಿದೆ. ಬೆಂಗಳೂರು ನಗರದ ಮೂರು ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ಘಟಕಗಳ ಮೇಲೆ ದಾಳಿ ಮಾಡಿರುವ ಪೊಲೀಸರು, ಸುಮಾರು 55.88 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ. … Continued

ಹಂಪಿ: ಬೆಟ್ಟ ಹತ್ತುವಾಗ ಆಯತಪ್ಪಿ ಬಿದ್ದು ಗಾಯಗೊಂಡಿದ್ದ ಫ್ರೆಂಚ್ ಪ್ರವಾಸಿಗ ಎರಡು ದಿನಗಳ ಬಳಿಕ ಪತ್ತೆ

ಹೊಸಪೇಟೆ: ವಿಶ್ವವಿಖ್ಯಾತ ಯುನೆಸ್ಕೋ ಪರಂಪರೆ ತಾಣವಾದ ಹಂಪಿಯಲ್ಲಿ ಬೆಟ್ಟ ಹತ್ತಲು ಪ್ರಯತ್ನಿಸುತ್ತಿದ್ದ ಫ್ರೆಂಚ್ ಪ್ರವಾಸಿಗರೊಬ್ಬರು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸುಮಾರು ಎರಡು ದಿನಗಳ ಕಾಲ ಜನರಿಲ್ಲದ ನಿರ್ಜನ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 52 ವರ್ಷದ ಪ್ರವಾಸಿಗನನ್ನು ಸ್ಥಳೀಯ ರೈತರು ಮತ್ತು ಅಧಿಕಾರಿಗಳು ರಕ್ಷಿಸಿದ್ದಾರೆ. ಗಾಯಾಳು ಪ್ರವಾಸಿಗ ಪ್ರಸ್ತುತ ಕೊಪ್ಪಳ ಜಿಲ್ಲಾ … Continued

ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೃಷ್ಣಮೂರ್ತಿ ಕೆರೆಗದ್ದೆ ಆಯ್ಕೆ

ಶಿರಸಿ: ಶಿರಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಮುಂದಿನ 3 ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ವಿಜಯ ಕರ್ನಾಟಕ ವರದಿಗಾರ ಕೃಷ್ಣಮೂರ್ತಿ ಕೆರೆಗದ್ದೆ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶನಿವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ಚುನಾವಣೆಯಲ್ಲಿ ಕೃಷ್ಣಮೂರ್ತಿ ಕೆರೆಗದ್ದೆ 23 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ವಿಶ್ವವಾಣಿ ಜಿಲ್ಲಾ ವರದಿಗಾರ್ತಿ ವಿನುತಾ ಹೆಗಡೆ 6 ಮತಗಳನ್ನು ಪಡೆದರು. … Continued